Yadagiri: ಬಾಲ್ಯ ವಿವಾಹ ವಿರುದ್ಧ ಹೋರಾಡೋಣ: ಶಾಸಕ ಕಂದಕೂರು ಕರೆ


Team Udayavani, Jun 18, 2024, 2:45 PM IST

11-

ಯಾದಗಿರಿ: ನಮ್ಮ ದೇಶ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂ, ಇನ್ನೂ ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ ಪಿಡುಗಾದ ಬಾಲ್ಯ ವಿವಾಹ ಪ್ರಕರಣಗಳು ಇನ್ನೂ ಕಂಡು ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಕಾರ್ಯಕರ್ತೆಯರು ಅದನ್ನು ತಡೆಯಲು ಹೆಚ್ಚು ಗಮನ ಹರಿಸಬೇಕೆಂದು ಗುರುಮಿಠಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು.

ಯಾದಗಿರಿ ನಗರದ ತಮ್ಮ ಶಾಸಕರ ಜನಸಂಪರ್ಕ ಕಛೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಗುರುಮಿಠಕಲ್ ಇವರ ಆಶ್ರಯದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್‌ಗಳನ್ನು ವಿತರಿಸಿ ಮಾತನಾಡಿದರು.

ಗ್ರಾಮೀಣ ಜನತೆ ಅನಕ್ಷರಸ್ಥರಾಗಿದ್ದು, ಅವರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಮದುವೆ ಮಾಡುತ್ತಾರೆ, ಇದರಿಂದ ಅವರ ಆರೋಗ್ಯದ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರಿ ಮಕ್ಕಳ ಹೆರಿಗೆ ಸಮಯದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ, ಅಲ್ಲದೇ ಕೆಲ ಪ್ರಕರಣಗಳಲ್ಲಿ ಮಹಿಳೆಯರು ಸಾವನ್ನಪ್ಪಿರುವ ಘಟನೆಗಳು ಜರುಗಿವೆ, ಕಾರಣ ಕಾರ್ಯಕರ್ತೆಯರು ಅವರಲ್ಲಿ ಜಾಗೃತಿ ಮೂಡಿಸಿ, ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಲು ಮುಂದಾಗದಂತೆ ಎಚ್ಚರಿಕೆ ವಹಿಸಬೇಕು, ಜೊತೆಗೆ ಅಂತಹ ಸಂದರ್ಭಗಳು ಕಂಡು ಬಂದರೆ ಇಲಾಖೆ ಮೇಲಾಧಿಕಾರಿಗಳಿಗೆ ತಿಳಿಸಿ ಎಂದು ಹೇಳಿದರು.

ಕಾರ್ಯಕರ್ತೆಯರಿಗೆ ಸರ್ಕಾರ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಲು ಸೂಚಿಸಿದೆ, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೀರಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ ನೀಡಿ, ಇದು ಅವರ ಭವಿಷ್ಯದ ಶಿಕ್ಷಣದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ, ನಿಮ್ಮ ಸಮಸ್ಯೆಗಳ ಬಗ್ಗೆ ನಾನು ಗಟ್ಟಿ ಧ್ವನಿಯಾಗಿ, ಸರ್ಕಾರದ ಗಮನ ಸೆಳೆದು ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಈಗಾಗಲೇ ಮತಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಅಗತ್ಯಕ್ಕನುಸಾರವಾಗಿ ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ, ಕೆಲವು ಕಡೆ ನಿವೇಶನಗಳ ಕೊರತೆಯಿಂದ ಕಟ್ಟಡಗಳ ನಿರ್ಮಾಣ ನೆನೆಗುದಿಗೆ ಬಿದ್ದಿದೆ, ಸ್ಥಳಿಯರೊಂದಿಗೆ ಮಾತನಾಡಿ, ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಾಡುತ್ತಿರುವ ಕೆಲಸಗಳ ಮಾಹಿತಿ ಪಡೆಯಲು ಸರ್ಕಾರ ನಿಮಗೆ ಮೊಬೈಲ್‌ಗಳನ್ನು ನೀಡಿದೆ, ಅದರ ಸದ್ಭಳಕೆ ಮಾಡಿಕೊಂಡು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ 60 ಕಾರ್ಯಕರ್ತೆಯರಿಗೆ ಮೊಬೈಲ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗುರುಮಿಠಕಲ್ ಸಿಡಿಪಿಓ ಶರಣಬಸವ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

Jagannath Ratna Bhandara Treasury of Puri opened after 46 years

Ratna Bhandar: 46 ವರ್ಷಗಳ ಬಳಿಕ ತೆರೆದ ಪುರಿಯ ಜಗನ್ನಾಥ ರತ್ನ ಭಂಡಾರ ಖಜಾನೆ

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

Thomas Matthew Crooks,

Republican; ಡೊನಾಲ್ಡ್ ಟ್ರಂಪ್ ಗೆ ಗುಂಡಿಕ್ಕಿದವನು ಅವರದೇ ಪಕ್ಷದ ಸದಸ್ಯ! ಯಾರೀತ ಥೋಮಸ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsad

Police ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ಶಾಸಕ ಕಂದಕೂರ ರಾಜೀನಾಮೆ ಎಚ್ಚರಿಕೆ

4-yadagiri

Narayanapur: ವಿದ್ಯುತ್‌ ತಂತಿ ತಗುಲಿ ಮಹಿಳೆ ಸಾವು

1-aaaa

Shahpura: ಅಲ್ಪಸಂಖ್ಯಾಕ ಬಾಲಕರ ವಸತಿ ನಿಲಯದ ಊಟದಲ್ಲಿ ಹುಳು ಪತ್ತೆ

Yadagiri CEO withdrew the order issued in the matter of blocking the promotion of teachers

Yadagiri: ಶಿಕ್ಷಕರ ಬಡ್ತಿ ತಡೆ ವಿಚಾರದಲ್ಲಿ ಹೊರಡಿಸಿದ್ದ ಆದೇಶ ಹಿಂಪಡೆದ ಸಿಇಓ

7-hunasagi

Hunasagi: ಬೈಕ್ ಹಾಯ್ದು ಇಬ್ಬರು ಮಹಿಳೆಯರು ಸಾವು

MUST WATCH

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

ಹೊಸ ಸೇರ್ಪಡೆ

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10-cow

ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸೇರಿಸಿದ ಪೊಲೀಸರು

Davanagere; Indefinite struggle demanding fulfillment of 19 demands of Gram Panchayat employees

CITU; ಗ್ರಾ.ಪಂ ನೌಕರರ 19 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.