

Team Udayavani, Jul 21, 2024, 11:42 AM IST
ಸ್ಕ್ಲೆರೊಡರ್ಮಾ ಎಂದರೇನು?
ಸ್ಕ್ಲೆರೊಡರ್ಮಾ ಎಂದರೆ “ಗಡಸು ಚರ್ಮ’ ಎಂದರ್ಥ. ಚರ್ಮದ ಅಡಿಭಾಗದಲ್ಲಿ ನಾರುನಾರಾದ ಅಂಗಾಂಶಗಳು ಅಸಹಜವಾಗಿ ಬೆಳೆಯುವುದರಿಂದಾಗಿ ಚರ್ಮ ಗಡುಸಾಗುವುದು ಅಥವಾ ಗಟ್ಟಿಯಾಗುವ ಮೂಲಕ ಇದು ಉಂಟಾಗುತ್ತದೆ.
ಲಕ್ಷಣಗಳು
ಇದು ಏಕೆ ಉಂಟಾಗುತ್ತದೆ?
ಸ್ಕ್ಲೆರೊಡರ್ಮಾ ಉಂಟಾಗುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ರೋಗನಿರೋಧಕ ಶಕ್ತಿಯು ದೇಹದ ವಿರುದ್ಧ ಅಸಹಜ ಪ್ರತಿಸ್ಪಂದನೆ ತೋರುವುದರಿಂದ ಸ್ಕ್ಲೆರೊಡರ್ಮಾ ಉಂಟಾಗುತ್ತದೆ; ಇದರಿಂದಾಗಿ ಚರ್ಮವು ಗಡಸಾಗಿ ಶ್ವಾಸಕೋಶ, ಹೃದಯ ಮತ್ತು ಮೂತ್ರಪಿಂಡಗಳಂತಹ ಅಂಗವ್ಯವಸ್ಥೆಗಳು ತೊಂದರೆಗೀಡಾಗುತ್ತವೆ.
ಇದು ಸೋಂಕುರೋಗವೇ?
ಅಲ್ಲ.
ರೋಗಪತ್ತೆಯನ್ನು ದೃಢಪಡಿಸಿಕೊಳ್ಳುವುದು ಹೇಗೆ?
ರುಮಟಾಲಜಿಸ್ಟ್ ಜಾಗರೂಕ ಪರೀಕ್ಷೆ, ತಪಾಸಣೆಗಳ ಬಳಿಕ ರೋಗಪತ್ತೆಯನ್ನು ದೃಢೀಕರಿಸುತ್ತಾರೆ. ಕೆಲವು ರಕ್ತಪರೀಕ್ಷೆಗಳು, ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್‌ಗಳು ಯಾವೆಲ್ಲ ಕಾಯಿಲೆಯಿಂದ ಬಾಧಿತವಾಗಿವೆ ಎಂಬುದನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ.
ಈ ಕಾಯಿಲೆಗೆ ಚಿಕಿತ್ಸೆ ಹೇಗೆ?
ಹಿಂದೆ ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇರಲಿಲ್ಲ. ಆದರೆ ಈಗ ಸಾಕಷ್ಟು ಪ್ರಗತಿ ಆಗಿದ್ದು, ಚಿಕಿತ್ಸೆ ಸಾಧ್ಯವಿದೆ. ಆರಂಭಿಕ ಹಂತಗಳಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಔಷಧ ನೀಡಿದರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಆದರೆ ಔಷಧಗಳು ದೀರ್ಘಕಾಲ ತೆಗೆದುಕೊಳ್ಳಬೇಕಾಗಿರುತ್ತದೆ. ಸಾಮಾನ್ಯವಾಗಿ ಉಪಯೋಗಿಸುವ ಔಷಧಗಳೆಂದರೆ ನಿಫೆಡಿಪೈನ್, ಟಾಡಾಲಫಿಲ್, ಮೈಕೊಫಿನೊಲೇಟ್, ಸೈಕ್ಲೊಫಾಸ್ಫಮೈಡ್, ಮೆಥೊಟ್ರಕ್ಸೇಟ್.
ರೋಗಿಯು ಯಾವೆಲ್ಲ ಮುಂಜಾಗರೂಕತೆಗಳನ್ನು ತೆಗೆದುಕೊಳ್ಳಬೇಕು?
