ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Team Udayavani, May 23, 2019, 6:00 AM IST

ಈ ಬಾರಿ ಚುನಾವಣೆಯಲ್ಲಿ ದಿ.ರಾಜೀವ್‌ ಭ್ರಷ್ಟಾಚಾರದಿಂದ ಹಿಡಿದು ರಾಡಾರ್‌ನವರೆಗೆ, ಗೋಡ್ಸೆಯಿಂದ ಹಿಡಿದು ಮಹಾತ್ಮಾ ಗಾಂಧೀಜಿಯವರೆಗೆ, ಇವಿಎಂನಿಂದ ಹಿಡಿದು ಮಮತಾ ಮೀಮ್‌ನವರೆಗೆ ಅನೇಕಾನೇಕ ವಿಷಯಗಳು ಬಂದುಹೋದವು. ಕಳೆದ ಕೆಲವು ತಿಂಗಳಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಏನೆಲ್ಲ ಆಗಿ ಹೋಯಿತು ಎನ್ನುವುದರ ಹಿನ್ನೋಟ ಇಲ್ಲಿದೆ…

ಚುನಾವಣಾ ವಿಷಯವಾದ ಭದ್ರತೆ ವಿಚಾರ
ಫೆಬ್ರವರಿ 14ರಂದು ಪುಲ್ವಾಮಾದ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ಸೇನೆಯ ಮೇಲೆ ನಡೆದ ಉಗ್ರ ದಾಳಿ, ಅದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಕೋಟ್‌ನ ಮೇಲೆ ನಮ್ಮ ವಾಯುಪಡೆಗಳು ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ 2.0 ಎರಡೂ ದೇಶಗಳ ನಡುವೆ ಯುದ್ಧ ಭೀತಿಯನ್ನು ಸೃಷ್ಟಿಸಿಬಿಟ್ಟಿತ್ತು. ಬಾಲಕೋಟ್‌ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ್ದೇವೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದರೆ, ಇದಕ್ಕೆ ಪುರಾವೆ ಒದಗಿಸಿ ಎಂದು ಪ್ರತಿಪಕ್ಷಗಳು ಕೇಳಿದವು. ಇದಷ್ಟೇ ಅಲ್ಲದೇ, ನರೇಂದ್ರ ಮೋದಿ ಸರ್ಕಾರ ಬಾಲಕೋಟ್‌ ವಿಚಾರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅನೇಕ ಪಕ್ಷಗಳು ಆರೋಪಿಸುತ್ತಲೇ ಬಂದವು.

ಬಾಲಕೋಟ್‌ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಸೇನಾ ಪಡೆಗಳು ಭಾರತೀಯ ವಾಯುಪ್ರದೇಶದ ಸರಹದ್ದಿನೊಳಗೆ ಬಂದಾಗ, ನಮ್ಮ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಪಾಕ್‌ನ ಎಫ್-16 ವಿಮಾನವನ್ನು ಹೊಡೆದುರುಳಿಸಿದರು, ಆದರೆ ಅವರ ವಿಮಾನವೂ ಎದುರಾಳಿಗಳ ಗುಂಡಿನ ದಾಳಿಗೆ ಕೆಳಕ್ಕೆ ಉರುಳಿತು. ಅಭಿನಂದನ್‌ ಪಾಕ್‌ ಸೇನೆಗೆ ಸಿಕ್ಕಿಬಿದ್ದರು. ರಾತ್ರಿಬೆಳಗಾಗುವಷ್ಟರಲ್ಲಿ ಅಭಿನಂದನ್‌ ದೇಶದ ಹೀರೋ ಆಗಿಬಿಟ್ಟರು, ಅವರ ಬಿಡುಗಡೆಗಾಗಿ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತಂದಿತು. ಪಾಕಿಸ್ತಾನ ಒತ್ತಡಕ್ಕೆ ಅಭಿನಂದನ್‌ರನ್ನು ಬಿಟ್ಟುಕೊಟ್ಟಿತು. ತದನಂತರದಲ್ಲಿ ಬಿಜೆಪಿಯು ತನ್ನ ಕೆಲವು ರ್ಯಾಲಿಗಳಲ್ಲಿ ಅಭಿನಂದನ್‌ರ ಪೋಸ್ಟರ್‌ಗಳನ್ನು ಪ್ರಚಾರಕ್ಕೆ ಬಳಸಿಕೊಂಡದ್ದು, ಬಿಜೆಪಿ ನಾಯಕ ಮನೋಜ್‌ ತಿವಾರಿ ಸೇನಾ ಸಮ
ವಸ್ತ್ರದಲ್ಲಿ ಮತ ಯಾಚಿಸಿದ್ದೆಲ್ಲ
ವಿವಾದಕ್ಕೆ ಈಡಾಯಿತು.

