ಯಾದಗಿರಿ: ಸಿಡಿಲು ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆ.! ಮಹಿಳೆ ಬಲಿ
Team Udayavani, May 4, 2021, 9:59 PM IST
ಯಾದಗಿರಿ: ಸಾಮಾನ್ಯವಾಗಿ ಮಳೆ ಗಾಳಿ ವೇಳೆ ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿಯುವುದು ಟ್ರೇಂಡ್ ಆಗಿಬಿಟ್ಟಿದ್ದು ಸೆರೆ ಹಿಡಿದು ಎಲ್ಲೆಡೆ ಶೇರ್ ಮಾಡುವುದು ರೂಡಿಯಾಗಿದೆ.
ತಾಲೂಕಿನ ಮುನಗಲ ಗ್ರಾಮದ ವ್ಯಕ್ತಿಯೊಬ್ಬ ಹಾಗೆಯೇ ಬಿರುಗಾಳಿಯ ಅಬ್ಬರವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದ ವೇಳೆ ಅಚಾನಕ್ ಆತನ ಮೊಬೈಲ್ ಗೆ ಸಿಡಿಲು ಬೀಳುವ ಲೈವ್ ದೃಶ್ಯ ಸೆರೆಯಾಗಿದ್ದಲ್ಲದೆ ಗ್ರಾಮದ ಮಹಿಳೆಯ ಜೀವವೂ ಬಲಿ ಪಡೆದಿದೆ.
ಸಿಡಿಲಿನ ಭಯಾನಕ ಶಬ್ದಕ್ಕೆ ಒಂದು ಕ್ಷಣ ಎದೆ ಝಲ್ ಎಂದಿದ್ದು ಪಕ್ಕದಲ್ಲಿದ್ದ ಮಗು ಗಾಬರಿಗೊಂಡು ಅಳುತ್ತಿತ್ತು.
ಇದೇ ವೇಳೆ ಸಿಡಿಲಿಗೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಜಮೀನಿನಲ್ಲಿ ಶೇಂಗಾ ಕೀಳುತ್ತಿದ್ದ ಶರಣಮ್ಮ(45) ಗುಡುಗು ಸಹಿತ ಮಳೆಯಾಗುತ್ತಿದ್ದರಿಂದ ಮರದ ಆಸರೆಗೆ ನಿಂತಿದ್ದ ವೇಳೆ ಸಿಡಿಲಿಗೆ ಬಲಿಯಾಗಿದ್ದಾರೆ.