ತರಾತುರಿಯಲ್ಲಿ ನಾಡಕಚೇರಿ ಕಟ್ಟಡ ನಿರ್ಮಾಣ!

Team Udayavani, Jan 21, 2022, 3:20 PM IST

21building

ಗುರುಮಠಕಲ್‌: ಭದ್ರ ಬುನಾದಿ ಮತ್ತು ಉತ್ತಮ ಕ್ಯೂರಿಂಗ್‌ ನಿರ್ವಹಣೆಯಿಂದ ಗಟ್ಟಿಮುಟ್ಟಾದ ಕಟ್ಟಡ ನಿರ್ಮಾಣವಾಗುತ್ತದೆ. ಆದರೆ ಇಲ್ಲಿ ಮಾತ್ರ ತರಾತುರಿಯಲ್ಲಿ ಕ್ಯೂರಿಂಗ್‌ ಇಲ್ಲದೇ ನಾಡಕಚೇರಿ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ.

ಪಟ್ಟಣದ ಸರಕಾರಿ ಆಸ್ಪತ್ರೆ ರಸ್ತೆ ಮಾರ್ಗದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಅಂದಾಜು ವೆಚ್ಚ 18.84 ಲಕ್ಷ ರೂ.ಗಳಲ್ಲಿ ನಾಡಕಚೇರಿ ನಿರ್ಮಾಣವಾಗುತ್ತಿದೆ. ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರು ಮೂರು ತಿಂಗಳ ಹಿಂದೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅಷ್ಟು ಬೇಗ ಕಟ್ಟಡ ನಿರ್ಮಾಣ ಮಾಡಿ ಸುಣ್ಣಬಣ್ಣ ಹಚ್ಚಿದ್ದು, ಉದ್ಘಾಟನೆಗೆ ತಯಾರಾಗಿದೆ. ಇದು ಕಾಟಾಚಾರಕ್ಕೆ ನಿರ್ಮಾಣ ಮಾಡಿದಂತೆ ಆಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಲಭ್ಯವಿಲ್ಲದ ಕಾರಣ ಟ್ಯಾಂಕರ್‌ ಮೂಲಕ ನೀರು ತರಿಸಿ ಮೂರು ದಿನಕ್ಕೊಮ್ಮೆ ಕ್ಯೂರಿಂಗ್‌ ಮಾಡುತ್ತಿದ್ದು, ಸೂಪರ್‌ ಸ್ಪೀಡ್‌ನ‌ಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಜನರಿಗೆ ಉಪಯೋಗವಾಗಬೇಕಿದ್ದ ಕಟ್ಟಡ ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಜನರು ಪ್ರಶ್ನಿಸಿದ್ದಾರೆ.

ಕ್ಷೇತ್ರದ ಬಿಲ್‌ಪಾಸ್‌ ಮಾಡಿಕೊಳ್ಳಲು ಹಾಗೂ ಜನರಿಗೆ ಅನುಕೂಲ ಕಲ್ಪಿಸುತ್ತಿದ್ದೇವೆ ಎಂದು ನಂಬಿಸಲು ಈ ರೀತಿಯಲ್ಲಿ ಗುತ್ತಿಗೆದಾರರು ಕೆಲಸ ನಿರ್ವಹಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದ ಅಧಿಕಾರಿಗಳು ಕಟ್ಟಡ ವೀಕ್ಷಣೆ ಮಾಡಿ ಉದ್ಘಾಟನೆಗೆ ಒಪ್ಪಿಗೆ ನೀಡಬೇಕು ಎಂಬುದು ಜನರ ಆಗ್ರಹ.

