Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!


Team Udayavani, Apr 16, 2024, 6:11 PM IST

6-thyroid

ಥೈರಾಯ್ಡ್ ಗ್ರಂಥಿಯ ಕಾರ್ಯಚಟುವಟಿಕೆಗಳಲ್ಲಿ ತೊಂದರೆ ತಲೆದೋರಿದಾಗ ಗೊಯಟರ್‌, ಹೈಪೊಥೈರಾಯ್ಡಿಸಂ ಮತ್ತು ಹೈಪರ್‌ ಥೈರಾಯ್ಡಿಸಂನಂತಹ ಅನಾರೋಗ್ಯಗಳು ಉಂಟಾಗುತ್ತವೆ. ಗೊಯಟರ್‌ ಎನ್ನುವುದು ಥೈರಾಯ್ಡ್ ಗ್ರಂಥಿಯ ಸಂರಚನೆಗೆ ಸಂಬಂಧಿಸಿದ ತೊಂದರೆ, ಇದರಿಂದಾಗಿ ಥೈರಾಯ್ಡ್ ಗ್ರಂಥಿ ಊದಿಕೊಳ್ಳುತ್ತದೆ. ಹೈಪೊಥೈರಾಯ್ಡಿಸಂ ಮತ್ತು ಹೈಪರ್‌ ಥೈರಾಯ್ಡಿಸಂಗಳು ಕ್ರಮವಾಗಿ ಥೈರಾಯ್ಡ್ ಹಾರ್ಮೋನ್‌ ಮಟ್ಟ ಕಡಿಮೆಯಾದಾಗ ಮತ್ತು ಹೆಚ್ಚಾದಾಗ ತಲೆದೋರುವ ಸಮಸ್ಯೆಗಳು. ಈ ಅನಾರೋಗ್ಯಗಳನ್ನು ನಿರ್ಲಕ್ಷಿಸಿದರೆ ಕೆಲವೊಮ್ಮೆ ಮಾರಕವಾದೀತು.

ಹೈಪರ್‌ಥೈರಾಯ್ಡಿಸಂ – ಥೈರಾಯ್ಡ್ ಪ್ರವಾಹ

ಅನಿಯಂತ್ರಿತವಾದ ಮತ್ತು ಪತ್ತೆಯಾಗದ ಹೈಪರ್‌ಥೈರಾಯ್ಡಿಸಂ ಅಥವಾ ಈ ಸಮಸ್ಯೆಗೆ ತೆಗೆದುಕೊಳ್ಳುತ್ತಿರುವ ಔಷಧವನ್ನು ಹಠಾತ್ತಾಗಿ ಸ್ಥಗಿತಗೊಳಿಸಿದರೆ ಥೈರಾಯ್ಡ್ ಹಾರ್ಮೋನ್‌ ಪ್ರವಾಹದೋಪಾದಿಯಲ್ಲಿ ಉತ್ಪಾದನೆಯಾಗಬಲ್ಲುದು. ಈ ಸಮಸ್ಯೆ ತಲೆದೋರಿದಾಗ ನಮ್ಮ ದೇಹದ ಪ್ರತಿಯೊಂದು ಅಂಗವೂ ಅತಿಯಾದ ಕಾರ್ಯಚಟುವಟಿಕೆಯಲ್ಲಿ ತೊಡಗಬಹುದು – ಈ ಸ್ಥಿತಿಯನ್ನು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಒದಗಿಸದೆ ಇದ್ದಲ್ಲಿ ಪ್ರಾಣಾಪಾಯಕ್ಕೆ ಕಾರಣವಾದೀತು.

ಹೈಪರ್‌ಥೈರಾಯ್ಡಿಸಂ ಉಂಟಾದಾಗ ರೋಗಿ ದೇಹದ ತಾಪಮಾನದಲ್ಲಿ ಹೆಚ್ಚಳ, ಬೇಧಿ, ಹೃದಯ ಬಡಿತ ಹೆಚ್ಚಳ, ಗೊಂದಲ, ಕಾಲುಗಳು ಊದಿಕೊಳ್ಳುವುದು, ನಿಶ್ಶಕ್ತಿ, ತೂಕ ನಷ್ಟದಂತಹ ಲಕ್ಷಣಗಳನ್ನು ಅನುಭವಿಸಬಹುದು. ಒತ್ತಡ, ಸೋಂಕು, ಶಸ್ತ್ರಚಿಕಿತ್ಸೆಗಳು ಮತ್ತು ಹೃದಯಾಘಾತದ ಸಂದರ್ಭದಲ್ಲಿಯೂ ಇಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದಾಗಿದೆ.

