ನಿಮ್ಮಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೇ? : ಹಾಗಾದ್ರೆ ಈ ಜ್ಯೂಸ್ ಕುಡಿಯಿರಿ


Team Udayavani, Apr 26, 2021, 3:33 PM IST

ಕಗಹ್ಹದ್ದಸ

ನವದೆಹಲಿ :  ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದೆ. ರಾಜ್ಯದಲ್ಲಿಯೂ ಕೂಡ ಕೋವಿಡ್ ಎರಡನೇ ಅಲೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಇದೇ ಹಿನ್ನೆಲೆಯಲ್ಲಿ ಏಪ್ರಿಲ್ 27 ರಿಂದ ಕರ್ನಾಟಕದಲ್ಲಿ 14 ದಿನಗಳ ಲಾಕ್ ಡೌನ್ ಘೋಷಣೆಯನ್ನೂ ಮಾಡಲಾಗಿದೆ.

ಕೋವಿಡ್ ಸೋಂಕಿನ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ವೇಳೆ ನಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕಾಗುತ್ತದೆ. ಕೋವಿಡ್ ಸೋಂಕಿಗೆ ರಾಮ ಬಾಣ ಅಂದರೆ ಮೊದಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕಾಗಿದೆ. ಹಾಗಾದ್ರೆ ಈ ರೋಗ ನಿರೋಧಕತೆಯನ್ನು ಹೆಚ್ಚಿಸಲು ಯಾವೆಲ್ಲ ಜ್ಯೂಸ್ ಕುಡಿಯಬೇಕು ಎಂಬ ಮಾಹಿತಿ ಈ ಕೆಳಗಿನಂತೆ ಇದೆ. ಈ ವಿಧದ ಜ್ಯೂಸ್ ಕುಡಿದರೆ ನಮ್ಮಲ್ಲಿನ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ.

ಹಸಿರು ಸೇಬು : ಕ್ಯಾರೆಟ್, ಸೇಬು ಮತ್ತು ಕಿತ್ತಳೆ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಸೇಬು ಮತ್ತು ಕಿತ್ತಳೆ ಹಣ್ಣುಗಳು ವಿಟಮಿನ್ ಸಿ ಯನ್ನು ಒದಗಿಸುತ್ತದೆ. ಕ್ಯಾರೆಟ್‌ಗಳಲ್ಲಿ ವಿಟಮಿನ್ ಎ ಇದ್ದು, ರೋಗನಿರೋಧಕ ವ್ಯವಸ್ಥೆಗೆ ನಿರ್ಣಾಯಕವಾಗಿದೆ. ವಿಟಮಿನ್ ಬಿ -6 ಕೂಡ ಕ್ಯಾರೆಟ್​ನಲ್ಲಿ ಇದ್ದು, ಇದು ಪ್ರತಿರಕ್ಷಣಾ ಕೋಶ ಪ್ರಸರಣ ಮತ್ತು ಪ್ರತಿಕಾಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಿವಿ ಹಣ್ಣು : ವಿಟಮಿನ್ ಸಿ ಯನ್ನು ಹೆಚ್ಚಿಸಿಕೊಳ್ಳಲು ಸ್ಟ್ರಾಬೆರಿ ಮತ್ತು ಕಿವಿ ಹಣ್ಣು ಸಹಾಯಕವಾಗಿದೆ. 1 ಕಪ್ ಜ್ಯೂಸ್ ತಯಾರಿಸಲು ಸುಮಾರು 4 ಕಪ್ ಸ್ಟ್ರಾಬೆರಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದನ್ನೂ ಜ್ಯೂಸ್ ಬದಲು ದಪ್ಪವಾದ ಮಣ್ಣಿಯಂತೆ ತಯಾರಿಸಿದರೆ ಹೆಚ್ಚು ಉಪಯುಕ್ತವಾಗಿರುತ್ತದೆ. ಈ ಸ್ಟ್ರಾಬೆರಿ ರಸಕ್ಕೆ ಕೆನೆರಹಿತ ಹಾಲನ್ನು ಹಾಕಿದರೆ ಇನ್ನೂ ಉತ್ತಮ. ಏಕೆಂದರೆ ಹಾಲು ಪ್ರೋಟೀನ್ ಮತ್ತು ವಿಟಮಿನ್ ಡಿ ಯನ್ನು ಒದಗಿಸುತ್ತದೆ. ವಿಟಮಿನ್​ ಡಿ ಯ ಕೊರತೆಯೂ ಕೂಡ ಕೊರೊನಾ ಸೋಂಕಿಗೆ ತುತ್ತಾಗಲು ಕಾರಣ ಎಂದು ಕೆಲವು ಸಂಶೋಧನೆ ತಿಳಿಸಿದೆ. ಇನ್ನು ಸ್ಟ್ರಾಬೆರಿ, ಮಾವು, ಬಾದಮಿಯನ್ನು ಕೂಡ ಒಟ್ಟಿಗೆ ಸೇರಿಸಿ ಜ್ಯೂಸ್ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಹುಳಿ ಹಣ್ಣುಗಳು : ಸಿಟ್ರಸ್ ಅಂಶಗಳನ್ನು ಒಳಗೊಂಡ ಹಣ್ಣುಗಳಿಂದ ವಿಟಮಿನ್​ ಸಿ ದೊರೆಯುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ದೇಹಕ್ಕೆ ಹಾನಿ ಮಾಡುವ ವಸ್ತುಗಳಿಂದ ಜೀವಕೋಶಗಳನ್ನು ರಕ್ಷಿಸುತ್ತದೆ. ವಿಟಮಿನ್​ ಸಿ ಕೊರತೆಯು ಗಾಯವನ್ನು ಗುಣಪಡಿಸುವಲ್ಲಿ ಹಿಂದೇಟು ಹಾಕುತ್ತದೆ. ಇದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.ಕೊರೊನಾ ಸೋಂಕು (SARS-CoV-2) ಹರಡುವುದನ್ನು ತಡೆಗಟ್ಟಲು ಅಥವಾ ಅದು ಉಂಟುಮಾಡುವ ಕಾಯಿಲೆಗೆ ಚಿಕಿತ್ಸೆ ನೀಡಲು ವಿಟಮಿನ್ ಸಿ ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಕೊವಿಡ್ 19 ಚಿಕಿತ್ಸೆಗಾಗಿ ವಿಟಮಿನ್ ಸಿ ಯ ಇಂಟ್ರಾವೆನಸ್ ಥೆರಪಿ ಸಂಶೋಧನೆ ಭರವಸೆಯನ್ನು ತೋರಿಸಿದೆ.

