ಸೂಪಾ ದಂಡಕಾರಣ್ಯದಲ್ಲಿ ಜಲ ದಾಹ

ಬತ್ತಿವೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹಳ್ಳಕೊಳ್ಳ-ನಾಡಿಗೆ ಬರುತ್ತಿವೆ ಕಾಡುಪ್ರಾಣಿ

Team Udayavani, May 11, 2019, 3:29 PM IST

uk-tdy-1..

ಜೋಯಿಡಾ: ಸೂಪಾ ಜಲಾಶಯದ ಹಿನ್ನೀರಿನ ದೊಣಪಾ ಪ್ರದೇಶದಲ್ಲಿ ಕಾಡುಕೋಣಗಳು ನಿತ್ಯ ನೀರಿಗಾಗಿ ಬರುತ್ತಿರುವ ದೃಶ್ಯ.

ಜೋಯಿಡಾ: ಮಲೆನಾಡಿನ ಸೂಪಾ ದಂಡಕಾರಣ್ಯದ ಹಚ್ಚಹಸಿರಿನ ನಿತ್ಯ ಹರಿದ್ವರ್ಣದ ಕಾಡು ಈಗ ಬಿಸಿಲಿನ ಬೆಗೆಗೆ ಬೆಂದುಹೋಗಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹಳ್ಳಕೊಳ್ಳಗಳು ಬತ್ತಿಹೋಗಿವೆ. ಕಾಡುಪ್ರಾಣಿಗಳು ದಾಹ ತೀರಿಸಿಕೊಳ್ಳಲು ನಾಡು, ಜಲಾಶಯದ ಹಿನ್ನೀರಿನತ್ತ ಧಾವಿಸುತ್ತಿವೆ. ಅರಣ್ಯ ಇಲಾಖೆ ದಾಹ ಇಂಗಿಸಲು ಹರಸಾಹಸ ಪಡುತ್ತಿರುವುದು ಕಂಡುಬರುತ್ತಿದೆ.

ಸೂಪಾ ಜಲಾಶಯದ ಒಡಲು ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಈಗ ಜಲಕಂಟಕ ಎದುರಾಗಿದೆ. ಕಾಳಿ ಸಂರಕ್ಷಿತಾರಣ್ಯ ಸೇರಿದಂತೆ ದಟ್ಟಕಾನನದಲ್ಲೀಗ ಬಹುತೇಕ ಎಲ್ಲ ಹಳ್ಳಕೊಳ್ಳಗಳು ಬತ್ತಿದ್ದು, ನೀರಿನ ಸೆಲೆ ಇಂಗಿವೆ. ಇದರಿಂದಾಗಿ ಕಾಡು ಪ್ರಾಣಿಗಳಿಗೆ ನೀರಿನ ಕೊರತೆ ಎದುರಾಗಿದೆ. ಕಾಡಂಚಿನ ಕೆರೆ ಕಟ್ಟೆಗಳಲ್ಲಿ ಹಿಂದೆಂದು ಕಾಣದ ಜಲಕ್ಷಾಮ ಎದುರಾಗಿದೆ. ಕಾಡು ಪ್ರಾಣಿಗಳು ದಾಹ ಇಂಗಿಸಿಕೊಳ್ಳಲಾಗದೆ ವಾಸಸ್ಥಾನವನ್ನು ತೊರೆದು ನಾಡಂಚಿಗೆ ನಿತ್ಯವೂ ಧಾವಿಸಿ ಬರುತ್ತಿವೆ.

ಇಲಾಖೆಯಿಂದ ನೀರುಣಿಸುವ ಪ್ರಯತ್ನ: ಅರಣ್ಯ ಇಲಾಖೆ ಕಾಳಿ ಸಂರಕ್ಷಿತ ಪ್ರದೇಶವಾದ ವಿನೋಲಿ, ಪಣಸೋಲಿ, ಕುಳಗಿ, ಅಣಶಿ, ಸೇರಿದಂತೆ ವನ್ಯಜೀವಿ ವಲಯ ಹಾಗೂ ನಾಡಂಚಿನ ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿ ಇಟ್ಟು ಟ್ಯಾಂಕರ್‌ಗಳ ಮೂಲಕ ನೀರು ಪೂರಣ ಮಾಡುವ ಕೆಲಸ ಮಾಡುತ್ತಿವೆ. ಆದರೆ ಇದು ಕಾಡು ಪ್ರಾಣಿಗಳಿಗೆ ಸಾಲದಾಗಿದ್ದು, ಜಲಮೂಲವನ್ನು ಅರಶಿ ನಾಡಿನತ್ತ ಹಾಗೂ ಸೂಪಾ ಜಲಾಶಯದ ಹಿನ್ನೀರಿನತ್ತ ಧಾವಿಸುತ್ತಿರುವುದು ಕಂಡುಬರುತ್ತಿವೆ.

