
ಕನಕ ಸಾಹಿತ್ಯ ದೀಪ್ತಿಗಳು ಆದರ್ಶವಾಗಲಿ
Team Udayavani, Dec 4, 2020, 2:15 PM IST

ಯಾದಗಿರಿ: ಸಂತಶ್ರೇಷ್ಠ ಕನಕದಾಸರ ಜೀವನ ಮೌಲ್ಯಗಳು, ಅವರ ವೈಚಾರಿಕ ವಿಚಾರಗಳು ಎಲ್ಲರಿಗೂ ದಾರಿ ದೀಪ, ಕನಕ ಸಾಹಿತ್ಯ ದೀಪ್ತಿಯ ಕಿರಣಗಳು ಸರ್ವರಿಗೂ ಆದರ್ಶವಾಗಲಿ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯ ಆರ್ ಕರೆ ನೀಡಿದರು.
ಜಿಲ್ಲಾಡಳಿತದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ಕನಕದಾಸರ ಜೀವನ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಮೂಲಕ ಅವರ ತತ್ವ-ಆದರ್ಶ-ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಕೆಲಸ ಮಾಡಬೇಕಾಗಿದೆ ಎಂದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಋಷಿಕೇಶ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಯಾದಗಿರಿ ನಗರಸಭೆಯ ಅಧ್ಯಕ್ಷ ವಿಲಾಸ ಬಿ. ಪಾಟೀಲ್, ಸಮಾಜದ ಮುಖಂಡರಾದವಿಶ್ವನಾಥ ನೀಲದಳ್ಳಿ, ಹೊನ್ನಪ್ಪ ಮುಷ್ಟುರು, ಚನ್ನಕೇಶಗೌಡ, ಮಲ್ಲಯ್ಯ, ಮಂಜುನಾಥ, ಫಕೀರಪ್ಪ ರಾಮಸಮುದ್ರ ಇದ್ದರು.
ಕುಲ-ಜಾತಿಗಳ ಹೆಸರಲ್ಲಿ ಹೊಡೆದಾಡಬೇಡಿ :
ಯಾದಗಿರಿ: ಕನಕದಾಸರು 16ನೇ ಶತಮಾನದಲ್ಲಿ ಕುಲ ಕುಲವೆಂದು ಹೊಡೆದಾಡಬೇಡಿ ಎಂದು ಸಾರಿದ ಮಹಾನ್ ದಾಸಶ್ರೇಷ್ಠರು ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಭಕ್ತ ಕನಕದಾಸರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ದೇವರ ಜಾತಿ-ಕುಲಗಳ ಹೆಸರಿನಲ್ಲಿ ಬಡಿದಾಡುವುದನ್ನು ಖಂಡಿಸಿದ್ದ ಅವರುಸಮಾಜ ತಿದ್ದಲು ಇನ್ನಿಲ್ಲದ ಪ್ರಯತ್ನಮಾಡಿದ್ದರು. ಇಂತಹ ಮಹಾನ್‌ವ್ಯಕ್ತಿಗಳ ತತ್ವಾದರ್ಶವನ್ನು ಪಾಲಿಸಿ ನಾವೆಲ್ಲ ಒಂದು ಎನ್ನುವುದನ್ನು ಅರಿತು ಬಾಳುವ ಅಗತ್ಯವಿದೆ ಎಂದರು.
ವಿಶ್ವನಾಥ ಸಿರವಾರ, ಬಾಲಪ್ಪ ಚಿಕ್ಕಮೇಟಿ, ರಾಜಶೇಖರ ಅನ್ವಾರ ಮಾತನಾಡಿದರು ಚೆನ್ನಪ್ಪಗೌಡಮೋಸಂಬಿ, ನಾಗರತ್ನಾ ಅನಪೂರ, ಶರಣಪ್ಪ ಗುಳಗಿ, ಶಿವಪ್ಪ ಮುಷ್ಟೂರು,ಬಾಲಮಿತ್ರ ಏಬೆಲ್, ಮಾಣಿಕಪ್ರಭು, ಶರಣು ಪಡಶೆಟ್ಟಿ, ಪ್ರಕಾಶ ಸ್ವಾಮಿ, ಮಹೇಶ ಬೀರನಕಲ್ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadagiri; ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

Karnataka Bandh; ಯಾದಗಿರಿಯಲ್ಲಿ ರೈಲು ತಡೆಯಲು ಯತ್ನ

Yadagiri: ಜಿಲ್ಲಾಧಿಕಾರಿಯಿಂದ ಸಾರ್ವಜನಿಕ ಆರೋಗ್ಯ ತಪಾಸಣೆಗೆ ಚಾಲನೆ

Yadagiri; ಟೆಂಡರ್ ವಿಳಂಬ ಸಲ್ಲದು: ಅಧಿಕಾರಿಗಳಿಗೆ ಸಚಿವ ದರ್ಶನಾಪುರ ಎಚ್ಚರಿಕೆ

Yadgir ; 150 ಕೆಜಿ ಶ್ರೀಗಂಧ ಸಹಿತ ಆರೋಪಿ ಬಂಧನ: ಓರ್ವ ಆರೋಪಿ ಪರಾರಿ