ಅಸಿಡಿಟಿ ಸಮಸ್ಯೆಗೆ ಮನೆ ಔಷಧ 

Team Udayavani, Oct 8, 2020, 1:10 PM IST

30-october-11.gif

ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಆಮ್ಲದ ಉತ್ಪಾದನೆಯಿಂದ ಆಸಿಡಿಟಿ (ಪಿತ್ತ) ಕಾಣಿಸಿಕೊಳ್ಳುತ್ತದೆ. ನಾವು ಸೇವಿಸಿದ ಆಹಾರವು ಹೊಟ್ಟೆಯಲ್ಲಿ ಆಮ್ಲೀಯವಾಗಿ ಪರಿವರ್ತನೆ ಹೊಂದಿ ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಆಮ್ಲದ ಪ್ರಮಾಣ ಹೆಚ್ಚಾದರೆ ಅಸಿಡಿಟಿಗೆ ಕಾರಣವಾಗುತ್ತದೆ. ಪಿತ್ತ ಹೆಚ್ಚಾದಾಗ ಎದೆಯಲ್ಲಿ ಉರಿ, ಉದ್ವೇಗ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಅನ್ನನಾಳದ ಕೋಶದ ವೈಫ‌ಲ್ಯದಿಂದ ಆಮ್ಲವು ಅನ್ನನಾಳಕ್ಕೆ ಹೋಗದಂತೆ ತಡೆ ಉಂಟಾಗುವುದರಿಂದ ಅಸಿಡಿಟಿ ಹೆಚ್ಚಾಗುತ್ತದೆ. ಅಸಿಡಿಟಿಗೆ ನಾವು ಸೇವಿಸುವ ಆಹಾರವೇ ಮುಖ್ಯ ಕಾರಣ.

ಮನೆ ಔಷಧಗಳು
ಜೀರಿಗೆ

ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ, ಸೋಸಿ ಕುಡಿಯಬೇಕು ಅಥವಾ ಸ್ವಲ್ಪ ಪ್ರಮಾಣದ ಹುರಿದ ಜೀರಿಗೆಯನ್ನು ಅರೆದು ಒಂದು ಲೋಟ ನೀರಿಗೆ ಬೆರೆಸಿ ಊಟವಾದ ಬಳಿಕ ಕುಡಿದರೂ ಸಮಸ್ಯೆಯಿಂದ ಪರಿಹಾರವಾಗುತ್ತದೆ.

ಎಳನೀರು ಸೇವನೆ
ಅಸಿಡಿಟಿ ನಿವಾರಣೆಗೆ ಎಳನೀರು ಉತ್ತಮ ಔಷಧವಾಗಿದೆ. ಹೊಟ್ಟೆಯಲ್ಲಿ ಲೋಳೆ ಪ್ರಮಾಣವನ್ನು ಹೆಚ್ಚಿಸಿ ಪಿತ್ತವನ್ನು ಇದು ಕಡಿಮೆ ಮಾಡುತ್ತದೆ.

ಬಾಳೆಹಣ್ಣು
ಅತಿಯಾದ ಅಸಿಡಿಟಿಯಿಂದ ನೀವು ಬಳಲುತ್ತಿದ್ದಲ್ಲಿ, ಚೆನ್ನಾಗಿ ಕಲಿತ ಬಾಳೆ ಹಣ್ಣು ಸೇವಿಸಿ. ಅಂಟಾಸಿಡ್‌ ಗುಣಗಳಿಂದ ತುಂಬಿರುವ ಬಾಳೆಹಣ್ಣು ನೈಸರ್ಗಿಕವಾಗಿ ಪಿತ್ತ ಶಮನ ಮಾಡುವ ಗುಣಗಳನ್ನು ಹೊಂದಿದೆ.

ಪುದೀನಾ
ಕೆಲ ಪುದೀನಾ ಎಲೆಗಳನ್ನು ಸಣ್ಣದಾಗಿ ಹೆಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ಆರಿಸಿದ ಅನಂತರ ಕುಡಿಯಬೇಕು. ಪಿತ್ತ ನಿವಾರಣೆಯಲ್ಲಿ ಪುದೀನಾ ಪ್ರಮುಖ ಪಾತ್ರ ವಹಿಸುತ್ತದೆ. ಪುದೀನಾ ಅಜೀರ್ಣವನ್ನು ನಿವಾರಿಸಿ, ದೇಹಕ್ಕೆ ತಂಪು ನೀಡುತ್ತದೆ.

ಮಜ್ಜಿಗೆ
ಪಿತ್ತವನ್ನು ಶೀಘ್ರವಾಗಿ ನಿವಾರಣೆ ಮಾಡುವ ಗುಣ ಮಜ್ಜಿಗೆಗೆ ಇದೆ. ಸ್ವಲ್ಪ ಕರಿಮೆಣಸಿನ ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಕುಡಿಯುವುದು ಪಿತ್ತ ನಿವಾರಣೆಗೆ ಪರಿಣಾಮಕಾರಿಯಾಗಿದೆ.

ಲವಂಗ
ಬಾಯಲ್ಲಿ ಲವಂಗವನ್ನಿಟ್ಟುಕೊಂಡು ಅದು ರಸ ಬಿಡುವವರೆಗೂ ಚೆನ್ನಾಗಿ ಜಗಿಯಬೇಕು. ಇದರಿಂದಲೂ ಪಿತ್ತವನ್ನು ನಿವಾರಿಸಬಹುದು. ಸಮಪ್ರಮಾಣದಲ್ಲಿ ಲವಂಗ ಹಾಗೂ ಏಲಕ್ಕಿ ಪುಡಿ ಮಿಕ್ಸ್‌ ಮಾಡಿ ಸೇವಿಸುವುದು ಸಹ ಒಳ್ಳೆಯದು.

ಶುಂಠಿ
ಶುಂಠಿ ಚೂರುಗಳನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಬಳಿಕ ಸೇವಿಸಿ. ಒಂದಿಷ್ಟು ಶುಂಠಿಯನ್ನು ಚೆನ್ನಾಗಿ ಅರೆದು ಇದರ ರಸ ತೆಗೆದು ಸೇವಿಸುವುದು ಕೂಡ ಪರಿಣಾಮಕಾರಿಯಾಗಿದೆ.

ದಾಲ್ಚಿನ್ನಿ 
ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಚಮಚ ದಾಲಿcನ್ನಿ ಹುಡಿ ಹಾಕಿ. ದಾಲ್ಚಿನ್ನಿ  ತನ್ನ ರಸ ಬಿಟ್ಟ ಅನಂತರ ಈ ನೀರನ್ನು ಕುಡಿಯಬೇಕು. ಇದು ಪಿತ್ತಶಮನ ಮಾಡುತ್ತದೆ.

ಟಾಪ್ ನ್ಯೂಸ್

1-sadsad

NCRT ಪಠ್ಯದಿಂದ ಬಾಬರಿ ಮಸೀದಿ ಹೆಸರು ಕೈಬಿಟ್ಟ ಸರಕಾರ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

sanjay-raut

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

7–HPV

HPV: ಹ್ಯೂಮನ್‌ ಪ್ಯಾಪಿಲೋಮಾವೈರಸ್‌ (ಎಚ್‌ಪಿವಿ) ಮತ್ತು ಗರ್ಭಕಂಠದ ಕ್ಯಾನ್ಸರ್‌

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-sadsad

NCRT ಪಠ್ಯದಿಂದ ಬಾಬರಿ ಮಸೀದಿ ಹೆಸರು ಕೈಬಿಟ್ಟ ಸರಕಾರ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.