ಬಹಿರ್ದೆಸೆಗೆ ಕುಳಿತಾಗ ಲಾರಿ ಹಾಯ್ದು ವ್ಯಕ್ತಿ ಸಾವು
Team Udayavani, Nov 6, 2022, 8:35 PM IST
ಹುಣಸಗಿ: ಬಹಿರ್ದೆಸೆಗೆ ಕುಳಿತಾಗ ಲಾರಿ ಹಾಯ್ದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಮಾಳನೂರ ಹತ್ತಿರದಲ್ಲಿ (ಹುಣಸಗಿ-ತಾಳಿಕೋಟಿ ರಸ್ತೆ) ಶನಿವಾರ ಬೆಳಗ್ಗೆ ನಡೆದಿದೆ.
ಮೃತ ದುರ್ದೈವಿ ಗೌಸಸಾಬ್ ಮದನಸಾಬ್ ಮುಲ್ಲಾ(41), ಮಾಳನೂರು ಗ್ರಾಮದವರಾಗಿದ್ದು, ರಸ್ತೆ ಪಕ್ಕದಲ್ಲಿ ಬಹಿರ್ದೆಸೆಗೆ ಕುಳಿತಿದ್ದ ವೇಳೆ ಅಪಘಾತ ಸಂಭವಿಸಿದೆ.
ಹುಣಸಗಿಯಿಂದ ವೇಗವಾಗಿ ಚಲಿಸುತ್ತಿದ್ದ ಲಾರಿ ಮೇಲೆ ಹಾಯ್ದು ಹೋಗಿದೆ. ಚಾಲಕನ ನಿಷ್ಕಾಳಜಿಯೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.