ಯಾದಗಿರಿಯಲ್ಲಿ ಮೊದಲ ದಿನ ಶೇ.50 ಲಸಿಕೆ ನೀಡಿಕೆ

Team Udayavani, Jan 17, 2021, 1:10 PM IST

50% vaccination on first day at Yadgiri

ಯಾದಗಿರಿ: ದೇಶಾದ್ಯಂತ ಕೋವಿಡ್ ವಾರಿಯರ್ಗೆ ಮೊದಲ ಹಂತದಲ್ಲಿ ಕೋವಿಶೀಲ್ಡ್‌/ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗುತ್ತಿದ್ದು, ಗಡಿ ಜಿಲ್ಲೆ ಯಾದಗಿರಿಯಲ್ಲಿಯೂ ಲಸಿಕೆ ನೀಡುವ ಕಾರ್ಯಕ್ಕೆ ಶನಿವಾರ ಚಾಲನೆ ದೊರೆತಿದೆ. ಮೊದಲ ಹಂತದ ಮೊದಲ ದಿನ ಲಸಿಕಾಕರಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, 247 ವಾರಿಯರ್ಸ್‌ ಗಳು ಲಸಿಕೆ ಪಡೆದಿದ್ದಾರೆ.

ಈಗಾಗಲೇ ಲಸಿಕೆ ನೀಡಲು ಗುರುತಿಸಿದವರಲ್ಲಿ ರಕ್ತದೊತ್ತಡ, ಮಧುಮೇಹ, ಇನ್ನಿತರ ಗಂಭೀರ ಕಾಯಿಲೆ ಇರುವವರಿಗೆ ಲಸಿಕೆ ನೀಡಲಾಗಿಲ್ಲ. ಆರಂಭದಲ್ಲಿ ಜಿಲ್ಲಾಸ್ಪತ್ರೆಯ ಡಿ ದರ್ಜೆ ನೌಕರ ಅಶೋಕ ಮತ್ತು ಅಭಿಷೇಕ್‌ಗೆ ಮೊದಲ ಲಸಿಕೆ ನೀಡಲಾಯಿತು. ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ 80 ವಾರಿಯರ್ಸ್‌ ಗಳಿಗೆ ಲಸಿಕೆ ನೀಡಲಾಗಿದೆ. ಪ್ರಥಮ ಹಂತದಲ್ಲಿ ಲಸಿಕೆ ನೀಡಲು 6438 ಕೋವಿಡ್‌ ವಾರಿಯರ್ಸ್‌ ಗುರುತಿಸಲಾಗಿದೆ. ಜ.16ರಂದು ಒಟ್ಟು 445 ವಾರಿಯರ್ಸ್‌ಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಸಂಜೆ 5ಗಂಟೆ ವೇಳೆ 247 ವಾರಿಯರ್ಸ್‌ಗಳು ಲಸಿಕೆ ಪಡೆದರು.

ಬೆಳಿಗ್ಗೆ 11:30ಕ್ಕೆ ಲಸಿಕಾಕರಣಕ್ಕೆ ಆರಂಭವಾಗಿದ್ದು, ಮಧ್ಯಾಹ್ನ 2ಗಂಟೆ ವೇಳೆ ಕೇವಲ ಜಿಲ್ಲಾಸ್ಪತ್ರೆಯಲ್ಲಿ 15, ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರ 24, ಶಹಾಪುರ ತಾಲೂಕು ಆಸ್ಪತ್ರೆ 50, ಸುರಪುರ ತಾಲೂಕು ಆಸ್ಪತ್ರೆ 26 ಹಾಗೂ ಸುರಪುರ ನಗರ ಆಸ್ಪತ್ರೆಯಲ್ಲಿ 21 ಜನರು ಸೇರಿದಂತೆ ಒಟ್ಟು 136 ಜನರು ಲಸಿಕೆ ಪಡೆದಿದ್ದರು.

