ಸ್ಕೇಟಿಂಗ್‌ನಲ್ಲಿ ಸಾಖೀಬ್‌ ದಾಖಲೆ

•ಲಿಂಬೋ ಸ್ಪಿನ್ನಿಂಗ್‌ ಸ್ಪರ್ಧೆ: ಸತತ 25 ನಿಮಿಷ 1000 ಸುತ್ತು ಹಾಕಿದ •180 ಡಿಗ್ರಿಯಲ್ಲಿ ಸ್ಪಿನ್ನಿಂಗ್‌ ಮಾಡಿದ ಕೈಗಾ ಟೌನ್‌ಷಿಪ್‌ನ ಬಾಲಕ

Team Udayavani, Apr 29, 2019, 4:36 PM IST

ಕಾರವಾರ: ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ನ ಹರೀಶ್‌ ಸಾಖೀಬ್‌ಗ ಪ್ರಮಾಣ ಪತ್ರ ವಿತರಿಸಿದರು.

ಕಾರವಾರ: ನಗರದ ಅಜ್ವಿ ಸಭಾಂಗಣದಲ್ಲಿ ರವಿವಾರ ಬೆಳಗ್ಗೆ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ನಲ್ಲಿ ಬಾಲಕ ಮಹಮ್ಮದ್‌ ಸಾಖೀಬ್‌ 25 ನಿಮಿಷಗಳ ಕಾಲ 180 ಡಿಗ್ರಿಯಲ್ಲಿ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿ ವಿಶ್ವ ದಾಖಲೆ ಬರೆದ.

ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ನ ಮ್ಯಾನೇಜರ್‌ ಸೇರಿದಂತೆ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನ ಅಧಿಕಾರಿಗಳು, ನ್ಯಾಶನಲ್ ಬುಕ್‌ ಆಫ್‌ ರೆಕಾರ್ಡ್‌ನ ಅಧಿಕಾರಿ, ರೆಕಾರ್ಡ್‌ ಹೋಲ್ಡರ್ ರಿಪಬ್ಲಿಕ್‌ ಅಧಿಕಾರಿ, ಕೃಗಾ ಅಣುಸ್ಥಾವರದ ಸ್ಥಳ ನಿರ್ದೇಶಕ ದೇಶಪಾಂಡೆ ಅವರ ಸಮ್ಮುಖದಲ್ಲಿ ಸತತವಾಗಿ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡುವ ಮೂಲಕ ನೆರೆದಿದ್ದ ಜನ ಹುಬ್ಬೇರಿಸುವಂತೆ ಮಾಡಿದ.

ವಿಶ್ವದಲ್ಲಿ ಈತನಕ ಸತತ 16 ನಿಮಿಷಗಳ ಕಾಲ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿದ ದಾಖಲೆಯಿದೆ. ಈ ದಾಖಲೆಯನ್ನು ಕೈಗಾದ ಬಾಲಕ ಸಾಖೀಬ್‌ ಮುರಿದು ಹೊಸ ದಾಖಲೆ ಬರೆದನು. 25 ನಿಮಿಷ ಕಾಲ ಸತತ 1000 ಸುತ್ತು ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿದ್ದು ವಿಶ್ವದಾಖಲೆ ಸೇರಲಿದೆ ಎಂದು ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ನ ಮ್ಯಾನೇಜರ್‌ ಹರೀಶ್‌ ಬೆಂಗಳೂರು ಮಾಧ್ಯಮಗಳಿಗೆ ವಿವರಿಸಿದರು.

ಬಾಲಕ ಸಾಖೀಬ್‌ ಈಗ ತಾನೆ 4 ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಇಷ್ಟು ಚಿಕ್ಕವಯಸ್ಸಿನ ಬಾಲಕನ ಸಾಧನೆ ಸ್ಕೇಟಿಂಗ್‌ ಇತಿಹಾಸದಲ್ಲಿ ಇಂದು (ಏ.28) ದಾಖಲಾಯಿತು. ಇದು ಕರ್ನಾಟಕ ಮತ್ತು ಭಾರತಕ್ಕೆ ವಿಶ್ವಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ ಎಂದು ಅವರು ಬಣ್ಣಿಸಿದರು.

