
ಅಡುಗೆಗೆ ಮಾತ್ರ ಬಳಸೋದಲ್ಲ… ಜಾಯಿಕಾಯಿಯಲ್ಲಿದೆ ಹಲವು ಔಷಧೀಯ ಗುಣ…
ಅಜ್ಜಿಕಾಲದ ಮನೆಮದ್ದು ಎಂದು ಮೂಗು ಮುರಿಯಬೇಡಿ
Team Udayavani, Nov 28, 2022, 12:48 PM IST

ಜಾಯಿಕಾಯಿ, ಹಿಂದಿನಿಂದಲೂ ಭಾರತೀಯರು ಸಾಮಾನ್ಯವಾಗಿ ಬಳಸುವ ಮಸಾಲ ವಸ್ತು. ಅಡಕೆಯಂತೆ ಕಾಣುವ, ಸುವಾಸನಾಭರಿತ ಕಾಯಿಯನ್ನು ಅಡುಗೆಯಲ್ಲಷ್ಟೇ ಅಲ್ಲ, ಆಯುರ್ವೇದದಲ್ಲೂ ಬಳಸುತ್ತಾರೆ. ಓಹ್, ಇದಾ? ಇದು, ಅಜ್ಜಿಕಾಲದ ಮನೆಮದ್ದು ಎಂದು ಮೂಗು ಮುರಿಯಬೇಡಿ. ಯಾಕಂದ್ರೆ, ಜಾಯಿಕಾಯಿಯಲ್ಲಿ ಔಷಧೀಯ ಗುಣಗಳಿರುವುದು ವೈಜ್ಞಾನಿಕ ಸಂಶೋಧನೆಗಳಲ್ಲೂ ದೃಢಪಟ್ಟಿವೆ.
– ಆ್ಯಂಟಿ ಆಕ್ಸಿಡೆಂಟ್ಸ್‌ಗಳ ಪ್ರಮಾಣ ಹೆಚ್ಚಿರುವುದರಿಂದ ಜಾಯಿಕಾಯಿಯು, ನರಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.
-ಪಿತ್ಥ, ವಾಕರಿಕೆ, ಹೊಟ್ಟೆನೋವು ಕಾಡಿದಾಗ ಜಾಯಿಕಾಯಿಯ ಕಷಾಯ ಕುಡಿಯಬಹುದು.
-ಹಸಿವು ಹೆಚ್ಚಿಸುವ ಗುಣವೂ ಇದಕ್ಕಿದೆ.
-ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿರುವ ಜಾಯಿಕಾಯಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
-ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಗುಣ ಜಾಯಿಕಾಯಿಗಿದೆ.
-ಜಾಯಿಕಾಯಿಯಲ್ಲಿ ಬಿ-ಕಾಂಪ್ಲೆಕ್ಸ್, ವಿಟಮಿನ್ ಸಿ, ಫಾಲಿಕ್ ಆ್ಯಸಿಡ್ ಹೇರಳವಾಗಿವೆ.
-ಜಾಯಿಕಾಯಿಯನ್ನು ತೇಯ್ದು, ಹಚ್ಚಿದರೆ ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಕಡಿಮೆಯಾಗುತ್ತದೆ.
-ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ಔಷಧಗಳಲ್ಲಿ ಜಾಯಿಕಾಯಿಯನ್ನು ಬಳಸುತ್ತಾರೆ.
-ಜಾಯಿಕಾಯಿಯ ಪುಡಿಯನ್ನು ಮೈಗೆ ಉಜ್ಜಿ ಸ್ನಾನ ಮಾಡುವುದರಿಂದ, ಕಜ್ಜಿ, ತುರಿಕೆ, ಮೊಡವೆಯಂಥ ಚರ್ಮರೋಗಗಳು ಗುಣವಾಗುತ್ತವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
