ಮಂಕಿಪಾಕ್ಸ್ ; ಸೆಕ್ಸ್ ಜತೆಗಾರರ ಸಂಖ್ಯೆ ಕಡಿಮೆ ಮಾಡಿ: ವಿಶ್ವ ಆರೋಗ್ಯ ಸಂಸ್ಥೆ ಸಲಹೆ
98 ಪ್ರತಿಶತ ಸೋಂಕು ಸಲಿಂಗಕಾಮಿಗಳಲ್ಲಿ!
Team Udayavani, Jul 28, 2022, 3:21 PM IST
ಜಿನೀವಾ: ಮಂಕಿಪಾಕ್ಸ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ವೇಳೆ ಪುರುಷರಿಗೆ ತಮ್ಮ ಲೈಂಗಿಕ ಜತೆಗಾರರ ಸಂಖ್ಯೆ ಕಡಿಮೆ ಮಾಡುವಂತೆ ಪರಿಗಣಿಸಲು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಬುಧವಾರ ಸಲಹೆ ನೀಡಿದ್ದಾರೆ.
ಅನೇಕ ದೇಶಗಳಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವ ವೇಳೆ ಏಕಾಏಕಿ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಲಾಗಿದ್ದು, ನಂತರ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಸಲಹೆ ನೀಡಿದ್ದಾರೆ.
ಮೇ ತಿಂಗಳಲ್ಲಿ ಏಕಾಏಕಿ ಕಾಣಿಸಿಕೊಂಡ ಮಂಕಿಪಾಕ್ಸ್ ಪ್ರಕರಣಗಳಲ್ಲಿ, 98 ಪ್ರತಿಶತ ಸಲಿಂಗಕಾಮಿ, ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಇತರ ಪುರುಷರಲ್ಲಿ ಕಂಡು ಬಂದಿದೆ ಎಂದು ಹೇಳಿದ್ದಾರೆ. ಅಪಾಯದಲ್ಲಿರುವವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ಸಾಂಕ್ರಾಮಿಕ ವ್ಯಕ್ತಿಗಳು ನಿಕಟ, ದೈಹಿಕ ಸಂಪರ್ಕವನ್ನು ಒಳಗೊಂಡ ಕೂಟಗಳಿಂದ ದೂರವಿರಬೇಕು , ಆದರೆ ಜನರು ಯಾವುದೇ ಹೊಸ ಲೈಂಗಿಕ ಪಾಲುದಾರರನ್ನು ಅನುಸರಿಸಬೇಕಾದರೆ ಸಂಪರ್ಕ ವಿವರಗಳನ್ನು ಪಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ.
ಇದುವರೆಗೆ, 75 ಕ್ಕೂ ಹೆಚ್ಚು ದೇಶಗಳಲ್ಲಿ 19,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಆಫ್ರಿಕಾದಲ್ಲಿ ಮಾತ್ರ ಸಾವುಗಳು ವರದಿಯಾಗಿವೆ. ಆಫ್ರಿಕನ್ ರಾಷ್ಟ್ರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿ ಸಲಿಂಗ ಕಾಮಿಗಳ ಪ್ರಮಾಣವೂ ಹೆಚ್ಚಿನ ಸಂಖ್ಯೆಯಲ್ಲಿದೆ ಎನ್ನುವುದು ಈ ಹಿಂದಿನ ವರದಿಗಳಲ್ಲಿ ದೃಢವಾಗಿತ್ತು.
“ನಿಕಟ ಸಂಪರ್ಕ, ಚರ್ಮದಿಂದ ಚರ್ಮದ ಸಂಪರ್ಕ, ಪ್ರಾಯಶಃ ಮುಖಾಮುಖಿ ಸಂಪರ್ಕ, ಬೆವರಿನ ಹನಿಗಳು ಅಥವಾ ಬಾಯಿಯಲ್ಲಿ ಇರಬಹುದಾದ ವೈರಸ್‌ನಿಂದ ಹರಡುತ್ತದೆ ಎಂದು ನಮಗೆ ಸ್ಪಷ್ಟವಾಗಿ ತಿಳಿದಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಂಕಿಪಾಕ್ಸ್‌ನ ತಾಂತ್ರಿಕ ಪ್ರಮುಖ ಡಾ. ರೋಸಮಂಡ್ ಲೂಯಿಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆರೋಗ್ಯ ಭಾಗ್ಯ: ಋತುಚಕ್ರದ ಏರುಪೇರು…ಅತಿ ಸುಲಭದ ಪರಿಹಾರವೇನು?
ಸ್ಪರ್ಶ್ ಆಸ್ಪತ್ರೆಯಿಂದ ಅಂಗಾಂಗ ದಾನ ಉತ್ತೇಜಿಸಲು ವಾಕಥಾನ್
ಬಂಜೆತನಕ್ಕೆ ಕಾರಣಗಳನ್ನು ತಿಳಿಯುವುದು ಮತ್ತು ಯಶಸ್ಸಿನ ಸಾಧ್ಯತೆಗಳು
ಮೆಂತೆ ಕಾಳು ಕೇವಲ ಅಡುಗೆಗೆ ಮಾತ್ರವಲ್ಲ…ಇದರಲ್ಲಿದೆ ಹಲವಾರು ಔಷಧೀಯ ಗುಣ
ದೆಹಲಿಯಲ್ಲಿ ಮಂಕಿಪಾಕ್ಸ್ 5ನೇ ಪ್ರಕರಣ ಪತ್ತೆ; ಭಾರತದಲ್ಲಿನ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