ಕೋಳಿಫಾರಂ ಐಬೆಕ್ಸ್ ಬೇಲಿಗೆ ನೇರ ವಿದ್ಯುತ್ ಸಂಪರ್ಕ: ಮಹಿಳೆ ಸಾವು
Team Udayavani, Sep 11, 2022, 1:30 PM IST
ಶಿರಸಿ: ಅನಧಿಕೃತ ಕೋಳಿಫಾರಂ ರಕ್ಷಣೆಗೆ ಹಾಕಿಕೊಂಡ ಐಬೆಕ್ಸ್ ಬೇಲಿಗೆ ನೇರ ವಿದ್ಯುತ್ ಸಂಪರ್ಕ ನೀಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ದಾರುಣ ಘಟನೆ ನೀರ್ನಳ್ಳಿ ಸಮೀಪ ವಡ್ಡಿನಗದ್ದೆಯಲ್ಲಿ ರವಿವಾರ ನಡೆದಿದೆ.
ದನ ಮೇಯಿಸಲು ಹೋದ ಸರಸ್ವತಿ ಕೊಡಿಯಾ (55) ಮೃತ ಮಹಿಳೆ. ಅನಧಿಕೃತ ಕೋಳಿಫಾರಂ ಮಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಆಗಿದೆ ಎಂಬುದು ಆರೋಪವಾಗಿದೆ.
ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.