Udayavni Special

ಅನಗತ್ಯ ರಸ್ತೆಗಿಳಿದವರಿಗೆ ಲಾಠಿ ರುಚಿ

Team Udayavani, Apr 26, 2021, 9:05 PM IST

ಗಹತ್ತ

ಯಾದಗಿರಿ: ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ 2ನೇ ದಿನವೂ ಕಟ್ಟುನಿಟ್ಟಿನ ಪಾಲನೆಗೆ ಅಧಿಕಾರಿಗಳು ಶ್ರಮಿಸಿದರು. ಜಿಲ್ಲೆಯಲ್ಲಿ ಬಹುತೇಕ ಕಡೆ ಉತ್ತಮ ಸ್ಪಂದನೆ ದೊರಕಿದ್ದು, ಕೆಲವೆಡೆ ನಿಯಮ ಉಲ್ಲಂಘಿಸಿದವರಿಗೆ ನಗರಸಭೆ ಸಿಬ್ಬಂದಿ ಬರೋಬ್ಬರಿ 14 ಸಾವಿರ ದಂಡ ವಿಧಿಸಿದ್ದು, ಅನಗತ್ಯ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿಯೂ ತೋರಿಸಿದ್ದಾರೆ.

ಕೊರೊಮಾ ಎರಡನೇ ಅಲೆ ಜಿಲ್ಲೆಯಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಜಿಲ್ಲೆಯ ಜನರು ಸಂಪೂರ್ಣ ಸಹಕಾರ ನೀಡಿದರು. ಆದರೂ ಸಾಮಾಜಿಕ ಅಂತರವೇ ಮಾಯವಾಗಿತ್ತು. ರವಿವಾರ ಆಗಿರುವುದರಿಂದ ಮಾಂಸ ಪ್ರಿಯರು ಮೈ ಮರೆತ್ತಿದ್ದರು. ಬೆಳಿಗ್ಗೆ 7:30ರ ಸುಮಾರಿಗೆ ನಗರದ ಶಾಸ್ತ್ರಿ ವೃತ್ತದಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಮೀನು ಪ್ರಿಯರು ಸಾಮಾಜಿಕ ಅಂತವರನ್ನು ಗಾಳಿಗೆ ತೋರಿ ಮೀನು ಖರೀದಿಸುವಲ್ಲಿ ಮಗ್ನರಾಗಿದ್ದರು.

ಬೆಳಿಗ್ಗೆ ಹಾಲು, ತರಕಾರಿ ಸೇರಿದಂತೆ ಇತರೆ ನಿತ್ಯ ಗೃಹ ಉಪಯೋಗಿ ವಸ್ತುಗಳ ಖರೀದಿಗೆ ಬೆಳಿಗ್ಗೆ 10ರ ವರೆಗೆ ಅವಕಾಶವಿತ್ತು. ಈ ಮಧ್ಯೆಯೇ ಚಿತ್ತಾಪುರ ರಸ್ತೆಯ ಕಿರಾಣಿ ಅಂಗಡಿವೊಂದರಲ್ಲಿ ಜನರು ಸಾಮಾಜಿಕ ಅಂತರ ಪಾಲಿಸದೇ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಬೆಳಿಗ್ಗೆ 10ಗಂಟೆಯಾಗುತ್ತಿದ್ದಂತೆ ನಗರದೆಲ್ಲೆಡೆ ಹಿರಿಯ ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಪೌರಾಯುಕ್ತ ಬಿ.ಟಿ. ನಾಯಕ, ಪಿಎಸ್‌ಐ ಸೌಮ್ಯ ಸಿಬ್ಬಂದಿಗಳೊಂದಿಗೆ ನಗರ ಪ್ರದಕ್ಷಿಣೆ ಮಾಡಿ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಂಡರು.