ಮೀಮ್‌: ಮುನಿಸಿಕೊಂಡ ಮಮತಾ ಮ್ಯಾಮ್‌
ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾದ ನಾಯಕಿ ಪ್ರಿಯಾಂಕಾ ಶರ್ಮಾ ಅವರು ಮಮತಾ ಬ್ಯಾನರ್ಜಿಯವರ ಚಿತ್ರವೊಂದನ್ನು ಶೇರ್‌ ಮಾಡಿ ಬಂಧನಕ್ಕೊಳಗಾದರು. ಅಮೆರಿಕದ ಮೆಟ್‌ ಗಾಲಾ ಚಿತ್ರೋತ್ಸವದಲ್ಲಿ ಚಿತ್ರನಟಿ ಪ್ರಿಯಾಂಕಾ ಧರಿಸಿದ್ದ ವಿಚಿತ್ರ ದಿರಿಸಿನ, ಹೇರ್‌ ಸ್ಟೈಲ್‌ನ ಚಿತ್ರ ವೈರಲ್‌ ಆಗಿತ್ತು. ಆ ಚಿತ್ರಕ್ಕೆ ಮಮತಾ ಬ್ಯಾನರ್ಜಿಯ ಮುಖವನ್ನು ಫೋಟೋಶಾಪ್‌ ಮಾಡಿದ್ದೇ ವಿವಾದಕ್ಕೆ ಕಾರಣವಾಯಿತು. ಈ ಚಿತ್ರವನ್ನು ಶೇರ್‌ ಮಾಡಿದ್ದಕ್ಕಾಗಿ ಪ್ರಿಯಾಂಕಾ ಶರ್ಮಾ ಸೈಬರ್‌ ಅಪರಾಧದ ಅಡಿಯಲ್ಲಿ 14 ದಿನ ಜೈಲುವಾಸ ಅನುಭವಿಸಬೇಕಾಯಿತು. ಈ ಸಂಗತಿ, ಅಭಿವ್ಯಕ್ತಿ ಸ್ವಾತಂತ್ರÂದ ಕುರಿತ ಚರ್ಚೆಯನ್ನು ಮತ್ತೆ ಹುಟ್ಟುಹಾಕಿತು. ಪ. ಬಂಗಾಳ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರÂವನ್ನು ಹತ್ತಿಕ್ಕುತ್ತಿದೆ ಎನ್ನುತ್ತಿದೆ ಬಿಜೆಪಿ. ಏನೇ ಆದರೂ ನಾನು ಕ್ಷಮೆ ಯಾಚಿಸುವುದಿಲ್ಲ ಎನ್ನುತ್ತಿದ್ದಾರೆ ಪ್ರಿಯಾಂಕಾ ಶರ್ಮಾ.

