Menstruation: ಋತುಚಕ್ರದ ಅವಧಿಯಲ್ಲಿ ರಕ್ತನಷ್ಟ


Team Udayavani, Sep 24, 2023, 9:14 AM IST

4-menstruation

ಋತುಚಕ್ರದ ದಿನಗಳಲ್ಲಿ ಎಷ್ಟು ರಕ್ತ ನಷ್ಟವಾದರೆ ಸಹಜ?

ಋತುಮತಿಯರಾಗಿರುವ ಸ್ತ್ರೀಯರು ಪ್ರತಿ ತಿಂಗಳು ನಿಸರ್ಗ ಸಹಜವಾಗಿರುವ ಋತುಸ್ರಾವ ಅಥವಾ ಮುಟ್ಟನ್ನು ಅನುಭವಿಸುತ್ತಾರೆ. ಸಂಭಾವ್ಯ ಗರ್ಭಧಾರಣೆಗೆ ಸಿದ್ಧತೆಯಾಗಿ ಗರ್ಭಕೋಶದಲ್ಲಿ ರೂಪುಗೊಂಡಿರುವ ಭಿತ್ತಿಯು ಕಳಚಿಕೊಂಡು ದೇಹದಿಂದ ಹೊರಹೋಗುವುದನ್ನು ಇದು ಒಳಗೊಂಡಿದೆ. ಋತುಚಕ್ರದ ಬಗ್ಗೆ ಅನೇಕ ಪ್ರಶ್ನೆಗಳು ಮೂಡುವುದು ಸಹಜ. ಆದರೆ ಋತುಸ್ರಾವ ಅಥವಾ ಮುಟ್ಟಿನ ಅವಧಿಯಲ್ಲಿ ಎಷ್ಟು ರಕ್ತಸ್ರಾವ ಸಹಜ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಈ ಸಂದರ್ಭದಲ್ಲಿ ಬಹಳ ಮುಖ್ಯವಾದುದು.

ಮುಟ್ಟಿನ ಸಂದರ್ಭದಲ್ಲಿ ಅಧಿಕ ರಕ್ತಸ್ರಾವವನ್ನು ಗುರುತಿಸುವುದು

ಮುಟ್ಟಿನ ರಕ್ತಸ್ರಾವದಲ್ಲಿ ಅಲ್ಪಸ್ವಲ್ಪ ವ್ಯತ್ಯಯ ಸಹಜವಾದರೂ ಅಧಿಕ ರಕ್ತಸ್ರಾವವನ್ನು ಸೂಚಿಸುವ ಕೆಲವು ಲಕ್ಷಣಗಳನ್ನು ತಿಳಿದುಕೊಳ್ಳುವುದು ಅಗತ್ಯ. ಈ ಸ್ಥಿತಿಯನ್ನು ಮೆನೊರೇಜಿಯಾ ಎಂಬುದಾಗಿ ಕರೆಯುತ್ತಾರೆ. ಇದರ ಲಕ್ಷಣಗಳು ಹೀಗಿವೆ:

„ ಪ್ಯಾಡ್‌ ಅಥವಾ ಟ್ಯಾಂಪೂನ್‌ಗಳಂತಹ ಮುಟ್ಟಿನ ವಸ್ತುಗಳನ್ನು ಪದೇಪದೆ ಪ್ರತಿ ತಾಸಿಗೊಮ್ಮೆ ಅಥವಾ ಇನ್ನೂ ಬೇಗನೆ ಬದಲಾಯಿಸಬೇಕಾಗಿ ಬರುವುದು.

„ ದೊಡ್ಡ ಗಾತ್ರದ ಹೆಪ್ಪುಗಟ್ಟಿದ ರಕ್ತದ ತುಣುಕುಗಳು ಮುಟ್ಟಿನ ಸ್ರಾವದ ಜತೆಗಿರುವುದು.

„ ಏಳು ದಿನಗಳಿಗಿಂತಲೂ ಹೆಚ್ಚು ದಿನಗಳ ಕಾಲ ರಕ್ತಸ್ರಾವ ಕಂಡುಬರುವುದು.

„ ಸ್ರಾವವನ್ನು ನಿಭಾಯಿಸಲು ಎರಡೆರಡು ವಸ್ತು (ಪ್ಯಾಡ್‌ನ‌ ಜತೆಗೆ ಟ್ಯಾಂಪೂನ್‌) ಉಪಯೋಗಿಸಬೇಕಾಗಿ ಬರುವುದು.

„ ದಣಿವು, ನಿಶ್ಶಕ್ತಿ ಅಥವಾ ರಕ್ತಹೀನತೆಯ ಇತರ ಲಕ್ಷಣಗಳನ್ನು ಅನುಭವಿಸುವುದು.

ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೆ ಆರೋಗ್ಯ ಸೇವಾ ವೃತ್ತಿಪರರನ್ನು ಕಂಡು ಸಮಾಲೋಚಿಸುವುದು ಸೂಕ್ತ. ನಿಮ್ಮ ಮುಟ್ಟಿನ ರಕ್ತಸ್ರಾವವು ಸಹಜವಾಗಿದೆಯೇ ಅಥವಾ ಚಿಕಿತ್ಸೆ ನೀಡಬೇಕಾದ ಯಾವುದಾದರೂ ಅಂತರ್ಗತ ಸಮಸ್ಯೆಗಳಿವೆಯೇ ಎಂಬುದನ್ನು ನಿರ್ಧರಿಸಲು ಅವರು ಸಹಾಯ ಮಾಡುತ್ತಾರೆ.

ಅಧಿಕ ಮುಟ್ಟಿನ ರಕ್ತಸ್ರಾವಕ್ಕೆ ಕಾರಣಗಳು

ಮುಟ್ಟಿನ ಸಂದರ್ಭದಲ್ಲಿ ಅಧಿಕ ರಕ್ತಸ್ರಾವಕ್ಕೆ ಅನೇಕ ಕಾರಣಗಳು ಇರಬಹುದು. ಕೆಲವು ಸಾಮಾನ್ಯ ಕಾರಣಗಳು ಎಂದರೆ:

„ ಹಾರ್ಮೋನ್‌ ಅಸಮತೋಲನ: ಹಾರ್ಮೋನ್‌ಗಳಲ್ಲಿ ಅದರಲ್ಲೂ ವಿಶೇಷವಾಗಿ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟಿರೋನ್‌ಗಳಲ್ಲಿ ಏರಿಳಿತಗಳಿಂದಾಗಿ ಮುಟ್ಟಿನ ಸಂದರ್ಭದಲ್ಲಿ ಅಧಿಕ ರಕ್ತಸ್ರಾವವಾಗಬಹುದು.

„ ಗರ್ಭಕೋಶದಲ್ಲಿ ಗಡ್ಡೆಗಳು: ಗರ್ಭಕೋಶದಲ್ಲಿ ಉಂಟಾಗುವ ಈ ಕ್ಯಾನ್ಸರೇತರ ಗಡ್ಡೆಗಳಿಂದಾಗಿ ಅಧಿಕ ರಕ್ತಸ್ರಾವ ಮತ್ತು ನೋವಿಗೆ ಕಾರಣವಾಗಬಹುದು.

„ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ (ಪಿಸಿಒಎಸ್‌): ಈ ಹಾರ್ಮೋನ್‌ ಸಂಬಂಧಿ ಸಮಸ್ಯೆಯಿಂದಾಗಿ ಅನಿಯಮಿತ ಮುಟ್ಟು ಮತ್ತು ಅಧಿಕ ರಕ್ತಸ್ರಾವ ಕಂಡುಬರಬಹುದು.

„ ಅಡೆನೊಮಯೋಸಿಸ್‌: ಗರ್ಭಕೋಶದ ಭಿತ್ತಿಗೆ ಅಂಟಿಕೊಂಡು ಬೆಳೆಯುವ ಅಂಗಾಂಶಗಳು ಅದರ ಸ್ನಾಯುಭಿತ್ತಿಗೂ ವ್ಯಾಪಿಸಿದಾಗ ಈ ಸ್ಥಿತಿಯುಂಟಾಗುತ್ತದೆ ಮತ್ತು ಇದರಿಂದಾಗಿ ಅಧಿಕ ಮುಟ್ಟಿನ ರಕ್ತಸ್ರಾವ ಮತ್ತು ಮುಟ್ಟಿನ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

„ ಕೆಲವು ನಿರ್ದಿಷ್ಟ ಔಷಧಗಳು: ರಕ್ತ ತೆಳು ಮಾಡುವ ಅಥವಾ ಹಾರ್ಮೋನ್‌ಗಳ ಪ್ರಮಾಣದ ಮೇಲೆ ಪರಿಣಾಮ ಬೀರುವ ಔಷಧಗಳಿಂದ ಅಧಿಕ ಮುಟ್ಟಿನ ರಕ್ತಸ್ರಾವ ತಲೆದೋರಬಹುದು.

ರಕ್ತಸ್ರಾವದ ಸಹಜ ಪ್ರಮಾಣ

ಮಹಿಳೆಯೊಬ್ಬರು ಒಂದು ಸಾಧಾರಣ ಮುಟ್ಟಿನ ದಿನಗಳಲ್ಲಿ 30ರಿಂದ 40 ಮಿಲಿಲೀಟರ್‌ಗಳಷ್ಟು ರಕ್ತವನ್ನು ಕಳೆದುಕೊಳ್ಳುತ್ತಾರೆ. ಇದು ಸ್ಥೂಲವಾಗಿ 2ರಿಂದ 3 ಚಹಾ ಚಮಚದಷ್ಟು ಪ್ರಮಾಣಕ್ಕೆ ಸಮ. ಇದು ಒಂದು ಅಂದಾಜು ಲೆಕ್ಕಾಚಾರ; ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ. ಕೆಲವು ಮಹಿಳೆಯರಿಗೆ ಸ್ವಲ್ಪ ಲಘು ರಕ್ತಸ್ರಾವ ಕಂಡುಬರಬಹುದಾದರೆ ಇನ್ನು ಕೆಲವರಿಗೆ ಕೊಂಚ ಅಧಿಕ ರಕ್ತಸ್ರಾವ ಇರಬಹುದು.

ಮುಟ್ಟಿನ ಸ್ರಾವವನ್ನು ನಿಭಾಯಿಸುವುದು

ಬಹುತೇಕ ಮಹಿಳೆಯರಿಗೆ ಮುಟ್ಟಿನ ಸ್ರಾವವನ್ನು ನಿಭಾಯಿಸಲು ಶೌಚ ಉತ್ಪನ್ನಗಳಾದ ಪ್ಯಾಡ್‌ಗಳು, ಟ್ಯಾಂಪೂನ್‌ಗಳು, ಮುಟ್ಟಿನ ಕಪ್‌ಗ್ಳು ಅಥವಾ ಮುಟ್ಟಿನ ಒಳಉಡುಪು ಸಾಕಾಗುತ್ತದೆ. ವೈಯಕ್ತಿಕ ಹಿತಾನುಭವ ಮತ್ತು ಆದ್ಯತೆಯನ್ನು ಆಧರಿಸಿ ಇವುಗಳಲ್ಲಿ ಬೇಕಾದುದನ್ನು ಆಯ್ದುಕೊಳ್ಳಬಹುದಾಗಿದೆ. ಉತ್ತಮ ನೈರ್ಮಲ್ಯ ಕಾಯ್ದುಕೊಳ್ಳುವ ಮೂಲಕ ಸೋಂಕುಗಳನ್ನು ದೂರವಿರಿಸಲು ಇವುಗಳನ್ನು ಧರಿಸಿ ನಿಯಮಿತ ಅವಧಿಯಲ್ಲಿ ಬದಲಾಯಿಸಿಕೊಳ್ಳುವುದು ಮುಖ್ಯ.

ನಿಮ್ಮ ಮುಟ್ಟಿನ ಸ್ರಾವವು ಗಮನಾರ್ಹ ತೊಂದರೆಯನ್ನು ಉಂಟುಮಾಡುತ್ತಿದ್ದು, ನಿಮ್ಮ ದೈನಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದಲ್ಲಿ, ಚಿಕಿತ್ಸೆಯ ಆಯ್ಕೆಗಳು ಲಭ್ಯವಿವೆ. ಇವುಗಳಲ್ಲಿ ಮುಟ್ಟನ್ನು ನಿಯಮಿತಗೊಳಿಸಿ ಸ್ರಾವವನ್ನು ಹತೋಟಿಗೆ ತರುವ ಹಾರ್ಮೋನಲ್‌ ಗರ್ಭನಿರೋಧಕ ವಿಧಾನಗಳಾದ ಗುಳಿಗೆಗಳು, ಪ್ಯಾಚ್‌ಗಳು ಅಥವಾ ಐಯುಡಿಗಳು ಸೇರಿವೆ. ಕೆಲವು ಪ್ರಕರಣಗಳಲ್ಲಿ; ಅದರಲ್ಲೂ ಮುಖ್ಯವಾಗಿ ಅಂತರ್ಗತ ಆರೋಗ್ಯ ಸಮಸ್ಯೆ ಅಧಿಕ ಸ್ರಾವಕ್ಕೆ ಕಾರಣವಾಗುತ್ತಿದ್ದರೆ ಆಗ ನಿಮ್ಮ ವೈದ್ಯರು ಇತರ ಚಿಕಿತ್ಸೆಗಳು ಅಥವಾ ಕ್ರಮಗಳನ್ನು ಶಿಫಾರಸು ಮಾಡಬಹುದಾಗಿದೆ.

ಋತುಸ್ರಾವ ಆಗುತ್ತಿರುವಾಗ ಗಮನದಲ್ಲಿ ಇರಿಸಿಕೊಳ್ಳಬೇಕಾದ ಮುಖ್ಯಾಂಶಗಳು ಯಾವುವು?

„ ಪ್ರತೀ 4 ತಾಸುಗಳಿಗೆ ಒಮ್ಮೆ ಸ್ಯಾನಿಟರಿ ಪ್ಯಾಡ್‌ ಬದಲಾಯಿಸಿಕೊಳ್ಳಬೇಕು.

„ ಚೆನ್ನಾಗಿ ಮೈತೊಳೆದುಕೊಳ್ಳಬೇಕು.

„ ಯೋನಿಯ ಒಳಗೆ ನೀರಿನ ಪಿಚಕಾರಿ ಬಳಸಿ ತೊಳೆದುಕೊಳ್ಳುವುದು, ಸಾಬೂನು ಉಪಯೋಗಿಸುವುದು ಮಾಡಬಾರದು.

„ ಸ್ಯಾನಿಟರಿ ಪ್ಯಾಡ್‌ಗಳನ್ನು ಸರಿಯಾಗಿ ವಿಸರ್ಜಿಸಬೇಕು.

ದಿನಕ್ಕೆ 30 ನಿಮಿಷಗಳ ಕಾಲ ವಾರಕ್ಕೆ ಮೂರು ದಿನ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ನಾವು ದೈಹಿಕವಾಗಿ ಚಟುವಟಿಕೆಯಿಂದ ಇದ್ದಾಗ ನಮ್ಮ ಒಟ್ಟಾರೆ ದೈಹಿಕ ಶಕ್ತಿ ಚೆನ್ನಾಗಿರುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಅಧಿಕ ಸ್ವಯಂಸ್ಪೂರ್ಥಿ ಆತಂಕ ಮತ್ತು ಹಾಗೂ ಖನ್ನತೆಯನ್ನು ಕಡಿಮೆ ಮಾಡುತ್ತದೆ.

ಋತುಸ್ರಾವದ ಸಂದರ್ಭದಲ್ಲಿ ಸಹಜ ರಕ್ತಸ್ರಾವ ಎಷ್ಟು ಎಂಬುದನ್ನು ತಿಳಿದುಕೊಳ್ಳುವುದು ಮಹಿಳೆಯ ಆರೋಗ್ಯದ ದೃಷ್ಟಿಯಿಂದ ತುಂಬಾ ಮುಖ್ಯ. ಮಹಿಳೆಯಿಂದ ಮಹಿಳೆಗೆ ಇದು ವ್ಯತ್ಯಯಗೊಳ್ಳಬಹುದಾದರೂ ಮುಟ್ಟಿನ ಸಂದರ್ಭದಲ್ಲಿ 30ರಿಂದ 40 ಮಿ.ಲೀ. ರಕ್ತಸ್ರಾವ ಸಹಜ ಪ್ರಮಾಣದ್ದು. ಅಧಿಕ ರಕ್ತಸ್ರಾವದ ಲಕ್ಷಣಗಳು ನಿಮಗಿದ್ದರೆ ಇನ್ನಷ್ಟು ತಪಾಸಣೆಗಳು ಅಥವಾ ಚಿಕಿತ್ಸೆ ಅಗತ್ಯವೇ ಎಂಬುದನ್ನು ನಿರ್ಧರಿಸಲು ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಸಮಾಲೋಚನೆ ನಡೆಸುವುದು ಉತ್ತಮ. ಒಟ್ಟಾರೆ ಆರೋಗ್ಯ ಮತ್ತು ಕ್ಷೇಮವನ್ನು ಕಾಪಾಡಿಕೊಳ್ಳುವುದಕ್ಕೆ ಮುಟ್ಟಿನ ಆರೋಗ್ಯದ ಬಗ್ಗೆ ಮುಕ್ತ ಮನಸ್ಸಿನಿಂದ ಇರುವುದು ಅಗತ್ಯ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಿ.

-ಡಾ| ಸಮೀನಾ ಎಚ್‌.

ಕನ್ಸಲ್ಟಂಟ್‌ ಒಬ್‌ಸ್ಟ್ರೆಟಿಕ್ಸ್‌ ಮತ್ತು ಗೈನಕಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬ್‌ಸ್ಟ್ರೆಟಿಕ್ಸ್‌ ಮತ್ತು ಗೈನಕಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.