Udayavni Special

ಡಿಮೆನ್ಶಿಯಾ ಹೊಂದಿರುವ ವ್ಯಕ್ತಿಗಳ ಆರೈಕೆಗಾಗಿ ಕೆಲವು ಸಲಹೆಗಳು

ಹಂತ ಮತ್ತು ಸಂದರ್ಭಗಳ ಆಧಾರದ ಮೇಲೆ ಸೂಕ್ತವಾದ ಮಧ್ಯಸ್ಥಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು.

Team Udayavani, May 15, 2021, 2:50 PM IST

Dementia

ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯೊಂದಿಗೆ ಸಂವಹನ. ಸಂವಹನವು ಆರೈಕೆಯ ಒಂದು ಅವಿಭಾಜ್ಯ ಮತ್ತು ಅತ್ಯಾವಶ್ಯಕ ಭಾಗವಾಗಿದೆ. ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗೆ ತೊಂದರೆ ಕೊಡುವ ವಿಷಯಗಳನ್ನು ಸಂವಹನ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ಏನಾದರೂ ಹೇಳಿದರೆ ಅದನ್ನು ಅರ್ಥಮಾಡಿಕೊಳ್ಳುವುದು ಕೂಡ ಕಷ್ಟಕರವಾಗಿದೆ. ಅದಕ್ಕಾಗಿ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

 ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾದ ಸರಳ ಮತ್ತು ಒಂದು ಸರಿಯಾದ ಕ್ರಮದಲ್ಲಿ ಸೂಚನೆಗಳನ್ನು  ಬಳಸಿ.

 ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯನ್ನು ಕಣ್ಣಿನಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಿ.

 ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿ. ಆ ವ್ಯಕ್ತಿಯು ಪ್ರತಿಕ್ರಿಯಿಸುವವರೆಗೆ ಕಾಯಿರಿ.

 ಹೌದು ಅಥವಾ ಇಲ್ಲ ಅನ್ನೋ ಉತ್ತರ ಕೊಡುವ ಪ್ರಶ್ನೆಗಳನ್ನು ಕೇಳಿ. ನಿಮಗೆ ಚಹಾ ಬೇಕೆ ? ಅನ್ನುವಂತಹ ಪ್ರಶ್ನೆಯೊಂದಿಗೆ ಕೊನೆಗೊಳ್ಳುವ ಹೇಳಿಕೆಗಳನ್ನು ಬಳಸಿ. ನೀವು ಏನನ್ನು ಕುಡಿಯಲು ಬಯಸುತ್ತೀರಿ ? ಅನ್ನೋ ಬದಲು ನಿಮಗೆ ಚಹಾ ಬೇಕೆ ಅಥವಾ ಕಾಫಿ ಬೇಕೆ ? ಎಂದು ಕೇಳಿ.

 ನಿಮ್ಮ ಆದೇಶಗಳನ್ನು ಮಾತಿನ ಮೂಲಕ ಗ್ರಹಿಸುವಲ್ಲಿ ಆ ವ್ಯಕ್ತಿಯು ತೊಂದರೆಯನ್ನು ಹೊಂದಿದ್ದರೆ ಚಿತ್ರಗಳನ್ನು ಮತ್ತು ಸನ್ನೆಗಳನ್ನು ಬಳಸಿ.

 ಅವರೊಂದಿಗೆ ಮಾತನಾಡುವಾಗ ಗೊಂದಲವನ್ನು ತಪ್ಪಿಸಲು ಟಿವಿಯ ಶಬ್ದ ಮತ್ತು ಗದ್ದಲದಿಂದ ಕೂಡಿದ ಕೊಠಡಿಯಲ್ಲಿ ಮಾತನಾಡದಿರುವುದು.

 ವ್ಯಕ್ತಿಯನ್ನು ಗದರಿಸಬೇಡಿ. ಅದು ಗೊಂದಲ ಅಥವಾ ಅವರ ಕೋಪಕ್ಕೆ ಕಾರಣವಾಗುತ್ತದೆ. ಜೋರಾಗಿ ಏರು ಧ್ವನಿಯಲ್ಲಿ ಮಾತನಾಡಬೇಡಿ.

