Udayavni Special

ಫ್ಯಾಷನ್‌ ಜಗತ್ತಿನಲ್ಲಿ ಗಮನ ಸೆಳೆಯುತ್ತಿರುವ ಅಂದ-ಚೆಂದದ ಬೆಲ್ಟ್‌ಗಳು


Team Udayavani, Sep 29, 2020, 4:48 AM IST

ego-40

ಬದಲಾದ ಫ್ಯಾಷನ್‌ ಲೋಕದಲ್ಲಿ ಇಂದು ವೈವಿಧ್ಯಮಯವಾದ ಉಡುಪುಗಳು ಜತೆಗೆ ಮ್ಯಾಚಿಂಗ್‌ ವಸ್ತುಗಳಡೆಗೆ ಗ್ರಾಹಕರು ಹೆಚ್ಚು ಗಮನಹರಿಸುತ್ತಿದ್ದಾರೆ. ನಾವು ಧರಿಸಿದ ಬಟ್ಟೆಗೆ ಅನುಗುಣವಾಗಿ ಅದಕ್ಕೆ ಹೋಲುವ ಬಣ್ಣ, ಸ್ಟೈಲ್‌ ಸಹಿತ ಎಲ್ಲವೂ ಮ್ಯಾಚಿಂಗ್‌ ಇರಬೇಕು ಎಂದು ಆಶಿಸುತ್ತೇವೆ. ಆ ಬಣ್ಣಕ್ಕೆ ತಕ್ಕಂತೆ ಒಪ್ಪಿಕೊಳ್ಳುವಂತಹ ಕಿವಿಯೋಲೆಯಿಂದ ಹಿಡಿದು ಚಪ್ಪಲಿಯವರೆಗೂ ಮ್ಯಾಚಿಂಗ್‌ಗೆ ಹಾಕಿಕೊಳ್ಳುತ್ತೇವೆ.

ಅದರಲ್ಲಿ ಇತ್ತೀಚೆಗೆ ಆಕರ್ಷಕವಾಗಿರುವ ವಿವಿಧ ವಿನ್ಯಾಸ ಬೆಲ್ಟ್‌ಗಳು ನಮ್ಮ ಧರಿಸಿರುವ ಬಟ್ಟೆಗಳ ನೋಟವನ್ನು ಇನ್ನಷ್ಟು ಚೆಂದಗಾಣಿಸುತ್ತದೆ. ಬಿಗ್‌, ವೈಡ್‌, ಬಕ್ಕಲ ಬೆಲ್ಟ್ ಟ್ರೆಂಡ್‌ ಸ್ಲಿಮ್‌ ಲುಕ್‌ ನೀಡಲಾಗುತ್ತದೆ. ಮಾಡೆಲ್‌, ಸೆಲೆಬ್ರಿಟಿಗಳು ಸಹಿತ ಸಾಮಾನ್ಯ ಯುವತಿಯರ ನೆಚ್ಚಿನ ಆಯ್ಕೆ ಇದಾಗಿದೆ. ಸೊಂಟದ ಸೀಕ್ರೆಟ್‌ ಗೆ ಅಂದದ ಬೆಲ್ಟ್ ಗಳು ಇಲ್ಲಿವೆ.

ಕಲರ್‌ಫ‌ುಲ್‌ ಕಾಟನ್‌ ಬೆಲ್ಟ್, ಲೆದರ್‌ ಬೆಲ್ಟ್,ಜೂಟ್‌ ಬೆಲ್ಟ್, ಹೂ ಬಳ್ಳಿಯ ಬೆಲ್ಟ್, ಪ್ಲಾಸ್ಟಿಕ್‌ ಬೆಲ್ಟ್ ಗಳು ಹುಡುಗಿಯರ ನೆಚ್ಚಿನ ಆಯ್ಕೆಯ ಬೆಲ್ಟ್‌ಗಳಾಗಿವೆ. ಇದಷ್ಟೇ ಅಲ್ಲದೆ ಅಂಗೈ ಅಗಲದ ಲೆದರ್‌ ಹಾಗೂ ಕಾಟನ್‌ ಕಲರ್‌ಫ‌ುಲ್‌ ಬೆಲ್ಟ್‌ಗಳು ಸೊಂಟಕ್ಕೆ ನಾವು ದಿರಿಸಿ ನೋಟವನ್ನು ಹೆಚ್ಚಿಸಿ ನಮ್ಮ ಅಂದವನ್ನು ಇನ್ನಷ್ಟು ಚಂದಗಾಣಿಸುವಲ್ಲಿ ಒಂದು ಮಾತಿಲ್ಲ. ಕಾಂಟ್ರೆಸ್ಟ್‌ ಶೇಡ್‌ನ‌ ಬೆಲ್ಟ್ ಜೀನ್ಸ್‌ ಫ್ಯಾಶನ್‌ನ್ನು ಬದಲಿಸಿದೆ ಎಂದರೆ ತಪ್ಪಿಲ್ಲ.

