ಬಾಲ್ಯ ವಿವಾಹಕ್ಕೆ ಅಧಿಕಾರಿಗಳ ಬ್ರೆಕ್‌

ಗ್ರಾಮಸ್ಥರಲ್ಲಿ ನೂತನ ಸಪ್ತಪದಿ ಯೋಜನೆ ಅರಿವು ಮೂಡಿಸಿದ ಅಧಿಕಾರಿಗಳ ತಂಡ

Team Udayavani, Mar 16, 2020, 4:53 PM IST

16-March-25

ಸುರಪುರ: ತಾಲೂಕಿನ ದೇವಾಪುರದಲ್ಲಿ ರವಿವಾರ ನಡೆಯುತ್ತಿದ್ದ ಬಾಲ್ಯ ವಿವಾಹ ಅಧಿಕಾರಿಗಳ ಸಮಯ ಪ್ರಜ್ಞೆ ಮತು ಮಿಂಚಿನ ಕಾರ್ಯಾಚರಣೆಯಿಂದ ತಡೆ ಬಿದ್ದಿದೆ.

ದೇವಾಪುರದ ಕುಟುಂಬವೊಂದರಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ರವಿವಾರ ಮದುವೆ ನಡೆಯಲಿದೆ ಎಂಬ ಖಚಿತ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ದಂಡಾಧಿಕಾರಿ, ಪೊಲೀಸರು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮದುವೆ ಸಿದ್ಧತೆಯಲ್ಲಿದ್ದ ಪಾಲಕ ಪೋಷಕರೊಂದಿಗೆ ಅಧಿಕಾರಿಗಳು ಚರ್ಚೆ ನಡೆಸಿ ವಯಸ್ಸು ಮತ್ತು ಇತರೆ ದಾಖಲೆ ಪರಿಶೀಲಿಸಿದರು. ಈ ವೇಳೆ ಆಕೆಗೆ 15 ವರ್ಷ ಎಂದು ಖಚಿತವಾಯಿತು. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಮದುವೆ ಮಾಡುವುದು ತಪ್ಪು. ಇದೊಂದು ಅಪರಾಧಿಕ ಕೃತ್ಯವಾಗುತ್ತದೆ ಕಾರಣ ಮದುವೆ ಕೈ ಬಿಡುವಂತೆ ತಿಳಿ ಹೇಳಿದರು.

ಈ ವೇಳೆ ಮಾತನಾಡಿದ ಗ್ರೇಡ್‌-2 ತಹಶೀಲ್ದಾರ್‌ ಸೋಪಿಯಾಸುಲ್ತಾನ್‌ ವಯ ಪೂರ್ವದಲ್ಲಿಯೇ ಮದುವೆ ಮಾಡುವುದು ಅಪರಾಧ. ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ಆಗುವವರೆಗೆ ಮದುವೆ ಮಾಡುವಂತಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸಿ ಮದುವೆ ಮಾಡಿದಲ್ಲಿ ದಂಡ ಮತ್ತು ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕಾರಣ ಅನಗತ್ಯವಾಗಿ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವುದು ಬೇಡ. ಇದರೊಂದಿಗೆ ಏನೊಂದು ತಿಳಿಯದ ಮತ್ತು ಪ್ರಾಪಂಚಿಕ ಜ್ಞಾನ ವಿಲ್ಲದೆ ಇರುವ ಬಾಲಕಿಗೆ ಮದುವೆ ಮಾಡುವುದರಿಂದ ಆಕೆ ಬದುಕು ಕೂಡ ಹಾಳು ಮಾಡಿದಂತ್ತಾಗುತ್ತದೆ. ಕಾರಣ ಮದುವೆ ಕೈಬಿಡುವಂತೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಸರಕಾರ ಹೊಸದಾಗಿ ಸಪ್ತಪದಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಕುಟುಂಬಕ್ಕೆ ಸರಕಾರ ಧನ ಸಹಾಯ ನೀಡುತ್ತದೆ. ನೀವು ಕಾರ್ಮಿಕರಾಗಿದ್ದಲ್ಲಿ ಕಾರ್ಮಿಕ ಇಲಾಖೆಯಿಂದ ಕೂಡ ಧನ ಸಹಾಯ ಸಿಗುತ್ತದೆ. ಕಾರಣ ಸದ್ಯಕ್ಕೆ ಮದುವೆ ವಿಚಾರ ಕೈ ಬಿಡಿ. ಮಗಳಿಗೆ 18 ವರ್ಷ ಪೂರ್ಣಗೊಂಡ ನಂತರ ಸರಕಾರದ ಯಾವುದಾದರೂ ಯೋಜನೆಯಲ್ಲಿ ಮದುವೆ ಮಾಡಿ. ಇದರಿಂದ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ ಎಂದು ತಿಳಿಹೇಳಿದರು.

