ಮಂಗಳೂರು ಕಡೆ ಬರುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ; ಚಾಲಕ, ನಿರ್ವಾಹಕ ಪಾರು
Team Udayavani, Nov 24, 2022, 1:14 PM IST
ಯಲ್ಲಾಪುರ: ತಾಲೂಕಿನ ರಾ.ಹೆದ್ದಾರಿ 63 ಆರತಿಬೈಲ್ ಬಳಿ ಲಾರಿಯೊಂದು ಹೊತ್ತಿ ಉರಿದ ಘಟನೆ ಗುರುವಾರ ಬೆಳಗಿನ ಜಾವ ಸಂಭವಿಸಿದೆ.
ಮಂಗಳೂರು ಕಡೆ ಕಬ್ಬಿಣ ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ಆರತಿಬೈಲ್ ಎಂಬಲ್ಲಿ ಒಮ್ಮೆಲೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಉರಿಯಿತು. ಲಾರಿಯಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಈ ಅನಾಹುತದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ತಂಡ ರಾತ್ರಿಯ ಕತ್ತಲೆಯ ಮಧ್ಯೆಯೂ ಬೆಂಕಿ ಆರಿಸುವಲ್ಲಿ ಮುಂದಾದರು. ಆದರೂ ಲಾರಿ ಕರಕಲಾಗಿದ್ದು ಸುಟ್ಟುಹೋಗಿದೆ.