ಬ್ಲ್ಯಾಕ್‌ ಫಂಗಸ್‌ ಆರೋಗ್ಯವಂತರಿಗೆ ತಗಲುವುದಿಲ್ಲ

ಇದು ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ ಎಂಬ ಗಾಬರಿ ಬೇಡ.

Team Udayavani, May 24, 2021, 6:30 AM IST

ಬ್ಲ್ಯಾಕ್‌ ಫ‌ಂಗಸ್‌ ಆರೋಗ್ಯವಂತರಿಗೆ ತಗಲುವುದಿಲ್ಲ

ಕಪ್ಪು ಶಿಲೀಂಧ್ರವು ನಮ್ಮ ಸುತ್ತಮುತ್ತಲಿನ ವಾತಾವರಣಗಳಲ್ಲಿ, ಕೆಲವೊಮ್ಮೆ ನಮ್ಮೆಲ್ಲರ ಮೈ ಮೇಲೆಯೂ ಇರುತ್ತದೆ. ಆದರೆ ಯಾರಿಗೆ ರೋಗ ನಿರೋಧಕ ಶಕ್ತಿ ಕುಗ್ಗಿಸುವ ಕಾಯಿಲೆ ಬಂದು ಬಹಳ ದಿನಗಳು ಆಸ್ಪತ್ರೆಯಲ್ಲಿ (ಸ್ಟಿರಾಯ್ಡ) ಚಿಕಿತ್ಸೆ ಪಡೆದಿರುತ್ತಾರೆಯೋ ಅವರಿಗೆ ಮಾತ್ರ ತಗಲುತ್ತದೆ. ಆರೋಗ್ಯ ವಂತರಿಗೆ ಶೇ 100ಕ್ಕೆ 100ರಷ್ಟು ತಗಲುವುದಿಲ್ಲ. ಹೀಗಾಗಿಯೇ ಕಪ್ಪು ಶಿಲೀಂಧ್ರವನ್ನು ಒಂದು ಅವಕಾಶವಾದಿ ಶಿಲೀಂಧ್ರ ಎಂದು ಕರೆಯಲಾಗುತ್ತದೆ.

ಕೊರೊನಾ ಪೂರ್ವದಲ್ಲಿ ಎಚ್‌ಐವಿಯಿಂದ ಬಳಲುತ್ತಿರುವವರು, ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾದವರು ಸೇರಿದಂತೆ ರೋಗ ನಿರೋಧಕ ಶಕ್ತಿ ಕುಗ್ಗಿಸುವ ಕಾಯಿಲೆಗೊಳಗಾದವರಲ್ಲಿ ಈ ಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಸಾಮಾನ್ಯ ಸಂದರ್ಭದಲ್ಲಿ ಒಂದು ವರ್ಷಕ್ಕೆ ಬೆಳೆಣಿಕೆಯಷ್ಟು ಪ್ರಕರಣಗಳು ನಮ್ಮ ಆಸ್ಪತೆಯಲ್ಲಿ ವರದಿಯಾಗುತ್ತಿದ್ದವು. ಕೊರೊನಾ ಕೂಡಾ ರೋಗನಿರೋಧಕ ಶಕ್ತಿ ಕುಗ್ಗಿಸುವ ಕಾಯಿಲೆ ಆಗಿದೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾದಂತೆ ಬ್ಲ್ಯಾಕ್‌ ಫ‌ಂಗಸ್‌ ಪ್ರಕರಣಗಳು ಹೆಚ್ಚಳವಾಗಿವೆ.

ಕೊರೊನಾ ಸೋಂಕಿನಿಂದ ತೀವ್ರ ಹಾನಿ ಯಾಗಿ ದೀರ್ಘ‌ಕಾಲದ ಐಸಿಯು ಚಿಕಿತ್ಸೆ ಪಡೆ ದವರು, ಚಿಕಿತ್ಸೆ ವೇಳೆ ಸ್ಟಿರಾಯ್ಡ ಪಡೆದವರು, ಅನಿಯಂತ್ರಿತ ಮಧುಮೇಹ ಉಳ್ಳವರಿಗೆ ಸಾಮಾನ್ಯ ಸೋಂಕಿತರಿಗಿಂತ ರೋಗನಿರೋಧಕ ಶಕ್ತಿ ತೀರಾ ಕಡಿಮೆ ಇರುತ್ತದೆ. ಅಂತಹವರ ದೇಹವನ್ನು ಬ್ಲ್ಯಾಕ್‌ ಫ‌ಂಗಸ್‌ ಸೇರಿರುತ್ತಿದೆ.