ಕ‌ಳಪೆ ವಸ್ತುಗಳ ಬಳಕೆ ಮತ್ತು ಕ್ಯೂರಿಂಗ್‌ ಇಲ್ಲದೇ ನಾಡಕಚೇರಿ ಕಟ್ಟಡ ಕೆಲವೇ ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳ ವೀಕ್ಷಣೆಯಿಲ್ಲದೇ ತರಾತುರಿಯಲ್ಲಿ ನಿರ್ಮಾಣವಾಗಿದೆ. ಈ ಕುರಿತು ಸಂಬಂಧಿ ಸಿದ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. -ವಿನಾಯಕರಾವ್‌, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

ಕ್ಯೂರಿಂಗ್‌ ಇಲ್ಲದೇ ಯಾರದರೂ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವೇ? ಇವೆಲ್ಲ ಸುಳ್ಳು ಆರೋಪ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಉತ್ತಮ ಕಟ್ಟಡ ನಿರ್ಮಾಣ ಮಾಡಲಾಗಿದೆ. -ಅಬ್ದುಲ್‌ ನಬಿ, ಜೆಇ, ಗುರುಮಠಕಲ್‌

-ಚನ್ನಕೇಶವುಲು ಗೌಡ

ಟಾಪ್ ನ್ಯೂಸ್

ತಪ್ಪಿಸಿಕೊಳ್ಳಬಾರದೆಂದು ಮಕ್ಕಳನ್ನು ಸರಪಳಿಯಲ್ಲಿ ಕಟ್ಟಿದ ಮದರಸಾದ ಮೌಲಾನಾ

ತಪ್ಪಿಸಿಕೊಳ್ಳಬಾರದೆಂದು ಮಕ್ಕಳನ್ನು ಸರಪಳಿಯಲ್ಲಿ ಕಟ್ಟಿದ ಮದರಸಾದ ಮೌಲಾನಾ

3school

ಮುಂದುವರೆದ ಮಳೆ: ಶಾಲಾ ಆವರಣಕ್ಕೆ ನುಗ್ಗಿದ ನೀರು, ಮರದ ಕೆಳಗೆ ಪಾಠ

ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು

ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು

cm-b-bommai

ಕನ್ನಡಿಗರಿಗೆ ತೊಂದರೆಯಾದರೆ ಕರ್ನಾಟಕ ಸರ್ಕಾರ ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ

2temple

ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ

‘ವೀಲ್‌ ಚೇರ್‌ ರೋಮಿಯೋ’ ಚಿತ್ರ ವಿಮರ್ಶೆ

‘ವೀಲ್‌ ಚೇರ್‌ ರೋಮಿಯೋ’ ಚಿತ್ರ ವಿಮರ್ಶೆ; ವೀಲ್‌ಚೇರ್‌ನಿಂದ ಮೇಲೇಳುವ ಸಿನಿಮಾವಿದು…

1ACB

ಎಸಿಬಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಾಜಿ ಪೊಲೀಸ್‌ ಸಿಬ್ಬಂದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18deamnd

ನಕಲಿ ಮದ್ಯ ಮಾರಾಟ ತಡೆಗೆ ಆಗ್ರಹ

17water

ಶುದ್ದ ಕುಡಿಯುವ ನೀರಿಗಾಗಿ ಪರದಾಟ!

16theft

ವಂಚಕ ದಂಪತಿ ಬಂಧನ-ಹಣ ಜಪ್ತಿ

ರೈಲೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ರೈಲೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

13arrest

ನಕಲಿ ಮದ್ಯ ಸಂಗ್ರಹ ಘಟಕದ ಮೇಲೆ ದಾಳಿ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ತಪ್ಪಿಸಿಕೊಳ್ಳಬಾರದೆಂದು ಮಕ್ಕಳನ್ನು ಸರಪಳಿಯಲ್ಲಿ ಕಟ್ಟಿದ ಮದರಸಾದ ಮೌಲಾನಾ

ತಪ್ಪಿಸಿಕೊಳ್ಳಬಾರದೆಂದು ಮಕ್ಕಳನ್ನು ಸರಪಳಿಯಲ್ಲಿ ಕಟ್ಟಿದ ಮದರಸಾದ ಮೌಲಾನಾ

3school

ಮುಂದುವರೆದ ಮಳೆ: ಶಾಲಾ ಆವರಣಕ್ಕೆ ನುಗ್ಗಿದ ನೀರು, ಮರದ ಕೆಳಗೆ ಪಾಠ

ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು

ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು

cm-b-bommai

ಕನ್ನಡಿಗರಿಗೆ ತೊಂದರೆಯಾದರೆ ಕರ್ನಾಟಕ ಸರ್ಕಾರ ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ

2temple

ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.