 ಅವರು ಎಲ್ಲವನ್ನು ನೆನಪಿಟ್ಟುಕೊಳ್ಳುವಂತೆ ಹೇಳಬೇಡಿ. ಇದರಿಂದ ಅವರಿಗೆ ನೋವಾಗಬಹುದು. ಮತ್ತು ಅವಮಾನಿಸಿದಂತಾಗಬಹುದು. ವ್ಯಕ್ತಿಯು ಕಷ್ಟಪಡುತ್ತಿದ್ದರೆ ಅವರಿಗೆ ನೀವು ಸರಿಯಾದ ಮಾಹಿತಿಯನ್ನು ನೀಡಿ.

ಉದಾ.:  ಹಾಯ್‌ ಅಮ್ಮ , ಇದು ನಾನು ವಿನೋದ್‌ ಮತ್ತು ನಾನು ನಿಮ್ಮನ್ನು ಭೇಟಿ ಮಾಡಲು ನಿಮ್ಮ ಮೊಮ್ಮಗಳು ಅನಿತಾಳನ್ನು ಕರೆತಂದಿದ್ದೇನೆ.

 ಹಿರಿಯರು ತಮ್ಮ ಪ್ರೀತಿ-ಪಾತ್ರರ ಜೊತೆ ಸಂಪರ್ಕದಲ್ಲಿರಲು ಫೋನ್‌ ಬಳಸಿ.

 ನಂತರದ ಹಂತಗಳಲ್ಲಿ ಸಂವಹನವು ತೀವ್ರವಾಗಿ ದುರ್ಬಲಗೊಂಡಾಗ, ಅವರ ತೊಂದರೆಗಳನ್ನು ಗುರುತಿಸಿ ಮತ್ತು ಆ ವ್ಯಕ್ತಿಯು ಖುಷಿಯಾಗಿರುವಂತೆ ಮಾಡಿ.

ಸುರಕ್ಷತೆಯನ್ನು ಸುಧಾರಿಸುವ ಕ್ರಮಗಳು

ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯ ಸುರಕ್ಷತೆಗೆ ಆರೈಕೆದಾರರು ಒತ್ತು ನೀಡುವಲ್ಲಿ  ಆಸಕ್ತಿ ವಹಿಸುವುದು. ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ಪ್ರತಿಕೂಲ ಘಟನೆಗಳನ್ನು ತಡೆಯುತ್ತದೆ.

 ಪರಿಸರವನ್ನು ಉತ್ತಮವಾಗಿ ವ್ಯವಸ್ಥಿತ ರೀತಿಯಲ್ಲಿರಿಸಿ. ಅವರು ಏನನ್ನು ಬಳಸಬೇಕಾಗಿದೆಯೋ ಅದನ್ನು ಮಾತ್ರ ಇರಿಸಿ. ಉದಾ.: ಶೇವಿಂಗ್‌ ಕ್ರೀಮ್‌ ಮತ್ತು ಟೂತ್‌ಪೇಸ್ಟನ್ನು ಒಟ್ಟಿಗೆ ಇಡಬೇಡಿ. ಇಲ್ಲದಿದ್ದರೆ ಅವರು ಟೂತ್‌ಪೇಸ್ಟ್‌ ಬದಲು ಶೇವಿಂಗ್‌ ಕ್ರೀಮನ್ನು ಬಳಸಬಹುದು.

 ಚೂಪಾದ, ಹಾನಿಕಾರಕವಾದ, ಸೇವಿಸಲು ಯೋಗ್ಯವಲ್ಲದ (ಕೀಟನಾಶಗಳು, ಫಿನಾಯಿಲ್‌, ಡೆಟಾಲ್‌, ಔಗಧಿಗಳು ಇತ್ಯಾದಿ) ವಸ್ತುಗಳನ್ನು ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗಳಿಂದ ದೂರವಿರಿಸಿ. ಅನಿಲ ಸಿಲಿಂಡರ್‌ನಲ್ಲಿ ನಿಯಂತ್ರಕ ಬಟನ್‌ಗಳನ್ನು ಆಫ್ ಮಾಡಿ.

