
ಕೋವಿಡ್ ಲಸಿಕೆ ಪಡೆಯಲು ಜಾಗೃತಿ
Team Udayavani, Mar 18, 2021, 2:02 PM IST

ಕಾರವಾರ: ಅರವತ್ತು ವರ್ಷ ಮೇಲ್ಪಟ್ಟ ಹಾಗೂ 45 ರಿಂದ 59 ವರ್ಷ ವಯೋಮಾನದಲ್ಲಿ ಇರುವ ಎಲ್ಲ ನಾಗರಿಕರಿಗೆ ಮೂರನೇ ಹಂತದಲ್ಲಿ ಕೋವಿಡ್-19 ಲಸಿಕೆ ವಿತರಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲ ಗ್ರಾಪಂನಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆಯಲು ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಪಂ ಸಿಇಒ ಪ್ರಿಯಂಕಾ ಹೇಳಿದರು.
ಜಿಪಂ ಸಭಾಂಗಣದಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯ ಶಿವಾನಂದ ಹೆಗಡೆ, ಕೋವಿಡ್ -19 ಎರಡನೇ ಅಲೆಯ ತಡೆಗಾಗಿ ಯಾವೆಲ್ಲ ಕ್ರಮಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರವೇ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರ, ಕೇರಳಾ ಸೇರಿದಂತೆಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರುಕೋವಿಡ್-19 ಪರೀಕ್ಷೆ ಮಾಡಿಸಿದ 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕಾಗಿದೆ. ಅಲ್ಲದೇ ಮುಖ್ಯ ಮಂತ್ರಿಗಳು ಈ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಪಂಸಿಇಒ ಜೊತೆ ವಿಡಿಯೋ ಸಂವಾದ ನಡೆಸಿ ಹೆಚ್ಚಿನಕಾಳಜಿವಹಿಸಿ ಕರ್ತವ್ಯ ನಿರ್ವಹಸಲು ತಿಳಿಸಿದ್ದಾರೆ ಎಂದರು.
ಹೀಗಾಗಿ ಜಿಲ್ಲೆಯಲ್ಲಿ ಪ್ರತಿದಿನ 1200 ಕೋವಿಡ್\ ಪರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಕೋವಿಡ್ ಪ್ರಾರಂಭದ ಹಂತದಲ್ಲಿ ಕೈಗೊಂಡ ಎಲ್ಲ ಕಾರ್ಯ ಚಟುವಟಿಕೆಗಳನ್ನು ಪುನಃ ಆರಂಭಿಸಿದ್ದು, ಜಿಲ್ಲಾಪೊಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳಸಹಕಾರದೊಂದಿಗೆ ಕಾರವಾರ ಹಾಗೂ ಅಂಕೋಲಾದಲ್ಲಿ ಮಾ.17 ರಿಂದ ಚೆಕ್ ಪೋಸ್ಟ್‌ಗಳನ್ನ ಪ್ರಾರಂಭಿಸಲಾಗಿದೆ. ಕೋವಿಡ್ ಪರೀಕ್ಷೆ, ಹೋಂ ಕ್ವಾರಂಟೇನ್, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕುರಿತು ಎಲ್ಲ ತಹಶಿಲ್ದಾರ್‌ಗಳಿಗೂ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 1.40 ಲಕ್ಷ ಜನ 60 ವರ್ಷಮೇಲ್ಪಟ್ಟವರಿದ್ದು, ಈ ಪೈಕಿ 15 ಸಾವಿರ ಜನರುಈಗಾಗಲೆ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನುಳಿದ1.25 ಲಕ್ಷ ಜನ ಲಸಿಕೆ ಪಡೆಯಬೇಕಿದೆ. ಹೀಗಾಗಿ ಎಲ್ಲಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರಿಗೆ ಇಂತಿಷ್ಟು ಗುರಿ ನಿಗದಿಪಡಿಸಲಾಗಿದೆ. ಆಧಾರ್ ಕಾರ್ಡ್ ಮೂಲಕ60 ವರ್ಷ ಮೇಲ್ಪಟ್ಟವರ ಮಾಹಿತಿ ಕಲೆ ಹಾಕುತ್ತಿದ್ದು, ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಲಸಿಕೆ ಸರಬರಾಜಿನಲ್ಲಿ ಯಾವುದೇತೊಂದರೆಯಿಲ್ಲ. ಜಿಲ್ಲೆಗೆ ಅಗತ್ಯವಿರುವಷ್ಟು ಲಸಿಕೆಬಂದಿದೆ. ಹೀಗಾಗಿ ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಈ ಉದ್ದೇಶದಿಂದ ಪ್ರತೀ ಗ್ರಾಪಂನಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಸದಸ್ಯರಿಗೆ, ವಿವಿಧ ಸಂಘ, ಸಂಸ್ಥೆಗಳಪದಾಧಿಕಾರಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ನಂತರದಲ್ಲಿ ಸಾರ್ವಜನಿಕರನ್ನು ಮನವೊಲಿಸಿ ಲಸಿಕೆಹಾಕಿಸುವಂತೆ ತಿಳಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಸರ್ಕಾರದಿಂದ ಮಂಜೂರಾದ ಮನೆಗಳಿಗೆ ಎರೆಡು ವರ್ಷಗಳಿಂದ ಬಿಲ್ ಆಗಿಲ್ಲ, ಈಗಾಗಲೇ ಕಟ್ಟಡಗಳು ಹಳೆಯದಾಗಿದ್ದು ಜನರು ಸುಸಜ್ಜಿತ ಮನೆಗಳಿಲ್ಲದೆ ಬದುಕುವಂತಾಗಿದೆ ಎಂದು ಸದಸ್ಯೆ ಪುಷ್ಪಾ ನಾಯ್ಕ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಇದು ರಾಜ್ಯದ ಸಮಸ್ಯೆಯಾಗಿದ್ದು ಜಿಲ್ಲೆಯ ಮನೆಗಳ ಬಿಲ್‌ಗಳಿಗೆ ಸಂಬಂಧಿಸಿದಂತೆ 30 ಕೋಟಿ ಹಣ ಬರುವುದು ಬಾಕಿ ಇದೆ. ಸರ್ಕಾರದಿಂದ ಮಂಜೂರಾದ ತಕ್ಷಣ ಬಿಲ್ ಮಾಡಲಾಗುವುದು ಎಂದರು.
ಮಾಣಿಕಟ್ಟಾದಿಂದ ಕಾಗಾಲವರೆಗೆ ವಿಶ್ವ ಬ್ಯಾಂಕ್ ನೆರವಿನಿಂದ ಪ್ರಕೃತಿ ವಿಕೋಪ ಯೋಜನೆಯಡಿ32 ಕೋಟಿ ವೆಚ್ಚದ ಖಾರಲ್ಯಾಂಡ್ ಮತ್ತು ಬ್ರಿಡ್ಜ್ಕಾಮಗಾರಿ ನಡೆಯುತ್ತಿದೆ ಹಾಗೂ ಕಾಮಗಾರಿಯಲ್ಲಿಇರುವ ಲೋಪದೋಷಗಳ ಕುರಿತ ಮನವಿ ಪತ್ರವನ್ನು ಸದಸ್ಯ ರತ್ನಾಕರ ನಾಯ್ಕ ನೀಡಿದರು.
ಜಿಲ್ಲೆಯ ದೊಡ್ನಳ್ಳಿ ಭಾಗದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ಆಗುತ್ತಿರುವುದಲ್ಲದೇ, ಕೃತ್ಯ ಎಸಗಿದವರನ್ನು ಬಂಧಿಸಿದ ಮರುದಿನವೇ ಹೊರಬಂದು, ಮತ್ತೆ ಸಾರಾಯಿ ಮಾರಾಟ ಮಾಡುತ್ತಾರೆ. ಇದು ಗ್ರಾಮಸ್ಥರು ಮತ್ತು ಮಕ್ಕಳಲ್ಲಿಪರಿಣಾಮ ಬೀರುತ್ತಿದೆ. ಶಿರಸಿ ವಿಭಾಗದ ಕಸ ವಿಲೇವಾರಿ ಪ್ರದೇಶದಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ನೂರಾರು ಹಂದಿಗಳನ್ನ ರಸ್ತೆಗೆ ಬಿಟ್ಟುಸಾಕಲಾಗುತ್ತಿದೆ. ಕೊಳಚೆ ಪ್ರದೇಶ ಆಗಿರುವುದರಿಂದ ಹಾಗೂ ಅಂಗನವಾಡಿಗಳಿರುವುದರಿಂದ ಮಕ್ಕಳಿಗೆರೋಗಗಳು ಬರಬಹುದು ಎಂದು ಸದಸ್ಯರಾದ ಉಷಾ ಹೆಗಡೆ ಹೇಳಿದರು.
