ಶಿರಸಿ: ಸೊಸೈಟಿಗೆ ಬಂದವರ ಹವಾ ತೆಗಿಬೇಡಿ!
Team Udayavani, Jan 22, 2023, 1:16 PM IST
ಶಿರಸಿ: ಸಹಕಾರಿ ಸಂಘಗಳು ಸಮಾಜದಲ್ಲಿ ವಿಶ್ವಾಸ ಮೂಡಿಸಬೇಕು. ಯುವಕರಿಗೆ ಗ್ರಾಮೀಣ ಬದುಕಿಗೆ ವಿಶ್ವಾಸ ಆಗಬೇಕು. ಹಾಗಾಗಿ ಸಹಕಾರಿ ಸಂಘಕ್ಕೆ ಬಂದ ಜನರಿಗೆ ಸಮಸ್ಯೆಗಳನ್ನೇ ಹೇಳಿ ಹವಾ ತೆಗೆಯಬಾರದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಅಜ್ಜಿಬಳ ಸೊಸೈಟಿ ಶತಮಾನೋತ್ಸವದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಹಕಾರಿ ಸಂಘಗಳು ವಿಶ್ವಾಸ ವಾತಾವರಣ ನಿರ್ಮಾಣ ಮಾಡಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಜನರಲ್ಲಿ ಯಾರೂ ನಿರಾಸೆ ಭಾವ ಬೆಳೆಸಬಾರದು. ಸಹಕಾರಿ ಕ್ಷೇತ್ರ ವಿಶ್ವಾಸದ ನಡೆ ಮಾಡಬೇಕು. ಅಜ್ಜಿಬಳ ಸೊಸೈಟಿ ಒಳ್ಳೆ ಕೆಲಸ ಮಾಡುತ್ತಿದೆ ಎಂದರು.
ಈ ವೇಳೆ ಸಹಕಾರಿಗಳಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಭಾಸ್ಕರ ಹೆಗಡೆ ಕಾಗೇರಿ, ಆರ್.ಎಂ.ಹೆಗಡೆ ಬಾಳೆಸರ, ಮಂಜುನಾಥ ಭಟ್ಟ ಬಿಸಲಕೊಪ್ಪ, ಎನ್.ಬಿ.ಹೆಗಡೆ, ಪ್ರಶಾಂತ ಗೌಡ, ಎನ್.ಬಿ.ಹೆಗಡೆ ಇತರರು ಇದ್ದರು.