ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು


Team Udayavani, Jun 16, 2024, 3:38 PM IST

9

ರಮೇಶ್‌ (ಹೆಸರು ಬದಲಾಯಿಸಿದೆ) ಅವರಿಗೆ ತಮ್ಮ 40ನೇ ವಯಸ್ಸಿನಲ್ಲಿ ಲೈಂಗಿಕ ಕಾರ್ಯಚಟುವಟಿಕೆಯಲ್ಲಿ ವಿಷಯದಲ್ಲಿ ಬದಲಾವಣೆಗಳು ಅನುಭವಕ್ಕೆ ಬಂದವು. ಸಂಗಾತಿಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಸಂದರ್ಭದಲಿಲ ನಿಮಿರುವಿಕೆಯನ್ನು ಕಾಯ್ದುಕೊಳ್ಳಲು ಕಷ್ಟವಾಗಿ ಹತಾಶೆ ಮತ್ತು ಚಿಂತೆ ಉಂಟಾಗುತ್ತಿತ್ತು, ಇದರಿಂದ ಕಳೆದ 15 ವರ್ಷಗಳಲ್ಲಿ ಸಂಗಾತಿಯ ಜತೆಗೆ ಹೊಂದಿರುವ ಸಂಬಂಧದ ಬಗ್ಗೆ ಸಂಶಯ ಮತ್ತು ಬಿರುಕು ಮೂಡಲು ಆರಂಭವಾಯಿತು. ಉದ್ಯೋಗದ ಕಾರ್ಯವ್ಯಸ್ತತೆ ಮತ್ತು ಬೊಜ್ಜಿನಿಂದಾಗಿ ಅವರಿಗೆ ಸಾಕಷ್ಟು ಒತ್ತಡ ಇತ್ತು. ಪುರುಷರ ಲೈಂಗಿಕ ಆರೋಗ್ಯ ವಿಷಯದಲ್ಲಿ ವಿಶೇಷ ಪರಿಣತರಾಗಿದ್ದ ಯುರಾಲಜಿಸ್ಟ್‌ ಓರ್ವರನ್ನು ಭೇಟಿಯಾಗಿ ರಮೇಶ್‌ ಸಮಾಲೋಚನೆ ನಡೆಸಿದರು. ಹಲವಾರು ಪರೀಕ್ಷೆಗಳು ಮತ್ತು ಸಮಾಲೋಚನೆಗಳ ಬಳಿಕ ನಿಮಿರು ದೌರ್ಬಲ್ಯಕ್ಕೆ ಮೂಲ ಕಾರಣವು ಒತ್ತಡ ಎಂಬುದಾಗಿ ತಿಳಿದುಬಂತು. ಇದಕ್ಕೆ ಬಹು ಆಯಾಮದ ಚಿಕಿತ್ಸೆಯನ್ನು ಒದಗಿಸಲಾಯಿತು. ನಿಮಿರು ದೌರ್ಬಲ್ಯದ ದೈಹಿಕ ಆಯಾಮವನ್ನು ಸರಿಪಡಿಸಲು ಔಷಧಗಳ ಜತೆಗೆ ಒತ್ತಡ ಮತ್ತು ಚಿಂತೆಯ ನಿರ್ವಹಣೆಗೆ ಅವರಿಗೆ ಥೆರಪಿಗಳನ್ನು ಶಿಫಾರಸು ಮಾಡಲಾಯಿತು. ಕಾಲಾನುಕ್ರಮದಲ್ಲಿ ರಮೇಶ್‌ ಔಷಧ, ಥೆರಪಿಗಳು ಮತ್ತು ಜೀವನ ಶೈಲಿಯಲ್ಲಿ ಬದಲಾವಣೆಗಳ ಮೂಲಕ ತಮ್ಮ ಲೈಂಗಿಕ ಸಾಮರ್ಥ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡರು.