ಹೈಪೊಥೈರಾಯ್ಡಿಸಂ – ಮೈಕ್ಸೆಡೇಮಾ ಕೋಮಾ

ತೀವ್ರ ತರಹದ ಹೈಪೊಥೈರಾಯ್ಡಿಸಂಗೆ ಒಳಗಾಗಿ, ಚಿಕಿತ್ಸೆಗೊಳಪಡದ ರೋಗಿಗಳು ಮೈಕ್ಸೆಡೇಮಾ ಕೋಮಾಕ್ಕೆ ತುತ್ತಾಗಬಹುದಾಗಿದೆ. ಈ ರೋಗಿಗಳು ಸಾಮಾನ್ಯವಾಗಿ ಕಾಲುಗಳು ಮತ್ತು ಮುಖದಲ್ಲಿ ಊತ, ಮಾತು ನಿಧಾನವಾಗುವುದು, ತೂಕ ಹೆಚ್ಚುವುದು, ನಿಶ್ಶಕ್ತಿ, ಜೊಂಪು ಮತ್ತು ಕೊಮಾದ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ಅನಾರೋಗ್ಯದಿಂದ ಸಾವನ್ನಪ್ಪುವ ಪ್ರಮಾಣ ಹೆಚ್ಚಿರುವುದರಿಂದ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಆರೈಕೆ-ಚಿಕಿತ್ಸೆ ಆವಶ್ಯಕವಾಗಿರುತ್ತದೆ.

ಗೊಯಟರ್‌

ಸಾಮಾನ್ಯವಾಗಿ ಬಹುತೇಕ ಎಲ್ಲ ಗೊಯಟರ್‌ ಪ್ರಕರಣಗಳು ಪ್ರಾಣಾಪಾಯಕರ ಅಲ್ಲದಿದ್ದರೂ ಎಂಡೊಕ್ರೈನಾಲಜಿ ತಜ್ಞರಾಗಿ ನಾವು ಇದರ ಹಿಂದೆ ಇರಬಹುದಾದ ಕ್ಯಾನ್ಸರ್‌ ಸಾಧ್ಯತೆಗಳ ಬಗ್ಗೆ ಸಂದೇಹ ಪಡುತ್ತೇವೆ. ಹಿನ್ನೆಲೆಯ ಕಾರಣಗಳನ್ನು ಅವಲಂಬಿಸಿ ಥೈರಾಯ್ಡ್ ಕ್ಯಾನ್ಸರ್‌ಗಳು ನಿಧಾನಗತಿಯಲ್ಲಿ ಅಥವಾ ಕ್ಷಿಪ್ರಗತಿಯಲ್ಲಿ ಉಲ್ಬಣಗೊಳ್ಳುವಂಥವು ಆಗಿರಬಹುದು.

ಥೈರಾಯ್ಡ್ ಕ್ಯಾನ್ಸರ್‌ಗಳಲ್ಲಿ ಪ್ಯಾಪಿಲರಿ, ಫಾಲಿಕ್ಯುಲರ್‌, ಮೆಡ್ಯುಲರಿ ಮತ್ತು ಆನಾಪ್ಲಾಸ್ಟಿಕ್‌ ಎಂಬ ವಿಧಗಳಿವೆ. ಥೈರಾಯ್ಡನ ಅಲ್ಟ್ರಾಸೌಂಡ್‌ ಮತ್ತು ಎಫ್ಎನ್‌ಎ (ಫೈನ್‌ ನೀಡಲ್‌ ಆಸ್ಪಿರೇಶನ್‌)ಗಳನ್ನು ಉಪಯೋಗಿಸಿ ಗೊಯಟರ್‌ನ ವಿಶ್ಲೇಷಣೆ ನಡೆಸಲಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆಯನ್ನು ಯೋಜಿಸಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಥೈರಾಯ್ಡ್ ಸಮಸ್ಯೆ ಸಾಮಾನ್ಯ ವಾದುದಾದರೂ ಅದನ್ನು ನಿರ್ಲಕ್ಷಿಸಬಾರದು. ಕ್ಲಪ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

-ಡಾ| ಶ್ರೀನಾಥ್‌ ಪಿ. ಶೆಟ್ಟಿ

ಕನ್ಸಲ್ಟಂಟ್‌, ಎಂಡೊಕ್ರೈನಾಲಜಿ ವಿಭಾಗ

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಂಡೊಕ್ರೈನಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

Supreme Court

BJP ಅರ್ಜಿ ತಿರಸ್ಕರಿಸಿದ ಸುಪ್ರೀಂ; ಪ್ರತಿಸ್ಪರ್ಧಿ ಎಂದರೆ ವೈರಿ ಅಲ್ಲ…

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Female health: ಸ್ತ್ರೀ ದೇಹ ಮತ್ತು ಆರೋಗ್ಯ

9-pregnant

Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

7-kmc-ramdas-pai-block

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್‌ ಎಂ.ಪೈ ಬ್ಲಾಕ್‌

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-asasas

Kejriwal ಅವಕಾಶವಾದಿ, ಮಣಿಶಂಕರ್‌ ಅಯ್ಯರ್‌ ಬಾಯಿಬಡುಕ: ವಾದ್ರಾ

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

Supreme Court

BJP ಅರ್ಜಿ ತಿರಸ್ಕರಿಸಿದ ಸುಪ್ರೀಂ; ಪ್ರತಿಸ್ಪರ್ಧಿ ಎಂದರೆ ವೈರಿ ಅಲ್ಲ…

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.