Pumpkin Seeds: ಕುಂಬಳ ಬೀಜಗಳ ಆರೋಗ್ಯ ಲಾಭಗಳು


Team Udayavani, Jan 14, 2024, 3:52 PM IST

13-pumpkin-seeds

ಚೀನಿಕಾಯಿ/ ಕುಂಬಳ ಕಾಯಿ ಬೀಜಗಳು ಆರೋಗ್ಯಕರ ಕೊಬ್ಬು, ಮೆಗ್ನಿàಸಿಯಂ, ಸೆಲೆನಿಯಂ, ಕಬ್ಬಿಣಾಂಶ ಮತ್ತು ಆ್ಯಂಟಿಓಕ್ಸಿಡೆಂಟ್‌ಗಳ ಸಹಿತ ಅನೇಕ ಪೌಷ್ಟಿಕಾಂಶಗಳ ಆಗರವಾಗಿವೆ.

ಒಂದು ಮುಷ್ಠಿಯಷ್ಟು ಈ ಬೀಜಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳಿವೆ.

ಈ ಬೀಜಗಳಲ್ಲಿ ಇರುವ ಪಾಲಿಸ್ಯಾಚುರೇಟೆಡ್‌ ಫ್ಯಾಟಿ ಆ್ಯಸಿಡ್‌ಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.

ಎಲುಬು ರೂಪುಗೊಳ್ಳಲು ಮೆಗ್ನಿàಸಿಯಂ ಬೇಕು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಅಂಶ ಕಡಿಮೆಯಾದರೆ ಮಹಿಳೆಯರಲ್ಲಿ ಋತುಚಕ್ರಬಂಧದ ಅನಂತರ ಆಸ್ಟಿಯೊಪೊರೋಸಿಸ್‌ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ಊಟ-ಉಪಾಹಾರದ ಬಳಿಕ ಈ ಬೀಜಗಳನ್ನು ತಿನ್ನುವುದರಿಂದ ದೈನಿಕ ಅಗತ್ಯದಷ್ಟು ಮೆಗ್ನೀಸಿಯಂ ನಮ್ಮ ದೇಹಕ್ಕೆ ಒದಗುತ್ತದೆ.

ಇಷ್ಟಲ್ಲದೆ, ಕಬ್ಬಿಣಾಂಶ ಮತ್ತು ಸೆಲೆನಿಯಂ ಕೂಡ ಈ ಬೀಜಗಳಲ್ಲಿ ಹೇರಳವಾಗಿದೆ. ಒಂದು ಕಪ್‌ನಷ್ಟು ಬೀಜದಲ್ಲಿ 9.5 ಮಿ.ಗ್ರಾಂ ಕಬ್ಬಿಣಾಂಶ ಇರುತ್ತದೆ. ಇದು ಒಬ್ಬ ವ್ಯಕ್ತಿ ದೈನಿಕವಾಗಿ ಪಡೆಯಬೇಕಾದ ಕಬ್ಬಿಣಾಂಶ. ಈ ಬೀಜಗಳಲ್ಲಿ ಇರುವ ವಿಟಮಿನ್‌ ಇ ಮತ್ತು ಆ್ಯಂಟಿಓಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳಲು ನೆರವಾಗುತ್ತದೆ.

ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಬಳಸುವ ಟ್ರಿಪ್ಟೊಫ್ಯಾನ್‌ ಎಂಬ ಅಮೈನೋ ಆಮ್ಲ ಈ ಬೀಜಗಳಲ್ಲಿ ಹೇರಳವಾಗಿರುತ್ತದೆ. ನಮ್ಮ ದೇಹವು ಟ್ರಿಫ್ಟೊಫ್ಯಾನ್‌ ಅಂಶವನ್ನು ಸೆರೊಟೋನಿನ್‌ ಆಗಿ ಪರಿವರ್ತಿಸುತ್ತದೆ. ಈ ಸೆರೊಟೋನಿನ್‌ “ಫೀಲ್‌ ಗುಡ್‌‌’ ಹಾರ್ಮೋನ್‌ ಆಗಿದ್ದು, ನಮಗೆ ವಿಶ್ರಾಂತಿಯ ಅನುಭವ ಒದಗಿ ಸುಖನಿದ್ದೆ ಮಾಡಲು ಸಹಾಯ ಮಾಡುತ್ತದೆ.

