
SSLC Revaluation ; ಶಿರಸಿಯ ಅವಳಿ ಮಕ್ಕಳಿಗೆ 7 ಮತ್ತು 9 ನೇ ರ‍್ಯಾಂಕ್
Team Udayavani, Jun 7, 2023, 8:03 PM IST

ಶಿರಸಿ: ಕಳೆದ ಎಪ್ರೀಲ್ ನಲ್ಲಿ ನಡೆದ ಎಸ್ಎಸ್ಎಲ್‌ಸಿ ಪರೀಕ್ಷೆಯ ಮರು ಮೌಲ್ಯ ಮಾಪನದ ಕಾರಣದಿಂದ ಇಲ್ಲಿನ ಪ್ರಸಿದ್ಧ ವೈದ್ಯ ದಂಪತಿಗಳ ಅವಳಿ ಮಕ್ಕಳಿಬ್ಬರೂ ರಾಜ್ಯಮಟ್ಟದ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.
ಮಕ್ಕಳ ತಜ್ಞ ವೈದ್ಯ ಡಾ. ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಅವರ ಅವಳಿ ಮಕ್ಕಳಾದ ದಕ್ಷಾ ಹೆಗಡೆ ಹಾಗೂ ರಕ್ಷಾ ಹೆಗಡೆ ಇಬ್ಬರೂ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7 ಹಾಗೂ 9 ನೇ ರ‍್ಯಾಂಕ್ ಪಡೆದವರಾಗಿದ್ದಾರೆ.
ಪುನರ್ ಮೌಲ್ಯ ಮಾಪನಕ್ಕೆ ಹಾಕಿದ ಬಳಿಕ ಕಳೆದ ಸಲಕ್ಕಿಂತ ದಕ್ಷಾ ಹೆಗಡೆ 625ಕ್ಕೆ 619 ಅಂಕ ಪಡೆದಿದ್ದಾನೆ. ಕಳೆದ ಸಲಕ್ಕಿಂತ 3 ಅಂಕ ಅಧಿಕ ಬಂದಿದೆ. ರಕ್ಷಾ ಹೆಗಡೆ 625ಕ್ಕೆ 617 ಅಂಕ ಪಡೆದಿದ್ದು ಕಳೆದ ಸಲಕ್ಕಿಂತ 5 ಅಂಕ ಹೆಚ್ಚು ಪಡೆದು ಈ ಸ್ಥಾನ ಪಡೆದಿದ್ದಾರೆ. ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿದ ಈ ಇಬ್ಬರೂ ಯಾವುದೇ ಟ್ಯೂಶನ್ ಪಡೆಯಲಿಲ್ಲ ಎಂಬುದೂ ವಿಶೇಷ. ಇಬ್ಬರೂ ಶಟಲ್ ಬ್ಯಾಡ್ಮಿಂಟನ್ ಆಟಗಾರರೂ ಆಗಿದ್ದು ವಿಶೇಷವಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

Sirsi: ರಾಜ್ಯದಲ್ಲಿರುವುದು ಕನ್ನಡಿಗರ ಸರ್ಕಾರನಾ ? ತಮಿಳುನಾಡು ಸರ್ಕಾರನಾ ?: ರಮೇಶ ಬೇಕ್ರಿ

Karwar; ಶೀಘ್ರದಲ್ಲೇ ಕಾರವಾರ ಬಳಿ ಹೆದ್ದಾರಿ ಟನಲ್ ಪುನರಾರಂಭ ಸಾಧ್ಯತೆ

Karwar; ಕಾಂಗ್ರೆಸ್ ಬಡವರ ಮತ್ತು ರೈತರ ಪರ ನಿಲುವು ಹೊಂದಿದೆ: ಸಚಿವ ಮಂಕಾಳು ವೈದ್ಯ

Yakshagana: ಸಾಲಿಗ್ರಾಮ ಮೇಳಕ್ಕೆ ಅತಿಥಿ ಭಾಗವತ: ಹಿಲ್ಲೂರು ಸ್ಪಷ್ಟನೆ