ಶಹಾಪುರ: ಒಂದು ಕೆಜಿ ಚಿನ್ನ, ಎಂಟುವರೆ ಲಕ್ಷ ರೂ. ಕದ್ದು ಪರಾರಿಯಾದ ಖತರ್ನಾಕ್
Team Udayavani, Jan 12, 2023, 10:05 PM IST
ಶಹಾಪುರ:ಬಂಗಾರ ವ್ಯಾಪಾರಿಯೊಬ್ಬರು ನಗರದಲ್ಲಿ ವ್ಯವಹಾರ ಮುಗಿಸಿಕೊಂಡು ವಿಜಯಪುರಕ್ಕೆ ತೆರಳಲು ಬಸ್ ಹತ್ತುವಾಗ ಬ್ಯಾಗ್ ನಲ್ಲಿದ್ದ ಒಂದು ಕೆಜಿ ಚಿನ್ನ ಮತ್ತು ಎಂಟುವರೆ ಲಕ್ಷ ರೂ. ದುಡ್ಡು ಹೊಡೆದು ಖದೀಮನೋರ್ವ ಪರಾರಿಯಾದ ಘಟನೆ ನಗರ ಹಳೇ ಬಸ್ ನಿಲ್ದಾಣದಲ್ಲಿ ಸಂಜೆ ಸುಮಾರಿಗೆ ನಡೆದಿದೆ.
ಮುಂಬೈ ಮೂಲದ ವಿಜಯಪುರ ನಿವಾಸಿ ಚಿನ್ನಾಭರಣ ವ್ಯಾಪಾರಿ ವಿಕಾಸ್ ಜೈನ್ ಎಂಬುವರು ಎಂದಿನಂತೆ ಈ ಭಾಗದ ಹಲವಡೆ ಚಿನ್ನ ವ್ಯಾಪಾರಸ್ಥರನ್ನು ಭೇಟಿ ತಮ್ಮ ಚಿನ್ನ ವ್ಯಾಪಾರ ವಹಿವಾಟು ಮುಗಿಸಿ ನಗರ ಬಸ್ ನಿಲ್ದಾಣದಲ್ಲಿ ತಮ್ಮೂರಿಗೆ ವಿಜಯಪುರಕ್ಕೆ ತೆರಳಲು ಬಸ್ ಹತ್ತುವಾಗ ಗದ್ದಲದ ನಡುವೆ ಖದೀಮನೋರ್ವ ಬ್ಯಾಗ್ ನಲ್ಲಿದ್ದ ಚಿನ್ನ ಹಾಗೂ ದುಡ್ಡು ಹಾರಿಸಿದ ಘಟನೆ ನಡೆದಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸುಮಾರು 70 ಲಕ್ಷ ರೂ. ವೆಚ್ಚದ ಚಿನ್ನ,ನಗದು ಎಂಟುವರೆ ಲಕ್ಷ ರೂ. ಕದ್ದಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಕಳ್ಳನ ಹುಡುಕಾಟಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Services Down!; ಜಿ ಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಸೇವೆಯಲ್ಲಿ ವ್ಯತ್ಯಯ
ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್
ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?
ಚಿಕ್ಕಮಗಳೂರು: ಸರಕಾರಿ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರ ಮೃತ್ಯು
ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