ಗಂಭೀರ ಆರೋಪ
ಪೂರ್ವ ದೆಹಲಿ ಸಂಸದೆ, ಆಪ್‌ನ ಆತಿಶಿ ಮರ್ಲೆನಾ ಎದುರು ಈ ಬಾರಿ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಕಣಕ್ಕಿಳಿದಿದ್ದಾರೆ. ಮೊದಲಿನಿಂದಲೂ ಗಂಭೀರ್‌ ಮತ್ತು ಆಪ್‌ನ ನಡುವೆ ಟ್ವೀಟ್‌ವಾರ್‌ಗಳು ನಡೆಯುತ್ತಿದ್ದವಾದರೂ, ಚುನಾವಣಾ ಸಮಯದಲ್ಲಿ ಈ ಜಗಳ ಇನ್ನೊಂದು ಹಂತಕ್ಕೆ ತಲುಪಿತು. ಗಂಭೀರ್‌ ಆತಿಶಿ ಮಲೇìನಾರ ತೇಜೋವಧೆ ಮಾಡುವಂಥ ಕೆಟ್ಟ ಕರಪತ್ರಗಳನ್ನು ಪೂರ್ವ ದೆಹಲಿ ನಿವಾಸಿಗಳಿಗೆ ಹಂಚುತ್ತಿದ್ದಾರೆ ಎಂಬ ಆರೋಪ ಮಾಡಿತು ಆಪ್‌. ಆತಿಶಿ ಮಲೇìನಾ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟರು. ಹಠಾತ್ತನೆ ಈ ಪ್ರಕರಣ ಮಹಿಳಾ ಸುರಕ್ಷತೆಯ ರೂಪ ಪಡೆಯಿತು. ಗಂಭೀರ್‌ ಬಂದರೆ ಮಹಿಳೆಯರು ಸುರಕ್ಷಿತವಾಗಿ ಇರಲಾರರು ಎಂದು ಆರೋಪಿಸಿತು ಆಪ್‌. ಆದರೆ, “ಈ ಕರಪತ್ರ ಹಂಚಿದ್ದು ನಾನು ಎಂದು ರುಜುವಾತು ಮಾಡಿದರೆ ನಡುರಸ್ತೆಯಲ್ಲೇ ನೇಣುಬಿಗಿದುಕೊಳ್ಳುತ್ತೇನೆ, ಕೇಜ್ರಿವಾಲ್‌ ರಾಜೀನಾಮೆ ನೀಡಲು ಸಿದ್ಧರಾ?’ ಎಂದು ಗಂಭೀರ್‌ ಆಪ್‌ ನಾಯಕರಿಗೆ ಸವಾಲೆಸೆದರು. ಗಂಭೀರ್‌ ಬೆಂಬಲಕ್ಕೆ ಕ್ರಿಕೆಟಿಗರಾದ ಹರ್‌ಭಜನ್‌ ಸಿಂಗ್‌, ಮೊಹಮ್ಮದ್‌ ಕೈಫ್, ಜಹೀರ್‌ ಖಾನ್‌ ನಿಂತದ್ದು ವಿಶೇಷ.

ಪೂರ್ವ ದೆಹಲಿ ಸಂಸದೆ, ಆಪ್‌ನ ಆತಿಶಿ ಮರ್ಲೆನಾ ಎದುರು ಈ ಬಾರಿ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಕಣಕ್ಕಿಳಿದಿದ್ದಾರೆ. ಮೊದಲಿನಿಂದಲೂ ಗಂಭೀರ್‌ ಮತ್ತು ಆಪ್‌ನ ನಡುವೆ ಟ್ವೀಟ್‌ವಾರ್‌ಗಳು ನಡೆಯುತ್ತಿದ್ದವಾದರೂ, ಚುನಾವಣಾ ಸಮಯದಲ್ಲಿ ಈ ಜಗಳ ಇನ್ನೊಂದು ಹಂತಕ್ಕೆ ತಲುಪಿತು. ಗಂಭೀರ್‌ ಆತಿಶಿ ಮಲೇìನಾರ ತೇಜೋವಧೆ ಮಾಡುವಂಥ ಕೆಟ್ಟ ಕರಪತ್ರಗಳನ್ನು ಪೂರ್ವ ದೆಹಲಿ ನಿವಾಸಿಗಳಿಗೆ ಹಂಚುತ್ತಿದ್ದಾರೆ ಎಂಬ ಆರೋಪ ಮಾಡಿತು ಆಪ್‌. ಆತಿಶಿ ಮಲೇìನಾ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟರು. ಹಠಾತ್ತನೆ ಈ ಪ್ರಕರಣ ಮಹಿಳಾ ಸುರಕ್ಷತೆಯ ರೂಪ ಪಡೆಯಿತು. ಗಂಭೀರ್‌ ಬಂದರೆ ಮಹಿಳೆಯರು ಸುರಕ್ಷಿತವಾಗಿ ಇರಲಾರರು ಎಂದು ಆರೋಪಿಸಿತು ಆಪ್‌. ಆದರೆ, “ಈ ಕರಪತ್ರ ಹಂಚಿದ್ದು ನಾನು ಎಂದು ರುಜುವಾತು ಮಾಡಿದರೆ ನಡುರಸ್ತೆಯಲ್ಲೇ ನೇಣುಬಿಗಿದುಕೊಳ್ಳುತ್ತೇನೆ, ಕೇಜ್ರಿವಾಲ್‌ ರಾಜೀನಾಮೆ ನೀಡಲು ಸಿದ್ಧರಾ?’ ಎಂದು ಗಂಭೀರ್‌ ಆಪ್‌ ನಾಯಕರಿಗೆ ಸವಾಲೆಸೆದರು. ಗಂಭೀರ್‌ ಬೆಂಬಲಕ್ಕೆ ಕ್ರಿಕೆಟಿಗರಾದ ಹರ್‌ಭಜನ್‌ ಸಿಂಗ್‌, ಮೊಹಮ್ಮದ್‌ ಕೈಫ್, ಜಹೀರ್‌ ಖಾನ್‌ ನಿಂತದ್ದು ವಿಶೇಷ.

