ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ
Team Udayavani, May 19, 2022, 6:26 PM IST
ಸೈದಾಪುರ: ಪಟ್ಟಣದ ಎಸ್‍ಬಿಎಮ್ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿಮರ್ಶಳು 625ಕ್ಕೆ 623 ಅಂಕ ಪಡೆಯುವ ಮೂಲಕ ಶೇ.99.6 ಫಲಿತಾಂಶ ಪಡೆದು ಯಾದಗಿರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಗುರುವಾರ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಹಳ್ಳಿಮಕ್ಕಳು ಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾಳೆ. ಮನಸ್ಸು ಮಾಡಿದರೆ ಗ್ರಾಮೀಣ ಪ್ರತಿಭೆ ಕೂಡಾ ಅಂದುಕೊಂಡಿರುವ ಗುರಿ ಸಾಧಿಸಬಹುದು ಎಂಬುದನ್ನು ಸೈದಾಪುರ ಪಟ್ಟಣದ ರೈತನ ಮಗಳು ವಿಮರ್ಶ ಮಲ್ಲಿಕಾರ್ಜುನ ತೋರಿಸಿಕೊಟ್ಟಿದ್ದಾಳೆ. ಗ್ರಾಮೀಣ ಜನರಿಗೆ ಸಹಾಯ ಮಾಡುವ ಆಸ್ತಕಿ ಹೊಂದಿರುವ ಈಕೆಗೆ ವೈದ್ಯಕೀಯ ವಿಷಯದಲ್ಲಿ ಪದವಿ ಪಡೆದು ಮುಂದೆ ಜಿಲ್ಲಾಧಿಕಾರಿಯಾಗುವ ಆಸೆ ಇದೆ.
ಶಾಲೆಯ ಶಿಕ್ಷಕರ, ತಂದೆ-ತಾಯಿ ಪ್ರೋತ್ಸಾಹ ಹಾಗೂ ನಿತ್ಯ ಮನೆಯಲ್ಲಿನ ಅಭ್ಯಾಸ, ಶಾಲೆಯಲ್ಲಿನ ಬೋಧನೆಯಿಂದ ಹೆಚ್ಚು ಅಂಕಗಳಿಸಿದ್ದೇನೆ. ಮುಂದೆ ಜಿಲ್ಲಾಧಿಕಾರಿಯಾಗಿ ಗ್ರಾಮೀಣ ಜನರ ಸೇವೆ ಮಾಡುವ ಆಸೆ ಇದೆ. – ವಿಮರ್ಶ, ವಿದ್ಯಾರ್ಥಿನಿ