ಬಿಟ್​ ರೂಟ್, ಕ್ಯಾರೆಟ್ : ಈ ತರಕಾರಿಗಳಿಂದ ಮಾಡಿದ ಜ್ಯೂಸ್​ಗಳು ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಉರಿಯೂತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಈ ಮೂರು ತರಕಾರಿಯಿಂದ ಮಾಡಿದ ಜ್ಯೂಸ್​ಗಳು ಸೋಂಕು ಅಥವಾ ಬ್ಯಾಕ್ಟೀರಿಯಾದಿಂದ ಹುಟ್ಟುವ ಶೀತ ಅಥವಾ ಜ್ವರ, ಕೆಮ್ಮು ಮತ್ತು ದೇಹದಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ. ಸಂಧಿವಾತ ಹೊಂದಿರುವ ಜನರಿಗೆ ಇದು ಹೆಚ್ಚು ಉಪಕಾರಿಯಾಗಿದೆ.

ಟೊಮೆಟೊ : ತಾಜಾ ಟೊಮೆಟೊ ರಸ ಮತ್ತು ಯಾವುದೇ ಅಪಾಯಕಾರಿ ಅಂಶಗಳು ಇದರಲ್ಲಿ ಮಿಶ್ರಣವಾಗಿಲ್ಲ ಎನ್ನುವುದನ್ನು ಯೋಚಿಸುವ ನಿಟ್ಟಿನಲ್ಲಿ ಹೇಳುವುದಾದರೆ ಸತಃ ನಾವೇ ಮನೆಯಲ್ಲಿ ಸರಳ ವಿಧಾನದ ಮೂಲಕ ಟೊಮೆಟೊ ಜ್ಯೂಸ್ ಮಾಡಬಹುದಾಗಿದೆ. ಯಾವುದೇ ಜ್ಯೂಸರ್ ಅಥವಾ ಬ್ಲೆಂಡರ್ ಬಳಸದೆ ಟೊಮೆಟೊ ಹಣ್ಣಿನ ಬೀಜವನ್ನು ತೆಗೆದು ಜ್ಯೂಸ್ ಮಾಡಬಹುದಾಗಿದೆ. ಟೊಮೆಟೊನಲ್ಲಿ ವಿಟಮಿನ್ ಬಿ -9 ಸಮೃದ್ಧವಾಗಿದ್ದು, ಇದನ್ನು ಸಾಮಾನ್ಯವಾಗಿ ಫೋಲೇಟ್ ಎಂದು ಕರೆಯಲಾಗುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಲ್ಲಂಗಡಿ : ಕಲ್ಲಂಗಡಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸ್ನಾಯುಗಳ ನೋವನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ. ಸ್ನಾಯುಗಳ ನೋವು ಜ್ವರಕ್ಕೆ ಸಾಮಾನ್ಯ ಲಕ್ಷಣವಾಗಿದೆ, ವಿಶೇಷವಾಗಿ ವಯಸ್ಸಾದವರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಕಲ್ಲಂಗಡಿ ಹಣ್ಣನ್ನು ಸೇಬು ಮತ್ತು ಕಿತ್ತಳೆಯಂತಹ ಇತರ ಹಣ್ಣುಗಳ ಜೊತೆ ಕೂಡ ಸೇವಿಸಬಹುದು.

ಸೊಪ್ಪು : ವಿವಿಧ ಸೊಪ್ಪುಗಳನ್ನು ಬಳಸಿಕೊಂಡು ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಹೆಚ್ಚು ಶಕ್ತಿಯನ್ನು ಕೂಡ ನೀಡುತ್ತದೆ. ಜೊತೆಗೆ ಸೊಪ್ಪಿನ ರಸ ಕುಡಿಯುವುದರಿಂದ ಉತ್ಸಾಹ ಕೂಡ ಹೆಚ್ಚುತ್ತದೆ.

ಟಾಪ್ ನ್ಯೂಸ್

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.