 ನೀರು ಬೀಳುವ ಜಾಗದಲ್ಲಿ  ಹೆಚ್ಚು ಕಾಳಜಿಯಿಂದಿರಬೇಕು ಮತ್ತು ಅಸ್ತವ್ಯಸ್ತವಾದ, ಜಾರುವ ಅಥವಾ ಒದ್ದೆಯಾದ ಮಹಡಿಗಳು, ಮನೆಯ ಹೊಸ್ತಿಲು, ಮೆಟ್ಟಿಲು ಮುಂತಾದ ಅಪಾಯದ ಜಾಗಗಳನ್ನು ಗುರುತಿಸುವುದು ಮತ್ತು ಪರಿಹರಿಸುವುದು ಅತ್ಯಾವಶ್ಯಕವಾಗಿದೆ. ಶೌಚಾಲಯವನ್ನು ಬಳಸಬೇಕಾದರೆ,  ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆ ಹೋಗುವ ದಾರಿಯಲ್ಲಿ ಸಾಕಷ್ಟು ಬೆಳಕು ಇದೆಯೇ ಎಂದು ಖಚಿತಪಡಿಸಿಕೊಳ್ಳಿ . ಅಗತ್ಯವಿದ್ದರೆ ಹಿಡಿದುಕೊಳ್ಳಲು ಸರಳುಗಳನ್ನು ಅಳವಡಿಸಿ, ಜಾರದಿರುವ ನೆಲ ಹಾಸುಗೆಯನ್ನು ಬಳಸಿ. ಸ್ನಾನಗೃಹದ ಬಾಗಿಲಿನ ಚಿಲಕಗಳನ್ನು ತೆಗೆದಿಡಿ. ಲುಂಗಿ, ಸೀರೆ ಅಥವಾ ಉದ್ದನೆಯ ಸಡಿಲವಾದ ಅಂಗಿಗಳನ್ನು ಮತ್ತು ಪಾದರಕ್ಷೆಗಳನ್ನು ಧರಿಸುವುದನ್ನು ತಪ್ಪಿಸಿ, ಪೀಠೊಪಕರಣಗಳನ್ನು ಮರು ಹೊಂದಿಸಬೇಡಿ.

 ಅವರು ಅಲೆದಾಡುವ ನಡವಳಿಕೆಯನ್ನು ಹೊಂದಿದ್ದರೆ, ಬಾಗಿಲಿನಲ್ಲಿ ಅಲರಾಂಗಳನ್ನು ಅಳವಡಿಸಿ, ಶೂ ಅಡಿಭಾಗದಲ್ಲಿ ಜಿ.ಪಿ.ಎಸ್‌. ಟ್ರಾಕರನ್ನು ಬಳಸುವುದು, ಮುಖ್ಯ ದ್ವಾರಕ್ಕೆ ಬೀಗ ಹಾಕುವುದು ಮತ್ತು ಕೀಗಳನ್ನು ದೂರದಲ್ಲಿ  ಇರಿಸಿ ಅದನ್ನು ಗಮನಿಸುತ್ತಿರುವುದು. ಅವರ ಪರ್ಸ್‌, ಕುತ್ತಿಗೆಗೆ ಹಾಕುವ ಟ್ಯಾಗ್‌, ಕೈ ಬಳೆ ಮುಂತಾದವು ಒಂದು ವೇಳೆ ಕಳೆದುಹೋದರೆ ಸಂಪರ್ಕಿಸಲು ತನ್ನೊಂದಿಗೆ ಗುರುತಿನ ಚೀಟಿಯನ್ನು ಒಯ್ಯುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ.

 ಫೋನ್‌ನಲ್ಲಿ ತ್ವರಿತವಾದ ಡಯಲ್‌ಗ‌ಳನ್ನು ಬಳಸಿ. ಇದರಿಂದ ಅವರು ನಿಮಗೆ ಸುಲಭವಾಗಿ ಕರೆ ಮಾಡಬಹುದು.

