ಕುವೆಂಪು ವಿಚಾರಧಾರೆ ರೂಢಿಸಿಕೊಳಿ


Team Udayavani, Dec 30, 2017, 5:16 PM IST

yad-1.jpg

ಯಾದಗಿರಿ: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ವಿಶ್ವಮಾನವ ದಿನಾಚರಣೆಯಾಗಿ ರಾಜ್ಯ ಸರಕಾರ ಆಚರಿಸುತ್ತಿರುವುದು ಸಂತಸ ತಂದಿದೆ. ಇಂತಹ ಮಹಾನ್‌ ಕವಿ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಡಾ| ಎ.ಬಿ.ಮಾಲಕರಡ್ಡಿ ಕರೆ ನೀಡಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ
ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕುವೆಂಪು ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದ್ದು, ಆದರ್ಶ ಜೀವನಕ್ಕೆ ಅವಶ್ಯಕವಾಗಿದೆ ಎಂದ ಅವರು, ಕುವೆಂಪು ರಚಿಸಿರುವ ಜ್ಞಾನಪೀಠ ಪುರಸ್ಕೃತ ಕೃತಿಯಾದ ಶ್ರೀ ರಾಮಾಯಣ ದರ್ಶನಂ ಶ್ರೇಷ್ಠ ಕೃತಿಯಾಗಿದೆ ಎಂದರು.

ಮಹಾಕವಿಗಳಾದ ವಾಲ್ಮೀಕಿ, ವೇದವ್ಯಾಸರು, ಕಾಳಿದಾಸರಂತಹ ಕವಿಗಳ ಸಾಲಿಗೆ ರಾಷ್ಟ್ರಕವಿ ಕುವೆಂಪು ಅವರು ಸೇರಲಿದ್ದಾರೆ. ಶ್ರೀ ರಾಮಾಯಣ ದರ್ಶನಂ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮಧುಮಗಳು ಮುಂತಾದ ಮೇರು ಗ್ರಂಥಗಳನ್ನು ರಚಿಸಿದ ಕೀರ್ತಿ ಕುವೆಪು ಅವರದ್ದು. ಒಮ್ಮೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಮೈಸೂರಿಗೆ ಬಂದಾಗ ಕುವೆಂಪು ಅವರನ್ನು ಭೇಟಿಯಾಗಿ ಶ್ರೀ ರಾಮಾಯಣ ದರ್ಶನಂ ಕೃತಿ ಬಗ್ಗೆ ತಿಳಿದುಕೊಂಡಿದ್ದರು ಎಂದು ಹೇಳಿದರು. ಎಲ್ಲಾ ವಿದ್ಯೆಗಳ ಕೇಂದ್ರ ಬಿಂದುವಾದ ಆಧ್ಯಾತ್ಮಿಕ ವಿದ್ಯೆಯನ್ನು ವಾಲ್ಮೀಕಿ ಕಲಿತು ರಾಮಾಯಣ ಗ್ರಂಥ ರಚಿಸಿದಂತೆ, ಕುವೆಂಪು ಅವರು ರಾಮಕೃಷ್ಣ ಪರಮಹಂಸರ ವಿಚಾರಧಾರೆಗಳನ್ನು ಅಳವಡಿಸಿ ಆಧ್ಯಾತ್ಮಿಕ ಶಕ್ತಿ ಪಡೆದು ರಾಮಾಯಣ ದರ್ಶನಂ ರಚಿಸಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಉಪನ್ಯಾಸ ನೀಡಿ, ಕುವೆಂಪು ಬದುಕಿನಲ್ಲಿ ನಡೆದು ಬಂದ ದಾರಿಯನ್ನು ತೆರೆದಿಟ್ಟರು. ಈ ಸಂದರ್ಭದಲ್ಲಿ ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ಕಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮರೆಡ್ಡಿ ತಂಗಡಗಿ, ನಗರಸಭೆ ಅಧ್ಯಕ್ಷೆ ಲಲಿತಾ ಮೌಲಾಲಿ
ಅನಪುರ, ಜಿಪಂ ಸಿಇಒ ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌, ಅಪರ ಜಿಲ್ಲಾಧಿ ಕಾರಿ ಡಾ| ಕೆ. ಜಗದೀಶ್‌ ನಾಯ್ಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಇತರರು ಇದ್ದರು. ನಗರಸಭೆಯ ಪೌರಾಯುಕ್ತ ಸಂಗಪ್ಪ ಉಪಾಸೆ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು

ವಿಶ್ವಮಾನವ ಸಂದೇಶ ಅಳವಡಿಸಿಕೊಳ್ಳಿ: ಆಲ್ದಾಳ
ಶಹಾಪುರ: ಜಾತಿ-ಧರ್ಮಗಳ ವೈಭವೀಕರಣದ ಇಂದಿನ ಪ್ರಸ್ತುತ ಸಂದರ್ಭದಲ್ಲಿ ಜಗತ್ತಿಗೆ ವಿಶ್ವಮಾನವ ಸಂದೇಶ
ನೀಡಿದ ರಾಷ್ಟ್ರಕವಿ ಕುವೆಂಪು ಅವರ ಮಾನವ ಕುಲಂ ಒಂದೇ ವಲಂ ಎಂಬುದನ್ನು ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ರಂಗಕರ್ಮಿ, ಸಾಹಿತಿ ಎಲ್‌.ಬಿ.ಕೆ. ಆಲ್ದಾಳ ಹೇಳಿದರು. ನಗರದ ಕೊಲ್ಲೂರ ಟಾವರ್‌ದಲ್ಲಿರುವ ಟರ್ನಿಂಗ್‌ ಪಾಯಿಂಟ್‌ ಕಂಪ್ಯೂಟರ್ ಕಿಯೋನಿಕ್ಸ್‌ ಫ್ರಾಂಚೈಸಿ ಕೇಂದ್ರದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ 113 ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಯುವ ಸಮೂಹ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮುಂಚಿತವಾಗಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಮುಖ್ಯಸ್ಥ ರವಿ ಹಿರೇಮಠ, ವ್ಯವಸ್ಥಾಪಕಿ ಸುನೀತಾ ಹಿರೇಮಠ, ಜಯಶ್ರೀ ಎಂ, ಸುರೇಶ, ಭೀಮಾಶಂಕರ, ಮಲ್ಲಿಕಾರ್ಜುನ, ರಶ್ಮಿ ಪತ್ತಾರ ಹಾಗೂ ವಿದ್ಯಾರ್ಥಿಗಳು ಇದ್ದರು.

ಕನ್ನಡ ನಾಡಿಗೆ ಕುವೆಂಪು ಕೊಡುಗೆ ಅಪಾಋ
ಸೈದಾಪುರ: ರಾಷ್ಟ್ರಕವಿ ಕುವೆಂಪು ಕೊಡುಗೆ ಅಪಾರವಾಗಿದೆ ಎಂದು ಸೈದಾಪುರ ಕ್ಲಸ್ಟರ್‌ನ ಸಿಆರ್‌ಪಿ ಲಿಂಗನಗೌಡ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವಮಾನವ ಕುವೆಂಪು ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕನ್ನಡ ನಾಡಿಗೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಗರಿಮೆ ಕುವೆಂಪು ಅವರಿಗೆ ಸಲ್ಲುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಬಹುಪಾಲ
ಸಮಯ ಪುಸ್ತಕ, ಓದು ಬರಹಕ್ಕೆ ಮೀಸಲಾಗಿಟ್ಟು ಸಾಕಷ್ಟು ಕೃತಿ, ಕಥೆ, ಕಾದಂಬರಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ ಕೂಡ್ಮೂರು, ಮುಖ್ಯಗುರು ನರಸಪ್ಪ ನಾರಾಯಣೋರ, ರಾಘವೇಂದ್ರ ನಾಯಕ, ಚನ್ನಬಸವ ನಾಯಕ, ಆಂಜನೇಯ, ಸುವರ್ಣ, ದೇವೇಂದ್ರಪ್ಪ, ರಿಯಾನ ಬೇಗಂ, ಮಹ್ಮದ ಮಹಿಬೂಬ, ಕಾಶಮ್ಮ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು. ಶಿಕ್ಷಕಿ ಸುವರ್ಣ ಸ್ವಾಗತಿಸಿದರು. ಶಿಕ್ಷಕ  ವೇಂದ್ರಪ್ಪ ನಾಯ್ಕಲ್‌ ನಿರೂಪಿಸಿ, ವಂದಿಸಿದರು.

