ಜನ್ಮಭೂಮಿಯಲ್ಲಿ ಬಸವ ಜಯಂತಿಗೆ ಹಕ್ಕೊತ್ತಾಯ

ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಗ್ರಹ

Team Udayavani, May 7, 2019, 11:00 AM IST

7-mAY-5

ಬಸವನಬಾಗೇವಾಡಿಯಲ್ಲಿರುವ ರಾಷ್ಟ್ರೀಯ ಬಸವ ಸ್ಮಾರಕ ಹೊರನೋಟ.

ವಿಜಯಪುರ: ವಿಶ್ವ ಮಾನವತ್ವದ ಮೂಲಕ ಜಗತ್ತಿಗೆ ವೈಚಾರಿಕ ಪ್ರಜ್ಞೆ ಮೂಡಿಸಿದ ಬಸವೇಶ್ವರ ಮೂರ್ತಿ ಸಾಗರದಾಚೆಯ ಇಂಗ್ಲೆಂಡ್‌ ನೆಲದಲ್ಲೂ ಪ್ರತಿಷ್ಠಾಪನೆಗೊಂಡಿದೆ. ಆದರೆ ತಾನು ಜನಿಸಿದ ನೆಲದಲ್ಲೇ ಬಸವಣ್ಣ ಅನಾಥವಾಗಿದ್ದಾನೆ. ಬಸವ ಜನ್ಮಭೂಮಿ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆ, ಸರ್ಕಾರ ಆಚರಿಸುವ ಬಸವೇಶ್ವರರ ಜಯಂತಿ ರಾಷ್ಟ್ರೀಯ ಉತ್ಸವ ಮಾದರಿಯಲ್ಲಿ ಆಗಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಇಂದಿಗೂ ಈಡೇರಿಲ್ಲ. ಹೀಗಾಗಿ ಸ್ಥಳೀಯರಲ್ಲಿ ಸರ್ಕಾರದ ವರ್ತನೆ ಬೇಸರದ ಭಾವ ಮೂಡಿದೆ.

ಜಗತ್ತಿಗೆ ಮನುಕುಲದ ಮಹತ್ವ, ಕಾಯಕದ ಸಿದ್ಧಾಂತ, ಲಿಂಗ ತಾರತಮ್ಯ ನಿವಾರಣೆ, ಸಮಾನತೆಯ ಸಮಾಜ ನಿರ್ಮಾಣದಂಥ ಕ್ರಾಂತಿಕಾರ ನಡೆಗಳ ಮೂಲಕ ವಿಶ್ವಕ್ಕೆ ಆದ್ಬುತ ಸಂದೇಶ ನೀಡಿದ ಬಸವ ನೆಲದಲ್ಲಿ ಬಸವೇಶ್ವರ ಆನಾಥವಾಗಿದ್ದಾನೆ. ಬಸವ ಜನ್ಮಭೂಮಿ ಬಾಗೇವಾಡಿಗೆ ಬಸವೇಶ್ವರ ಹೆಸರಿನ ನಾಮಕರಣ ಮಾಡಿರುವ ಸರ್ಕಾರ, ಕಳೆದ ಕೆಲವು ವರ್ಷಗಳಿಂದ ಬಸವೇಶ್ವರ ಹೆಸರಿನಲ್ಲಿ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನೂ ನೀಡುತ್ತಿದೆ. ಆದರೆ ಸದರಿ ಪ್ರಶಸ್ತಿಯನ್ನು ಬಸವ ಜನ್ಮಭೂಮಿ ಬಾಗೇವಾಡಿಯಲ್ಲಿ ಪ್ರದಾನ ಮಾಡದೇ ದೂರದ ಬೆಂಗಳೂರಿನಲ್ಲಿ ವಿತರಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ.

ವಿಶ್ವ‌ಗುರು ಎನಿಸಿಕೊಂಡಿರುವ ಬಸವೇಶ್ವರರು ಜನಿಸಿದ ನೆಲದಲ್ಲೇ ಅವರ ಹೆಸರಿನಲ್ಲಿರುವ ಪ್ರಶಸ್ತಿ ಪ್ರದಾನ ಮಾಡಿದರೆ ಪ್ರಶಸ್ತಿ ಪಡೆಯುವವರಿಗೆ ಹೆಚ್ಚಿನ ಗೌರವ ಬರುತ್ತದೆ. ಬದಲಾಗಿ ದೂರ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿದರೆ ಭಾವನಾತ್ಮಕವಾಗಿ ಪ್ರಶಸ್ತಿ ಮೌಲ್ಯ ಕಳೆದುಕೊಳ್ಳುತ್ತದೆ. ಸರ್ಕಾರ ಪ್ರಶಸ್ತಿ ಆರಂಭಿಸಿದ ವರ್ಷದಿಂದಲೇ ಈ ಕುರಿತು ಧ್ವನಿ ಎತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ಆಕ್ಷೇಪ.