ನೀವು ಆರೈಕೆದಾರರಾಗಿ ಮೊದಲು ನಿಮ್ಮ ಸ್ವಂತ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯ. ಸಂದರ್ಭವನ್ನು ಅರ್ಥಮಾಡಿಕೊಂಡು ಮತ್ತು ಅಗತ್ಯವಿದ್ದಾಗ ನೀವು ಮಾನಸಿಕ ಮತ್ತು ದೈಹಿಕ ಸಹಾಯವನ್ನು ಪಡೆಯಿರಿ. ಆರೈಕೆದಾರರು ಮಾಡುವ ಕೆಲಸವನ್ನು ಇತರ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಿ ಮತ್ತು ಅವರ ಸಹಾ ಯವನ್ನು  ಕೇಳಿ, ಇತರ ಆರೈಕೆದಾರರ ಅನುಭವವನ್ನು ತಿಳಿದುಕೊಳ್ಳಲು ಅವರೊಂದಿಗೆ ಸಂಪರ್ಕವನ್ನು ಬೆಳೆಸಿ. ನಿಮ್ಮ ಮತ್ತು ನಿಮ್ಮ ಆರೈಕೆಯನ್ನು ಸ್ವೀಕರಿಸುವವರ ಜೀವನದ ಗುಣಮಟ್ಟವನ್ನು ಸುಧಾರಿಸಲು ವೃತ್ತಿಪರರ ಸಲಹೆಯನ್ನು  ಪಡೆಯಿರಿ.

ಈ ಅಂಶಗಳು ರೋಗದ ಹಂತ, ಆರೈಕೆದಾರರ ಸಾಮರ್ಥ್ಯ, ಹಣಕಾಸಿನ ಮೂಲ ಮತ್ತು ಲಭ್ಯವಿರುವ ಬೆಂಬಲವನ್ನು ಅವಲಂಬಿಸಿರುತ್ತದೆ. ಪ್ರತೀ ಆರೈಕೆದಾರರ ಅನುಭವವು ವಿಭಿನ್ನವಾಗಿರುತ್ತದೆ ಮತ್ತು ತನ್ನದೇ ಆದ ಸವಾಲುಗಳನ್ನು ಹೊಂದಿರುವುದರಿಂದ ಬರುತ್ತದೆ. ಅವುಗಳನ್ನು ಪರಿಹರಿಸಲು ಬಂದಾಗೆ “ಒಂದೇ ರೀತಿಯ ವಿಧಾನ ಎಲ್ಲಾ ಕಡೆ’ ಸರಿಹೊಂದುವುದಿಲ್ಲ.  ಅಕ್ಯುಪೇಶನಲ್‌ ಥೆರಪಿ ವಿಭಾಗವು ಡಿಮೆನ್ಸಿಯಾ ಹೊಂದಿರುವ ವ್ಯಕ್ತಿ ಮತ್ತು ಅವರ ಆರೈಕೆದಾರರ ಪ್ರಮುಖ ಅಗತ್ಯತೆಗಳು, ಹಂತ ಮತ್ತು ಸಂದರ್ಭಗಳ ಆಧಾರದ ಮೇಲೆ ಸೂಕ್ತವಾದ ಮಧ್ಯಸ್ಥಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು.

