ಮಲೆನಾಡಿಗರ ವಿಶೇಷ ಈ ಚಕ್ಕುಲಿ ಕಂಬಳ

Team Udayavani, Aug 28, 2021, 9:44 PM IST

chakkuli

ಶಿರಸಿ: ಉತ್ತರ ಕನ್ನಡ ಜಿಲ್ಲೆಯ  ಮಲೆನಾಡಿಗರಿಗೆ ಯಾವುದೇ ಹಬ್ಬ ಬಂದರೂ ಅವರಲ್ಲೇನೋ ವಿಶೇಷತೆ ಇದ್ದೇ ಇರುತ್ತೆ. ಈಗಂತೂ ಗೌರಿ-ಗಣೇಶ ಹಬ್ಬದ ಸಮಯ. ಈ ಹಬ್ಬಕ್ಕೆ ಮಲೆನಾಡ ಭಾಗವಾದ ಶಿರಸಿಯಲ್ಲಿ ವಿಶೇಷ ಚಕ್ಕುಲಿ  ತಿಂಡಿ ತಿನಿಸು‌ ಮಾಡೋದ್ರಲ್ಲಿ ಜನರು ನಿರತರಾಗಿದ್ದಾರೆ.  ಆದರೆ ಈ ತಿನಿಸನ್ನ ಮಾಡೋಕೆ ಕೂಡು ಕುಟುಂಬ ಒಟ್ಟಾಗಿ ಸೇರಿ ಹಬ್ಬದ ಸಡಗರವನ್ನ ಆಚರಿಸುವುದು ವಿಶೇಷ.

ಶಿರಸಿ ಸೇರಿ ಮಲೆನಾಡಿನ ಭಾಗದಲ್ಲಿ ಹಬ್ಬ ಹರಿದಿನಗಳು ವಿಭಿನ್ನ, ವೈವಿಧ್ಯ. ಅದೇ ಇಲ್ಲಿನವರ ವಿಶೇಷತೆ. ಹಬ್ಬ ಹರಿದಿನವಿರಬಹುದು, ಪೂಜೆ ಪುನಸ್ಕಾರಗಳಿರಬಹುದು.  ಎಲ್ಲದರಲ್ಲಿಯೂ ಇತರರಿಗಿಂತ ಸ್ವಲ್ಪ ವಿಭಿನ್ನ. ಈಗ ಗೌರಿ ಗಣೇಶ ಹಬ್ಬದ ಸಂಭ್ರಮವಾಗಿದೆ.  ಗಣೇಶ ಚತುರ್ಥಿ ಅಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ಸಹಜವಾಗಿ ನಿರ್ಮಾಣವಾಗಿದೆ. ವಿಶೇಷವಾಗಿ ಗಣೇಶ ಚೌತಿಗೆ ಮಾಡುವ ಗಣೇಶನಿಗೆ ಪ್ರಿಯವಾದ ಈ ಚಕ್ಕುಲಿ ಕಂಬಳ ಎಲ್ಲೆಡೆ ಸಂಭ್ರಮದಿಂದ ಕೆಲಸ ಸಾಗಿದೆ.

ಶಿರಸಿಯ ಹೆಗಡೆಕಟ್ಟ ಸಮೀಪದ ಕಲ್ಮನೆ ಊರಿನಲ್ಲಿ ಎಲ್ಲರೂ ಚಕ್ಕುಲಿ ಕಂಬಳ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.  ಕೆಲವೇ ಕಡೆ ಮೊದಲಿನಿಂದಲೂ ರೂಢಿಯಲ್ಲಿರುವ ಕೈ ಚಕ್ಕುಲಿ ಕಂಬಳ ಶುರುವಾಗಿದೆ. ಎಲ್ಲ ಕಂಬಳದಂತೆ  ಕಲ್ಮನೆ ಹೆಗ್ಗಾರು, ಹೆಗಡೆಕಟ್ಟ, ಕರಸುಳ್ಳಿ ಸುತ್ತಮುತ್ತಲಿನ ಉರಿನವರು, ಸಂಬಂಧಿಗಳು ಒಬ್ಬರು ಮತ್ತೊಬ್ಬರ ಮನೆಗೆ ಕಂಬಳಕ್ಕೆ ಸಹಕರಿಸುತ್ತಾರೆ. ಕೈ  ಕಂಬಳದಲ್ಲಿ ಬರೀ ಚಕ್ಕುಲಿ ಅಷ್ಟೇ ಅಲ್ಲದೆ, ಪರಿಣಿತರು ಅಕ್ಷರಗಳನ್ನು ಸಹ ಬರೆಯುತ್ತಾರೆ. ಅನಾದಿ ಕಾಲದಿಂದಲು ರೂಡಿಯಲ್ಲಿದ್ದ ಚಕ್ಕುಲಿ ಕಂಬಳ ಇದಾಗಿದೆ.