ಸ್ವಲ್ಪವೂ ದಣಿಯದ ಬಾಲಕ: 25 ನಿಮಿಷ ಸತತವಾಗಿ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿದರೂ ಬಾಲಕ ಸಾಖೀಬ್‌ನಲ್ಲಿ ದಣಿವು ಕಾಣಿಸಲಿಲ್ಲ. ಆತ ಅತ್ಯಂತ ಸಂತೋಷದಿಂದ ತನ್ನ ಸಾಧನೆಯ ಕ್ಷಣ ಅನುಭವಿಸಿದೆ. ಪುಟ್ಟ ಬಾಲಕನ ಕಣ್ಣಲ್ಲಿ ಹೊಳಪು ಮತ್ತು ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಬಾಲಕ ಸಾಖೀಬ್‌ ಕೈಗಾ ಟೌನ್‌ಶಿಪ್‌ ನಿವಾಸಿಯಾಗಿದ್ದು ಯುಕೆಜಿ ಓದುತ್ತಿದ್ದಾನೆ.

ಬಾಲಕ ಹಲವು ತಿಂಗಳಿಂದ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ನಲ್ಲಿ ತುಂಬಾ ಆಸಕ್ತಿ ತೋರುತ್ತಿದ್ದು, ಆ ವಿಭಾಗದಲ್ಲಿ ತರಬೇತಿ ನೀಡಲಾಗಿತ್ತು. ಮಗನ ಉತ್ಸಾಹಕ್ಕೆ ತಂದೆ ಮಹಮ್ಮದ್‌ ರಫೀಕ್‌ ಸಾತ್‌ ನೀಡಿದ್ದಾರೆ. ದಿನವೂ 2 ರಿಂದ 3 ತಾಸು ಪ್ರಾಕ್ಟೀಸ್‌ ಮಾಡುತ್ತಿದ್ದ. ನೇರ ಲಿಂಬೋ ಸ್ಕೇಟಿಂಗ್‌ನಲ್ಲಿ 16 ಮಕ್ಕಳ ಗುಂಪು ತಂಡದಲ್ಲಿ ವಿಶ್ವ ಮಟ್ಟದ ದಾಖಲೆಯನ್ನು ಕಳೆದ ವರ್ಷ ಮಾಡಿದ್ದ. ಲಿಂಬೋ ಸ್ಕೇಟಿಂಗ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕ ಹಾಗೂ ರಾಜ್ಯ ಮಟ್ಟದಲ್ಲಿ ಈಗಾಗಲೇ ಸಾಧನೆ ಮಾಡಿದ್ದ. ಹಾಗಾಗಿ ಆತನಿಗೆ ಲಿಂಬೋ ಸ್ಪಿನ್ನಿಂಗ್‌ನಲ್ಲಿ ತರಬೇತಿ ನೀಡಲಾಗಿತ್ತು ಎಂದು ತರಬೇತುದಾರ ದಿಲೀಪ್‌ ಹಣಬರ್‌ ಹೇಳಿದರು. ಕೈಗಾ ರೋಲರ್‌ ಸ್ಕೇಟಿಂಗ್‌ ಆಕಾಡೆಮಿ ಮೂಲಕ ಸಾಖೀಬ್‌ ಆಸಕ್ತಿ ನೋಡಿ ಪ್ರೋತ್ಸಾಹಿಸಲಾಯಿತು. ಚಿಕ್ಕ ವಯಸ್ಸಿನಲ್ಲೇ ವಿಶ್ವ ದಾಖಲೆ ಮಾಡಿದ್ದು ನಮಗೆ ಸಂತೋಷ ತಂದಿದೆ ಎಂದು ಸಾಖೀಬ್‌ ತಂದೆ ಮಹಮ್ಮದ್‌ ರಫೀಕ್‌ ನುಡಿದರು. ರಫೀಕ್‌ ಅವರು ಕೈಗಾ ಅಣುಸ್ಥಾವರ ಶಾಲೆಯಲ್ಲಿ ನೌಕರಿ ಮಾಡುತ್ತಿದ್ದು, ಶಿರಸಿ ಮೂಲದವರಾಗಿದ್ದಾರೆ. ಇವರ ಪತ್ನಿ ಶಬರೀನ್‌, ಸಂಬಂಧಿಕರು, ಕೈಗಾ ಸ್ಕೇಟಿಂಗ್‌ ಅಕಾಡೆಮಿ ಸದಸ್ಯರು, ಸ್ಕೇಟಿಂಗ್‌ ಸ್ಕೂಲ್ ವಿದ್ಯಾರ್ಥಿಗಳು ಹಾಜರಿದ್ದರು. ಅಲ್ಲದೇ ಆತನ ಸ್ಪಿನ್ನಿಂಗ್‌ ಸ್ಕೇಟಿಂಗ್‌ ನೋಡಿ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.