ಈ ಲೇಖನವು ಭಾರತೀಯ ವೈದ್ಯಕೀಯ ಮಂಡಳಿಯ ಧನ ಸಹಯೋಗದೊಂದಿಗೆ ನಡೆಯುತ್ತಿರುವ ಇಂಡೋಸ್ವೀಡನ್‌ನ ಸಂಶೋಧನೆಯಾಗಿದೆ. ಡಾ| ಸಬೆಸ್ಟಿನಾ ಅನಿತಾ ಡಿಸೋಜಾ, ಪಿಹೆಚ್‌ಡಿ, ಪ್ರೊಫೆಸರ್‌, ಅಕ್ಯುಪೇಶನಲ್‌ ಥೆರಪಿ ವಿಭಾಗ, ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಶನ್ಸ್‌, ಮಾಹೆ, ಮಣಿಪಾಲ ಇವರು ಈ ಯೋಜನೆಯ ಪ್ರಾಥಮಿಕ ತನಿಖಾಧಿಕಾರಿಯಾಗಿದ್ದಾರೆ. ಈ ಯೋಜನೆಯು ಡಿಮೆನ್ಸಿಯಾವನ್ನು ಹೊಂದಿರುವ ಹಿರಿಯರಿಗೆ ಮತ್ತು ಅವರ ಆರೈಕೆದಾರರಿಗೆ ಸಹಾಯ ಮಾಡಲು ವೈದ್ಯಕಿಯೇತರ ತಂತ್ರಗಳ (ಸಹಾಯಕ ಸಾಧನಗಳು) ಬಳಕೆಯ ಅಧ್ಯಯನವನ್ನು ಒಳಗೊಂಡಿರುತ್ತದೆ. ಈ ಯೋಜನೆಯು ಪ್ರಸ್ತುತ ಕಾರ್ಯರೂಪದಲ್ಲಿದ್ದು , ಉಡುಪಿ ಮತ್ತು ಮಂಗಳೂರಿನ ಪ್ರದೇಶದಲ್ಲಿ ವಾಸವಾಗಿರುವ ಡಿಮೆನ್ಶಿಯಾದಿಂದ (ಕನಿಷ್ಠತೆಯಿಂದ ಮಧ್ಯಮದ ಹಂತ) ಬಳಲುತ್ತಿರುವ ಹಿರಿಯರು ಮತ್ತು ಅವರ ಆರೈಕೆದಾರರು ಈ ಅಧ್ಯಯನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಭಾಗವಹಿಸುವವರಿಗೆ ತರಬೇತಿಯೊಂದಿಗೆ ಉಚಿತವಾಗಿ ಸಮಯ ಸಹಾಯಕ ಸಾಧನಗಳನ್ನು (ಈ ಲೇಖನದಲ್ಲಿ  ಉಲ್ಲೇಖೀಸಿದಂತೆ) ಒದಗಿಸಲಾಗುತ್ತದೆ. ಈ ಸಾಧನಗಳನ್ನು ಅವರು ಮೂರು ತಿಂಗಳ ಅವಧಿಗೆ ಬಳಸಬೇಕಾಗುತ್ತದೆ. ಅನಂತರ ಅವರನ್ನು ಮರುಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅವರ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಲಾಗುತ್ತದೆ.

ಟಾಪ್ ನ್ಯೂಸ್

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

Untitled-4

ಬಿಎಸ್‌ವೈ ಅಧಿಕಾರದಿಂದ ಬೇಗ ತೊಲಗಿದಷ್ಟು ರಾಜ್ಯಕ್ಕೆ ಅನುಕೂಲ: ಸಿದ್ದರಾಮಯ್ಯ

012

ನಿಮಗೆ ಸಿದ್ದರಾಮಯ್ಯರ ಭಯ ಕಾಡುತ್ತಿದೆಯೇ ? ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತದ ಭರವಸೆ-ಸ್ಪುಟ್ನಿಕ್ ವಿ

ಕೋವಿಡ್ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತದ ಭರವಸೆ-ಸ್ಪುಟ್ನಿಕ್ ವಿ

ಗೂನುಬೆನ್ನು ಸಮಸ್ಯೆ ನಿವಾರಣೆಗೆ ಸರಳ ಆಸನ

ಗೂನುಬೆನ್ನು ಸಮಸ್ಯೆ ನಿವಾರಣೆಗೆ ಸರಳ ಆಸನ

ಜೀವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಲಿ

ಜೂ.14 ವಿಶ್ವ ರಕ್ತದಾನಿಗಳ ದಿನ; ಜೀವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಲಿ

ಯೋಗದಿಂದ ಬಾಯಿಯ ದುರ್ವಾಸನೆ ದೂರಗೊಳಿಸಿ

ಯೋಗದಿಂದ ಬಾಯಿಯ ದುರ್ವಾಸನೆ ದೂರಗೊಳಿಸಿ

13-7

ಪ್ಯಾಶನ್ ಫ್ರೂಟ್ : ಏನಿದು ಹೊಸ ಬಗೆಯ ಹಣ್ಣು?

MUST WATCH

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

ಹೊಸ ಸೇರ್ಪಡೆ

ಅದೊಂದು  ಕಿರು ಪ್ರವಾಸ

ಅದೊಂದು  ಕಿರು ಪ್ರವಾಸ

covid vaccination

ನಾಳೆಯಿಂದ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಲಸಿಕೆ: ಡಿಸಿಎಂ

yoga day

ಯೋಗ ಮಾರ್ಗದಲ್ಲಿ ಸಾಧನೆಯ ಹಾದಿ

yoga day

ಯೋಗ ಮಾರ್ಗದಲ್ಲಿ ಸಾಧನೆಯ ಹಾದಿ

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.