ನಿಮಿರು ದೌರ್ಬಲ್ಯವು ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಬಾಧಿಸುತ್ತದೆ, ಇದರಿಂದ ಅವರ ಜೀವನ ಗುಣಮಟ್ಟ ಮತ್ತು ಆಪ್ತ ಸಂಬಂಧದ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ತೃಪ್ತಿದಾಯಕವಾದ ಲೈಂಗಿಕ ಸಂಬಂಧವನ್ನು ಪೂರೈಸಲು ಅಗತ್ಯವಾದ ನಿಮಿರುವಿಕೆಯನ್ನು ಸಾಧಿಸಲು ಅಥವಾ ಕಾಯ್ದುಕೊಳ್ಳುವ ಅಸಾಮರ್ಥ್ಯವೇ ನಿಮಿರು ದೌರ್ಬಲ್ಯ.

ಮನಶ್ಶಾಸ್ತ್ರೀಯ ಅಂಶಗಳು, ಮಧುಮೇಹ, ಬೊಜ್ಜು, ಹೃದ್ರೋಗಗಳು ಮತ್ತು ಜೀವನ ಶೈಲಿಗೆ ಸಂಬಂಧಿಸಿದ ಅಂಶಗಳ ಸಹಿತ ಹಲವಾರು ಅಂಶಗಳು ನಿಮಿರು ದೌರ್ಬಲ್ಯಕ್ಕೆ ಕೊಡುಗೆ ನೀಡುತ್ತವೆ. ಔಷಧಗಳು, ಥೆರಪಿಗಳಂತಹ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿರುವುದು ನಿಜವಾದರೂ ಜೀವನ ವಿಧಾನ ಮತ್ತು ಆಹಾರ ಶೈಲಿಯಲ್ಲಿ ಬದಲಾವಣೆಗಳಂತಹ ಸಮಗ್ರ ಕಾರ್ಯವಿಧಾನವನ್ನು ಅನುಸರಿಸುವುದರ ಮೂಲಕ ಗಮನಾರ್ಹ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಜೀವನ ಶೈಲಿ ಬದಲಾವಣೆಯ ಪಾತ್ರ

ಜೀವನ ಶೈಲಿಗೆ ಸಂಬಂಧಿಸಿದ ಅನೇಕ ಅಂಶಗಳು ನಿಮಿರು ದೌರ್ಬಲ್ಯಕ್ಕೆ ಕೊಡುಗೆ ನೀಡಬಹುದಾಗಿವೆ. ಆಲಸಿ ಜೀವನ ಶೈಲಿ, ಅತಿಯಾದ ಮದ್ಯಪಾನ, ಧೂಮಪಾನ ಮತ್ತು ಒತ್ತಡ ತಿಳಿದಿರುವ ಅಂಶಗಳು. ನಿಯಮಿತವಾಗಿ ಏರೋಬಿಕ್‌ ವ್ಯಾಯಾಮ ಮಾಡುವುದರಿಂದ ಎಂಡೊಥೇಲಿಯಲ್‌ ಕಾರ್ಯಚಟುವಟಿಕೆ ಉತ್ತಮಗೊಳ್ಳುತ್ತದೆ, ನೈಟ್ರಿಕ್‌ ಆಕ್ಸೆ„ಡ್‌ ಉತ್ಪಾದನೆ ವೃದ್ಧಿಸುತ್ತದೆ, ರಕ್ತನಾಳಗಳಲ್ಲಿ ರಕ್ತಪರಿಚಲನೆ ಸುಗಮವಾಗುತ್ತದೆ; ಇವೆಲ್ಲವೂ ಪುರುಷ ಜನನಾಂಗದ ನಿಮಿರುವಿಕೆ ಮತ್ತು ಅದನ್ನು ಲೈಂಗಿಕ ಚಟುವಟಿಕೆಯುದ್ದಕ್ಕೆ ಕಾಯ್ದುಕೊಳ್ಳುವಲ್ಲಿ ನಿರ್ಣಾಯಕವಾಗಿವೆ. ಇದರ ಜತೆಗೆ, ಯೋಗ ಅಥವಾ ಧ್ಯಾನದಂತಹ ವಿಶ್ರಾಮಕ ಚಟುವಟಿಕೆಗಳ ಮೂಲಕ ಮಾನಸಿಕ ಒತ್ತಡವನ್ನು ನಿಭಾಯಿಸುವುದು ನಿಮಿರುವಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ನಿಮಿರುವಿಕೆಯ ಆರೋಗ್ಯಕ್ಕಾಗಿ ಆಹಾರಾಭ್ಯಾಸ ಕಾರ್ಯತಂತ್ರ (ಮೆಡಿಟರೇನಿಯನ್‌ ಶೈಲಿಯ ಆಹಾರಾಭ್ಯಾಸ)

ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು, ಕಡಿಮೆ ಪ್ರೊಟೀನ್‌ ಇರುವ ಮಾಂಸ ಮತ್ತು ಆರೋಗ್ಯಕರ ಕೊಬ್ಬಿನಂಶಗಳು ಸಂತೃಪ್ತಿದಾಯಕ ನಿಮಿರುವಿಕೆ ಆರೋಗ್ಯದ ತಳಹದಿಯಾಗಿದೆ. ಬಸಳೆ, ಟೊಮ್ಯಾಟೊ, ಬೆರಿ ಹಣ್ಣುಗಳು, ಕೊಬ್ಬಿರುವ ಮೀನು, ಬೀಜಗಳು ಮತ್ತು ಕಾಳುಗಳು ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ಜನನಾಂಗ ಪ್ರದೇಶಕ್ಕೆ ರಕ್ತಪರಿಚಲನೆಯು ಚೆನ್ನಾಗಿ ನಡೆಯಲು ಅತ್ಯುತ್ತಮ ಆಯ್ಕೆಗಳಾಗಿವೆ.

ಸೂಕ್ಷ್ಮ ಪೋಷಕಾಂಶಗಳ ಪಾತ್ರ

ರಕ್ತನಾಳಗಳ ಕಾರ್ಯಚಟುವಟಿಕೆ, ನ್ಯುರೊಟ್ರಾನ್ಸ್‌ಮಿಟರ್‌ ಸಂಶ್ಲೇಷಣೆ ಮತ್ತು ಆಕ್ಸಿಡೇಟಿವ್‌ ಒತ್ತಡವನ್ನು ಸರಿಯಾಗಿ ಇರಿಸಿಕೊಳ್ಳುವ ಮೂಲಕ ನಿಮಿರು ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವಲ್ಲಿ ಕೆಲವು ಸೂಕ್ಷ್ಮ ಪೋಷಕಾಂಶಗಳು ಪ್ರಧಾನ ಪಾತ್ರ ವಹಿಸುತ್ತವೆ. ಟೆಸ್ಟೊಸ್ಟಿರೋನ್‌ ಸಂಶ್ಲೇಷಣೆ ಮತ್ತು ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಗೆ ಝಿಂಕ್‌ ಒಂದು ಸಹ ಅಂಶವಾಗಿದ್ದು, ಇದು ಚಿಪ್ಪು ಮಾಂಸ ಮತ್ತು ಕೋಳಿಮಾಂಸ, ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಉರಿಯೂತ ನಿರೋಧಕ ಮತ್ತು ರಕ್ತನಾಳಗಳನ್ನು ವಿಕಸನಗೊಳಿಸುವ ಗುಣದಿಂದಾಗಿ ವಿಟಮಿನ್‌ ಡಿಯು ರಕ್ತನಾಳಗಳ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ ಮತ್ತು ನಿಮಿರು ದೌರ್ಬಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ.