ಮೋದಿ ರಾಡಾರ್‌ ವಿವಾದ
ಈ ಬಾರಿ ಅನೇಕ ಸಂದರ್ಶನಗಳನ್ನು ನೀಡಿದ್ದಾರೆ ಮೋದಿ. ಮೊದಲನೆಯದಾಗಿ, ಅಕ್ಷಯ್‌ ಕುಮಾರ್‌ಗೆ ನೀಡಿದ ಸಂದರ್ಶನ ವೈರಲ್‌ ಆಯಿತು. ಅದರಲ್ಲಿ ಅವರಿಗೆ ತೀರಾ ಸರಳ‌ ಪ್ರಶ್ನೆಗಳನ್ನು ಕೇಳಲಾಯಿತು ಎಂದು ಕಾಂಗ್ರೆಸ್‌ ಆರೋಪಿಸಿತು. ಅದರಲ್ಲೂ “ಮೋದೀಜಿ ನೀವು ಮಾವಿನ ಹಣ್ಣು ತಿಂತೀರಾ?’ ಎನ್ನುವ ಪ್ರಶ್ನೆ ಮೀಮ್‌ ಆಗಿ ಹರಿದಾಡಿತು. ನಂತರ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿಯವರು, ಬಾಲ ಕೋಟ್‌ ದಾಳಿಯ ಬಗ್ಗೆ ಮಾತನಾಡುತ್ತಾ, “ಅಂದು ವಾಯು ದಾಳಿ ನಡೆಸುವುದಕ್ಕೆ ವಾತಾವರಣ ಪೂರಕವಾಗಿ ಇರಲಿಲ್ಲ. ಹೀಗಾಗಿ, ಪರಿಣತರ ತಲೆಯಲ್ಲಿ ದಾಳಿಯ ದಿನವನ್ನು ಮುಂದೂಡಬೇಕು ಎಂಬ ಆಲೋಚನೆ ಸುಳಿಯಿತು. ಆದರೆ, ಮೋಡಗಳು ಮಡುಗಟ್ಟಿರುವುದರಿಂದ ನಮ್ಮ ವಿಮಾನಗಳು ರಾಡಾರ್‌ನಿಂದ ತಪ್ಪಿಸಿಕೊಳ್ಳಬಹುದು ಎಂದು ನಾನೇ ಸಲಹೆ ನೀಡಿದೆ’ ಎಂಬ ಹೇಳಿಕೆ ನೀಡಿದರು. ಮೋಡಗಳಿದ್ದರೂ ರಾಡಾರ್‌ಗಳಿಗೆ ವಿಮಾನಗಳನ್ನು ಪತ್ತೆ ಹಚ್ಚಬಹುದು. ಹೀಗಾಗಿ, ಮೋದಿಯವರ ಈ ತಪ್ಪು ಹೇಳಿಕೆ ರಕ್ಷಣಾ ಪರಿಣತರಿಂದಲೂ ಟೀಕೆಗೆ ಒಳಗಾಯಿತು. ಮೊದಲು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದ ಬಿಜೆಪಿಯ ಟ್ವಿಟರ್‌ ಖಾತೆಗಳು, ನಂತರ ಡಿಲೀಟ್‌ ಮಾಡಲಾರಂಭಿಸಿದವು. ಆದರೆ ಅಷ್ಟರಲ್ಲೇ ಈ ವಿಡಿಯೋ ವೈರಲ್‌ ಆಗಿಬಿಟ್ಟಿತು. ಇನ್ನು ಮೋದಿ ಡಿಜಿಟಲ್‌ ಕ್ಯಾಮೆರಾ-ಇಮೇಲ್‌ ಕುರಿತು ನೀಡಿದ ಹೇಳಿಕೆಯೂ ಟ್ರಾಲ್‌ ಆಯಿತು.