ಇದಲ್ಲದೇ ಸರ್ಕಾರ ಬಸವನಬಾಗೇವಾಡಿ ಪಟ್ಟಣದಲ್ಲಿ ನಿರ್ಮಿಸಿರುವ ಸ್ಮಾರಕಕ್ಕೆ ಅಂತಾರಾಷ್ಟ್ರೀಯ ಸ್ಮಾರಕ ಎಂದು ನಾಮಕರಣ ಮಾಡಿದ್ದರೂ ವಾಸ್ತವಿಕವಾಗಿ ರಾಜ್ಯಮಟ್ಟದ ಸ್ಮಾರಕದ ಸೌಲಭ್ಯಗಳೂ ಇಲ್ಲ. ಬಸವೇಶ್ವರ ಜಯಂತಿ ಸಂದರ್ಭದಲ್ಲಿ ಈ ಸ್ಮಾರಕದಲ್ಲಿ ತಾಲೂಕಾಡಳಿತದ ಮೂಲಕ ಕಾರ್ಯಕ್ರಮ ಆಚರಿಸಿದರೂ ಸ್ಥಾನಿಕ ಮಟ್ಟಕ್ಕೆ ಸೀಮಿತವಾಗಿದೆ. ಹೀಗಾಗಿ ಬಸವೇಶ್ವರರ ಜಯಂತಿ ಅವರ ಜನ್ಮಭೂಮಿಯಲ್ಲೇ ಸಾಂಕೇತಿಕ ಕಾರ್ಯಕ್ರಮದಂತೆ ಆಚರಿಸಲ್ಪಡುತ್ತಿದೆ ಎಂಬ ಕೊರಗು ಬಸವಜನ್ಮಭೂಮಿ ಜನರನ್ನು ಕಾಡುತ್ತಿದೆ.

ಹೀಗಾಗಿ ಸರ್ಕಾರ ಬಸವ ಜಯಂತಿಯನ್ನು ದಸರಾ ಎಂದಾಕ್ಷಣ ಮೈಸೂರು, ಹಂಪಿ ಉತ್ಸವ ಎಂದರೆ ವಿಜಯನಗರ ಸಾಮ್ರಾಜ್ಯದ ಸ್ಮರಣೆ ಬರುವಂತೆ ಬಸವ ಜಯಂತಿಯನ್ನು ಬಸವ ಜನ್ಮಭೂಮಿಯಲ್ಲೇ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸಲು ಮುಂದಾಗಬೇಕು. ಕೇವಲ ಬಸವಣ್ಣನ ಅಶಯದಲ್ಲಿ ಸರ್ಕಾರ ನಡೆಯುತ್ತಿದೆ ಎಂದು ಹೇಳಿಕೆ ನೀಡಿದರೆ ಸಾಲದು, ಬಸವ ಜನ್ಮಭೂಮಿಯತ್ತ ಆಡಳಿತಗಾರರು ಹೆಜ್ಜೆ ಹಾಕಬೇಕು ಎಂಬ ಹಂಬಲ ವ್ಯಕ್ತವಾಗುತ್ತಿದೆ.

ಇನ್ನು ಬಸವೇಶ್ವರರ ಐಕ್ಯತಾಣ ಕೂಲಡಸಂಗಮದ ಅಭಿವೃದ್ಧಿಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಅಗತ್ಯ ಅನುದಾನ ನೀಡುತ್ತಿದೆ. ಆದರೆ ಇದೇ ಪ್ರಾಧಿಕಾರದ ವ್ಯಾಪ್ತಿಗೆ ಸೇರಿರುವ ಬಸವನಬಾಗೇವಾಡಿ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದಕ್ಕಾಗಿ ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಬೇಡಿಕೆ ಈವರೆಗೂ ಈಡೇರದ ಕುರಿತು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನು ಮೂಲ ನಂದೀಶ್ವರ ದೇವಸ್ಥಾನ ಜೀರ್ಣೋದ್ಧಾರವಾಗಿದ್ದರೂ ಹಲವು ಆಸಹ್ಯಗಳು ಭಕ್ತರನ್ನು ಕಣ್ಣು ಮುಚ್ಚಿಕೊಳ್ಳುವಂತೆ ಮಾಡುತ್ತಿವೆ. ದೇವಸ್ಥಾನದ ಆವರಣದಲ್ಲೇ ಬಯಲು ಸ್ನಾನ, ಬಳಕೆಗೆ ಬಾರದಂತೆ ನಿರ್ಮಿಸಿರುವ ಶೌಚಾಲಯ, ಹೀಗೆ ಬಸವಭೂಮಿ ಇಲ್ಲಗಳ ಆಗರವಾಗಿದೆ. ಹೀಗಾಗಿ ಹೊರಗಿನಿಂದ ಬರುವ ಬಸವಭಕ್ತರ ಮೂದಲಿಕೆ ಸ್ಥಳೀಯರನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ.