ಈ ಬೀಜಗಳಲ್ಲಿ ಕಂಡುಬರುವ ಆ್ಯಂಟಿಓಕ್ಸಿಡೆಂಟ್‌ಗಳು ಕ್ಯಾನ್ಸರ್‌ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಈ ಬೀಜಗಳ ಆರೋಗ್ಯ ಲಾಭಗಳನ್ನು ಅರಿತುಕೊಳ್ಳುವುದರಿಂದ ಇವುಗಳನ್ನು ನಮ್ಮ ದೈನಿಕ ಆಹಾರದಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಈ ಆರೋಗ್ಯಪೂರ್ಣ ಬೀಜಗಳನ್ನು ನಮ್ಮ ಆಹಾರ ವಸ್ತುಗಳಲ್ಲಿ ಈ ಕೆಳಗಿನಂತೆ ಉಪಯೋಗಿಸಬಹುದು:

  1. ಗ್ರೇವಿಗಳು ಮತ್ತು ಕರಿಗಳನ್ನು ದಪ್ಪಗೊಳಿಸಲು ಉಪಯೋಗಿಸಬಹುದು.
  2. ಬ್ರೇಕ್‌ಫಾಸ್ಟ್‌ ಸೀರಿಯಲ್‌ಗ‌ಳು, ಬ್ರೆಡ್‌ ಮತ್ತು ಕೇಕ್‌ಗಳಿಗೆ ಮೇಲೆ ಅಲಂಕಾರವಾಗಿ ಬಳಸಬಹುದು.
  3. ಹುರಿದ ಉಪಾಹಾರವಾಗಿ ಸೇವಿಸಬಹುದು.
  4. ಸ್ಮೂತೀಗಳು, ಎನರ್ಜಿ ಬಾರ್‌ಗಳಲ್ಲಿ ಸೇರಿಸಿಕೊಳ್ಳಬಹುದು.
  5. ಸಲಾಡ್‌ಗಳು ಮತ್ತು ಸೂಪ್‌ಗ್ಳಿಗೂ ಸೇರಿಸಿಕೊಳ್ಳಬಹುದು.

ಕುಂಬಳ/ಚೀನಿಕಾಯಿ ಬೀಜಗಳು 163 ಕೆಸಿಎಎಲ್‌ ಕ್ಯಾಲೊರಿ, 8.5 ಗ್ರಾಂ ಪ್ರೊಟೀನ್‌ ಮತ್ತು 13.9 ಗ್ರಾಂ ಕೊಬ್ಬು ಒದಗಿಸುತ್ತವೆ. ಇವು ಪೌಷ್ಟಿಕಾಂಶಯುಕ್ತವಾಗಿರುವುದರ ಜತೆಗೆ ರುಚಿಕರವಾಗಿವೆ, ಪ್ರೊಟೀನ್‌ನ ಸಸ್ಯಾಹಾರಿ ಮೂಲಗಳಾಗಿವೆ. ಪ್ರತಿಯೊಬ್ಬರೂ ದಿನದ ಯಾವುದೇ ಸಮಯದಲ್ಲಿ ಇದನ್ನು ಸೇವಿಸಬಹುದು. ಅತಿಯಾಗಿ ಸೇವಿಸಿದರೂ ಯಾವುದೇ ಅಡ್ಡ ಪರಿಣಾಮ ಇಲ್ಲ.

-ಅರುಣಾ ಮಲ್ಯ,

ಹಿರಿಯ ಪಥ್ಯಾಹಾರ ತಜ್ಞೆ,

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.