ನಮೋ ಟಿ.ವಿ, ಮೋದಿ ಪಿಕ್ಚರ್‌
ಮಾರ್ಚ್‌ 26ರಂದು ಅಸ್ತಿತ್ವಕ್ಕೆ ಬಂದ “ನಮೋ ಟಿ.ವಿ.’ ಈಗ ಪ್ರಸಾರ ನಿಲ್ಲಿಸಿದೆ. ಟಾಟಾ ಸ್ಕೈ, ವೀಡಿಯೋ ಕಾನ್‌, ಡಿಶ್‌ಟಿವಿಯಂಥ ಡಿಟಿಎಚ್‌ ಸೇವೆಗಳಲ್ಲಿ ಉಚಿತವಾಗಿ ಬಿತ್ತರವಾಗುತ್ತಿದ್ದ ನಮೋ ಟಿ.ವಿ.ಯನ್ನು ಪ್ರತಿಪಕ್ಷಗಳೆಲ್ಲ ಬಿಜೆಪಿಯ ಪ್ರಚಾರ ತಂತ್ರ ಎಂದೇ ದೂರಿದ್ದವು. ಇದರಲ್ಲಿ ಬಿಜೆಪಿ ಪಕ್ಷದ ಪರ ಜಾಹೀರಾತುಗಳನ್ನು ಪ್ರದರ್ಶಿಸುವಂತಿಲ್ಲ ಎನ್ನುವ ಆಯೋಗದ ತಾಕೀತಿನ ನಡುವೆಯೇ ಪ್ರಸಾರ ಮುಂದುವರಿದಿತ್ತು. ಕೊನೆಯ ಹಂತದ ಮತದಾನದಂದು ಪ್ರಸಾರ ಸ್ಥಗಿತಗೊಂಡಿತು. ಇನ್ನು ವಿವೇಕ್‌ ಓಬೇರಾಯ್‌ ಅಭಿನಯದ “ಪಿಎಂ ನರೇಂದ್ರ ಮೋದಿ’ ಸಿನೆಮಾ ಕೂಡ ಬಹಳ ವಿವಾದ, ಅಡತಡೆಗಳನ್ನು ಎದುರಿಸಿತು. “”ಆ್ಯಕ್ಸಿಡೆಂಟಲ್‌ ಪ್ರೈಂ ಮಿನಿಸ್ಟರ್‌ ಚಿತ್ರದ ಮೂಲಕ ಕಾಂಗ್ರೆಸ್‌ನ ಹೆಸರು ಕೆಡಿಸಲು ಪ್ರಯತ್ನಿಸಿದ್ದ ಬಿಜೆಪಿ ಈಗ ಮೋದಿ ಸಿನೆಮಾದ ಮೂಲಕ ತನ್ನ ತಪ್ಪುಗಳನ್ನೆಲ್ಲ ಮುಚ್ಚಿಡಲು ಪ್ರಯತ್ನಿಸುತ್ತಿದೆ” ಎಂದು ಕಾಂಗ್ರೆಸ್ಸಿಗರು ಆರೋಪಿಸಿದರು. ಅನೇಕರು ಸಿನೆಮಾ ಬಿಡುಗಡೆ ವಿರುದ್ಧ ಕೋರ್ಟ್‌ ಮತ್ತು ಚು.ಆಯೋಗದ ಮೆಟ್ಟಿಲೇರಿದರು. ಏಪ್ರಿಲ್‌ 5ರಂದು ಬಿಡುಗಡೆಗೆ ಸಿದ್ಧವಾಗಿದ್ದ ಈ ಚಿತ್ರ ಮುಂದೂಡಲ್ಪಟ್ಟಿತು. ಈಗ ಮೋದಿ ಸಿನೆಮಾ ಮೇ 24ರಂದು ಬಿಡುಗಡೆಯಾಗಲಿದೆ.

