115 ಗ್ರಾಪಂ ಫಲಿತಾಂಶ ಪ್ರಕಟ
Team Udayavani, Jan 1, 2021, 7:06 PM IST
ಯಾದಗಿರಿ: ಜಿಲ್ಲೆಯ ಒಟ್ಟು 119 ಗ್ರಾಪಂಗಳಲ್ಲಿ 115 ಗ್ರಾಪಂಗಳಿಗೆ ಎರಡು ಹಂತಗಳಲ್ಲಿ ಚುನಾವಣೆನಡೆದು ಇದೀಗ ಫಲಿತಾಂಶ ಹೊರಬಿದ್ದಿದೆ.
ಜಿಲ್ಲೆಯ ಶಹಾಪುರ 24, ಸುರಪುರ 21, ಹುಣಸಗಿ 18, ಯಾದಗಿರಿ 22, ಗುರುಮಠಕಲ್17 ಹಾಗೂ ವಡಗೇರಾ ತಾಲೂಕುವ್ಯಾಪ್ತಿಯಲ್ಲಿ 17ಗ್ರಾಮ ಪಂಚಾಯಿತಿಗಳಿಗೆ ಒಟ್ಟು 2291 ಸ್ಥಾನಗೆಳಿಗೆಚುನಾವಣೆ ಘೋಷಣೆಯಾಗಿತ್ತು. ಮೊದಲಹಂತದಲ್ಲಿ ಶಹಾಪುರ ತಾಲೂಕು ವ್ಯಾಪ್ತಿಯ 87,ಸುರಪುರ 58 ಹಾಗೂ ಹುಣಸಗಿ 81 ಸೇರಿ 226ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, ಎರಡನೇ ಹಂತದಲ್ಲಿ ಯಾದಗಿರಿಯ 99, ಗುರುಮಠಕಲ್ 69 ಹಾಗೂ ವಡಗೇರಾ ವ್ಯಾಪ್ತಿಯ40 ಅಭ್ಯರ್ಥಿಗಳು ಸೇರಿ ಒಟ್ಟು 434 ಸ್ಥಾನಗಳ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಶಹಾಪುರ ತಾಲೂಕಿನ 20 ಸ್ಥಾನಗಳಿಗೆ ಹಾಗೂ ಹುಣಸಗಿಯ 2 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.
ಉಳಿದ 115 ಗ್ರಾಪಂಗಳ 2269 ಸ್ಥಾನಗಳಲ್ಲಿ ಅವಿರೋಧ ಹೊರತುಪಡಿಸಿ ಶಹಾಪುರ ತಾಲೂಕಿನ ಗ್ರಾಮ ಪಂಚಾಯಿತಿಗಳ 388ಸ್ಥಾನ, ಸುರಪುರನ 325 ಸ್ಥಾನ, ಹುಣಸಗಿಯ 286, ಯಾದಗಿರಿಯ360, ಗುರುಮಠಕಲ್‌ನ 233, ವಡಗೇರಾದ 243 ಸ್ಥಾನ ಸೇರಿ ಒಟ್ಟು 1835 ಸ್ಥಾನಗಳಿಗೆ ಮತದಾನ ನಡೆದು ಅಂತಿಮವಾಗಿ ಫಲಿತಾಂಶ ಹೊರಬಂದಿದೆ
ಗೆದ್ದು ಬಂದ ದಂಪತಿ :
ನಾರಾಯಣಪುರ: ಸಮೀಪದ ಜೋಗುಂಡಬಾವಿ ಗ್ರಾಪಂನ ವ್ಯಾಪ್ತಿಯ ಕೋಟೆಗುಡ್ಡ ಗ್ರಾಮದ 3 ಸ್ಥಾನಗಳ ಪೈಕಿ ಎರಡು ಪ್ರತ್ಯೇಕ ಸ್ಥಾನಗಳಿಗೆ ದಂಪತಿ ಸ್ಪರ್ಧಿಸಿ ಇಬ್ಬರೂ ವಿಜೇತರಾಗುವ ಮೂಲಕ ಗ್ರಾಪಂಗೆ ಪ್ರವೇಶಿಸಿದ್ದಾರೆ.
ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಪತಿಯಾದ
ಯಲಪ್ಪ ದೇವೇಂದ್ರಪ್ಪ ಸ್ಪರ್ಧಿಸಿ ವಿಜಯಿಯಾಗಿದ್ದರೆ, ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರಕ್ಕೆ ಶಂಕರಮ್ಮ ಯಲ್ಲಪ್ಪ ಸ್ಪ ರ್ಧಿಸಿ ವಿಜೇತರಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇನ್ನೊಂದು ಸಾಮಾನ್ಯ ಎಸ್ಟಿ ಮೀಸಲು ಕ್ಷೇತ್ರಕ್ಕೆ ಹನುಮಗೌಡ ತಾವರೆಪ್ಪಗೌಡ ಆಯ್ಕೆಯಾಗಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444