ನಗರದ ಪ್ರಮುಖ ಬೀದಿ, ವೃತ್ತದಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಅನಾವಶ್ಯಕ ಓಡಾಟ ನಿಯಂತ್ರಿಸಿದ್ದು ಕಂಡು ಬಂತು. ಪೊಲೀಸರು ದ್ವಿಚಕ್ರ ವಾಹನ ನಿಲ್ಲಿಸಿ ವಿವರಣೆ ಪಡೆದು ಕಳಿಸುತ್ತಿದ್ದರು. ಇನ್ನು ಗಲ್ಲಿಯಲ್ಲಿ ನಿಂತಿದ್ದ ಹಣ್ಣ ಮಾರಾಟಗಾರರಿಗೂ ಅವಕಾಶ ನೀಡದೇ ಎಚ್ಚರಿಸಿ ನಿಯಮ ಪಾಲಿಸುವಂತೆ ಪೊಲೀಸರು ಸೂಚಿಸಿದರು. ಇದೇ ವೇಳೆ ನಗರದ ಗಾಂಧಿ  ವೃತ್ತ ಸೇರಿದಂತೆ ಹಲವೆಡೆ ಅನಾವಶ್ಯಕವಾಗಿ ರಸ್ತೆಯಲ್ಲಿದ್ದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಇನ್ನು ನಿಯಮ ಮೀರಿ ಹಿಂಬಾಗಿಲಿನಿಂದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಸಿಬ್ಬಂದಿ, ರವಿವಾರ 14 ಸಾವಿರ ದಂಡ ವಿಧಿ ಸಿದ್ದಾರೆ. ಶನಿವಾರವೂ 18 ಸಾವಿರ ದಂಡ ವಿ ಧಿಸಿರುವ ಮಾಹಿತಿ ಲಭ್ಯವಾಗಿದೆ.

ಟಾಪ್ ನ್ಯೂಸ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

10-18

ಸಾಂತರಸರ ಕಾಲದ ವೀರಗಲ್ಲು ಪತ್ತೆ

auto

ವಾಹನ ತಪಾಸಣೆ ವೇಳೆ ಕಾನ್ಸ್‌ಟೇಬಲ್‌ ಸಮೇತ ಆಟೋ ಚಾಲಕ ಎಸ್ಕೇಪ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-16

ಮುದ್ನಾಳ ಅಭಿಮಾನಿ ಬಳಗದಿಂದ ಸೋಂಕಿತರಿಗೆ ಅನ್ನ-ನೀರು

9-15

ಹೊರ ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್‌

ಯಾದಗಿರಿ : ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಯುವಕ ಗಂಭೀರ

ಯಾದಗಿರಿ : ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಯುವಕ ಗಂಭೀರ

ಆಮ್ಲಜನಕ ಹಾಸಿಗೆ ಜೋಡಣೆ ಕಾರ್ಯ ಪರಿಶೀಲಿಸಿದ ಡಿಸಿ

ಆಮ್ಲಜನಕ ಹಾಸಿಗೆ ಜೋಡಣೆ ಕಾರ್ಯ ಪರಿಶೀಲಿಸಿದ ಡಿಸಿ

ಶೀಘ್ರ ವಡಗೇರಾದಲ್ಲಿ ಕೋವಿಡ್‌ ಆಸ್ಪತ್ರೆ: ಚವ್ಹಾಣ

ಶೀಘ್ರ ವಡಗೇರಾದಲ್ಲಿ ಕೋವಿಡ್‌ ಆಸ್ಪತ್ರೆ: ಚವ್ಹಾಣ

MUST WATCH

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

udayavani youtube

ಕರುನಾಡಿಗೆ ಯಾಕೆ ಈ ಪರಿಸ್ಥಿತಿ ಬಂತು?

udayavani youtube

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕ

udayavani youtube

ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್‌ ಸವಾರ

udayavani youtube

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ

ಹೊಸ ಸೇರ್ಪಡೆ

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

10-20

ಅನಗತ್ಯವಾಗಿ ಓಡಾಡಿದವರಿಗೆ ಪೊಲೀಸರಿಂದ ಲಾಠಿ ಬಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.