ಕೆರೆ ಕಟ್ಟೆ ಭರ್ತಿ; ಮುನ್ನೆಚ್ಚರಿಕೆಗೆ ಸೂಚನೆ

Team Udayavani, Sep 19, 2020, 7:32 PM IST

ಕೆರೆ ಕಟ್ಟೆ ಭರ್ತಿ; ಮುನ್ನೆಚ್ಚರಿಕೆಗೆ ಸೂಚನೆ

ಬೀದರ/ಯಾದಗಿರಿ: ಮಳೆಯಿಂದಾಗಿ ಜಿಲ್ಲೆಯ ಕೆರೆ ಕಟ್ಟೆಗಳಲ್ಲಿ ನೀರು ತುಂಬುತ್ತಿದ್ದು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಬೀದರ್‌ -ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ

ಅಭಿಯಂತರರಿಗೆ ಸೂಚಿಸಿದ್ದಾರೆ. ಅಧಿಕಾರಿಗಳ ತಂಡ ರಚಿಸಿ, ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ಭೇಟಿ ನೀಡಬೇಕು. ಕೆರೆಗಳ ನೀರು ಸಂಗ್ರಹಣೆ ಸಾಮರ್ಥ್ಯ, ಹೆಚ್ಚುವರಿಯಾಗಿ ಬಂದ ನೀರು, ಕೆರೆಗಳಲ್ಲಿ ಬಿರುಕು ಬಿಟ್ಟಿರುವುದರ ಬಗ್ಗೆ ಮಾಹಿತಿ ಪಡೆದು, ಕೆರೆ ಪಕ್ಕದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಗೋದಾವರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದ್ದರಿಂದ ಜಿಲ್ಲೆಯ ಕಾರಂಜಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ವಹಿಸಲು ತಿಳಿಸಿರುವುದಾಗಿ ಹೇಳಿದ್ದಾರೆ.

ಹುಲಸೂರು ಮಾರ್ಗದಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್‌, ಬೆಳಕುಣಿ ಸೇತುವೆ, ದಾಡಗಿ ಸೇತುವೆ, ಬಗದಲ್‌ ಬಳಿಯ ಸೇತುವೆ ಸೇರಿದಂತೆ ಹಲವು ಕಡೆಗಳಲ್ಲಿ ಸೇತುವೆಗಳು ಮುಳುಗಿ ಸಂಚಾರಕ್ಕೆ ಸಮಸ್ಯೆಯಾಗಿರುವುದು ಮತ್ತು ಹುಲಸೂರು ಬಳಿಯ ಕೆರೆ ಒಡೆದು ಸಮೀಪದ ಹೊಲ ಮತ್ತು ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ತಂಡ ರಚಿಸಿ, ಖುದ್ದು ಪರಿಶೀಲನೆಗೆ ಮುಂದಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆ, ಬ್ರಿಜ್‌ ಕಂ ಬ್ಯಾರೇಜ್‌, ಬಾಂದಾರ ಮುಂತಾದ  ಕಡೆ ಸಂಚರಿಸಿ ಹಾನಿಯ ಮಾಹಿತಿ ಕಲೆಹಾಕಬೇಕು. ಕೆರೆ ಒಡೆದು ಹೊಲಗಳಿಗೆ ನೀರು ನುಗ್ಗುವ ಸಂಭವ ಇದ್ದಲ್ಲಿ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ.

ಅಧಿಕಾರಿಗಳೇ ನೇರ ಹೊಣೆ ಅಧಿಕಾರಿಗಳು ಕೆರೆ ಪರಿಶೀಲನೆಗೆ ಹೋಗಿರುವ ಬಗ್ಗೆ ತಮ್ಮ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಫೋಟೊ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಕಚೇರಿಯಲ್ಲಿ ಕುಳಿತು ವರದಿ ತಯಾರಿಸಬಾರದು. ಅಧಿಕಾರಿಗಳ ನಿಷ್ಕಾಳಜಿಯಿಂದ ಎಲ್ಲಿಯಾದರೂ ಅನಾಹುತವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. – ಪ್ರಭು ಚವ್ಹಾಣ, ಸಚಿವ

ಟಾಪ್ ನ್ಯೂಸ್

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

manish sisodia

ಸಿಸೋಡಿಯಾಗಿಲ್ಲ ಜಾಮೀನು

ರಕ್ಷಣ ಸರಕು ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ: 10 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

ರಕ್ಷಣ ಸರಕು ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ: 10 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

ನಾಳೆಯೇ ಗ್ಯಾರಂಟಿ? ಜಾರಿಗಾಗಿ ಸಂಪುಟ ಸಹೋದ್ಯೋಗಿಗಳ ಜತೆ ಇಂದು ಸಿಎಂ ನಿರ್ಣಾಯಕ ಸಭೆ

ನಾಳೆಯೇ ಗ್ಯಾರಂಟಿ? ಜಾರಿಗಾಗಿ ಸಂಪುಟ ಸಹೋದ್ಯೋಗಿಗಳ ಜತೆ ಇಂದು ಸಿಎಂ ನಿರ್ಣಾಯಕ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–yadagiri

ಯಾದಗಿರಿ: Amit Shah ರೋಡ್ ಶೋನಲ್ಲಿ ಬ್ಯಾನರ್ ಭರಾಟೆ

4-shahapura

Shahapura: ಕಾಂಗ್ರೆಸ್ ಮುಖಂಡ  ಜೆಡಿಎಸ್ ಸೇರ್ಪಡೆ

ಯಾದಗಿರಿ: ಕರಪತ್ರ, ಪೋಸ್ಟರ್‌ ಮುದ್ರಿಸಲು ಅನುಮತಿ ಕಡ್ಡಾಯ

ಯಾದಗಿರಿ: ಕರಪತ್ರ, ಪೋಸ್ಟರ್‌ ಮುದ್ರಿಸಲು ಅನುಮತಿ ಕಡ್ಡಾಯ

1-wq-eqe

karnataka election 2023 ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ

hdk

ಚಿಂಚನಸೂರ್ ರಿಂದ ಜೆಡಿಎಸ್ ಗೆ ಯಾವುದೇ ಪರಿಣಾಮ ಬೀರುವುದಿಲ್ಲ: ಕುಮಾರಸ್ವಾಮಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