ದೇವಿಕೇರಾದಲ್ಲಿ ನ್ಯಾಯ ನಿಮ್ಮದು, ನೆರವು ನಮ್ಮದು
Team Udayavani, Oct 18, 2021, 5:55 PM IST
ಸುರಪುರ: ಪ್ರತಿಯೊಬ್ಬರಿಗೂ ಕಾನೂನು ಜ್ಞಾನ ಅಗತ್ಯವಾಗಿದೆ. ಕಾನೂನು ಅರಿವಿನಿಂದ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಪೆನಲ್‌ನ ವಕೀಲ ಆದಪ್ಪ ಹೊಸ್ಮನಿ ತಿಳಿಸಿದರು.
ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಜರುಗಿದ ಡಿಸಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಕಾನೂನು ನೆರವು ಮತ್ತು ಸಲಹೆ ಕರಪತ್ರ ವಿತರಿಸಿ ಅವರು ಮಾತನಾಡಿ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ತಯ್ಯಬಾ ಸುಲ್ತಾನ್ ಮತ್ತು ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಿಗೇರ ಮಾರ್ಗದರ್ಶನದಲ್ಲಿ ನ್ಯಾಯ ನಿಮ್ಮದು ನೆರವು ನಮ್ಮದು ಕಾರ್ಯಕ್ರಮ ನಡೆಯಲಿದೆ ಎಂದರು.
ದಿನನಿತ್ಯದ ಜೀವನದಲ್ಲಿ ಮತ್ತು ಸಣ್ಣಪುಟ್ಟ ವ್ಯವಹಾರಗಳಲ್ಲಿ ಕಾನೂನಿನ ಅರಿವು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ. ಕಾನೂನಿಗೆ ಬಡವ, ಶ್ರೀಮಂತ, ಮೇಲು-ಕೀಳು ಎಂಬ ಭೇದಭಾವ ಇಲ್ಲ. ಕಾನೂನಿನ ಕನಿಷ್ಟ ಜ್ಞಾನ ಹೊಂದಿದಾಗ ಅಪರಾಧಿಕ ಕೃತ್ಯ ನಡೆಯುವುದಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ತಿಳಿವಳಿಕೆ ಹೊಂದಬೇಕಿದೆ. ಇದರಿಂದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಪ.ಜಾ-ಪ.ಪಂಗಡಕ್ಕೆ ಸೇರಿದವರು ಮಾನಸಿಕ ಅಥವಾ ನ್ಯೂನತೆ ಇರುವವರು, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶಕ್ಕೆ ತುತ್ತಾದವರು, ಮನೋರೋಗಿಗಳು ಮತೀಯ ದೌರ್ಜನಕ್ಕೆ ಬಲಿಯಾದವರು, 3 ಲಕ್ಷ ಒಳಗೆ ಆದಾಯವಿರುವ ಎಲ್ಲಾ ವರ್ಗದವರು ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಜನನ-ಮರಣ, ಬಾಲ್ಯ ವಿವಾಹ, ಗ್ರಾಹಕರ ಹಕ್ಕು, ಆಸ್ತಿ ಹಕ್ಕು, ಸೇರಿದಂತೆ ಇತರೆ ಕಾನೂನು ತಿಳಿವಳಿಕೆ ನೀಡಲಾಯಿತು. ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಅಪರ ಸರಕಾರಿ ವಕೀಲರಾದ ನಂದಣ್ಣಗೌಡ ಪಾಟೀಲ್, ಪಿಡಿಒ ಸಂಗೀತಾ ಸಜ್ಜನ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರೆಡ್ಡಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru Dasara ವೇದಿಕೆ ರಾಜಕೀಯಕ್ಕೆ ಸಲ್ಲ: ಛಲವಾದಿ ನಾರಾಯಣ ಸ್ವಾಮಿ ಕಿಡಿ
Yadgiri ನಗರಸಭೆ ಅಧ್ಯಕ್ಷರಾಗಿ ಕು.ಲಲಿತಾ ಆಯ್ಕೆ
ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ
Yadgir: ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕದ ಜನ ಇದ್ದಾರೆ… ಸಚಿವ ಮಧು ಬಂಗಾರಪ್ಪ
Yadgiri: ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ… ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.