Health Tips: Japanese Natto ಉತ್ತಮ ಆರೋಗ್ಯಕರ ಆಹಾರ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

Team Udayavani, Sep 2, 2024, 6:10 PM IST

natto 1

ಹಲವಾರು ಬಾರಿ ನಾವು ಸೇವಿಸುವ ಆಹಾರದಲ್ಲಿ ಎಷ್ಟು ಪೋಷಕಾಂಶಗಳು ಒಳಗೊಂಡಿದೆ ಎಂಬುದು ತಿಳಿಯದ ವಿಷಯ. ಹಾಗೆಯೇ ಉತ್ತಮ ಪೋಷಕಾಂಶಗಳನ್ನು ಹೊಂದಿದ ಆಹಾರಕ್ಕಾಗಿ ನಾವು ಅಧಿಕ ಹಣ ವ್ಯಯಿಸಬೇಕಾಗುತ್ತದೆ. ಆದರೆ ನ್ಯಾಟೋ ಎಂಬ ಬಗೆಯ ಆಹಾರವು ಮಾನವನ ದೇಹಕ್ಕೆ ಬಹಳಷ್ಟು ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಜನರಿಗೆ ಕೈಗೆಟಕುವ ದರದಲ್ಲಿ ಇದು ಲಭಿಸುತ್ತದೆ.

Natto ಒಂದು ಸಾಂಪ್ರದಾಯಿಕ ಜಪಾನಿ ಆಹಾರವಾಗಿದ್ದು, ಹುದುಗಿಸಲ್ಪಟ್ಟ ಸೋಯಾಬೀನ್‌ಗಳನ್ನು ಉಪಯೋಗಿಸಿಕೊಂಡು ಈ ಆಹಾರವನ್ನು ತಯಾರಿಸಲಾಗುತ್ತದೆ. ಇದು ಲೋಳೆ, ಅಂಟುತನ, ನಾರಿನ ಸ್ವಭಾವವನ್ನು ಹೊಂದಿದೆ. ಬಹುಶ ಪಾಶ್ಚಿಮಾತ್ಯ ದೇಶಗಳಲ್ಲಿನ ಜನರು ನ್ಯಾಟೋ ಬಗ್ಗೆ ಕೇಳಿರುತ್ತಾರೆ. ಇದು Japanನಲ್ಲಿ ಕಡಿಮೆ ಬೆಲೆಯಲ್ಲಿ ಲಭಿಸುವ ಹಾಗು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಒಂದು ಬಗೆಯ ಆಹಾರವಾಗಿದೆ.

ನ್ಯಾಟೋ ಕಟುವಾದ ಪರಿಮಳವನ್ನು ಹೊಂದಿದ್ದು, ಇದರ ರುಚಿಯು ಇತರ ಆಹಾರಗಳಿಗಿಂದ ಬಹಳ ವಿಶಿಷ್ಟವಾಗಿದೆ.ಈ ಆಹಾರವು ಬಹಳಷ್ಟು ಪೌಷ್ಟಿಕಾಂಶವನ್ನು ಹೊಂದಿದ್ದು, ಎಲುಬುಗಳನ್ನು ಬಲಗೊಳಿಸಲು, ಹೃದಯದ ಆರೋಗ್ಯವನ್ನು ಹೆಚ್ಚಿಸಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಹಿಂದಿನ ಕಾಲದಲ್ಲಿ ಜಪಾನಿನಲ್ಲಿ ಇದನ್ನು ಬೇಯಿಸಿದ ಸೊಯಾಬೀನ್‌ ನನ್ನು ಭತ್ತದ ಒಣಹುಲ್ಲಿನಲ್ಲಿ ಸುತ್ತಿ ಇಡುವ ಮೂಲಕ ನ್ಯಾಟೋವನ್ನು ತಯಾರಿಸಲಾಗುತ್ತದೆ. ಇದು ಬ್ಯಾಸಿಲಸ್ ಸಬ್ಟಿಲಿಸ್ ಎಂಬ ಬ್ಯಾಕ್ಟೀರಿಯಾವನ್ನು ತನ್ನ ಮೇಲ್ಮೈನಲ್ಲಿ ಹೊಂದಿದ್ದು ಈ ರೀತಿ ಹುಲ್ಲನ್ನು ಸುತ್ತುವುದರಿಂದ ಇದರಲ್ಲಿ ಸಕ್ಕರೆ ಅಂಶವನ್ನು ಹುದುಗಿಸಲು ಸಹಾಯಮಾಡುತ್ತದೆ.