ಬಿಗ್‌ ಬೆಲ್ಟ್
ಬಿಗ್‌ಬೆಲ್ಟ್‌ಗಳು ಕಾಲೇಜು ಹುಡುಗಿಯರ ಡ್ರೆಸ್‌ಕೋಡ್‌ಗಳಲ್ಲಿ ಒಂದಾಗಿ ಹೊಸ ನೋಟವನ್ನು ಪಡೆದಿದೆ. ಸೆಲೆಬ್ರಿಟಿಗಳಂತೂ ಬಿಗ್‌ ಬೆಲ್ಟ್ ಇಲ್ಲದೆ ಹೊರ ನಡೆಯುವು ಬಹಳ ಕಡಿಮೆಯಾಗಿದೆ. ಇವುಗಳು ಹಳೆ ಫ್ಯಾಶನ್‌ಗಳನ್ನು ಮತ್ತೇ ನೆನಪಿಸುವಂತಾಗಿದೆ.

ಡಿಸೈನರ್‌ ಬೆಲ್ಟ್
ಬೆಲ್ಟ್ ಗಳು ನಮ್ಮ ಸೊಂಟಕ್ಕೆ ಕಟ್ಟಿ ಹಾಕಿಕೊಳ್ಳುವುದು ಮಾತ್ರವಲ್ಲ ಅದು ಸುಂದರ ನೋಟವನ್ನು ನೀಡುತ್ತದೆ. ಎಲ್ಲಿಲ್ಲದ ಬೇಡಿಕೆ ಇರುವ ಬೆಲ್ಟ್ ಗಳು ಇತ್ತೀಚಿನ ಸ್ಲಿಮ್‌ ಲುಕ್‌ನ ಒಂದು ಗುಟ್ಟಾಗಿದೆ. ಅದರಲ್ಲಿಯೂ ಡಿಸೈನರ್‌ ಬೆಲ್ಟ್‌ಗಳಿಗೆ ಭಾರೀ ಬೇಡಿಕೆ ಇದೆ.

ಅಂದುಕೊಳ್ಳಲಾಗದ ಕಾಂಟ್ರಸ್ಟ್‌ ಶೇಡ್ಸ್‌ಗಳ ಪೇಟೆಂಟ್‌ ಬೆಲ್ಟ್, ಬೂಟ್‌ ಕಟ್‌ ಜೀನ್ಸ್‌ ಗೆ ಹೊಂದಿಕೊಳ್ಳುವ ವೆರ್ಸ್ಟನೈಸ್‌ ಆನಾರ್ಟ್‌ ಬಕ್ಕಲ್ಸ್‌ ಬೆಲ್ಟ್, ಹವರ್‌ ಗ್ಲಾಸ್‌ ಶೇಪ್‌ ಬೆಲ್ಟ್‌ಗಳು ಹೊಸ ನೋಟವನ್ನು ನೀಡುತ್ತದೆ. ಇತ್ತೀಚಿನ ಟ್ರೆಂಡಿ ಬೆಲ್ಟ್‌ಗಳ ಮಾದರಿಯಲ್ಲಿ ಸೇರಿಕೊಂಡು ಹುಡುಗಿಯರ ನೆಚ್ಚಿನ ಫ್ಯಾಶನ್‌ಗೆ ಸೇರಿಕೊಂಡಿದೆ.

ಯಾವ ದಿರಿಸಿಗೆ ಯಾವ ಬೆಲ್ಟ್
ಕೇವಲ ಬೆಲ್ಟ್ ಹಾಕಿಕೊಂಡರೆ ಸಾಲದು ಯಾವ ದಿರಿಸಿಗೆ ಯಾವುದು ಸೂಕ್ತೆನ್ನುವುದನ್ನು ಅರಿತು ಆಯಾಯ ಫ್ಯಾಷನ್‌ ಗೆ ಒಪ್ಪಿಕೊಳ್ಳುವಂತಹ ಬೆಲ್ಟ್ ಆರಿಸುವುದು ಉತ್ತಮ.