ಇದನ್ನೂ ಓದಿ:ಎಸ್‌ಟಿ ಹೋರಾಟಕ್ಕೆ ಸಿದ್ದರಾಮಯ್ಯ ಬರುವುದಾದರೆ ಬರಲಿ, ಗೊಂದಲ ಸೃಷ್ಟಿ ಬೇಡ: ಈಶ್ವರಪ್ಪ

ಇನ್ನು ಮಧ್ಯಾಹ್ನ 3ಗಂಟೆಗೆ ಒಟ್ಟು 206 ವಾರಿಯರ್ಸ್‌ ಲಸಿಕೆ ಪಡೆದಿದ್ದರೆ, ನಾಲ್ಕು ಗಂಟೆ ವೇಳೆಗೆ ನಿಗದಿತ ಕೇಂದ್ರಗಳಲ್ಲಿ ಕೇವಲ 206 ಜನ ಮಾತ್ರ ಲಸಿಕೆ ಪಡೆದಿದ್ದರು. ಇನ್ನು ಸಂಜೆ 5ಗಂಟೆ ವೇಳೆಗೆ ಒಟ್ಟು ಲಸಿಕೆ ಪಡೆದ ವಾರಿಯರ್ಗಳ ಸಂಖ್ಯೆ 247ಕ್ಕೆ ತಲುಪಿತ್ತು.

ಟಾಪ್ ನ್ಯೂಸ್

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ

ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ

ವಿಮಾನದಿಂದ ಇಳಿಯುವವರು ಕೊರೊನಾ ವರದಿ ತೋರಿಸಬೇಕಿಲ್ಲ

ವಿಮಾನದಿಂದ ಇಳಿಯುವವರು ಕೊರೊನಾ ವರದಿ ತೋರಿಸಬೇಕಿಲ್ಲ

ಮುಂಬೈಗೆ ಬರುವ ಆಫ್ರಿಕನ್ನರಿಗೆ ಕಡ್ಡಾಯ ಕೊರೊನಾ ಪರೀಕ್ಷೆ

ಮುಂಬೈಗೆ ಬರುವ ಆಫ್ರಿಕನ್ನರಿಗೆ ಕಡ್ಡಾಯ ಕೊರೊನಾ ಪರೀಕ್ಷೆ

ಟ್ವಿಟರ್‌ ಖಾತೆ ನಿಷ್ಕ್ರಿಯಗೊಳಿಸಿದ ನಟ ಹರ್ಷವರ್ದನ್‌

ಟ್ವಿಟರ್‌ ಖಾತೆ ನಿಷ್ಕ್ರಿಯಗೊಳಿಸಿದ ನಟ ಹರ್ಷವರ್ದನ್‌

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

32kanakadas

ಕನಕದಾಸರ ಪುತ್ಥಳಿ ಲೋಕಾರ್ಪಣೆ

ಕರ್ನಾಟಕ ಸಂಗೀತಕ್ಕೆ ಕನಕ ಕೊಡುಗೆ ಅಪಾರ

ಕರ್ನಾಟಕ ಸಂಗೀತಕ್ಕೆ ಕನಕ ಕೊಡುಗೆ ಅಪಾರ

ಮಾ.17ರವರೆಗೆ ನೀರು ಹರಿಸಲು ನಿರ್ಧಾರ

ಮಾ.17ರವರೆಗೆ ನೀರು ಹರಿಸಲು ನಿರ್ಧಾರ

26kasapa

ನೂತನ ಕಸಾಪ ಅಧ್ಯಕ್ಷರಿಗೆ ಸಚಿವ ಚವ್ಹಾಣ ಸನ್ಮಾನ

1-ssa

ಉಪ್ಪಿಟ್ಟಿನಲ್ಲಿ ಹಾವಿನ ಮರಿ! :50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ

ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ

ವಿಮಾನದಿಂದ ಇಳಿಯುವವರು ಕೊರೊನಾ ವರದಿ ತೋರಿಸಬೇಕಿಲ್ಲ

ವಿಮಾನದಿಂದ ಇಳಿಯುವವರು ಕೊರೊನಾ ವರದಿ ತೋರಿಸಬೇಕಿಲ್ಲ

ಮುಂಬೈಗೆ ಬರುವ ಆಫ್ರಿಕನ್ನರಿಗೆ ಕಡ್ಡಾಯ ಕೊರೊನಾ ಪರೀಕ್ಷೆ

ಮುಂಬೈಗೆ ಬರುವ ಆಫ್ರಿಕನ್ನರಿಗೆ ಕಡ್ಡಾಯ ಕೊರೊನಾ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.