ಉದ್ಯೋಗಾವಕಾಶ-ಸರಕು ಸಾಗಣೆಗೆ ರೈಲ್ವೆ ಅತ್ಯಗತ್ಯ

ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಸಾಧಕ ಬಾಧಕ ಸಮಾಲೋಚನಾ ಸಭೆ

Team Udayavani, Aug 14, 2022, 4:04 PM IST

15

ಯಲ್ಲಾಪುರ: ಇಲ್ಲಿಯ ನಾಗರಿಕ ವೇದಿಕೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್‌ ಯುನಿಯನ್‌ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಯ ಸಾಧಕ ಬಾಧಕ ಕುರಿತು ಸಮಾಲೋಚನಾ ಸಭೆ ಶನಿವಾರ ಪಟ್ಟಣದ ಅಡಕೆ ಭವನದಲ್ಲಿ ನಡೆಯಿತು.

ರಾಜ್ಯ ವಿಕೇಂದ್ರೀಕರಣ ಯೋಜನೆ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಉದ್ಘಾಟಿಸಿದರು.

ಜಿಲ್ಲಾ ರೇಲ್ವೆ ಸಮಿತಿ ಅಧ್ಯಕ್ಷ ಜಾರ್ಜ್‌ ಫನಾಂìಡೀಸ್‌ ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗವಕಾಶ ಹೆಚ್ಚಳಕ್ಕೆ, ಸರಕು ಸಾಗಾಣಿಕೆಗೆ ರೈಲ್ವೆ ಅತ್ಯಗತ್ಯ. ಜನಸಾಮಾನ್ಯರು ಎಚ್ಚೆತ್ತು ಸರಕಾರ ಎಚ್ಚೆತ್ತುಕೊಳ್ಳುವಂತೆ ಹೋರಾಟದ ಕಿಚ್ಚು ಹಚ್ಚಬೇಕು. ರೇಲ್ವೆ ಯೋಜನೆಗೆ ಇರುವ ತೊಡಕನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.

ಜಿಲ್ಲಾ ರೈಲ್ವೆ ಸಮಿತಿ ಕಾರ್ಯದರ್ಶಿ ರಾಜೀವ ಗಾವ್ಕಾರ ಮಾತನಾಡಿ, ಯೋಜನೆ ಅನುಷ್ಠಾನಕ್ಕೆ ಇರುವ ತೊಡಕುಗಳು ಮತ್ತು ನಿವಾರಣೆಗೆ ಕೈಗೊಂಡ ಕ್ರಮದ ಬಗೆಗೆ ಮಾಹಿತಿ ನೀಡಿ, ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿ ವಿಳಂಬ ಮಾಡಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿದವರ ವಾದದ ಪ್ರಕಾರ ಮಾರ್ಗದಲ್ಲಿ ಹುಲಿ ಸಂರಕ್ಷಣೆ ಯೋಜನೆ ಇನ್ನಿತರ ಯಾವ ತೊಂದರೆಯೂ ಇಲ್ಲ. ಹಿಂದೆ 950 ರಷ್ಟು ಹೆಕ್ಟೇರ್‌ ಅರಣ್ಯ ನಾಶವಿತ್ತಾದರೂ ಇವತ್ತು ಅದನ್ನು ಮತ್ತಷ್ಟು ಕಡಿತಗೊಳಿಸಿ 550 ರಷ್ಟು ಹೆಕ್ಟೇರ್‌ ನಾಶವಾಗಲಿದೆ. ಪಿಐಎಲ್‌ ಹಾಕಿದವರ ವಿರುದ್ಧ ನಮ್ಮ ರೂಪುರೇಷೆ ನಡೆದಿದೆ. ಯೋಜನೆ ಅನುಷ್ಠಾನಕ್ಕೆ ಹೋರಾಟ ತೀವ್ರಗೊಳ್ಳಬೇಕು ಎಂದರು.

ಮತೃಭೂಮಿ ಪ್ರತಿಷ್ಠಾನದ ವತಿಯಿಂದ ಶ್ರೀರಂಗ ಕಟ್ಟಿ ಶಿರಸಿಯವರು ಇಲ್ಲಿ ಆಗುವ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಶಿರಸಿಯ ಕೆಲವು ಢೋಂಗಿ ಮತ್ತು ವ್ಯಾಗ್ರಸ್ಥ ಪರಿಸರವಾದಿಗಳು ಈ ಯೋಜನೆ ವಿಳಂಬಕ್ಕೆ ಕಾರಣ. ಅವರನ್ನು ಬಗ್ಗು ಬಡಿಯಬೇಕು ಎಂದರು.

ಸಾಮಾಜಿಕ ಮುಖಂಡ ಉಲ್ಲಾಸ ಶಾನಭಾಗ ಮಾತನಾಡಿ, ರಾಜಕಾರಣಿಗಳಿಗೆ ಮತ್ತು ಪರಿಸರವಾದಿಗಳಿಗೆ ಹೊರದೇಶ ಗಳಿಂದ ಹಣ ಬರುತ್ತದೆ. ಹಾಗಾಗಿ ಅವರು ಇಂತಹ ಯೋಜನೆ ತಡೆಯುತ್ತಾರೆ ಎಂದು ಆರೋಪಿಸಿದರು.

