ಮೇಲ್ಮನೆಯಲ್ಲಿ ಬಿಜೆಪಿಗೆ 16 ಸ್ಥಾನ ನಿಶ್ಚಿತ: ಕಾರಜೋಳ

ಮೇಲ್ಮನೆ ಚುನಾವಣೆಯಲ್ಲಿ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಆಗಲಿದೆ

Team Udayavani, Nov 30, 2021, 12:23 PM IST

ಮೇಲ್ಮನೆಯಲ್ಲಿ ಬಿಜೆಪಿಗೆ 16 ಸ್ಥಾನ ನಿಶ್ಚಿತ: ಕಾರಜೋಳ

ವಿಜಯಪುರ: ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ವಿಜಯಪುರ ಸೇರಿದಂತೆ ರಾಜ್ಯದಲ್ಲಿ 16 ಸ್ಥಾನ ಗೆಲ್ಲಲಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿ ಸದಸ್ಯತ್ವದ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಒಬ್ಬರನ್ನೇ ಕಣಕ್ಕಿಳಿಸಿದ್ದು, ಬಿಜೆಪಿ ಸದಸ್ಯ ಮತದಾರರು ಶೇ. 60ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಪಕ್ಷದಿಂದ ನಮ್ಮ ಅಭ್ಯರ್ಥಿ ಪಿ.ಎಚ್‌. ಪೂಜಾರ ಅವರ ಗೆಲುವು ನಿಶ್ಚಿತ ಎಂದರು.

ವಿಜಯಪುರ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯಲ್ಲಿ 2200, ಬಾಗಲಕೋಟೆ ಜಿಲ್ಲೆಯಲ್ಲಿ 2100 ಸದಸ್ಯರು, 9 ಶಾಸಕರು, ಎರಡೂ ಜಿಲ್ಲೆಯ ಇಬ್ಬರು ಸಂಸದರು ಸೇರಿ ಸುಮಾರು 4300 ಮತದಾರರಿದ್ದಾರೆ. ಅವಳಿ ಜಿಲ್ಲೆಯ 7300 ಮತದಾರರಲ್ಲಿ 4300 ಮತದಾರರು ಬಿಜೆಪಿಗೆ ಸೇರಿದ್ದು, ನಮ್ಮ ಶಕ್ತಿಯ ಆಧಾರದಲ್ಲಿ ಗೆಲ್ಲುವ ಸಾಮರ್ಥ್ಯಕ್ಕೆ ತಕ್ಕಂತೆ ಬಿಜೆಪಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಸರ್ಕಾರಗಳ ಸಾಧನೆಗಳು ಮೇಲ್ಮನೆ ಚುನಾವಣೆಯಲ್ಲಿ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಆಗಲಿದೆ. ಅಲ್ಲದೇ ಗೆಲ್ಲುವ ಶಕ್ತಿಯನ್ನು ಮನವರಿಕೆ ಮಾಡಿಕೊಂಡೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ವಿಜಯ ನಮ್ಮದೇ ಎಂದರು.

ಇನ್ನು ವಿಜಯಪುರ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಮ್ಮ ಪಕ್ಷದ ಇನ್ನೋರ್ವ ವ್ಯಕ್ತಿಯನ್ನು ಕಣದಿಂದ ಹಿಂದೆ ಸರಿಸಿದ್ದೇವೆ. ಆದರೆ ವಿರೋಧಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯ ಭೀತಿಯಲ್ಲಿದೆ ಹಾಗೂ ಸೋಲುವ ಆತಂಕ ಎದುರಿಸುತ್ತಿದೆ ಎಂದರು.

ಕಾಂಗ್ರೆಸ್‌ ಬಂಡುಕೋರ ಮಲ್ಲಿಕಾರ್ಜುನ ಲೋಣಿ ಅವರನ್ನು ಕಣದಿಂದ ಹಿಂದೆ ಸರಿದು ಅವಿರೋಧ ಆಯ್ಕೆಗೆ ಸಹಕರಿಸಿ ಎಂದು ಮನವಿ ಮಾಡಿದ್ದೆವು. ನಾನು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಲೋಣಿ ಅವರಿಗೆ ಕರೆ ಮಾಡಿದ್ದು ಸತ್ಯ. ಲೋಣಿ ಅವರು ತಾವು ಕಾಂಗ್ರೆಸ್‌ ನಿಷ್ಠನಾಗಿದ್ದು, ನಿಮ್ಮ ಮನವಿಗೆ ಸ್ಪಂದಿಸುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ ಈ ಹಂತದಲ್ಲಿ ಬಿಜೆಪಿ ಮತ್ತೂಂದು ಮತವನ್ನು ಲೋಣಿ ಅವರಿಗೆ ಕೊಡುವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಸುನೀಲಗೌಡ ಅವರಿಗೆ ಸೋಲಿನ ಭೀತಿ ಆವರಿಸಿದೆ. ಪಕ್ಷದ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಇರುವುದು ಅವರಲ್ಲಿ ಸೋಲಿನ ಭೀತಿ ಹುಟ್ಟುವಂತೆ ಮಾಡಿದೆ. ಕೈ ಪಕ್ಷದ ಆಂತರಿಕ ಸಂಘರ್ಷ ನಮ್ಮ ಬಿಜೆಪಿ ಅಭ್ಯರ್ಥಿ ಸುಲಭ ಗೆಲುವಿಗೆ ಸಹಕಾರಿ ಆಗಲಿದೆ ಎಂದರು. ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಎಚ್‌. ಪೂಜಾರ, ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಶಾಸಕ ರಮೇಶ ಭೂಸನೂರ, ಮಾಜಿ ಸಚಿವ ಜಿ.ಎಸ್‌. ನ್ಯಾಮಗೌಡ, ಪಕ್ಷದ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ ಇದ್ದರು.

ಟಾಪ್ ನ್ಯೂಸ್

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚ್ಗಹಕಿ,ಮಹಗ್​ಸಅದೆಗ

ಗಗನಕ್ಕೇರಿದ ಬೆಲೆಗಳ ನಡುವೆ ಸಂಕ್ರಾಂತಿಗೆ ಅದ್ದೂರಿ  ಸ್ವಾಗತ 

crime

ದರೋಡೆ, ವೃದ್ಧೆ ಕೊಲೆ ಪ್ರಕರಣ: ಆರೋಪಿ ಪತ್ತೆಗೆ 3 ವಿಶೇಷ ತಂಡ ರಚನೆ

ಹೊಸಪೇಟೆ: ಸೀರೆ ಖರೀದಿ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಪರಾರಿಯಾದ ದರೋಡೆಕೋರರು.!

ಹೊಸಪೇಟೆ: ಸೀರೆ ಖರೀದಿ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಪರಾರಿಯಾದ ದರೋಡೆಕೋರರು.!

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

Untitled-6

ಒಳ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.