ಬೆರಳುಗಳು ನೀಲಿಗಟ್ಟುವ ತೊಂದರೆ ಹೊಂದಿರುವವರು: ತಂಪಾದ ನೀರಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಸ್ನಾನ, ಕೈತೊಳೆಯುವುದು ಇತ್ಯಾದಿಗಳಿಗೆ ಬಿಸಿ ನೀರನ್ನೇ ಉಪಯೋಗಿಸಬೇಕು. ಮಳೆಗಾಲ ಮತ್ತು ಚಳಿಗಾಲದಲ್ಲಿ ಹತ್ತಿಬಟ್ಟೆಯ ಕೈಗವಸುಗಳನ್ನು ಧರಿಸಬೇಕು. ಎಸಿ ಕೊಠಡಿಗಳಲ್ಲಿ ಇರಬಾರದು. ಒತ್ತಡ/ಧೂಮಪಾನ/ಮಿಕ್ಸರ್‌ನಂತಹ ಅದುರುವ ಉಪಕರಣ, ಯಂತ್ರಗಳಿಂದ ದೂರವಿರಬೇಕು.
ಒಣಚರ್ಮದಂತಹ ಚರ್ಮದ ಸಮಸ್ಯೆಗಳು
ಆಗಾಗ, ವಿಶೇಷವಾಗಿ ಸ್ನಾನ ಮಾಡಿದ ಅನಂತರ ಮಾಯಿಶ್ಚರೈಸಿಂಗ್ ಕ್ರೀಮ್ ಮತ್ತು ಲೋಶನ್ ಗಳನ್ನು ಉಪಯೋಗಿಸಬೇಕು. ಹೊರಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಹಚ್ಚಿಕೊಳ್ಳಬೇಕು. ತುರಿಕೆಯನ್ನು ಬಾಯಿಯ ಮೂಲಕ ಸೇವಿಸುವ ಸಿಟ್ರಿಝಿನ್‌ನಂತಹ ಆ್ಯಂಟಿಹಿಸ್ಟಮಿನ್ ಔಷಧಗಳಿಂದ ನಿಯಂತ್ರಿಸಬಹುದು.
ಸ್ನಾಯು ಮತ್ತು ಸಂಧಿಗಳ ಬಿಗಿತ ಚಲನಶೀಲತೆಯನ್ನು ಮತ್ತು ಸ್ನಾಯ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಿ. ಬಿಗಿದುಕೊಂಡಿರುವ ಸಂಧಿಗಳನ್ನು ಸರಿಪಡಿಸಲು μಸಿಯೋಥೆರಪಿಸ್ಟ್ ನೆರವು ಪಡೆಯಬೇಕು.
ದಂತವೈದ್ಯಕೀಯ ಸಮಸ್ಯೆಗಳು
ಜೀರ್ಣಾಂಗ ವ್ಯೂಹದ ಸಮಸ್ಯೆಗಳು
ರಿಫ್ಲಕ್ಸ್ ಮತ್ತು ಎದೆಯುರಿ ಸಣ್ಣ ಪ್ರಮಾಣದಲ್ಲಿ ಆಗಾಗ ಆಹಾರ ಸೇವಿಸಬೇಕು.
ಆಹಾರ ಸೇವಿಸಿದ ಬಳಿಕ ಕನಿಷ್ಠ ಒಂದು ತಾಸು ನಿಂತಿರಬೇಕು ಅಥವಾ ಕುಳಿತುಕೊಂಡಿರಬೇಕು.
ರಾತ್ರಿ ತಡವಾಗಿ ಆಹಾರ ಸೇವಿಸಬಾರದು.
ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.
ಮಲಗುವಾಗ ಎರಡು ದಿಂಬುಗಳನ್ನು ತಲೆಯ ಕೆಳಗೆ ಇರಿಸಿಕೊಳ್ಳಬೇಕು ಅಥವಾ ಮಂಚದ ತಲೆಯ ಭಾಗವನ್ನು ಎತ್ತರಿಸಿಕೊಳ್ಳಬೇಕು.
