ದೀಪೋತ್ಸವ ಪರಿರ್ವತನೆಗೆ ನಾಂದಿ: ಶ್ರೀಶೈಲ ಶ್ರೀ


Team Udayavani, Dec 7, 2020, 5:54 PM IST

ದೀಪೋತ್ಸವ ಪರಿರ್ವತನೆಗೆ ನಾಂದಿ: ಶ್ರೀಶೈಲ ಶ್ರೀ

ಯಾದಗಿರಿ: ಕಾರ್ತಿಕ ಮಾಸದ ಪವಿತ್ರ ದಿನಗಳಲ್ಲಿ ಹಲವಾರು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿರುವ ಲಕ್ಷ ದೀಪೋತ್ಸವ ಕಾರ್ಯಕ್ರಮ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಭಕ್ತರಲ್ಲಿ ಪರಸ್ಪರ ಸಾಮರಸ್ಯ ಮೂಡಿಸಿದೆ. ಇದುಎಲ್ಲರ ಬದುಕಿನಲ್ಲಿ ಪರಿವರ್ತನೆಗೆ ನಾಂದಿಯಾಗಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ನೆರೆಯ ಆಂಧ್ರಪ್ರದೇಶದ ಶ್ರೀಶೈಲನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಗದಗ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ ಹಮ್ಮಿಕೊಂಡಿದ್ದ 9ನೇ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಭಾರತದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀಶೈಲ ಕ್ಷೇತ್ರ ವಿಶಿಷ್ಟವಾಗಿ ಭೂಕೈಲಾಸ ಎಂದು ಹೆಸರಾಗಿದೆ. ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುವ ಭಕ್ತರ ಬದುಕುಪಾವನವಾಗುತ್ತದೆ. ಕನ್ನಡಿಗರು ಈ ಕ್ಷೇತ್ರದೊಂದಿಗೆಸಾವಿರಾರು ವರ್ಷಗಳ ಸಂಬಂಧ ಹೊಂದುವಜತೆಗೆ ಪ್ರಗತಿಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದರು.

ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡದವರನ್ನು ರಾಜ್ಯ ಸರ್ಕಾರ ಹಿಂದುಳಿದ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಅಂದಾಗಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂಬ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸಿದ್ದೇವೆ ಎಂದರು.

ಶ್ರೀಶೈಲ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್‌. ರಾಮರಾವ್‌ ಮಾತನಾಡಿ, ಈ ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಭಕ್ತರು ಪ್ರತಿ ವರ್ಷ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಅವರಿಗೆ ನಾವು ಅಗತ್ಯ ಸೌಕರ್ಯ ನೀಡಲು ಒತ್ತು ನೀಡಿದ್ದೇವೆ ಎಂದರು.

ನರೇಗಲ್ಲನ ಮಲ್ಲಿಕಾರ್ಜುನ ಶಿವಾಚಾರ್ಯರು, ಅಮ್ಮಿನಬಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯರು ಮಾತನಾಡಿದರು. ಶ್ರೀಶೈಲ ದೇವಸ್ಥಾನ ಆಡಳಿತ ಮಂಡಳಿ ಅಧಿ ಕಾರಿಗಳಾದ ಹರಿದಾಸ್‌, ಸಾಯಿಕುಮಾರ, ಮಲ್ಲಮ್ಮ ದೇವಸ್ಥಾನದ ಮುಖ್ಯ ಅರ್ಚಕ ಗುರುಪಾದಯ್ಯ ಸ್ವಾಮಿ, ಓಂಕಾರಯ್ಯಸ್ವಾಮಿ, ವೀರಭದ್ರ ಸ್ವಾಮಿ, ಗದಗ ಜಿಪಂ ಉಪಾಧ್ಯಕ್ಷೆ ಶೋಭಾ ಮೇಟಿ, ಶರಣೆ ನೀಲಮ್ಮ, ಮಂಜುನಾಥರೆಡ್ಡಿ, ಪ್ರಭು ಶಿರೂರ, ಬಾಸ್ಕರರೆಡ್ಡಿ, ರವಿ ಸಿಂಗನಾಳ ಗಂಗಾವತಿ, ಪವಿತ್ರಾರೆಡ್ಡಿ, ಬಸವಂತರೆಡ್ಡಿ, ಮಲ್ಹಾರ ಯಾದಗಿರಿ, ಮಾಣಿಕರೆಡ್ಡಿ ಕುರಕುಂದಿ, ಶರಣಗೌಡ ಪಾಟೀಲ್‌ ಯಡ್ಡಳ್ಳಿ, ಬಸವಂತ್ರಾಯಗೌಡ ನಾಯ್ಕಲ್‌, ಲಕ್ಷ್ಮೀಕಾಂತರೆಡ್ಡಿ ಬೊಮಶೆಟ್ಟಹಳ್ಳಿ ಸೇರಿದಂತೆ ನೂರಾರು ಭಕ್ತರು ಭಾಗಿಯಾಗಿದ್ದರು.

ಟಾಪ್ ನ್ಯೂಸ್

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

1-asdas

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadagiri; ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

Yadagiri; ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

Karnataka Bandh; ಯಾದಗಿರಿಯಲ್ಲಿ ರೈಲು ತಡೆಯಲು ಯತ್ನ

Karnataka Bandh; ಯಾದಗಿರಿಯಲ್ಲಿ ರೈಲು ತಡೆಯಲು ಯತ್ನ

4-yadagiri

Yadagiri: ಜಿಲ್ಲಾಧಿಕಾರಿಯಿಂದ ಸಾರ್ವಜನಿಕ ಆರೋಗ್ಯ ತಪಾಸಣೆಗೆ ಚಾಲನೆ

1-wwwewqe

Yadagiri; ಟೆಂಡರ್ ವಿಳಂಬ ಸಲ್ಲದು: ಅಧಿಕಾರಿಗಳಿಗೆ ಸಚಿವ ದರ್ಶನಾಪುರ ಎಚ್ಚರಿಕೆ

1-csasa

Yadgir ; 150 ಕೆಜಿ ಶ್ರೀಗಂಧ ಸಹಿತ ಆರೋಪಿ ಬಂಧನ: ಓರ್ವ ಆರೋಪಿ ಪರಾರಿ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

army

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.