ಜಪಾನೀಸ್‌ ಎನ್‌ಸೆಫ‌ಲೈಟಿಸ್‌ (ಮೆದುಳು ಜ್ವರ) ಲಸಿಕೆ ಅಭಿಯಾನ


Team Udayavani, Dec 4, 2022, 6:05 AM IST

ಜಪಾನೀಸ್‌ ಎನ್‌ಸೆಫ‌ಲೈಟಿಸ್‌ (ಮೆದುಳು ಜ್ವರ) ಲಸಿಕೆ ಅಭಿಯಾನ

ಭಾರತದಲ್ಲಿ ಕಂಡುಬರುವ ಮೆದುಳು ಜ್ವರ ಹೆಚ್ಚಾಗಿ ಎನ್‌ಸೆಫ‌ಲೈಟಿಸ್‌(ಜೆಇ)ನಿಂದ ಉಂಟಾಗುತ್ತದೆ. ಇದು ಸೊಳ್ಳೆಗಳ ಮೂಲಕ ಹರಡುವ ಒಂದು ಬಗೆಯ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಪರಿಸರದಲ್ಲಿರುವ ಸೋಂಕು ಹೊಂದಿರುವ ಹಂದಿಗಳು, ಹಕ್ಕಿಗಳು, ಪ್ರಮುಖವಾಗಿ ವಲಸೆ ಹಕ್ಕಿಗಳು ರೋಗ ಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರೋಗವು ವೈರಾಣುಗಳನ್ನು ಹೊಂದಿದ ಪ್ರಾಣಿಗಳು; ಮುಖ್ಯವಾಗಿ ಹಂದಿಗಳು, ಪಕ್ಷಿಗಳು ಮುಖ್ಯವಾಗಿ ವಲಸೆ ಪಕ್ಷಿಗಳು ಈ ರೋಗದ ಸೋಂಕಿನ ಮೂಲವಾಗಿರುತ್ತವೆ. ಇದು ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಕಂಡುಬರುವ ರೋಗವಾದರೂ ಎಲ್ಲ ವಯಸ್ಸಿನವರೂ ರೋಗಕ್ಕೆ ಬಲಿಯಾಗುತ್ತಿರುವ ದಾಖಲೆಗಳಿವೆ. ಆದರೆ ಶೇ. 85ರಷ್ಟು ಕಾಯಿಲೆ ಪ್ರಕರಣಗಳು ಕೇವಲ ಮಕ್ಕಳಲ್ಲಿ ಕಂಡುಬರುತ್ತವೆ. ವೈರಸ್‌ ಸೋಂಕು ತಗಲಿದ ಸೊಳ್ಳೆಗಳು ಆರೋಗ್ಯವಂತ ಮನುಷ್ಯನನ್ನು ಕಚ್ಚಿದಾಗ ವೈರಸ್‌ಗಳು ದೇಹ ಪ್ರವೇಶ ಮಾಡುತ್ತವೆ. ಅನಂತರ ಈ ವೈರಾಣುಗಳು ನರಮಂಡಲವನ್ನು ಪ್ರವೇಶಿಸಿ ನರಕೋಶಗಳಿಗೆ ಹಾನಿ ಉಂಟುಮಾಡುತ್ತವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದಲ್ಲಿ ರೋಗಿಯು ಸಾವನ್ನಪ್ಪಬಹುದು. ಈ ರೋಗದ ಸೋಂಕಿಗೆ ಒಳಗಾದರೆ ಸಾಮಾನ್ಯವಾಗಿ ಶೇ. 20-40 ಜನ ಮರಣ ಹೊಂದಬಹುದು. ಈ ಮರಣಗಳು ಹತ್ತು ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬದುಕುಳಿದವರಲ್ಲಿಯೂ ಸೋಂಕಿನಿಂದ ನರಮಂಡಲಕ್ಕೆ ಹಾನಿಯಾಗುವುದರಿಂದ ಶೇ. 20-30ರಷ್ಟು ಜನರಿಗೆ ಮಾನಸಿಕ ಅಥವಾ ದೈಹಿಕ ನ್ಯೂನತೆ ಉಂಟಾಗಬಹುದು. ಮನುಷ್ಯರಿಂದ ಮನುಷ್ಯರಿಗೆ ಈ ಕಾಯಿಲೆ ನೇರವಾಗಿ ಹರಡುವುದಿಲ್ಲ.

ರೋಗಲಕ್ಷಣಗಳು
ದೇಶಾದ್ಯಂತ ಪ್ರತೀ ವರ್ಷ ಸರಿಸುಮಾರು 50 ಸಾವಿರದಷ್ಟು ಜನರಿಗೆ ಈ ಕಾಯಿಲೆ ಬರುತ್ತಿದ್ದು, ಸುಮಾರು 10 ಸಾವಿರ ಜನರು ಮರಣ ಹೊಂದುತ್ತಿರುವ ವರದಿಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸೋಂಕಿಗೆ ತುತ್ತಾದ ರೋಗಿಗಳಿಗೆ ಯಾವುದೇ ಲಕ್ಷಣಗಳಿರುವುದಿಲ್ಲ. ಸೋಂಕು ತಗುಲಿದ ಕೆಲವೇ ವ್ಯಕ್ತಿಗಳಿಗೆ (ಸಾಮಾನ್ಯವಾಗಿ 250 ಜನರಲ್ಲಿ ಒಬ್ಬರಿಗೆ) ತೀವ್ರತರವಾದ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ 5-15 ದಿನಗಳ ಒಳಗೆ ಉಲ್ಬಣಗೊಳ್ಳುತ್ತವೆ. ತೀವ್ರತರಹದ ತಲೆನೋವು, ಮೈ-ಕೈ ನೋವು, ವಾಂತಿ, ನಡುಕ ಹೊಂದಿದ ವಿಪರೀತ ಜ್ವರ, ಮೆದುಳಿನ ಉರಿಯೂತ, ಕುತ್ತಿಗೆ ನೋವು, ಅಪಸ್ಮಾರ, ಅನಂತರ ನರಮಂಡಲದ ಇತರ ದೋಷಗಳು ಕಾಣಿಸಿಕೊಳ್ಳ ಬಹುದು. ಪ್ರಜ್ಞಾಹೀನತೆ, ಲಕ್ವಾ ಹೊಡೆಯುವುದು ಅಂತಿಮ ಹಂತದಲ್ಲಿ ಕಂಡುಬರುವ ಲಕ್ಷಣಗಳು. ಲಕ್ಷಣಗಳು ಕಾಣಿಸಿಕೊಂಡ ಅನಂತರ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾಧಾರಣವಾಗಿ 9-10 ದಿನಗಳಲ್ಲಿ ಮರಣ ಸಂಭವಿಸಬಹುದು. ಇದು ವೈರಸ್‌ನಿಂದ ಉಂಟಾಗುವ ರೋಗವಾದ್ದರಿಂದ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ/ಜೀವ ನಿರೋಧಕಗಳು ಇಲ್ಲ. ರೋಗಲಕ್ಷಣಕ್ಕೆ ಅನುಗುಣವಾಗಿ ರೋಗಿಗೆ ಚಿಕಿತ್ಸೆ ನೀಡುವುದು ಅಗತ್ಯವಾಗಿರುತ್ತದೆ.

ಪರಿಸರದಲ್ಲಿ ಸೊಳ್ಳೆಗಳ ನಿಯಂತ್ರಣ, ಸೊಳ್ಳೆಗಳು ಕಚ್ಚದಂತೆ ಜಾಗ್ರತೆ ವಹಿಸುವುದು, ರೋಗದ ವಿರುದ್ಧ ಲಸಿಕೆ ಪಡೆಯುವುದು ರೋಗ ತಡೆಯುವ ಮುಖ್ಯ ವಿಧಾನಗಳು. ಈ ಸೋಂಕಿನ ಅಪಾಯದಲ್ಲಿರುವ ಪ್ರದೇಶದ ಜನರಿಗೆ ಜಪಾನೀಸ್‌ ಎನ್‌ಸೆಫ‌ಲೈಟಿಸ್‌ ಸೋಂಕಿನ ವಿರುದ್ಧ ಲಸಿಕೆ ನೀಡುವ ಮೂಲಕ ರೋಗವನ್ನು ತಡೆಯಬಹುದು. ಈ ಲಸಿಕೆಗಳನ್ನು ಭಾರತದಲ್ಲಿ 2006ರಿಂದ ಜಪಾನೀಸ್‌ ಎನ್‌ಸೆಫ‌ಲೈಟಿಸ್‌ ಸೋಂಕು ಹೆಚ್ಚು ಕಂಡುಬರುತ್ತಿರುವ ಆಯ್ದ ಜಿಲ್ಲೆಗಳಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೂ ಈ ಲಸಿಕೆಯನ್ನು ಆಯ್ದ ಜಿಲ್ಲೆಗಳಲ್ಲಿ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಈಗಾಗಲೇ ನೀಡಲಾಗುತ್ತಿದೆ. ಈಗ ಉಡುಪಿ, ದಕ್ಷಿಣಕನ್ನಡ, ಹಾಸನ, ತುಮಕೂರು, ರಾಮನಗರ, ಹಾವೇರಿ, ಗುಲ್ಬರ್ಗ, ಗದಗ, ಬಾಗಲಕೋಟೆ, ಯಾದಗಿರಿ ಸಹಿತ ಒಟ್ಟು ಹತ್ತು ಜಿಲ್ಲೆಗಳಲ್ಲಿ ಅಭಿಯಾನ ರೂಪದಲ್ಲಿ ಲಸಿಕಾ ಕಾರ್ಯಕ್ರಮ ಆರಂಭಿಸಿ ಅನಂತರ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಎಲ್ಲ ಮಕ್ಕಳಿಗೂ ಎರಡು ಡೋಸ್‌ ನೀಡುವ ಉದ್ದೇಶ ಹೊಂದಲಾಗಿದೆ.

ಜಪಾನೀಸ್‌ ಎನ್‌ಸೆಫ‌ಲೈಟಿಸ್‌ ಲಸಿಕಾ ಅಭಿಯಾನ
ಡಿಸೆಂಬರ್‌ 5ನೇ ತಾರೀಕಿನಿಂದ 1-15 ವರ್ಷದ ಎಲ್ಲ ಮಕ್ಕಳಿಗೆ ಜಪಾನೀಸ್‌ ಎನ್‌ಸೆಫ‌ಲೈಟಿಸ್‌ ವಿರುದ್ಧ ಲಸಿಕೆ ನೀಡುವ ಅಭಿಯಾನವನ್ನು ಕರ್ನಾಟಕದ ಆಯ್ದ ಹತ್ತು ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಮೂರು ವಾರಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ಮೊದಲ ವಾರದಲ್ಲಿ ಶಾಲೆಗೆ ಹೋಗುವ ಹದಿನೈದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮುಂದಿನ ಎರಡು ವಾರಗಳಲ್ಲಿ ಕಿರಿಯ ಮಕ್ಕಳು, ಶಾಲೆಗೆ ಹೋಗದವರಿಗೆ ಅಥವಾ ಶಾಲಾ ಕಾರ್ಯಕ್ರಮದ ಸಮಯದಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದೇ ಇರುವವರಿಗೆ ಲಸಿಕೆ ನೀಡಲಾಗುವುದು. ಈ ಅಭಿಯಾನದ ಅನಂತರ ಎಲ್ಲ ಮಕ್ಕಳಿಗೆ 9-12 ತಿಂಗಳು ಮತ್ತು 16-24 ತಿಂಗಳಿಗೆ ಸಾಮಾನ್ಯ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಲಸಿಕೆಯನ್ನು ನೀಡಲಾಗುವುದು. ಜಪಾನೀಸ್‌ ಎನ್‌ಸೆಫ‌ಲೈಟಿಸ್‌ ವಿರುದ್ಧ ಎರಡು ತರಹದ ಲಸಿಕೆಗಳು ಲಭ್ಯವಿದ್ದು, ಇವೆರಡನ್ನೂ ನಿಷ್ಕ್ರಿಯಗೊಂಡ ಸಂಬಂಧಪಟ್ಟ ವೈರಸ್‌ಗಳನ್ನು ಬಳಸಿ ತಯಾರಿಸಲಾಗಿದೆ.

ಅಭಿಯಾನದ ಬಗ್ಗೆ ಮಾಹಿತಿ ನೀಡಲು ಪಾಲಕರು-ಶಿಕ್ಷಕರ ಸಭೆಗಳು, ಸಮುದಾಯ ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತಿದೆ. ಈ ಚಟುವಟಿಕೆಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯ ತರಬೇತಿ ಪಡೆದ ಆರೋಗ್ಯ ಸಿಬಂದಿ ಮಾಡುತ್ತಾರೆ. ಅಭಿಯಾನದ ದಿನಗಳಲ್ಲಿ ನಿಗದಿತ ಸಮಯದಲ್ಲಿ ಶಾಲೆಗಳು, ಅಂಗನವಾಡಿಗಳು, ಸಮುದಾಯ ಭವನಗಳು, ಸರಕಾರಿ ಆರೋಗ್ಯ ಕೇಂದ್ರಗಳು, ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಇತರ ಪೂರ್ವ ನಿರ್ಧರಿತ ಪ್ರದೇಶಗಳಲ್ಲಿ ತರಬೇತಿ ಪಡೆದ ಆರೋಗ್ಯ ಸಿಬಂದಿ ಲಸಿಕೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯರು ಲಸಿಕೆ ನೀಡಬೇಕಾದ ಮಕ್ಕಳನ್ನು ಗುರುತಿಸಿ ಹತ್ತಿರದ ಲಸಿಕೆ ನೀಡುವ ಸ್ಥಳಕ್ಕೆ ಕಳುಹಿಸಲು ನೆರವು ನೀಡಲಿದ್ದಾರೆ. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್‌ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ ನೆರವು ಈ ಅಭಿಯಾನಕ್ಕೆ ಅಗತ್ಯವಿದೆ.

ಅಭಿಯಾನದ ಸಮಯದಲ್ಲಿ 1-15 ವರ್ಷದ ಎಲ್ಲ ಮಕ್ಕಳಿಗೆ ಅಥವಾ ಹತ್ತನೇ ತರಗತಿಯವರೆಗೆ ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ದೇಶೀಯವಾಗಿ ತಯಾರಾದ ಜೆನ್‌ ವ್ಯಾಕ್‌ ಎಂಬ ಲಸಿಕೆ 0.5 ಎಂ.ಎಲ್‌. ಒಂದು ಡೋಸ್‌ ಚುಚ್ಚುಮದ್ದು ನೀಡಲಾಗುವುದು ಹಾಗೂ ಲಸಿಕೆ ಪಡೆದ ಪ್ರತೀ ಮಕ್ಕಳ ದಾಖಲೆಯನ್ನು ಇರಿಸಲಾಗುವುದು. ಚುಚ್ಚುಮದ್ದು ಪಡೆದ ಅನಂತರ ಮಕ್ಕಳು ಪಡೆಯುವ ಇತರ ಯಾವುದೇ ಲಸಿಕೆಗಳಲ್ಲಿ ಕಂಡು ಬರುವಂತಹ ಸಾಮಾನ್ಯ ಅಡ್ಡಪರಿಣಾಮಗಳಾದ ಚುಚ್ಚುಮದ್ದು ಪಡೆದ ಜಾಗದಲ್ಲಿ ಸ್ವಲ್ಪ ಸಮಯ ನೋವು, ಮೈ ಕೈ ನೋವು, ತಲೆ ನೋವು, ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಳ್ಳಬಹುದು. ಈಗಾಗಲೇ ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಲಸಿಕಾ ಸಮಯದಲ್ಲಿ ಈ ಲಸಿಕೆಯನ್ನು ನೀಡಲಾಗುವುದಿಲ್ಲ. ಅವರಿಗೆ ಜ್ವರ ಸಂಪೂರ್ಣವಾಗಿ ಕಡಿಮೆಯಾದ ಅನಂತರ ಈ ಲಸಿಕೆಯನ್ನು ಪಡೆಯಲು ಪಡೆಯಲು ಸಲಹೆ ನೀಡಲಾಗುವುದು. ಯಾವುದೇ ಮಕ್ಕಳಿಗೆ ಈ ಹಿಂದೆ ಯಾವುದೇ ಲಸಿಕೆ ನೀಡಿದ ಸಮಯದಲ್ಲಿ ಅಲರ್ಜಿ/ಹೆಚ್ಚಾದ ಅಡ್ಡ ಪರಿಣಾಮ ಕಂಡುಬಂದಿದ್ದಲ್ಲಿ ಈ ಲಸಿಕೆಯನ್ನು ನೀಡಲಾಗುವುದಿಲ್ಲ. ಈ ಲಸಿಕಾ ಅಭಿಯಾನದ ಉದ್ದೇಶ ಜಪಾನೀಸ್‌ ಎನ್‌ಸೆಫ‌ಲೈಟಿಸ್‌ಗೆ ಸಂಬಂಧಿಸಿದ ರೋಗ ಮತ್ತು ಮರಣಗಳನ್ನು ತಡೆಯುವುದು ಹಾಗೂ ಸೋಂಕಿನಿಂದ ಉಂಟಾಗಬಹುದಾದ ಯಾವುದೇ ತರಹದ ದೈಹಿಕ ನ್ಯೂನ್ಯತೆಗಳನ್ನು ತಡೆಗಟ್ಟುವುದು ಆಗಿದೆ.

– ಡಾ| ಅಜಯ್‌ ಮಲ್ಯ,  ಸೀನಿಯರ್‌ ರೆಸಿಡೆಂಟ್‌
– ಡಾ| ಸ್ನೇಹಾ ಡಿ. ಮಲ್ಯ. ಅಸೋಸಿಯೇಟ್‌ ಪ್ರೊಫೆಸರ್‌
– ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ, ಪ್ರೊಫೆಸರ್‌ ಹಾಗೂ ಮುಖ್ಯಸ್ಥರು
ಕಮ್ಯೂನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.