ಜೀವಿತಾವಧಿ ನಿರೀಕ್ಷೆ
ಸಿಸ್ಟಮಿಕ್ ಸ್ಕ್ಲೆರೋಸಿಸ್ ರೋಗಿಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ, ಮೂತ್ರಪಿಂಡ ಕಾಯಿಲೆಗಳಿಗೆ, ಶ್ವಾಸಕೋಶಗಳ ಸುತ್ತಮುತ್ತಲಿನ ರಕ್ತನಾಳಗಳಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವ ಪಲ್ಮನರಿ ಆರ್ಟಿರಿಯಲ್ ಹೈಪರ್‌ಟೆನ್ಶನ್ (ಪಿಎಎಚ್)ಗೆ, ಶ್ವಾಸಕೋಶಗಳ ಉರಿಯೂತವಾದ ಅಲ್ವೆಯೊಲೈಟಿಸ್‌ಗೆ, ಜೀರ್ಣಾಂಗ ವ್ಯೂಹದ ಕಾಯಿಲೆಗಳಿಗೆ ಮತ್ತು ಹೃದಯ ಹಾನಿಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ. ಇವು ಮಾರಣಾಂತಿಕವಾಗಬಹುದಾಗಿವೆಯಲ್ಲದೆ ಜೀವನ ಗುಣಮಟ್ಟದ ಮೇಲೆ ತುಂಬಾ ಪ್ರತಿಕೂಲ ಪರಿಣಾಮ ಬೀರುತ್ತವೆ. ಆದ್ದರಿಂದ ಈ ಸಮಸ್ಯೆಗಳನ್ನು ಬೇಗನೆ ಪತ್ತೆಹಚ್ಚಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
ಗರ್ಭಿಣಿಯರು: ಸ್ಕ್ಲೆರೊಡರ್ಮಾಗೆ ತುತ್ತಾಗಿರುವ ಸ್ತ್ರೀಯರು ಮಕ್ಕಳನ್ನು ಪಡೆಯಲು ಬಯಸಿದರೆ ತಮ್ಮ ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರಜ್ಞರು, ರುಮಟಾಲಜಿ ತಜ್ಞರ ಜತೆಗೆ ಸವಿವರವಾಗಿ ಸಮಾಲೋಚನೆ ನಡೆಸಿ ಸಂಭಾವ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಸ್ಕ್ಲೆರೋಡರ್ಮಾ ನಿಯಂತ್ರಣದಲ್ಲಿದ್ದು, ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಾಂಗಗಳು ರೋಗಪೀಡಿತವಾಗಿಲ್ಲದೆ ಇದ್ದರೆ ಯಶಸ್ವಿ ಫಲಿತಾಂಶ ಪಡೆಯುವ ಸಾಧ್ಯತೆಗಳು ಅಧಿಕ.
-ಡಾ| ಪ್ರತ್ಯೂಷಾ ಮಣಿಕುಪ್ಪಮ್
ಅಸಿಸ್ಟೆಂಟ್ ಪ್ರೊಫೆಸರ್,
-ಡಾ| ಶಿವರಾಜ್ ಪಡಿಯಾರ್
ಅಸೋಸಿಯೇಟ್ ಪ್ರೊಫೆಸರ್,
ರುಮಟಾಲಜಿ ವಿಭಾಗ ಕೆಎಂಸಿ ಆಸ್ಪತ್ರೆ,
ಅತ್ತಾವರ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರುಮಟಾಲಜಿ ವಿಭಾಗ, ಕೆಎಂಸಿ, ಮಂಗಳೂರು)
Ad
Allergic Rhinitis:ನಿರಂತರ ಸೀನು,ಉಸಿರಾಟಕ್ಕೆ ಅಡಚಣೆ;ನಿಮಗೆ ಅಲರ್ಜಿಕ್ ರೈನೈಟಿಸ್‌ಇರಬಹುದು
Health Tests: ವಿವಿಧ ಆರೋಗ್ಯ ಪರೀಕ್ಷೆಗೆ ಹೇಗೆ ತೆರಳಬೇಕು?
Endometrial Cancer: ಮಹಿಳೆಯರು ನಿರ್ಲಕ್ಷಿಸಬಾರದ ನಿಶ್ಶಬ್ದ ಅಪಾಯ
OSA: ಗೊರಕೆಯನ್ನು ನಿರ್ಲಕ್ಷಿಸಬೇಡಿ! ಒಬ್‌ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (ಒಎಸ್‌ಎ)
Diabetes: ಮಧುಮೇಹಕ್ಕೆ ಸಕ್ಕರೆಯೊಂದೇ ಕಾರಣವೇ?
ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್
Kasaragod: ಸಾರ್ವತ್ರಿಕ ಮುಷ್ಕರ: ಬಸ್ ಕೊರತೆ
ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ
Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು
ಭಾರತ-ಪಾಕ್ ಯುದ್ಧ ನಿಲ್ಸಿದ್ದು ಟ್ರಂಪ್: ಅಮೆರಿಕ ವಿದೇಶಾಂಗ ಸಚಿವ
You seem to have an Ad Blocker on.
To continue reading, please turn it off or whitelist Udayavani.