ಈ ಹೆದ್ದಾರಿಯಲ್ಲಿ ಅದಿರು ಸಂಚಾರ ಸ್ಥಗಿತಗೊಳಿಸಬೇಕು. ಮತ್ತು ರೇಲ್ವೆ ಬೇಕೆಂಬುದು ಎಲ್ಲರ ಕೂಗಾದರೆ ನಮ್ಮನ್ನಾಳುವ ಜನಪ್ರತಿನಿಧಿಗಳು ಅವರ ಪ್ರಣಾಳಿಕೆ ಪ್ರಕಾರ ತಲೆಕೆಡಿಸಿಕೊಂಡು ರೇಲ್ವೆ ಯೋಜನೆ ಕಾರ್ಯರೂಪಕ್ಕೆ ತರಲಿ ಅವರೇಕೆ ಮೀನಮೇಷ ಎಣಿಸುತ್ತಾರೆ ಎಂದು ಘಟ್ಟಿಯಾಗಿ ಕೇಳಬೇಕು ಎಂದು ಕಿಸಾನ್‌ ಸಂಘದ ನರಸಿಂಹ ಸಾತೊಡ್ಡಿ ಪ್ರಶ್ನಿಸಿದರು.

ಕೆ.ಎಸ್‌. ಭಟ್ಟ, ಎನ್‌.ಕೆ. ಭಟ್ಟ, ನಾಗರಾಜ ಮದ್ಗುಣಿ, ಅಚ್ಚುತಕುಮಾರ್‌, ಮತ್ತಿತರರು ಅಭಿಪ್ರಾಯ ಹೇಳಿದರು.

ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಹೋರಾಟ ನಡೆದಿದೆ. ವಾಜಪೇಯಿ ಪ್ರಧಾನಿ ಇದ್ದಾಗ ಶಂಕುಸ್ಥಾಪನೆ ನಡೆಯಿತು. ಕಲಘಟಗಿವರೆಗೆ ಪ್ರಾರಂಭಿಕ ಕಾಮಗಾರಿ ನಡೆದಿದೆ. ನಂತರ ಢೋಂಗಿ ಪರಿಸರ ವಾದಿಗಳಿಂದಾಗಿ ಯೋಜನೆಗೆ ಅಡ್ಡಗಾಲಾಯಿತು. ಜಿಲ್ಲೆಯಲ್ಲಿ ಬೇರೆ ಬೇರೆ ಯೋಜನೆಯಿಂದ ಪರಿಸರ ಹಾನಿ ಆಗದೇ ಇದ್ದದ್ದು, ಇಲ್ಲಿ ಮಾತ್ರ ಪರಿಸರ ಹಾನಿ ಆಗುತ್ತದೆ ಎನ್ನುವುದು ಸರಿಯಲ್ಲ. ಅಭಿವೃದ್ಧಿ ಆಗಬೇಕಾದರೆ ಸ್ವಲ್ಪ ಮಟ್ಟಿಗೆ ಹಾನಿ ಆದರೂ, ಸಹಿಸಿಕೊಳ್ಳಬೇಕು. ಪರಿಸರ ಹಾನಿ ಎಂಬ ನೆಪದ ನಡುವೆ ಇಲ್ಲಿಗೆ ರೈಲು ಯೋಜನೆ ತಡೆಗೆ ಹುನ್ನಾರ ನಡೆದಿದೆ. ಜಿಲ್ಲೆಯಲ್ಲಿ ಯಲ್ಲಾಪುರ ಮಾತ್ರ ರೇಲ್ವೆ ರಹಿತ ತಾಲೂಕಾಗುವ ಅಪಾಯವಿದೆ. ಕಾರಣ ರೈಲ್ವೆಗಾಗಿ ಜನಧ್ವನಿ ಎತ್ತರಿಸುವ ತುರ್ತು ಕೆಲಸ ಆಗಬೇಕಿದೆ ಎಂದರು.

ಜಿಲ್ಲಾ ರೇಲ್ವೆ ಸಮಿತಿ ಉಪಾಧ್ಯಕ್ಷ ವೆಂಕಟು ಮಾಸ್ತರ,ನೈರುತ್ಯ ರೇಲ್ವೆ ಸಲಹಾ ಸಮಿತಿ ಸದಸ್ಯ ಕೃಷ್ಣಾನಂದ ದೇವನಳ್ಳಿ, ಪಪಂ ಅಧ್ಯಕ್ಷೆ ಸುನಂದಾದಾಸ್‌, ನಿವೃತ್ತ ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ, ಪ್ರಮುಖರಾದ ಡಿ.ಎನ್‌. ಗಾಂವ್ಕಾರ, ಕೆಜೆಯು ಅಧ್ಯಕ್ಷ ಶಂಕರ ಭಟ್ಟ ತಾರಿಮಕ್ಕಿ ಇದ್ದರು. ಮಲೆನಾಡು ಅಧ್ಯಕ್ಷ ಎಂ.ಆರ್‌. ಹೆಗಡೆ ಕುಂಬ್ರಿಗುಡ್ಡೆ ಸ್ವಾಗತಿಸಿದರು. ಕೇಬಲ್‌ ನಾಗೇಶ ನಿರ್ವಹಿಸಿದರು. ವೇಣುಗೋಪಲ ಮದ್ಗುಣಿ ವಂದಿಸಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.