ಕೊನೆಗೂ ಅಧಿಕಾರಿಗಳ ಸಲಹೆ ಮತ್ತು ಸೂಚನೆ ಮತ್ತು ಮಾರ್ಗದರ್ಶನಕ್ಕೆ ಸಮ್ಮತಿ ಸೂಚಿಸದ ಕುಟುಂಬಸ್ಥರು ಮದುವೆ ಕೈಬಿಡುವ ನಿರ್ಧಾರ ಮಾಡಿದರು. ಮಗಳಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ಮದುವೆ ಮಾಡುವುದಿಲ್ಲ ಎಂದು ಲಿಖೀತ ಹೇಳಿಕೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ದಶರಥ, ಕಾನೂನು ಸಲಹೆಗಾರ ರಾಜೇಂದ್ರ ಯಾದವ, ಕಂದಾಯ ನಿರೀಕ್ಷಕ ವಿಠ್ಠಲ , ಗಾಲೆ ನಟರಾಜ, ಪಿಎಸ್‌ಐ ಶ್ಯಾಮಸುಂದರ ನಾಯಕ, ಪಿಡಿಒ ಮತ್ತು ಅಂಗನಾಡಿ ಕಾರ್ಯಕರ್ತೆ ಸೇರಿದಂತೆ ಇದ್ದರು.

Ad

ಟಾಪ್ ನ್ಯೂಸ್

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Hunasagi: ಧುಮ್ಮಿಕ್ಕುತ್ತಿದೆ ಆಮಲಿಂಗೇಶ್ವರ ಜಲಪಾತ

Yadagiri: Bhoyal Harshal appointed as new DC

Yadagiri: ನೂತನ ಡಿಸಿಯಾಗಿ ಭೋಯಲ್ ಹರ್ಷಲ್ ನಿಯೋಜನೆ

ಕಲುಷಿತ ನೀರು ಸೇವನೆಯಿಂದ ಒಂದೇ ಗ್ರಾಮದ ಮೂರು ಜನ ಸಾವು!

Surapura: ಕಲುಷಿತ ನೀರು ಸೇವನೆಯಿಂದ ಒಂದೇ ಗ್ರಾಮದ ಮೂರು ಜನ ಸಾವು!

1-dess-JDS

Congress; ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳಿ…:ಶಾಸಕ ಉದಯ್ ಗೆ ನಿಖಿಲ್ ತಿರುಗೇಟು

ರಾಜ್ಯವನ್ನಾಳುವವರು ಜೆಡಿಎಸ್ ಪ್ರಾಡಕ್ಟ್ ಗಳೆ: ನಿಖಿಲ್ ಕುಮಾರಸ್ವಾಮಿ

ಪ್ರಸ್ತುತ ರಾಜ್ಯವನ್ನಾಳುವವರು ಜೆಡಿಎಸ್ ಪ್ರಾಡಕ್ಟ್ ಗಳೆ… ನಿಖಿಲ್ ಕುಮಾರಸ್ವಾಮಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.