ಆದರೆ ಈಗಿನ ಕಾಲದಲ್ಲಿ ಹುದುಗಿಸುವ ಪ್ರಕ್ರಿಯೆಗೆ ಒಣಹುಲ್ಲಿನ ಬದಲಿಗೆ Styrofoam box ಗಳನ್ನು ಬಳಸಲಾಗುತ್ತಿದೆ.

ನ್ಯಾಟೋ, ಕ್ಯಾಲೋರಿ, ಕೊಬ್ಬಿನಾಂಶ, ಕಾರ್ಬ್ಸ್‌, ಫೈಬರ್‌, ಪ್ರೋಟೀನ್‌, ಮ್ಯಾಂಗನೀಸ್‌, ಕಬ್ಬಿಣಾಂಶ, ನಾರಿನಾಂಶ, VitminK, ಮ್ಯಾಗ್ನೇಶಿಯಮ್‌, ಕ್ಯಾಲ್ಸಿಯಮ್‌, ವಿಟಮಿನ್‌ ಸಿ, ಪೊಟ್ಯಾಶಿಯಮ್‌, ಝಿಂಕ್‌, ಸೆಲೆನಿಯಮ್‌ನಂತಹ ಅಂಶಗಳಿದ್ದು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.

ನ್ಯಾಟೋನಲ್ಲಿ ಪ್ರೋಟೀನ್‌, ವಿಟಮಿನ್‌ ಹಾಗೂ ಖನಿಜ ಅಂಶಗಳು ಸಮೃದ್ಧವಾಗಿದೆ. ಹುದುಗಿಸುವ ಪ್ರಕ್ರಿಯೆಯು ಇದರ ಆಂಟಿನ್ಯೂಟ್ರಿಯೆಂಟ್‌ ಅಂಶವನ್ನು ಕಡಿಮೆಗೊಳಿಸುವುದರ ಜೊತೆಗೆ ದೇಹದಲ್ಲಿ, ಜೀರ್ಣಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆಹಾರದ ಪೋಷಕಾಂಶವನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ.

ನ್ಯಾಟೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ Calcium ಮತ್ತು ವಿಟಮಿನ್‌ ಕೆ2 ಇರುವುದರಿಂದ ಎಲುಬುಗಳಿಗೆ ಆರೋಗ್ಯಕರ ಹಾಗೂ ಬಲವಾಗಿರುತ್ತದೆ.

ಫೈಬೆರ್‌, ಪ್ರೊಬಿಯೊಟಿಕ್ಸ್‌ , ನ್ಯಾಟೋಕಿನೆಸ್‌, ವಿಟಮಿನ್‌ ಕೆ2 ಅಂಶಗಳ ಸಂಯೋಜನೆಯನ್ನು ಹೊಂದಿರುವ ಈ ಆಹಾರವು ಕೊಲೆಸ್ಟ್ರಾಲ್‌, ರಕ್ತದೋತ್ತಡ ಮಟ್ಟವನ್ನು ಕಡಿಮೆ ಮಾಡಲು, ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ನ್ಯಾಟೋದಲ್ಲಿ ಪ್ರೊಬಿಯೋಟಿಕ್ಸ್‌, Vitamin C ಹಾಗೂ ಹಲವಾರು ಖನಿಜಗಳು ಹೇರಳವಾಗಿ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳಷ್ಟು ಸಹಾಯಮಾಡುತ್ತದೆ.