ಕಾಡುಕೋಣ, ಚಿಗರೆ, ಸಾರಂಗ, ಸಸ್ತನಿಗಳು ಸೇರಿದಂತೆ ಆನೆಗಳೂ ಕೂಡಾ ಜಲಾಶಯದ ನೀರಿನತ್ತ ಧಾವಿಸುತ್ತಿರುವ ದೃಶ್ಯ ದಿನನಿತ್ಯ ಕಂಡು ಬರುತ್ತಿದೆ. ಜೀವಜಲದ ದಾಹ ತೀರಿಸಿಕೊಳ್ಳುವ ಈ ಪಯಣದಲ್ಲಿ ರಸ್ತೆ ಅಂಚಿನಲ್ಲಿ ವಾಹನಕ್ಕೆ ಡಿಕ್ಕಿಹೊಡೆದು ಸಾವನ್ನಪ್ಪುವ ಸಂಭವ ಹೆಚ್ಚಾಗಿದ್ದರೆ, ನಾಡಿನತ್ತ ಧಾವಿಸುವ ಕಾಡು ಪ್ರಾಣಿಗಳಿಗೆ ನಾಯಿ, ಕಳ್ಳ ಬೇಟೆಗಾರರ ಜಾಲಕ್ಕೆ ಸಿಲುಕುವ ಅಪಾಯವಿದೆ.

ಪ್ರಾಣಿಗಳಿಗೆ ಜೀವಜಲದ ಕೊರತೆ ಜೀವಾಪಯಕ್ಕೂ ಕಾರಣವಾಗುತ್ತಿದೆ ಎನ್ನುವುದೇ ದುರಾದೃಷ್ಟಕರ. ಅರಣ್ಯ ಇಲಾಖೆ ಕಾಡಿನ ಒಳಗೆ ಸಾಧ್ಯವಾದಷ್ಟು ಕೆರೆಕಟ್ಟೆಗಳಿಗೆ ನೀರು ಸಂಗ್ರಹಿಸುವ ಕೆಲಸ ಮಡುವ ಮೂಲಕ ಜೀವಜಲ ಕ್ಕಾಗಿ ನಾಡಿನತ್ತ ಬರುವ ಪ್ರಮೇಯ ಎದುರಗದಂತೆ ಮಾಡಬೇಕಿದೆ.

Ad

ಟಾಪ್ ನ್ಯೂಸ್

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

DCF-Chakrapani

ಐದು ಹುಲಿಗಳ ಸಾವು ಪ್ರಕರಣ: ಎಂಎಂ ಹಿಲ್ಸ್‌ ಡಿಸಿಎಫ್ ಚಕ್ರಪಾಣಿ ಅಮಾನತು

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-aa-crick-ssss

ಯಲ್ಲಾಪುರ: ನಟೋರಿಯಸ್ ಆರೋಪಿ ಕಾಲಿಗೆ ಪೊಲೀಸರ ಗುಂಡು

18

Mundgod: ರಸ್ತೆಗಳು ಹೊಂಡಮಯ-ಸಂಚಾರ ಅಯೋಮಯ

17

Yellapur: ಹದಗೆಟ್ಟಿದೆ ಕೈಗಾ-ಇಳಕಲ್‌ ರಾಜ್ಯ ಹೆದ್ದಾರಿ

arrested

ಭಟ್ಕಳ ಸ್ಪೋ*ಟ ಬೆದರಿಕೆ: ಆರೋಪಿ ಸೆರೆ

13

Mundgod: ಗೋವಿನ ಜೋಳಕ್ಕೆ ಜೌಳು ಹಿಡಿದು ಬೆಳೆ ಹಾನಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-aa-crick–kashi

ಕೋಟೇಶ್ವರ: ಇಂದಿನಿಂದ ಕಾಶೀ ಶ್ರೀಗಳ ಚಾತುರ್ಮಾಸ ವ್ರತ

court

ಕೋಟ: 20 ಲಕ್ಷ ರೂ. ಸಾಲ ಬಾಕಿ; ಜಾಗ, ಮನೆ ಹರಾಜು

crime

Mangaluru:ಕೇರಳದಿಂದ ಕರೆಸಿಕೊಂಡು ನಾಲ್ವರಿಗೆ ಹಲ್ಲೆ

1-aa-aa-kovi

ಗೇರುಕಟ್ಟೆಯ ಮನೆಗೆ ಅರಣ್ಯ ಇಲಾಖೆ ಸಿಬಂದಿ ದಾಳಿ:ಕಾಡುಪ್ರಾಣಿ ಮಾಂಸ, ಕೋವಿ ವಶಕ್ಕೆ

1-aa-aa-crick-aa-ara-DC

ಶಿಕ್ಷಣ ಸಂಸ್ಥೆಗಳಲ್ಲಿ ತಿಂಗಳೊಳಗೆ ಡ್ರಗ್ಸ್‌ ತಡೆ ಸಮಿತಿ ರಚನೆಗೆ ಜಿಲ್ಲಾಧಿಕಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.