Yellapur; ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ
Team Udayavani, May 18, 2023, 3:10 PM IST
ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬಳಗಾರ ಕ್ರಾಸ್ ಬಳಿ ಮದ್ಯ ಪ್ಯಾಕೆಟ್ ಗಳನ್ನು ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಂದಕದಲ್ಲಿ ಪಲ್ಟಿಯಾಗಿದೆ.
ಕಲಬುರ್ಗಿಯಿಂದ ಉಡುಪಿಗೆ ಸಾರಾಯಿ ಪಾಕೇಟ್ ತುಂಬಿದ್ದ ಲಾರಿ ಆರತಿಬೈಲ್ ಘಟ್ಟದ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಹಳ್ಳದ ಪಕ್ಕದ ಕಂದಕದಲ್ಲಿ ಬಿದ್ದು ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಲಾರಿ ಚಾಲಕನಿಗೆ ಅಲ್ಪಪ್ರಮಾಣದ ಗಾಯವಾಗಿದೆ. ನಿರ್ವಾಹಕ ಲಾರಿಯಲ್ಲಿ ಸಿಕ್ಕಿ ಒದ್ದಾಡಿದ್ದು,ತಾಸು ಗಟ್ಟಲೆ ಒದ್ದಾಡಿ ಹೊರತೆಗೆಯಲಾಗಿದೆ.ಆತನ ಕೈಕಾಲು ಮುರಿದಿದ್ದು,ಗಂಭೀರ ಗಾಯಗೊಂಡಿದ್ದಾನೆ.ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಲಾರಿ ಸಂಪೂರ್ಣ ನುಜ್ಜು ಗುಜ್ಜಾಗಿದೆ.ಲಾರಿಯಲ್ಲಿ1700 ಬಾಕ್ಸ್ ಮದ್ಯದ ಪ್ಯಾಕೆಟ್ ಗಳಿದ್ದು,ಅರ್ಧದಷ್ಟು ಒಡೆದು ಹಾಳಾಗಿದೆ.ಸುತ್ತ ಮುತ್ತಲಿನ ದಾರಿ ಹೋಕರರಿಗೆ ಎಣ್ಣೆ ಪ್ರಿಯರಿಗೆ ಹಬ್ಬ ಆಗಿದ್ದು, ಹಲವನ್ನು ದೋಚಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