ಹೊಸ ನೋಟ
ಹಿಂದೆ ಇದ್ದ ವೈಡ್‌ ಬೆಲ್ಟ್, ಟ್ರೊಶರ್‌ ಬೆಲ್ಟ್, ಬ್ರೈಡ್‌ ಹುಕ್‌, ಟ್ರಾವೆಲ್‌ ಸ್ಟಡ್ಸ್‌, ಹೊಸ ನೋಟವನ್ನು ಪಡೆದು ಮತ್ತೇ ಮರಳಿದ್ದು ಫ್ಯಾಶನ್‌ಗೆ ಹೊಸ ಮೆರುಗನ್ನು ನೀಡಿದೆೆ. ಲೂಸಾಗಿರುವ ಪ್ಯಾಂಟ್‌ ಹಿಡಿದಿರಲು ಬೆಲ್ಟ್ ಅಂದುಕೊಂಡಿದ್ದ ಅಂದಿನ ದಿನ ಇಂದು ಬೆಲ್ಟ್ ಇಲ್ಲದೆ ಯಾವುದು ಇಲ್ಲ ಅನ್ನುವಷ್ಟರ ಮಟ್ಟಿಗೆ ಫ್ಯಾಷನ್‌ ಬೆಲ್ಟ್‌ಗಳು ತನ್ನ ಸ್ಥಾನವನ್ನು ಅಲಂಕರಿಸಿವೆ. ಗೌನ್‌, ಫ್ರಾಕ್‌, ಮಿಡಿ , ಸ್ಕರ್ಟ್‌ ಹಾಗೂ ಜೀನ್ಸ್‌, ಫಾರ್ಮಲ್‌, ಬಿಲೋ ವೇಸ್ಟ್‌ ಪ್ಯಾಂಟ್‌ಗಳೇ ಇರಲಿ ಅಲ್ಲಿಯೂ ಈ ಫ್ಯಾಷನ್‌ ಬೆಲ್ಟ್ನದ್ದೇ ಕಾರುಬಾರು.

– ವಿಜಿತಾ ಅಮೀನ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಕೋವಿಡ್ ಓಡಿಸಲು ಸಿಎಂ ನವಸೂತ್ರ

ಕೋವಿಡ್ ಓಡಿಸಲು ಸಿಎಂ ನವಸೂತ್ರ

iplIPL 2020 : ಆರ್‌ಸಿಬಿ – ಮುಂಬೈ ಕಾದಾಟ : ಮುಂಬೈಗೆ 5 ವಿಕೆಟ್ ಗಳ ಜಯ

IPL 2020 : ಎಡವಿದ ಆರ್‌ಸಿಬಿ; ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಮುಂಬೈ

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

03-38.jpg

ಚಳಿಗಾಲಕ್ಕೆ ಯಾವುದು ಚೆಂದ? 

22

ಗಂಧದ ನಾಡಿನ ಚಂದದ ಸೀರೆ

ಘಾಗ್ರಾ, ಲೆಹೆಂಗಾ, ಚುಂದರ್‌

ಘಾಗ್ರಾ, ಲೆಹೆಂಗಾ, ಚುಂದರ್‌

k-20

ಸೆರಗು-ಲೋಕದ ಬೆರಗು

ಬಂಗಾಲಿ ಸೀರೆಗಳು

ಬಂಗಾಲಿ ಸೀರೆಗಳು

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

ಕಡಬ ಸಮುದಾಯ ಆಸ್ಪತ್ರೆಗೆ ಬೇಕು ಡಯಾಲಿಸಿಸ್‌ ಕೇಂದ್ರ

ಕಡಬ ಸಮುದಾಯ ಆಸ್ಪತ್ರೆಗೆ ಬೇಕು ಡಯಾಲಿಸಿಸ್‌ ಕೇಂದ್ರ

KUDತ್ರಾಸಿ ಜಂಕ್ಷನ್‌: ಹೆದ್ದಾರಿ ಕಾಮಗಾರಿಯಿಂದ ಹತ್ತಾರು ಸಮಸ್ಯೆ

ತ್ರಾಸಿ ಜಂಕ್ಷನ್‌: ಹೆದ್ದಾರಿ ಕಾಮಗಾರಿಯಿಂದ ಹತ್ತಾರು ಸಮಸ್ಯೆ

ಕಂದಾಯ ಇಲಾಖೆ 11- ಇ ನಕ್ಷೆ   5,953 ಅರ್ಜಿ ಬಾಕಿ

ಕಂದಾಯ ಇಲಾಖೆ 11- ಇ ನಕ್ಷೆ   5,953 ಅರ್ಜಿ ಬಾಕಿ

ಬಂಟ್ವಾಳ ತಾಲೂಕಿನಲ್ಲಿ ಗುರಿ ಮೀರಿ ಸಾಧನೆ; ಶೇ. 100.05 ಪ್ರಗತಿ

ಬಂಟ್ವಾಳ ತಾಲೂಕಿನಲ್ಲಿ ಗುರಿ ಮೀರಿ ಸಾಧನೆ; ಶೇ. 100.05 ಪ್ರಗತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.