ಬಸವನಾಡಿನಿಂದ ಸಮ್ಮಿಶ್ರ ಸರ್ಕಾರದಲ್ಲಿ ಬಸವ ನಾಡಿನಿಂದಲೇ ಆಯ್ಕೆಯಾದ ಮೂವರು ಹಾಲಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಿದ್ದಾರೆ. ಇದರಲ್ಲಿ ಆರೋಗ್ಯ ಸಚಿವ ಶಿವಾನಂದ ನಾಯಕ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರವನ್ನೇ ಪ್ರತಿನಿಧಿಸುತ್ತಾರೆ. ಮತ್ತೂಬ್ಬ ಸಚಿವ ಗೃಹ ಮಂತ್ರಿ ಎಂ.ಬಿ. ಪಾಟೀಲ ಬಸವಧರ್ಮ ಸ್ಥಾಪನೆಯ ಮುಂಚೂಣಿಯಲ್ಲಿ ನಿಂತಿರುವ ಬಸವ ಭಕ್ತ. ಇನ್ನೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ. ಜಿಲ್ಲೆಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆಯ ಮಾನ್ಯತೆಯ ಅಧಿಕಾರ ಇದೆ. ಆದರೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾತ್ರ ಕಂಡು ಬರುತ್ತಿದೆ ಎಂಬ ಸಿಡುಕು ಬಸವಜನ್ಮಭೂಮಿ ಜನರಲ್ಲಿ ಮನೆ ಮಾಡಿದೆ.

ಇನ್ನಾದರೂ ಸರ್ಕಾರ ದಸರಾ, ಹಂಪಿ ಉತ್ಸವದ ಮಾದರಿಯಲ್ಲಿ ಬಸವ ಜಯಂತಿಯನ್ನು ಬಸವ ಜನ್ಮಭೂಮಿಯಲ್ಲೇ ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು. ಸರ್ಕಾರ ವಿತರಿಸುವ ಬವಸೇಶ್ವರ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭ ಬಸವಜನ್ಮ ಭೂಮಿಯಲ್ಲೇ ನಡೆಯಬೇಕು ಎಂಬ ಹಕ್ಕೋತ್ತಾಯ ಕೇಳಿ ಬಂದಿದೆ.

ಸರ್ಕಾರ ಬಸವ ಜನ್ಮಭೂಮಿ ಬಸವನಬಾಗೇವಾಡಿಯ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ, ಅಗತ್ಯ ಅನುದಾನ ನೀಡಬೇಕು. ಬಸವನಬಾಗೇವಾಡಿ ಪಟ್ಟಣದಲ್ಲಿ ಬಸವ ಉತ್ಸವ ಹಾಗೂ ಸರ್ಕಾರ ನೀಡುವ ಬಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕು ಎಂದು ಜಿಲ್ಲೆಯ ಸಚಿವರಿಗೆ, ಜಿಲ್ಲಾಡಳಿತಕ್ಕೆ ನೀಡಿರುವ ಮನವಿಗಳಿಗೆ ಲೆಕ್ಕವೇ ಇಲ್ಲ. ಯಾವ ಮನವಿಗೂ ಆಳುವವರು ಸ್ಪಂದಸದೇ ಬಾಯಿ ಮಾತಲ್ಲಿ ಬಸವಣ್ಣ ಎನುತ್ತಿದ್ದಾರೆ.
ರಾಜುಗೌಡ ಚಿಕ್ಕೊಂಡ,
ಅಧ್ಯಕ್ಷರು, ವಿಶ್ವಬಂಧು ಬಸವ ಸಮಿತಿ, ಬಸವನಬಾಗೇವಾಡಿ

ಸರ್ಕಾರ ಬಸವಜಯಂತಿ ದಿನವನ್ನು ಹಂಪಿ, ಮೈಸೂರು ದಸರಾ ಮಾದರಿಯಲ್ಲಿ ಬಸವ ಜನ್ಮಭೂಮಿಯಲ್ಲಿ ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ತ್ವರಿತವಾಗಿ ಆಗಬೇಕು ಎಂದು ಹಲವು ಬಾರಿ ಹೋರಾಟ ಮಾಡಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಸರ್ಕಾರದ ಬಸವ ಜಯಂತಿ, ಬಸವ ಪ್ರಶಸ್ತಿ ಪ್ರದಾನ ಕೇವಲ ಕಾಟಾಚಾರದ ಕಾರ್ಯಕ್ರಮವಾಗುತ್ತಿದೆ. ಇದು ನಮ್ಮ ಭಾಗದ ರಾಜಕೀಯ ನಾಯಕರ ದೌರ್ಬಲ್ಯದ ಪ್ರತೀಕವಾಗುತ್ತದೆ.
ಶಿವಪ್ರಕಾಶ ಶ್ರೀಗಳು, ಹಿರೇಮಠ, ಬಸವನಬಾಗೇವಾಡಿ

ಜಿ.ಎಸ್‌. ಕಮತರ

ಟಾಪ್ ನ್ಯೂಸ್

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.