ಯೂಟ್ಯೂಬ್‌ ಖಾತೆಗಳು ರದ್ದು? ; ವಾಣಿಜ್ಯವಾಗಿ ಲಾಭವಿಲ್ಲದ ಖಾತೆಗಳಿಗೆ ಕೊಕ್‌ ಸಂಭವ

Team Udayavani, Nov 12, 2019, 7:36 AM IST

ಹೊಸದಿಲ್ಲಿ: ಆನ್‌ಲೈನ್‌ ವೀಡಿಯೋ ಶೇರಿಂಗ್‌ ಸಂಸ್ಥೆಯಾದ ‘ಯೂ ಟ್ಯೂಬ್‌’, ತನ್ನ ಖಾತೆದಾರರಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ತನ್ನಲ್ಲಿರುವ ಖಾತೆಗಳಲ್ಲಿ ‘ವಾಣಿಜ್ಯವಾಗಿ ಅನುಪಯುಕ್ತ’ವಾಗಿರುವಂಥ ಖಾತೆಗಳನ್ನು ರದ್ದುಗೊಳಿಸುವುದಾಗಿ ಮುನ್ನೆಚ್ಚರಿಕೆ ನೀಡಿದೆ.

ಈ ಕುರಿತಾಗಿ, ಯೂ ಟ್ಯೂಬ್‌ನಲ್ಲಿ ಚಾನೆಲ್‌ (ವಾಹಿನಿ) ಹೊಂದಿರುವ ಎಲ್ಲ ಖಾಸಗಿ ಖಾತೆದಾರರಿಗೆ ಇ-ಮೇಲ್‌ ರವಾನಿಸಲಾಗಿದ್ದು, ‘ಹೆಚ್ಚು ಸಬ್‌ಸ್ಕ್ರೈಬರ್ಸ್‌ (ಚಂದಾದಾರರು) ಹೊಂದಿರದ, ಅಗಾಧ ಸಂಖ್ಯೆಯಲ್ಲಿ ಜನರು ವೀಕ್ಷಿಸದೇ ಇರುವ ವೀಡಿಯೋ ಕ್ಲಿಪ್‌ ಹೊಂದಿರುವ ಖಾತೆಗಳನ್ನು ರದ್ದುಗೊಳಿಸಲಾಗುತ್ತದೆ ಅಥವಾ ಗೂಗಲ್‌ ಖಾತೆಗಳ ಮೂಲಕ ಆ ಖಾತೆಗಳಿಗೆ ಲಗ್ಗೆಯಿಡುವ ಸೌಕರ್ಯವನ್ನು ಹಿಂಪಡೆಯಲಾಗುತ್ತದೆ’ ಎಂಬರ್ಥದ ಸಂದೇಶವನ್ನು ಯೂ ಟ್ಯೂಬ್‌ ತನ್ನ ಗ್ರಾಹಕರಿಗೆ ರವಾನಿಸಿದೆ ಎಂದು ಮೂಲಗಳು ತಿಳಿಸಿದೆ.

ತನ್ನ ಈ ನಿರ್ಧಾರದ ಹಿಂದೆ, ಯೂ ಟ್ಯೂಬ್‌ನಲ್ಲಿ ಉತ್ತಮ ಗುಣಮಟ್ಟದ, ನೋಡಲೇಬೇಕಾದ ವೀಡಿಯೋಗಳನ್ನು ಮಾತ್ರ ಉತ್ತೇಜಿಸುವ ಹಾಗೂ ಇಡೀ ಪ್ರಕ್ರಿಯೆಗೆ ಪಾರದರ್ಶಕತೆ ತರುವ ಉದ್ದೇಶವಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