ಹಿರಿಯರ ಆರೈಕೆ ಇರಲಿ ಎಚ್ಚರ

Team Udayavani, May 19, 2019, 9:31 AM IST

ಮನುಷ್ಯ ಮಗುವಾಗುವುದು ಎರಡೇ ಬಾರಿ ಒಂದು ಬಾಲ್ಯಾವಸ್ಥೆಯಲ್ಲಿ ಮತ್ತೂಂದು ವೃದ್ಧಾವಸ್ಥೆಯಲ್ಲಿ . ನಮ್ಮ ಬಾಲ್ಯದ ಆರಂಭದ ಹಂತಗಳು ಹೇಗಿರುತ್ತದೋ ಅದೇ ರೀತಿಯಲ್ಲಿಯೇ ವೃದ್ಧಾಪ್ಯ ಕೂಡ. ತನ್ನಲ್ಲಿರುವ ಎಲ್ಲ ದೈಹಿಕ ಶಕ್ತಿಗಳು ಹಂತ ಹಂತವಾಗಿ ಕಳೆದು ಶರೀರದ ಜತೆಗೆ ಎಲ್ಲವೂ ಕುಬ್ಜವಾಗತೊಡಗುತ್ತದೆ. ಅದೊಂದು ಸಹಜ ಪ್ರಕ್ರಿಯೆ. ಈ ವೇಳೆ ಹಿರಿಜೀವದ ಆರೈಕ ಅತೀ ಅಗತ್ಯ.

ಆರೈಕೆ ಹೀಗಿರಲಿ

ಆರೋಗ್ಯದ ಕಾಳಜಿ ವಹಿಸಿ

ಒಂದು ಸಣ್ಣ ಗಾಯವಾದರೂ ಸಾಕು ಹಿರಿ ಜೀವದ ಮನಸ್ಸು ಆತಂಕದಿಂದ ಕುಗ್ಗಿ ಹೋಗುತ್ತದೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಮನೆಮಂದಿಯೇ ವಹಿಸಿದರೆ ಅವರಲ್ಲಿರುವ ಆತಂಕವನ್ನು ದೂರ ಮಾಡಬಹುದು.

ಔಷಧಗಳ ಬಗ್ಗೆ ಎಚ್ಚರ

ಹಿರಿಯರುಗೊಂದಲದಿಂದಾಗಿ ತಪ್ಪಾದ ಔಷಧಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದನ್ನು ಮರೆತುಬಿಡಬಹುದು. ಹೀಗಾಗಿ ಮನೆ ಮಂದಿಯೇ ಇದನ್ನು ನೋಡಿಕೊಂಡರೆ ಉತ್ತಮ.

ಏಕಾಂತದಲ್ಲಿರಲು ಅವಕಾಶ ನೀಡದಿರಿ

ಮನೆಯಲ್ಲಿರುವ ಹಿರಿಯರಿಗಾಗಿ ನಿತ್ಯದ ಬದುಕಿನಲ್ಲಿ ಸ್ವಲ್ಪವಾದರೂ ಸಮಯ ಕೊಡಿ. ಅವರ ಆಸಕ್ತಿಯನ್ನು ಕೇಳಿಕೊಳ್ಳಿ. ಅವರಲ್ಲಿ ಜೀವನೋತ್ಸಾಹ ತುಂಬಲು ಪ್ರಯತ್ನಿಸಿ.

ಆಹಾರದ ಬಗ್ಗೆ ಕಾಳಜಿ ವಹಿಸಿ

ವೃದ್ಧಾಪ್ಯದಲ್ಲಿ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಕಾಡುವುದರಿಂದ ಅವರ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಸುಲಭವಾಗಿ ಜೀರ್ಣವಾಗಬಲ್ಲ, ಅಗಿಯಲು ಸಾಧ್ಯವಾಗುವಂಥ ಆಹಾರವನ್ನೇ ನೀಡಬೇಕು. ಹಣ್ಣು, ತರಕಾರಿ ಹೆಚ್ಚು ಸೇವನೆಗೆ ಆದ್ಯತೆ ಕೊಡಬೇಕು.

ಹಿರಿ ಜೀವಕ್ಕೆ ಮುಖ್ಯವಾಗಿ ಬೇಕಿರುವುದು ಮನೆಮಂದಿಯ ಪ್ರೀತಿ, ಆರೈಕೆ. ಅವರು ತಮ್ಮ ಬದುಕಿನ ಕೊನೆಯ ತನಕ ಸಂತೋಷವಾಗಿ ಕಳೆಯಬೇಕೆಂದು ಬಯಸುತ್ತಾರೆ. ಅದಕ್ಕೆ ಅವಕಾಶ ಕಲ್ಪಿಸಿಕೊಡುವುದು ಮನೆಮಂದಿಯ ಕರ್ತವ್ಯವೂ ಹೌದು.

ಹೆಲ್ತ್ ಅಪ್‌ಡೇಟ್ಸ್‌ಮಶ್ರೂಮ್‌ ಸೇವಿಸಿ ಅಲಿlೕಮರ್‌ ದೂರವಿರಿಸಿ
ಮಶ್ರೂಮ್‌ ಸೇವನೆಯಿಂದ ಅಲಿlೕಮರ್‌ ಕಾಯಿಲೆ ಬರುವ ಅಪಾಯ ಕಡಿಮೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ. ಸಿಂಗಾಪುರದ ಸಂಶೋಧಕರು ಈ ಸಂಶೋಧನೆಗಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಚೀನದ 663 ಪುರುಷರು ಮತ್ತು ಮಹಿಳೆಯರನ್ನು ಬಳಸಿಕೊಂಡಿದ್ದಾರೆ. ಜನರಲ್ಲಿ ಮಾಂಸ, ಹಸುರು ತರಕಾರಿ, ಹಣ್ಣು ಮತ್ತು ಬೀಜಗಳ ಸೇವನೆ ಸೇರಿದಂತೆ ಅನೇಕ ಆರೋಗ್ಯ, ನಡವಳಿಕೆ ಮತ್ತು ಸಾಮಾಜಿಕ ಆರ್ಥಿಕ ಅಂಶಗಳನ್ನು ನಿಯಂತ್ರಿಸಿದ ಅನಂತರ ವಾರದಲ್ಲಿ ಐದು ಔನ್ಸ್‌ಗಿಂತಲೂ ಕಡಿಮೆ ಮಶ್ರೂಮ್‌ ಸೇವಿಸುವವರಲ್ಲಿ ನಿತ್ಯ ಒಂದರಿಂದ ಎರಡು ಬಾರಿ ಮಶ್ರೂಮ್‌ ತಿನ್ನುವವರಲ್ಲಿ ಶೇ. 43ರಷ್ಟು ‘ಎಂ.ಸಿ.ಐ’ ಯ ಅಪಾಯ ಕಡಿಮೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