ರಸ್ತೆ ಮಧ್ಯೆ ವಾಹನಗಳ ಕಿರಿಕಿರಿ

ಸಮರ್ಪಕವಾಗಿ ಪಾಲನೆಯಾಗದ ನಿಯಮಜನ ಸಂಚಾರಕ್ಕೆತೊಂದರೆ

Team Udayavani, Mar 16, 2020, 1:56 PM IST

16-March-16

ಸೈದಾಪುರ: ಪಟ್ಟಣದ ಒಳ ರಸ್ತೆಗಳಲ್ಲಿ ಗಂಟೆಗಟ್ಟಲೆ ನಿಲ್ಲುವ ಭಾರೀ ವಾಹನಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

ಸುತ್ತಲಿನ ಹತ್ತಾರು ಗ್ರಾಮಗಳ ಶೈಕ್ಷಣಿಕ, ವ್ಯವಹಾರಿಕ ಕೇಂದ್ರವಾದ ಸೈದಾಪುರ ಪಟ್ಟಣಕ್ಕೆ ರೈಲು ಸಂಪರ್ಕವೂ ಇದೆ. ಪ್ರತಿ ನಿತ್ಯ ವಾಹನಗಳಲ್ಲಿ ಜನರು ಸಂಚರಿಸುತ್ತಾರೆ. ಆದರೆ ಪಟ್ಟಣದ ರೈಲು ನಿಲ್ದಾಣದಿಂದ ಎಂಪಿಎಸ್‌ ಶಾಲೆ ಹಾಗೂ ಬಸವೇಶ್ವರ ವೃತ್ತದಿಂದ ಕನಕ ವೃತ್ತದ ಮಧ್ಯದಲ್ಲಿ ಸಾಮಾಗ್ರಿ ತುಂಬಿದ ವಾಹನಗಳ ನಿಲುಗಡೆಯಿಂದ ಸಂಚಾರ ಸಮಸ್ಯೆ ಎದುರಾಗಿ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಸೈದಾಪುರ ಪಟ್ಟಣದ ಇಕ್ಕಟ್ಟಾದ ಒಳ ರಸ್ತೆಗಳಲ್ಲಿ ಲಾರಿಗಳನ್ನು ನಿಲ್ಲಿಸಿ ಸಾಮಗ್ರಿ ಖಾಲಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸುಗಮ ವಾಹನ ಸಂಚಾರ ಸಾಧ್ಯವಾಗದ ಆಟೋ, ಟಂಟಂ ಸೇರಿದಂತೆ ಹತ್ತಾರು ದ್ವಿಚಕ್ರ ವಾಹನಗಳು ಸೇರಿ ದಟ್ಟಣೆ ಹೆಚ್ಚಾಗುತ್ತದೆ. ವಾಹನಗಳು ಹಿಂದೆ-ಮುಂದೆ ಹೋಗದೆ ರಸ್ತೆ ಮಧ್ಯೆ ನಿಲ್ಲುತ್ತವೆ. ಇನ್ನು ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರ ಕೊರತೆ ಇರುವುದರಿಂದ ಸಾರ್ವಜನಿಕರ ತೊಂದರೆ ಸರ್ವೆ ಸಾಮಾನ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಾದರೂ ಸಂಬಂಧಿಸಿದ ಅಧಿಕಾರಿಗಳು ಭಾರೀ ಗಾತ್ರದ ವಾಹನಗಳಿಗೆ ಪಟ್ಟಣದ ಒಳ ರಸ್ತೆಗಳಲ್ಲಿ ಸಂಚರಿಸಲು ಸಮಯ ನಿಗದಿ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಜನಸಾಮಾನ್ಯರ ಒತ್ತಾಸೆಯಾಗಿದೆ.

ಪೊಲೀಸ್‌ ಇಲಾಖೆ ಕೇವಲ ದಂಡಕ್ಕೆ ಸೀಮಿತ
ಪಟ್ಟಣದಲ್ಲಿ ಹಲವೆಡೆ ವಾಹನ ಸಂಚಾರದಿಂದ ಸಾರ್ವಜನಿಕರು ತೊಂದರೆ ಅನುಭವಿಸಿತಿದ್ದರೆ ಇನ್ನೊಂದಡೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಪಟ್ಟಣಕ್ಕೆ ಆಗಮಿಸುವ ಮತ್ತು ಹೊರ ಹೋಗುವ ವಾಹನಗಳಿಗೆ ಬಾರಿ ದಂಡ ವಿಧಿಸುತ್ತಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದಲ್ಲಿ ಸುಗಮ ವಾಹನ ಸಂಚಾರ ಮತ್ತು ಪಾದಚಾರಿಗಳ ಬಗ್ಗೆ ಗಮನಹರಿಸದ ಪೊಲೀಸ್‌ ಇಲಾಖೆ ಕಾರ್ಯವೈಖರಿ ಬಗ್ಗೆ ಪಟ್ಟಣದ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದಲ್ಲಿ ಪದೇ ಪದೇ ಉಂಟಾಗುವ ಸಂಚಾರ ದಟ್ಟಣೆಗೆ ಈ ಹಿಂದಿನ ಪೊಲೀಸ್‌ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರು. ಅಲ್ಲದೇ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಅನುಕೂಲ ಮಾಡಿಕೊಟ್ಟಿದರು. ಆದರೆ ಈಗಿನ ಅಧಿಕಾರಿಗಳು ಕೇವಲ ದಂಡ ವಸೂಲಿ ಮಾಡುವುದರಲ್ಲಿ ಮಗ್ನವಾಗಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್‌ ಅಧಿಕಾರಿಗಳು ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಶರಣಗೌಡ ಕ್ಯಾತ್ನಾಳ
ಜೆಡಿಎಸ್‌ ಯುವ ಮುಖಂಡ ಸೈದಾಪುರ