ವಡಗೇರಾ
ವಡಗೇರಾ: ರಾಷ್ಟ್ರ ಕವಿ ಕುವೆಂಪು ಅವರ ಚಿಂತನೆ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಾಧ್ಯ ಎಂದು ಮುಖ್ಯ ಗುರು ಸುರೇಶ ಕರಣಗಿ ಹೇಳಿದರು. ಪಟ್ಟಣದ ಸ್ವಾಮಿ ವಿವೇಕಾಂದ ಪ್ರೌಢಶಾಲೆಯಲ್ಲಿ ಕುವೆಂಪು ಅವರ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕನ್ನಡದ ಕಂಪನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕನ್ನಡ ಭಾಷೆಗೆಯಲ್ಲಿ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮಾಹನ್‌ ಚೇತನ ಎಂದು ಅವರು ಹೇಳಿದರು. ಶಿಕ್ಷಕರಾದ ಸೈದಪ್ಪ ಕೊನಹಳ್ಳಿ, ಮಲ್ಲಣ್ಣ ಪಾಟೀಲ್‌, ಕಾಜಾಪೀರ, ವಿರೇಶ ಶಿರಸಿ, ಗಂಗಮ್ಮ, ಜ್ಯೋತಿ ಹಾಗೂ ಇತರರು ಇದ್ದರು.

ಮಾನವೀಯತೆ ಮೆರೆದ ಶಾಸಕ: ವಿಶ್ವಮಾನವ ದಿನಾಚರಣೆ ಕಾರ್ಯಕ್ರಮಕ್ಕೆ ಜನರು ಬಾರದ ಹಿನ್ನೆಲೆಯಲ್ಲಿ ವಿವಿಧ ಶಾಲೆಯ ಮಕ್ಕಳನ್ನು ಕರೆಸಲಾಗಿತ್ತು. ಈ ಸಂದರ್ಭದಲ್ಲಿ ನಿಶಕ್ತಿಯಿಂದ ಬಳಲುತ್ತಿದ್ದ ಹುಡುಗನೊಬ್ಬ ಮೂರ್ಛೆಗೊಂಡು ಕೆಳಗೆ ಬಿದ್ದಾಗ, ಸ್ವತಃ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಅವರು ಭಾಷಣ ನಿಲ್ಲಿಸಿ ಹುಡುಗನ ಹತ್ತಿರ ಹೋಗಿ ಪರೀಕ್ಷಿಸಿ ಮಾನವೀಯತೆ ಮೆರೆದರು.

ಟಾಪ್ ನ್ಯೂಸ್

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13arrest

ನಕಲಿ ಮದ್ಯ ಸಂಗ್ರಹ ಘಟಕದ ಮೇಲೆ ದಾಳಿ

ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ  ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ

ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ

19drinking-water

ಹತ್ತಿಗೂಡೂರಲ್ಲಿ ನೀರಿಗಾಗಿ ಹಾಹಾಕಾರ

17water

ಶುದ್ಧ ನೀರಿಗಾಗಿ ಜನರ ಪರದಾಟ

19land

ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.