
ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ
Team Udayavani, Mar 25, 2023, 6:20 AM IST

ಸಿದ್ದಾಪುರ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಡಿ ವಿಚಾರಣೆ ಎದುರಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಬಿ.ಭಟ್ಟ ನೆಲೆಮಾಂವ್ (64) ಅವರು ಶುಕ್ರವಾರ ಮಧ್ಯಾಹ್ನ ತಟ್ಟಿಕೈ ಸಮೀಪದ ತಮ್ಮ ತೋಟದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಇವರು ಎಲ್ಲ ಇಲಾಖೆಗಳ ಹಿರಿಯ ಕಿರಿಯ ಅಧಿ ಕಾರಿಗಳು, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ನಿಕಟ ಸ್ನೇಹ ಹೊಂದಿದ್ದರು. ಕೆಲವು ತಿಂಗಳ ಹಿಂದೆ ನಡೆದ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಟ್ಟರ ಹೆಸರು ತಳುಕು ಹಾಕಿಕೊಂಡಿತ್ತು.
ಆ ಸಂದರ್ಭದಲ್ಲಿ ಮಾಹಿತಿ ಪಡೆದುಕೊಳ್ಳುವ ಕುರಿತು ಪೊಲೀಸರು ಅವರನ್ನು ವಿಚಾರಣೆ ನಡೆಸಿದ್ದರು.
ಟಾಪ್ ನ್ಯೂಸ್