ಇದಕ್ಕೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡಮನಿ ಅವರು ಅಬಕಾರಿ ಇಲಾಖೆಗೆ ಕ್ರಮ ಜರುಗಿಸಲು ಸೂಚಿಸಿದರು. ಅಲ್ಲದೇ ಸರ್ಕಾರದಿಂದ ಕುರಿ ಹಾಗೂ ಹಂದಿಸಾಕಾಣಿಕೆಗೆ ಪರವಾನಗಿ ನೀಡುವಾಗ ಸ್ಥಳವಕಾಶಪರಿಶೀಲಿಸಲಾಗುತ್ತದೆ. ಆದರೆ ಈ ಪ್ರಕರಣಅನಧಿಕೃತ ಆಗಿರುವುದರಿಂದ ಪಶು ಇಲಾಖೆ ಹಾಗೂಅರೋಗ್ಯ ಇಲಾಖೆಯಿಂದ ಪರಿಶೀಲಿಸಿ ಕ್ರಮದ ಕೈಗೊಳ್ಳಲಾಗುವುದು ಎಂದರು.
ಹಳದಿಪುರ ಜಿಪಂ ವ್ಯಾಪ್ತಿಯಲ್ಲಿ ಬರುವ ಪಿಡಬ್ಲ್ಯು ಡಿ ರಸ್ತೆಗಳ ನಿರ್ವಹಣೆ ಕೆಲಸ ನಡೆಯುತ್ತಿಲ್ಲ. ಮೇಲ್ನೋಟಕ್ಕೆ ಕೆಲಸ ನಡೆದಿದೆ ಹಾಗೂ ರಸ್ತೆಗಳ ಪಕ್ಕದಲ್ಲಿ ಅಂಗಡಿಗಳು ತಲೆ ಎತ್ತಿದ್ದು ಅವುಗಳನ್ನು ತೆರವುಗೊಳಿಸಬೇಕು ಎಂದು ಸದಸ್ಯರಾದ ಶಿವಾನಂದ ಹೆಗಡೆ ತಿಳಿಸಿದರು. ಪಿಡಬ್ಲ್ಯುಡಿ ಅಧಿಕಾರಿ ಮಾತನಾಡಿ ಎರಡು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು ಜಂಗಲ್ ಕಟಿಂಗ್, ಕಿಮೀ ಕಲ್ಲುಗಳ ಪೇಂಟಿಂಗ್ ಮತ್ತು ಪ್ಯಾಚ್ ವರ್ಕ್ ಕಾಮಗಾರಿ ಮುಗಿದಿದ್ದು ಸೈಡ್ ಶೋಲ್ಡರ್ ಕೆಲಸ ಮಾತ್ರ ಬಾಕಿ ಇದೆ, ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ, ಸಾಮಾಜಿಕ ನ್ಯಾಯ, ಕೃಷಿ ಮತ್ತು ಕೈಗಾರಿಕೆ, ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳ ನಡವಳಿಕೆಗಳಿಗೆಅನುಮೋದನೆ ನೀಡಲಾಯಿತು. ನಂತರ ಜ.22 ರಂದು ನಡೆದ ಜಿಪಂ ಸಾಮಾನ್ಯ ಸಭೆ ನಡವಳಿಗಳ ಮೇಲಿನ ಪಾಲನಾ ವರದಿ ಕುರಿತು ಚರ್ಚಿಸಲಾಯಿತು.
ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್, ಕೃಷಿ ಮತ್ತು ಕೈಗಾರಿಕೆಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ನಾಯ್ಕ ಸೇರಿದಂತೆಜಿಪಂ ಸದಸ್ಯರು ಹಾಗೂ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !