Colon Cancer; ಸಂಕೇತಗಳು ಮತ್ತು ಲಕ್ಷಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆ


Team Udayavani, May 21, 2024, 4:57 PM IST

colon cancer

ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕೂಡ ಕರೆಯಲ್ಪಡುವ ಕೊಲೊನ್ ಕ್ಯಾನ್ಸರ್ ಸಾಮಾನ್ಯವಾಗಿ ಕೊಲೊನ್ ಅಥವಾ ಗುದನಾಳದ ಒಳ ಗೋಡೆಗಳ ಮೇಲೆ ಪೊಲಿಪ್ಸ್ ಎಂಬ ಸಣ್ಣ, ಕ್ಯಾನ್ಸರ್ ರಹಿತ ಬೆಳವಣಿಗೆಯಾಗಿ ಪ್ರಾರಂಭವಾಗುತ್ತದೆ.  ಈ ಪೊಲಿಪ್ಸ್ ನಂತರ ಕ್ಯಾನ್ಸರ್ ಆಗಿ ಬೆಳೆಯಬಹುದು. ಇತ್ತೀಚಿನ ದಿನಗಳಲ್ಲಿ, ಜೀವನಶೈಲಿಯಲ್ಲಿನ ಬದಲಾವಣೆಗಳು, ಆಹಾರ ಪದ್ಧತಿ ಮತ್ತು ವಯಸ್ಸಾದ ಜನಸಂಖ್ಯೆಯ ಹೆಚ್ಚುತ್ತಿರುವ ಅನುಪಾತದಂತಹ ಅಂಶಗಳಿಂದಾಗಿ ಕರುಳಿನ ಕ್ಯಾನ್ಸರ್ ಭಾರತದಲ್ಲಿ ಪ್ರಮುಖ ಕ್ಯಾನ್ಸರ್ ವಿಧಗಳಲ್ಲಿ ಒಂದಾಗಿದೆ. ಕೊಲೊನ್ ಕ್ಯಾನ್ಸರ್ ನ ಸಂಕೇತಗಳು ಮತ್ತು ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಮತ್ತು ತ್ವರಿತವಾಗಿ ವೈದ್ಯರನ್ನು ಭೇಟಿ ಮಾಡುವುದು ಮುಖ್ಯವಾಗಿದೆ.

ಅದರ ಬೆಳವಣಿಗೆಯನ್ನು ಮೊದಲೇ ಕಂಡುಹಿಡಿದರೆ ಚಿಕಿತ್ಸೆಗಳನ್ನು ಉತ್ತಮವಾಗಿ ನೀಡಬಹುದು ಮತ್ತು ಫಲಿತಾಂಶಗಳನ್ನು ಸುಧಾರಿಸಲು ಸಹಾಯ ಮಾಡಬಹುದು. ಕರುಳಿನ ಕ್ಯಾನ್ಸರ್ ನ ಸಾಮಾನ್ಯ ಸಂಕೇತಗಳು ಮತ್ತು ರೋಗಲಕ್ಷಣಗಳು ಈ ಕೆಳಗಿನಂತಿವೆ:

1 ಮಲದಲ್ಲಿನ ರಕ್ತ, ಕಪ್ಪು ಅಥವಾ ಜಿಗುಟಾದ ಮಲ, ನಿರಂತರ ಅತಿಸಾರ, ಅಥವಾ ಮಲಬದ್ಧತೆ ಸೇರಿದಂತೆ ಮಲ ವಿಸರ್ಜನೆಯ ರೀತಿಯಲ್ಲಿ ಬದಲಾವಣೆಗಳು.

2 ಹೊಟ್ಟೆಯಲ್ಲಿ ನೋವು, ಸೆಳೆತ ಅಥವಾ ಉಬ್ಬುವಿಕೆಯ ಭಾವನೆ

3 ಎಲ್ಲಾ ಸಮಯದಲ್ಲೂ ದಣಿವು ಅಥವಾ ಸ್ಪಷ್ಟವಾದ ಕಾರಣವಿಲ್ಲದೆ ಬಲಹೀನತೆಯ ಸ್ಥಿತಿ.

4 ಯಾವುದೇ ಕಾರಣವಿಲ್ಲದೆ ತೂಕ ಕಡಿಮೆಯಾಗುವುದು.

5 ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತಸ್ರಾವವಾಗುವ ಕಾರಣದಿಂದ ರಕ್ತದಲ್ಲಿ ಕಡಿಮೆ ಕಬ್ಬಿಣದ ಅಂಶ.

ಇತರ ಅನೇಕ ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು ಇದೆ ರೀತಿಯ ಸಂಕೇತಗಳನ್ನು ಹೊಂದಿರುವುದರಿಂದ, ಈ ರೋಗ ಲಕ್ಷಣಗಳನ್ನು ಸಣ್ಣ ಸಮಸ್ಯೆಗಳೆಂದು ಪರಿಗಣಿಸಿ ವೈದ್ಯಕೀಯ ಸಹಾಯ ಪಡೆಯಲು ವಿಳಂಬ ಮಾಡಬಹುದು. ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಕೆಲವು ದಿನಗಳವರೆಗೆ ಮುಂದುವರಿದರೆ ಅಥವಾ ಕಾಲಾನಂತರದಲ್ಲಿ ಸ್ಥಿತಿಯು ಹದಗೆಟ್ಟರೆ, ಸಮಸ್ಯೆಯನ್ನು ಕಂಡುಹಿಡಿಯಲು ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ.

ಸ್ಕ್ರೀನಿಂಗ್ ಪರೀಕ್ಷೆಗಳ ಮೂಲಕ ಕರುಳಿನ ಕ್ಯಾನ್ಸರ್ ನ ಆರಂಭಿಕ ಪತ್ತೆಯನ್ನು ಮಾಡಬಹುದು.

1 ಕೊಲೊನೋಸ್ಕೋಪಿ, ಇಲ್ಲಿ ಪೊಲಿಪ್ಸ್ ಅಥವಾ ಕ್ಯಾನ್ಸರ್ ನ ಸಂಕೇತಗಳಿಗಾಗಿ ಸಂಪೂರ್ಣ ಕೊಲೊನ್ ಮತ್ತು ಗುದನಾಳದ ಪರೀಕ್ಷೆಯನ್ನು ಮಾಡಲಾಗುತ್ತದೆ.

2 ಫೀಕಲ್ ಅಕುಲ್ಟ್ ಬ್ಲಡ್ ಟೆಸ್ಟ್ (FOBT) ಅಥವಾ ಫೀಕಲ್ ಇಮ್ಯುನೊಕೆಮಿಕಲ್ ಟೆಸ್ಟ್ (FIT), ಇದು ಕರುಳಿನ ಕ್ಯಾನ್ಸರ್ ನ ಸಂಕೇತವಾದ ಮಲದಲ್ಲಿನ ರಕ್ತವನ್ನು ಪತ್ತೆ ಹಚ್ಚಲು ಮಾಡಲಾಗುತ್ತದೆ.

3 ಫೆಲ್ಕ್ಸಿಬಲ್ ಸಿಗ್ಮೋಯ್ಡೋಸ್ಕೋಪಿಯು ಕೊಲೊನೋಸ್ಕೋಪಿಗೆ ಹೋಲುವ ಪರೀಕ್ಷೆಯಾಗಿದೆ, ಆದರೆ ಇಲ್ಲಿ ಕೊಲೊನ್ ನ ಕೆಳಭಾಗವನ್ನು ಪರೀಕ್ಷೆ ಮಾಡಲಾಗುತ್ತದೆ.

50 ವರ್ಷ ಮೇಲ್ಪಟ್ಟ ವ್ಯಕ್ತಿಗಳು ವಾರ್ಷಿಕವಾಗಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಾಗಿದೆ.

ಕೊಲೊನ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಸಾಧ್ಯವಾದರೆ, ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಚಿಕಿತ್ಸೆ ಅಥವಾ ಇವುಗಳ ಮಿಶ್ರಣದಂತಹ ಚಿಕಿತ್ಸೆಗಳು ಉತ್ತಮವಾಗಿ ಕೆಲಸ ಮಾಡುತ್ತವೆ. ಕ್ಯಾನ್ಸರ್ ನ ಹಂತ, ಅದು ಎಲ್ಲಿದೆ ಮತ್ತು ಇತರ ವೈಯಕ್ತಿಕ ವಿವರಗಳನ್ನು ಆಧರಿಸಿ ಚಿಕಿತ್ಸೆಯ ಯೋಜನೆಯನ್ನು ಮಾಡಲಾಗುತ್ತದೆ.

ಡಾ. ಬಸವಂತರಾವ್ ಮಲ್ಲಿಪಾಟೀಲ್

ಕನ್ಸಲ್ಟೆಂಟ್ – ವೈದ್ಯಕೀಯ ಆಂಕೊಲಾಜಿಸ್ಟ್

 ಮಣಿಪಾಲ್ ಆಸ್ಪತ್ರೆ, ಹೆಬ್ಬಾಳ

ಟಾಪ್ ನ್ಯೂಸ್

Pickup vehicle collides with scooter at shantigrama of Hassan

Hassan; ಸ್ಕೂಟರ್ ಗೆ ಬೊಲೆರೋ ಪಿಕಪ್ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

Tamilnadu:  ಕಳ್ಳಭಟ್ಟಿ ಸರಬರಾಜು ಮಾಡಿದ ವ್ಯಕ್ತಿಯ ಬಂಧನ-ಸಾವಿನ ಸಂಖ್ಯೆ 55ಕ್ಕೆ ಏರಿಕೆ

Tamilnadu:  ಕಳ್ಳಭಟ್ಟಿ ಸರಬರಾಜು ಮಾಡಿದ ವ್ಯಕ್ತಿಯ ಬಂಧನ-ಸಾವಿನ ಸಂಖ್ಯೆ 55ಕ್ಕೆ ಏರಿಕೆ

11-elephnat

Sakrebyle Elephant Camp: ನಾ ಕಂಡ ಸಕ್ರೆಬೈಲ್‌ ಆನೆ ಬಿಡಾರ

9-ants

Ant: ಇರುವೆ ಇರುವೆ ಎಲ್ಲೆಲ್ಲೂ ಇರುವೆ

Siwan: Another bridge collapsed in Bihar! The video went viral

Siwan: ಬಿಹಾರದಲ್ಲಿ ಕುಸಿದು ಬಿತ್ತು ಮತ್ತೊಂದು ಸೇತುವೆ! ವಿಡಿಯೋ ವೈರಲ್

Ayodhya: ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನ ನೆರವೇರಿಸಿದ್ದ ಅರ್ಚಕ ನಿಧನ

Ayodhya: ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನ ನೆರವೇರಿಸಿದ್ದ ಅರ್ಚಕ ನಿಧನ

4

ಇಬ್ಬರು ಪತ್ನಿಯರೊಂದಿಗೆ ಬಿಗ್‌ ಬಾಸ್‌ ಮನೆಗೆ ಬಂದ ಯೂಟ್ಯೂಬರ್:‌ ಯಾರು ಈ ಅರ್ಮಾನ್ ಮಲಿಕ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Throat Cancer: ತಂಬಾಕು ಮುಕ್ತ ಜೀವನ

Zap-X for painless treatment of brain tumors

ZAP-X Radiosurgery; ಬ್ರೈನ್‌ ಟ್ಯೂಮರ್‌ ನೋವುರಹಿತ ಚಿಕಿತ್ಸೆಗೆ ಝ್ಯಾಪ್‌- ಎಕ್ಸ್‌

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

7–HPV

HPV: ಹ್ಯೂಮನ್‌ ಪ್ಯಾಪಿಲೋಮಾವೈರಸ್‌ (ಎಚ್‌ಪಿವಿ) ಮತ್ತು ಗರ್ಭಕಂಠದ ಕ್ಯಾನ್ಸರ್‌

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

MUST WATCH

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

ಹೊಸ ಸೇರ್ಪಡೆ

Pickup vehicle collides with scooter at shantigrama of Hassan

Hassan; ಸ್ಕೂಟರ್ ಗೆ ಬೊಲೆರೋ ಪಿಕಪ್ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

Tamilnadu:  ಕಳ್ಳಭಟ್ಟಿ ಸರಬರಾಜು ಮಾಡಿದ ವ್ಯಕ್ತಿಯ ಬಂಧನ-ಸಾವಿನ ಸಂಖ್ಯೆ 55ಕ್ಕೆ ಏರಿಕೆ

Tamilnadu:  ಕಳ್ಳಭಟ್ಟಿ ಸರಬರಾಜು ಮಾಡಿದ ವ್ಯಕ್ತಿಯ ಬಂಧನ-ಸಾವಿನ ಸಂಖ್ಯೆ 55ಕ್ಕೆ ಏರಿಕೆ

13-

Kannada: ಕನ್ನಡ ಕೂಟವೆಂಬ ಹೂರಣ

11-elephnat

Sakrebyle Elephant Camp: ನಾ ಕಂಡ ಸಕ್ರೆಬೈಲ್‌ ಆನೆ ಬಿಡಾರ

12–crew

Flight Crew: ವಿಮಾನಯಾನ ಸಂಸ್ಥೆಗಳ ಸಮಸ್ಯೆಯ ಅನಾವರಣ ಕ್ರಿವೂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.