ಹಾಗೆಯೇ ಇದರಲ್ಲಿ Soy Isoflavines ಹಾಗೂ ವಿಟಮಿನ್‌ ಕೆ2 ಹೊಂದಿರುವ ಕಾರಣ ನ್ಯಾಟೋವನ್ನು ಸೇವಿಸುವುದರಿಂದ ಕ್ಯಾನ್ಸರ್‌ ತುತ್ತಾಗುವ ಸಾಧ್ಯತೆಯೂ ತೀರಾ ಕಡಿಮೆ ಇರುತ್ತದೆ. ಜೊತೆಗೆ Probiotics ಹಾಗೂ ಫೈಬರ್‌ ಅಂಶವನ್ನು ಹೊಂದಿದ್ದು ಇವುಗಳು ತೂಕ ಹೆಚ್ಚಾಗುವುದನ್ನು ತಡೆಯುವುದರೊಂದಿಗೆ ದೇಹದ ತೂಕವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

ನ್ಯಾಟೋ ದೈನಂದಿನ ಸೇವನೆಯು ದೇಹಕ್ಕೆ ಬಹಳಷ್ಟು ಉತ್ತಮವಾಗಿದ್ದು, ಕಡಿಮೆ ದರದಲ್ಲಿ ಲಭಿಸುವ ಪೌಷ್ಟಿಕಾಂಶಗಳನ್ನು ಹೊಂದಿದ ಆಹಾರ ಇದಾಗಿದೆ.

-ಪೂರ್ಣಶ್ರೀ ಕೆ

ಟಾಪ್ ನ್ಯೂಸ್

Court-Symbol

Court Order: ಲೈಂಗಿಕ ದೌರ್ಜನ್ಯ ಸಾಬೀತು; 70 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ!

Alanda

Alanda: ಗ್ರಾಮ ಪಂಚಾಯಿತಿ ಮಾಜಿ ಸದಸ್ಯನಿಗೆ ಗುಂಡಿಟ್ಟು ಕೊಂದ ದುಷ್ಕರ್ಮಿಗಳು!

1-kejri

Anti-national ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ:ಜೈಲಿನಿಂದ ಹೊರಬಂದ ಕೇಜ್ರಿವಾಲ್

drowned

Gandhinagar; ನದಿಗೆ ಸ್ನಾನಕ್ಕೆ ಇಳಿದಿದ್ದ 8 ಮಂದಿ ದಾರುಣ ಮೃ*ತ್ಯು

Kumaraswmay

Nagamangala Riots: ಗಲಭೆ ಪೂರ್ವಯೋಜಿತ ಕೃತ್ಯ, ಗುಪ್ತಚರ ಇಲಾಖೆ ವೈಫಲ್ಯ ಸ್ಪಷ್ಟ: ಎಚ್‌ಡಿಕೆ

Parameshwar

Nagamangala ಸಣ್ಣ ಘಟನೆ ಹೇಳಿಕೆ: ಬಿಜೆಪಿಯ ಸರ್ಟಿಫಿಕೇಟ್ ಅಗತ್ಯವಿಲ್ಲ:ಪರಮೇಶ್ವರ್ ಕಿಡಿ

police crime

Nagamangala ಪ್ರಕರಣ; ಪೊಲೀಸ್ ಇನ್ಸ್ ಪೆಕ್ಟರ್ ಸಸ್ಪೆಂಡ್: ಮತ್ತೆ ಮೂವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

16

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

9

Children’s Health: ತಂತ್ರಜ್ಞಾನ ಮತ್ತು ಕೋಮಲ ಮನಸ್ಸುಗಳು

8

Healthy Spine; ಬೆನ್ನಿನ ಮೇಲೊಂದು ಪಕ್ಷಿನೋಟ!

11-tooth

Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

1–eewewqe

Paralympic ಚಿನ್ನವನ್ನು ಮೋದಿಗೆ ಅರ್ಪಿಸಿದ ಅಂತಿಲ್‌

1-der

National Swimming: ಕರ್ನಾಟಕ ಚಾಂಪಿಯನ್‌

1-indi-test

Bangladesh ಎದುರು ಮೊದಲ ಟೆಸ್ಟ್‌: ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

Court-Symbol

Court Order: ಲೈಂಗಿಕ ದೌರ್ಜನ್ಯ ಸಾಬೀತು; 70 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ!

Alanda

Alanda: ಗ್ರಾಮ ಪಂಚಾಯಿತಿ ಮಾಜಿ ಸದಸ್ಯನಿಗೆ ಗುಂಡಿಟ್ಟು ಕೊಂದ ದುಷ್ಕರ್ಮಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.