ಸಂಭಾವ್ಯ ಅಪಾಯ ಕಾರಣಗಳಿಂದ ದೂರವಿರುವುದು

ಆಹಾರಾಭ್ಯಾಸದ ಕೆಲವು ಅಂಶಗಳು ನಿಮಿರು ದೌರ್ಬಲ್ಯಕ್ಕೆ ಕೊಡುಗೆ ನೀಡುತ್ತವೆ, ಹೀಗಾಗಿ ಅವುಗಳನ್ನು ಮಿತಿಯಲ್ಲಿ ಸೇವಿಸಬೇಕು ಅಥವಾ ಸಂಪೂರ್ಣವಾಗಿ ವರ್ಜಿಸಬೇಕು. ಸಂಸ್ಕರಿತ ಆಹಾರಗಳು, ಸಕ್ಕರೆ ಭರಿತ ಪಾನೀಯಗಳು ಅಥವಾ ಕೆಂಪು ಮಾಂಸ ಅಥವಾ ಹೆಚ್ಚು ಸ್ಯಾಚುರೇಟೆಡ್‌ ಹಾಗೂ ಟ್ರಾನ್ಸ್‌ ಫ್ಯಾಟ್‌ ಹೆಚ್ಚು ಇರುವ ಆಹಾರಗಳನ್ನು ಹೆಚ್ಚು ಸೇವಿಸುವುದು ಹೃದಯ – ರಕ್ತನಾಳ ವ್ಯೂಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಶಿಶ°ಕ್ಕೆ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಬಲ್ಲುದು. ಇಂತಹ ಆಹಾರಗಳನ್ನು ಕಡಿಮೆ ಮಾಡುವುದರ ಜತೆಗೆ ಸಂಪೂರ್ಣ, ಪೌಷ್ಟಿಕಾಂಶ ಸಮೃದ್ಧವಾಗಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ನಿಮಿರು ದೌರ್ಬಲ್ಯದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ದೇಹದಲ್ಲಿ ದ್ರವಾಂಶ ಕಾಯ್ದುಕೊಳ್ಳುವುದರ ಪ್ರಾಮುಖ್ಯ

ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ದ್ರವಾಂಶ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಇದು ಲೈಂಗಿಕ ಆರೋಗ್ಯಕ್ಕೆ ಕೂಡ ಕೊಡುಗೆ ನೀಡುತ್ತದೆ. ಪ್ರಧಾನವಾಗಿ ನೀರು ಮತ್ತು ಇತರ ದ್ರವಾಹಾರಗಳನ್ನು ಕುಡಿಯುವ ಮೂಲಕ ದೇಹದಲ್ಲಿ ದ್ರವಾಂಶ ಕಾಪಾಡಿಕೊಳ್ಳುವುದರಿಂದ ರಕ್ತ ಪ್ರಮಾಣ ಹೆಚ್ಚುತ್ತದೆ. ಇದರಿಂದ ಕೆವರ್ನೋಸಲ್‌ ರಕ್ತನಾಳಗಳ ಸಹಿತ ಅಂಗಾಂಶ ಪ್ರವರ್ಧನೆ ಚೆನ್ನಾಗಿ ನಡೆದು ಶಿಶ° ನಿಮಿರುವುದಕ್ಕೆ ಸಹಾಯವಾಗುತ್ತದೆ. ವಿಶೇಷವಾಗಿ ದೈಹಿಕ ವ್ಯಾಯಾಮ, ದೈಹಿಕ ಶ್ರಮದ ಕೆಲಸಗಳು ಮತ್ತು ದೇಹದ ದ್ರವಾಂಶ ನಷ್ಟವಾಗುವಂತಹ ಪರಿಸರದಲ್ಲಿ ಸಂದರ್ಭದಲ್ಲಿ ಪುರುಷರು ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದಕ್ಕೆ ಗಮನ ನೀಡಬೇಕಿದೆ.

ನಿಮಿರು ದೌರ್ಬಲ್ಯವು ಪುರುಷರ ಒಟ್ಟಾರೆ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರಬಲ್ಲಂತಹ ಒಂದು ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆಯಾದರೂ ಜೀವನ ವಿಧಾನ ಮತ್ತು ಆಹಾರ ಶೈಲಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದು ಇದರ ತಡೆ ಮತ್ತು ಚಿಕಿತ್ಸೆಗೆ ಬುನಾದಿಗಳಾಗಿವೆ. ನಿಯಮಿತವಾದ ದೈಹಿಕ ವ್ಯಾಯಾಮ, ಒತ್ತಡ ನಿರ್ವಹಣೆಯಂತಹ ಜೀವನ ಶೈಲಿ ಬದಲಾವಣೆಗಳು ಹಾಗೂ ಪೌಷ್ಟಿಕಾಂಶ ಸಮೃದ್ಧ ಸಮತೋಲಿತ ಆಹಾರ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಪುರುಷರು ಸಂತೃಪ್ತಿದಾಯಕ ನಿಮಿರುವಿಕೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ತಮ್ಮ ಲೈಂಗಿಕ ಜೀವನವನ್ನು ಚೆನ್ನಾಗಿರಿಸಿಕೊಳ್ಳಬಹುದಾಗಿದೆ.