ಸಾಖೀಬ್‌ ಮೂರು ವರ್ಷದ ಹಿಂದೆ ಸ್ಕೇಟಿಂಗ್‌ ತರಬೇತಿ ಶಾಲೆಗೆ ಸೇರಿಕೊಂಡ. ಆತನ ಆಸಕ್ತಿ ಗಮನಿಸಿ ಕಳೆದ ಒಂದು ವರ್ಷದಿಂದ ಸತತವಾಗಿ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ ವಿಭಾಗದಲ್ಲಿ ತರಬೇತಿ ನೀಡಲಾಯಿತು. ಪ್ರತಿದಿನ 2 ತಾಸು ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡುತ್ತಿದ್ದ. ಯಾವ ಒತ್ತಡವೂ ಇಲ್ಲದೇ ಅತ್ಯಂತ ನಿರುಮ್ಮಳ ಮನಸ್ಸಿಂದ 25 ನಿಮಿಷ ಸತತವಾಗಿ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿದ್ದು ಖುಷಿ ನೀಡಿದೆ. ಅದು ವಿಶ್ವದಾಖಲೆ ಆಗುತ್ತಿರುವುದು ನಮಗೆ ತೀವ್ರ ಸಂಭ್ರಮ ತಂದಿದೆ.

-ಶಬರೀನ್‌ ಮೊಹಮ್ಮದ್‌ ರಫೀಕ್‌,ಸಾಖೀಬ್‌ ತಾಯಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮುಂಡಗೋಡ: ಬೆಳೆಹಾನಿ ಪರಿಹಾರ, ಬೆಳೆಸಾಲ, ಬೆಳೆವಿಮೆ, ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಅರಣ್ಯ ಭೂಮಿ ಮಂಜೂರಿಗೆ ಆಗ್ರಹಿಸಿ ತಾಲೂಕು ಮಟ್ಟದ ಅರಣ್ಯ ಅತಿಕ್ರಮಣದಾರರು...

  • ಯಲ್ಲಾಪುರ: ಕೆಲ ದಿವಸಗಳಿಂದ ಉತ್ತರ ಕನ್ನಡ ಜಿಲ್ಲೆ ವಿಭಾಗಿಸಿ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಜಿಲ್ಲೆ ಮಾಡಲಾಗುತ್ತದೆ ಎಂಬ ಚರ್ಚೆಯಾಗುತ್ತಿದೆ. ಶಿರಸಿ...

  • ಭಟ್ಕಳ: ಖಾಸಗಿ ಬಸ್‌ಗಳಲ್ಲಿ ಹಬ್ಬ ಹಾಗೂ ಸರಣಿ ರಜಾ ಇರುವ ಸಮಯಗಳಲ್ಲಿ ಬೆಂಗಳೂರು,ಮೈಸೂರು, ಮುಂಬೈಯಂತಹ ದೂರದ ಊರುಗಳ ಪ್ರಯಾಣಿಕರಿಂದ ಹೆಚ್ಚು ದರ ವಸೂಲಿ ಮಾಡುವ...

  • ಶಿರಸಿ: ಕಲೆ, ಸಂಸ್ಕೃತಿಗಳ ಏಳ್ಗೆಗಾಗಿ ಸ್ಥಾಪಿತವಾದ ಅಕಾಡೆಮಿಗಳ ಅಧ್ಯಕ್ಷರ ನೇಮಕಾತಿಗೆ ಇನ್ನೂ ರಾಜ್ಯ ಸರಕಾರ ಮೀನಮೇಷ ಎಣಿಸುತ್ತಿದೆ. ಹೊಸ ಸರಕಾರ ರಚನೆಗೊಡರೂ...

  • ಕಾರವಾರ: ಅಕ್ಟೋಬರ್‌ 31ರೊಳಗೆ ವಿವಿಧ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದನೆ ಪಡೆಯುವಂತೆ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಸೂಚಿಸಿದ್ದಾರೆ. ಶುಕ್ರವಾರ...

ಹೊಸ ಸೇರ್ಪಡೆ