ಈ ಶಿಲೀಂಧ್ರ ಮೂಗಿನ ಮೂಲಕ ದೇಹ ಸೇರುತ್ತದೆ. ಅನಂತರ ತಲೆಯ ಭಾಗಕ್ಕೆ ಹೋಗಿ ಮೆದುಳನ್ನು ಸೇರಿ ಜೀವಕ್ಕೆ ಅಪಾಯವನ್ನು ತರುತ್ತದೆ. ಆರಂಭದಲ್ಲಿ ಮೂಗನ್ನು ಸೇರಿದಾಗ ಮೂಗಿನಲ್ಲಿ ಕಪ್ಪು ದ್ರವ, ರಕ್ತ ಬರುತ್ತದೆ. ಅನಂತರ ತಲೆಯ ಭಾಗಕ್ಕೆ ಹೋದರೆ ದವಡೆ ನೋವು, ಹಲ್ಲುಗಳು ಸಡಿಲವಾಗುತ್ತದೆ. ಕಣ್ಣಿಗೆ ಹೋದರೆ ಕಣ್ಣಿನ ಪಕ್ಕದಲ್ಲಿ ಕಪ್ಪು ಕಲೆ, ಕಣ್ಣಿಗೆ ಹಾನಿ ಯಾಗುತ್ತದೆ. ಕೊನೆಯದಾಗಿ ಮೆದುಳಿಗೆ ತಲು ಪಿದಾಗ ಸೋಂಕಿತ ಸಾವಿಗೀಡಾಗುತ್ತಾನೆ. ಹೀ ಗಾಗಿ, ಕೊರೊನಾ ಸೋಂಕಿತರು ಮತ್ತು ಗುಣ ಮುಖರಲ್ಲಿ ಶಿಲೀಂಧ್ರ ಲಕ್ಷಣ ಕಂಡು ಬಂದರೆ ಶೀಘ್ರದಲ್ಲಿಯೇ ಕಣ್ಣಿನ ಅಥವಾ ಕಿವಿ ಮೂಗು ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.

ಮುಂಜಾಗ್ರತೆ ಏನು?: ಕೊರೊನಾ ಸೋಂಕಿತರು ಮತ್ತು ಅವರಿಗೆ ಚಿಕಿತ್ಸೆ ನೀಡುವವರು ಮಧುಮೇಹವನ್ನು ನಿಯಂತ್ರಣದಲ್ಲಿಡ ಬೇಕು. ಗುಣಮುಖವಾದ ಬಳಿಕ ಅನಗತ್ಯ ಓಡಾಟ ಮಾಡಬಾರದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಅಗತ್ಯವಿದ್ದಲ್ಲಿ ಸೀಮಿತ ಸ್ಟಿರಾಯ್ಡ ಬಳಸಬೇಕು. ಮನೆ ಆರೈಕೆಯಲ್ಲಿರುವವರು ಸ್ಟಿರಾಯ್ಡ ಬಳಸಬಾರದು.

ಚಿಕಿತ್ಸೆ ಏನು?: ಬ್ಲ್ಯಾಕ್‌ ಫ‌ಂಗಸ್‌ ಸೋಂಕಿತರಿಗೆ ಆಂಪೊಟೆರಿಸಿನ್‌ ಬಿ ಎಂಬ ಔಷಧ ನೀಡಲಾಗುತ್ತದೆ. ಒಬ್ಬ ರೋಗಿಗೆ 40-60 ಸೀಸೆಗಳು ಬೇಕಾಗುತ್ತವೆ. ದೀರ್ಘ‌ಕಾಲದ ಚಿಕಿತ್ಸೆಯಾಗಿದ್ದು, ಲಕ್ಷಣಗಳು ಕಾಣಿಸಿಕೊಂಡ ತತ್‌ಕ್ಷಣ ಬಂದರೇ ಶೀಘ್ರ ಗುಣಮುಖರಾಗುತ್ತಾರೆ.

ಕೊರೊನಾ ಸೋಂಕಿನಂತೆ ಹರಡುವುದಿಲ್ಲ: ಇದು ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ ಎಂಬ ಗಾಬರಿ ಬೇಡ. ಫ‌ಂಗಸ್‌ ಸೋಂಕಿತ ವ್ಯಕ್ತಿ ಯಿಂದ ಆರೋಗ್ಯವಂತರಿಗೆ ಹರಡುವುದಿಲ್ಲ.

– ಡಾ| ಭುಜಂಗ ಶೆಟ್ಟಿ, ಖ್ಯಾತ ನೇತ್ರ ತಜ್ಞರು

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.