-ಡಾ| ಸನ್ಮಾನ್‌ ಗೌಡ,

ಕನ್ಸಲ್ಟಂಟ್‌ ಯುರಾಲಜಿ

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಯುರಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

1-sadsa-d

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

Heavy Rain; Holiday announcement till PUC in Udupi district on July 19

Heavy Rain; ಜುಲೈ 19ರಂದು ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ ಘೋಷಣೆ

BY-Raghavendra

Heavy Rain: ನಿರಂತರ ಮಳೆಗೆ ಸೈದೂರು, ಕಾನ್ಲೆಯಲ್ಲಿ ಕೃಷಿ ಜಮೀನು ಜಲಾವೃತ 

1-pal

Bengal; ಮೆರವಣಿಗೆಯಲ್ಲಿ ಪ್ಯಾಲೇಸ್ತೀನ್ ಧ್ವಜ:ವಿಡಿಯೋ ಹಂಚಿಕೊಂಡ ಬಿಜೆಪಿಯ ಸುವೆಂದು ಅಧಿಕಾರಿ

ENGvsWI: 147 ವರ್ಷಗಳಲ್ಲೇ ಮೊದಲು; ವಿಂಡೀಸ್ ವಿರುದ್ದ ದಾಖಲೆ ಬರೆದ ಇಂಗ್ಲೆಂಡ್

ENGvsWI: 147 ವರ್ಷಗಳಲ್ಲೇ ಮೊದಲು; ವಿಂಡೀಸ್ ವಿರುದ್ದ ದಾಖಲೆ ಬರೆದ ಇಂಗ್ಲೆಂಡ್

akhilesh

Monsoon Offer; ನೂರು ಶಾಸಕರನ್ನು ತನ್ನಿ ಸರಕಾರ ರಚಿಸಿ: ಅಖಿಲೇಶ್ ಆಫರ್

ಅರ್ಜುನ್‌ ಜತೆ ಬ್ರೇಕಪ್‌ ಬಳಿಕ 50ರ ಹರೆಯದ ಮಲೈಕಾ ಬಾಳಲ್ಲಿ ʼಮಿಸ್ಟರಿ ಮ್ಯಾನ್‌ʼ ಎಂಟ್ರಿ?

ಅರ್ಜುನ್‌ ಜತೆ ಬ್ರೇಕಪ್‌ ಬಳಿಕ 50ರ ಹರೆಯದ ಮಲೈಕಾ ಬಾಳಲ್ಲಿ ʼಮಿಸ್ಟರಿ ಮ್ಯಾನ್‌ʼ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

8-breast-cancer

Breast Cancer: ಸ್ತನ ಕ್ಯಾನ್ಸರ್‌ನಲ್ಲಿ ವಂಶವಾಹಿಯ ಪಾತ್ರ

8-health

PCOD (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಸಮಸ್ಯೆ ಮತ್ತು ನಿರ್ವಹಣೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-sadsa-d

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

Heavy Rain; Holiday announcement till PUC in Udupi district on July 19

Heavy Rain; ಜುಲೈ 19ರಂದು ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ ಘೋಷಣೆ

BY-Raghavendra

Heavy Rain: ನಿರಂತರ ಮಳೆಗೆ ಸೈದೂರು, ಕಾನ್ಲೆಯಲ್ಲಿ ಕೃಷಿ ಜಮೀನು ಜಲಾವೃತ 

1-pal

Bengal; ಮೆರವಣಿಗೆಯಲ್ಲಿ ಪ್ಯಾಲೇಸ್ತೀನ್ ಧ್ವಜ:ವಿಡಿಯೋ ಹಂಚಿಕೊಂಡ ಬಿಜೆಪಿಯ ಸುವೆಂದು ಅಧಿಕಾರಿ

gowri movie songs released

Gowri ಹಾಡು ಹಬ್ಬ; ಸಮರ್ಜಿತ್‌, ಸಾನ್ಯಾ ಜೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.