
ಶಿರಸಿ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ನಾಡಿಗೇ ಮಾದರಿಯಾಗಬೇಕು: ಸ್ಪೀಕರ್ ಕಾಗೇರಿ
Team Udayavani, Aug 10, 2022, 9:23 PM IST

ಶಿರಸಿ: ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಜಿಲ್ಲೆಯಲ್ಲೆ ಮೊದಲ ಬಾರಿಗೆ ತೆರೆದುಕೊಳ್ಳಲಿರುವ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರದವನ್ನು ನಾಡಿಗೇ ಮಾದರಿಯಾಗಿ ಸ್ಥಾಪನೆ ಮಾಡುವ ಕುರಿತು ಇಲಾಖೆಯ ಸಚಿವರು, ಉನ್ನತ ಅಧಿಕಾರಿಗಳ ಜೊತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದರು.
ಬೆಂಗಳೂರಿನ ವಿಧಾನ ಸೌಧದ ಕಚೇರಿಯಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವತ್ಥ ನಾರಾಯಣ ಹಾಗೂ ಇತರ ಅಧಿಕಾರಿಗಳ ಜೊತೆ ಕಾಗೇರಿ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಈಗಾಗಲೇ ಇರುವ ವಿಜ್ಞಾನ ಕೇಂದ್ರದ ಮಾದರಿಯ ಜೊತೆ ಇನ್ನೂ ಹೈಟೆಕ್ ಆಗಿ ನಡೆಸುವ ಬಗ್ಗೆ ಚರ್ಚೆ ನಡೆಸಿದರು. ಕೇಂದ್ರಕ್ಕೆ ಬರಲಿರುವ ತಾಂತ್ರಿಕ ಉಪಕರಣಗಳನ್ನು ಇನ್ನಷ್ಟು ಆಧುನಿಕಗೊಳಿಸುವ ಕುರಿತೂ ಗಮನಿಸುವಂತೆ ಸ್ಪೀಕರ್ ಸೂಚಿಸಿದರು.
ಉದ್ದೇಶಿತ ವಿಜ್ಞಾನ ಕೇಂದ್ರಕ್ಕೆ ಈಗಾಗಲೇ ಬಜೆಟ್ ಅನುಮೋದನೆ ನೀಡಿದ್ದು, ೭ ಕೋ.ರೂ. ಮೊತ್ತದಲ್ಲಿ ಇದು ನಿರ್ಮಾಣ ಆಗಬೇಕಿದೆ. ತಾಲೂಕಿನ ಇಸಳೂರಿನಲ್ಲಿ ಸ್ಥಳ ಕೂಡ ಅಂತಿಮಗೊಳಿಸಲಾಗಿದೆ. ಸ್ಪೀಕರ್ ಕಾಗೇರಿ ಅವರು ನಡೆಸಿದ ಮಹತ್ವದ ಸಭೆ ಈ ಕೇಂದ್ರದ ಆರಂಭಕ್ಕೂ ಮೊದಲು ವಿಜ್ಞಾನ ವಿದ್ಯಾರ್ಥಿಗಳಲ್ಲಿ ಹೊಸ ನಿರೀಕ್ಷೆ ನಿರ್ಮಾಣ ಮಾಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Desi Swara: ಮನದ ಬಾಗಿಲನು ತೆರೆದು ಅರಿಯುವ ಬನ್ನಿ

ಕ್ರಿಕೆಟ್ ಆಸ್ಟ್ರೇಲಿಯಕ್ಕಿಂತ 28 ಪಟ್ಟು ಶ್ರೀಮಂತವಾಗಿದೆ ಬಿಸಿಸಿಐ! ಆದಾಯ ಎಷ್ಟು ಗೊತ್ತಾ?

Karwar; ಇಂದಿರಾ ಕ್ಯಾಂಟಿನ್ ನಲ್ಲಿ ಉಪಹಾರ ಸವಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

Desi Swara :ಬ್ರಿಟನ್-ಕರ್ನಾಟಕದ ಜಾನಪದ ಕಲೆಗಳ ಅನಾವರಣ

Vijayapura; ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ: ಸಚಿವ ಎಂ.ಬಿ.ಪಾಟೀಲ