Ad

ಟಾಪ್ ನ್ಯೂಸ್

Koyamattur-Blast-Accuse

ಎಲ್‌.ಕೆ.ಆಡ್ವಾಣಿ ಯಾತ್ರೆಗೂ ಮುನ್ನ ಸ್ಫೋಟ ನಡೆಸಿದ್ದ ಉಗ್ರ ವಿಜಯಪುರದಲ್ಲಿ ಸೆರೆ

Kharge-CM-Siddu

ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಜತೆ ಸಿಎಂ ಸಿದ್ದರಾಮಯ್ಯ  ಮಾತುಕತೆ

ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

1-aa-aa-pop

World Population Day: ಜನಸಂಖ್ಯೆ ಹೊರೆ ಅಲ್ಲ ವರವಾಗಿ ಪರಿವರ್ತಿಸೋಣ

xi-Jinping

ಚೀನದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಆಧಿಪತ್ಯ ಅಂತ್ಯ?

ಪ್ಯಾಂಗಾಂಗ್‌ ಸರೋವರ ಬಳಿ “ಹಯಬುಸಾ’ ಸಾಹಸ: ಯೂಟ್ಯೂಬರ್‌ ಬಂಧನ

ಪ್ಯಾಂಗಾಂಗ್‌ ಸರೋವರ ಬಳಿ “ಹಯಬುಸಾ’ ಸಾಹಸ: ಯೂಟ್ಯೂಬರ್‌ ಬಂಧನ

Madan-Gopal

ಪ್ರತಿಭೆಗೆ ಮುಕ್ತ ಅವಕಾಶ, ಸಾಧನೆಯೇ ಮೆರಿಟ್‌: ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

man ends his life over fear of caste abuse case; father suffers heart attack after hearing the news

ಜಾತಿನಿಂದನೆ ಪ್ರಕರಣಕ್ಕೆ ಹೆದರಿ ಯುವಕ ಆತ್ಮಹತ್ಯೆ; ಸುದ್ದಿ ತಿಳಿದು ತಂದೆಗೆ ಹೃದಯಾಘಾತ

19

Hunasagi: ಧುಮ್ಮಿಕ್ಕುತ್ತಿದೆ ಆಮಲಿಂಗೇಶ್ವರ ಜಲಪಾತ

Yadagiri: Bhoyal Harshal appointed as new DC

Yadagiri: ನೂತನ ಡಿಸಿಯಾಗಿ ಭೋಯಲ್ ಹರ್ಷಲ್ ನಿಯೋಜನೆ

ಕಲುಷಿತ ನೀರು ಸೇವನೆಯಿಂದ ಒಂದೇ ಗ್ರಾಮದ ಮೂರು ಜನ ಸಾವು!

Surapura: ಕಲುಷಿತ ನೀರು ಸೇವನೆಯಿಂದ ಒಂದೇ ಗ್ರಾಮದ ಮೂರು ಜನ ಸಾವು!

1-dess-JDS

Congress; ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳಿ…:ಶಾಸಕ ಉದಯ್ ಗೆ ನಿಖಿಲ್ ತಿರುಗೇಟು

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Koyamattur-Blast-Accuse

ಎಲ್‌.ಕೆ.ಆಡ್ವಾಣಿ ಯಾತ್ರೆಗೂ ಮುನ್ನ ಸ್ಫೋಟ ನಡೆಸಿದ್ದ ಉಗ್ರ ವಿಜಯಪುರದಲ್ಲಿ ಸೆರೆ

Kharge-CM-Siddu

ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಜತೆ ಸಿಎಂ ಸಿದ್ದರಾಮಯ್ಯ  ಮಾತುಕತೆ

ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

Shivalingegowda

Congress Govt: ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ: ಶಿವಲಿಂಗೇಗೌಡ

1-aa-aa-pop

World Population Day: ಜನಸಂಖ್ಯೆ ಹೊರೆ ಅಲ್ಲ ವರವಾಗಿ ಪರಿವರ್ತಿಸೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.