ಯೋಗ ಮಾಡಲು ಯಾವ ಸಮಯ ಸೂಕ್ತ?
ತಿಂಡಿ ತಿನ್ನುವ 2 ಗಂಟೆ ಮೊದಲು ಯೋಗಾಭ್ಯಾಸ ಮುಗಿಸಿ ವಿಶ್ರಾಂತಿ ಪಡೆದಿರಬೇಕು.
Team Udayavani, Jul 26, 2021, 3:39 PM IST
ಇತ್ತೀಚಿನ ದಿನಗಳಲ್ಲಿ ಯೋಗ ಮಾಡುವುದು ಅತೀ ಮುಖ್ಯವಾಗಿದೆ. ಓಡುತ್ತಿರುವ ನಮ್ಮ ಜೀವನ ಶೈಲಿಯ ಜತೆ ನಮ್ಮನ್ನು ನಾವು ನೆಮ್ಮದಿ ಮತ್ತು ಬಲಿಷ್ಠವಾಗಿರಿಸಲು ಯೋಗ ಬೇಕಾಗಿದೆ. ಅಲ್ಲದೇ ಜೀವನದಲ್ಲಿ ಸರಿಯಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗ ಕ್ಷೇಮಕ್ಕೆ ಯೋಗ ಒಳ್ಳೆಯದು.
ಆದಾಗ್ಯೂ ಯೋಗದಿಂದ ಗರಿಷ್ಠ ಪ್ರಯೋಜನ ಪಡೆಯಲು ಸರಿಯಾದ ಸಮಯದಲ್ಲಿ ಅಭ್ಯಾಸ ಮಾಡುವುದು ಎಂದಿಗೂ ಒಳ್ಳೆಯದು. ಈಗ ಚಾಲ್ತಿಯಲ್ಲಿರುವ ಹೆಚ್ಚಿನ ಯೋಗ ಶಾಲೆಗಳು ಯೋಗಾಭ್ಯಾಸ ಮಾಡಲು ಉತ್ತಮ ಸಮಯವಾದ ಸೂರ್ಯೋದಯವನ್ನು ಆರಿಸಿಕೊಂಡಿವೆ. ಆದರೆ ಇದು ತಡವಾಗಿ ಮಲಗುವ ಅಥವಾ ಬೆಳಗ್ಗೆ ಬೇಗ ಇರುವ ಕೆಲಸದವರಿಗೆ ಇದು ಯೋಗ್ಯವಾಗುವುದಿಲ್ಲ.
ಉತ್ತಮ ಸಮಯ
ಯೋಗಾಭ್ಯಾಸಕ್ಕೆ ತಪ್ಪು ಸಮಯವೆಂದಿಲ್ಲ. ಪ್ರತಿಯೊಬ್ಬರು ವಿಭಿನ್ನ ಜೀವನ ಶೈಲಿಯಲ್ಲಿ ಬದುಕುತ್ತಾರೆ. ನೀವು ನಿಮ್ಮ ಸಮಯವನ್ನು ಸರಿಯಾಗಿ ಹೊಂದಿಸಿಕೊಂಡು ಬೆಳಗ್ಗೆ ಅಥವಾ ಸಂಜೆ ಅಭ್ಯಾಸ ಮಾಡಬಹುದು. ಇವೆರಡೂ ಅದರದ್ದೇ ಆದ ಸಾಧಕ- ಬಾಧಕಗಳನ್ನು ಹೊಂದಿ ರುತ್ತದೆ.
ಬೆಳಗ್ಗೆ ಯೋಗದ ಅನುಕೂಲ
ಬೆಳಗ್ಗೆ ಯೋಗ ಮಾಡುವುದರಿಂದ ದೇಹದಲ್ಲಿರುವ ನೋವುಗಳಿಗೆ ಮುಕ್ತಿ ಸಿಗುವುದಲ್ಲದೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಇಚ್ಛಿಸು ವವರು ಬೆಳಗ್ಗೆ ಯೋಗ ಮಾಡುವುದು ಉತ್ತಮ. ಬೆಳಗ್ಗಿನ ಯೋಗ ಮಾನಸಿಕ ತೀಕ್ಷ್ಣತೆಯನ್ನು ಖಾತ್ರಿಗೊಳಿಸುತ್ತದೆ. ಆತಂಕ ಮತ್ತು ಒತ್ತಡವನ್ನುಕಡಿಮೆ ಮಾಡುತ್ತದೆ. ಮನಸ್ಸು, ದೇಹವನ್ನು ಶಾಂತವಾಗಿರಿಸುತ್ತದೆ.
ಸಂಜೆ ಯೋಗದ ಅನುಕೂಲ
ಸಂಜೆಯ ಹೊತ್ತು ವಿಶ್ರಾಂತ ಸ್ಥಿತಿಯಲ್ಲಿರುತ್ತೀರಿ. ಇದು ನಿಮಗೆ ಯಾವುದೇ ರೀತಿಯ ಭಂಗಿಗ ಳನ್ನು ಅಭ್ಯಾಸ ಮಾಡಲು ಅನುವು ಮಾಡಿ ಕೊಡುತ್ತದೆ. ಹೆಚ್ಚಿನ ಜನರು ಬೆಳಗ್ಗೆಗೆ ಹೋಲಿಸಿದರೆ ಸಂಜೆಯ ಹೊತ್ತು ಉಲ್ಲಾಸದಾಯಕವಾಗಿರುತ್ತಾರೆ. ಇದರಿಂದ ಯೋಗ ಮಾಡಿ ಆರಾಮವಾಗಿ ನಿದ್ರೆ ಮಾಡಲು ಸುಲಭವಾಗುತ್ತದೆ.
ಯಾವಾಗ ಯೋಗ ಮಾಡಲು ಬಯಸುತ್ತೀರೋ ಆಗ ತಲೆಯಲ್ಲಿರುವ ಆಲೋಚನೆಗಳನ್ನು ಪಕ್ಕಕ್ಕೆ ಇರಿಸಿ ಮನಸ್ಸನ್ನು ಶಾಂತವಾಗಿರಿಸಿ. ಅದಲ್ಲದೆ ಶಾಂತವಾಗಿರುವ, ಯಾವುದೇ ಶಬ್ಧಗ ಳಿಲ್ಲದಲ್ಲಿ ಕುಳಿತು ಯೋಗ ಮಾಡಬೇಕು. ತಿಂಡಿ ತಿನ್ನುವ 2 ಗಂಟೆ ಮೊದಲು ಯೋಗಾಭ್ಯಾಸ ಮುಗಿಸಿ ವಿಶ್ರಾಂತಿ ಪಡೆದಿರಬೇಕು. ಆಗ ಮಾತ್ರ ಯೋಗಾಭ್ಯಾಸಕ್ಕೆ ತಕ್ಕುದಾದ ಪ್ರತಿ ಫಲ ದೊರೆಯಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ಎ. 2 ರಂದು ಸಿತಾರ್-ಬಾನ್ಸುರಿ ಜುಗಲ್ ಬಂದಿ “ಬಸಂತ್ ಉತ್ಸವ್’
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