ಎಲ್ಲವಕ್ಕೂ ವೈಜ್ಞಾನಿಕ ಉಪಕರಣಗಳಿಗೆ ಅಂಟಿಕೊಂಡಿದ್ದರೂ ಈ ಊರಲ್ಲಿ ಮಾತ್ರ ಎಲ್ಲರೂ ಪ್ರತಿವರ್ಷ ಕೈ ಕಂಬಳನ್ನೇ ಮಾಡುತ್ತಾರೆ. ಹಿಂದಿನಿಂದ ಬಂದ ಸಂಪ್ರದಾಯ ಒಂದುಕಡೆ ಆಗಿದ್ರೆ ಇಂತಹ ವಿಶೇಷ ಕಲೆ ಎಲ್ಲರಿಗೂ ಬರೋದಿಲ್ಲ. ಅದರಲ್ಲೂ ಈ ಚಕ್ಕುಲಿ ರುಚಿ ಹಾಗೂ ಬಾಳಿಕೆ ಜಾಸ್ತಿ. ಉಪಕರಣಗಳಿಂದ ಮಾಡಿದ ಚಕ್ಕುಲಿ ಕೆಲವೇ ದಿನ ಉಳಿದರೆ ಇದನ್ನು ನಾಲ್ಕಾರು ತಿಂಗಳುಗಳ ಕಾಲ ಇಡಬಹುದು. ಹಬ್ಬದಲ್ಲಿ ಬಂದ ಸಂಬಂಧಿಕರಿಗೆ ಹಾಗೂ ದೂರದ ಉರಲ್ಲಿರುವವರಿಗೆ  ಪಾರ್ಸಲ್ ಕಳಿಸಿಕೊಡುತ್ತಾರೆ. ಆದ್ದರಿಂದ ಈ ಊರಲ್ಲಿ ಪ್ರತಿ ಮನೆಯಲ್ಲಿಯೂ ಒಂದೇ ಬಾರಿ ಎರಡುಮೂರು ಕ್ಯಾನ್ ಗಟ್ಟಲೇ ಚಕ್ಕುಲಿ ಮಾಡಿ ತುಂಬಿಡುತ್ತಾರೆ.

ಅನಾದಿ ಕಾಲದಿಂದಲೂ ಚಕ್ಕುಲಿ ಕಂಬಳವನ್ನ ಮಾಡುತ್ತ ಬಂದಿರೋ ಇಲ್ಲಿನ ಜನರು ಈಗಲೂ ಇದನ್ನ ರೂಢಿಯಲ್ಲಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಚಕ್ಕುಲಿಯನ್ನ ಮಿಷನ್ ನಲ್ಲಿ ಮಾಡ್ತಾರೆ. ಆದ್ರೆ ಇಲ್ಲಿ ಹದ ಮಾಡಿದ ಹಿಟ್ಟನ್ನ ತಯಾರು ಮಾಡಿ ಕೈಯಲ್ಲೇ ಬಿಡೋದು ವಿಶೇಷತೆ. ಅದರಲ್ಲೂ ವಿವಿಧ ವಿನ್ಯಾಸದ ಚಕ್ಕುಲಿ ಮಾಡೋದು ಇನ್ನೊಂದು ವಿಶೇಷ. ಅದೇನೆ ಇರಲಿ ಯಾವುದೇ ಹಬ್ಬ ಆದ್ರೂ ಮಲೆನಾಡಿಗರಲ್ಲಿ ಅದೇನೋ ಸಂಭ್ರಮವಾಗಿದೆ.

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.