ನೀನು ಕಳ್ಳ, ನಿಮ್ಮಪ್ಪ ಕಳ್ಳ
ರಫೇಲ್‌ ವಿಚಾರದಲ್ಲಿ ಮೋದಿ ಅನಿಲ್‌ ಅಂಬಾನಿಗೆ ಸಹಾಯ ಮಾಡಿದ್ದಾರೆ ಎಂದು ರಾಹುಲ್‌ ಆರೋಪಿಸುತ್ತಲೇ ಬಂದಿದ್ದಾರೆ. ಅವರು “ಚೌಕೀದಾರ್‌ ಚೋರ್‌ ಹೈ’ ಎಂದರು. ಇದಕ್ಕೂ ಮೊದಲು ಬಿಜೆಪಿಯವರೆಲ್ಲ ಮೇ ಭಿ ಚೌಕೀದಾರ್‌ ಎನ್ನುತ್ತಾ, ತಮ್ಮ ಹೆಸರುಗಳ ಮುಂದೆಲ್ಲ ಚೌಕೀದಾರ್‌ ಎಂದು ಸೇರಿಸಿಕೊಂಡಿದ್ದರು. ಚೌಕೀದಾರ್‌ ಎಂಬ ಪದ ಫೇಮಸ್‌ ಆಗುತ್ತಿದ್ದಂತೆಯೇ ಚೌಕೀದಾರ್‌ ಚೋರ್‌ ಎನ್ನುವ ಪದವೂ ಪದೇ ಪದೆ ಬಳಕೆಯಾಯಿತು. ಯಾವ ಮಟ್ಟಕ್ಕೆಂದರೆ, ರಾಹುಲ್‌ ಅವರು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಹೆಸರನ್ನೂ ಎಳೆದುತಂದು ಕೊನೆಗೆ ಕ್ಷಮೆ ಕೇಳುವ ಪರಿಸ್ಥಿತಿ ತಂದುಕೊಂಡರು. ಆದರೂ ಅವರು ಮೋದಿ ವಿರುದ್ಧ ಚೋರ್‌ ಎಂಬ ಅಸ್ತ್ರವನ್ನು ಎಷ್ಟು ಬಳಸಿದರೆಂದರೆ ಕೊನೆಗೆ ನರೇಂದ್ರ ಮೋದಿ, “ನಿಮ್ಮ ಅಪ್ಪನ ಜೀವನ ಕೊನೆಗೊಂಡದ್ದೇ ಭ್ರಷ್ಟಾಚಾರಿ ನಂಬರ್‌ 1 ಎಂಬ ಪಟ್ಟದೊಂದಿಗೆ’ ಎಂದು ರಾಹುಲ್‌ಗೆ ತೀವ್ರ ಎದುರೇಟು ಕೊಟ್ಟರು. ಕಾಂಗ್ರೆಸ್‌ ಅಂತೂ ಈ ಹಠಾತ್‌ ಪ್ರತಿದಾಳಿಯಿಂದ ಕೆರಳಿ ಕೆಂಡಾ ಮಂಡಲವಾಯಿತು. ಆದರೆ ಅದರೊಂದಿಗೆ ಚೌಕೀದಾರ್‌ ಚೋರ್‌ ಎನ್ನುವುದನ್ನೂ ಹಠಾತ್ತನೆ ನಿಲ್ಲಿಸಿಬಿಟ್ಟಿತು.

ಸುಮ್ಮನೆ ಕೂಡದ ಸಾಧ್ವಿ
ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಅವರಿಗೆ ಈ ಬಾರಿ ಬಿಜೆಪಿ ಮಧ್ಯಪ್ರದೇಶದ ಭೋಪಾಲ್‌ನಿಂದ ಟಿಕೆಟ್‌ ನೀಡಿದೆ. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಇದ್ದಾರೆ. ಇಬ್ಬರೂ ತಮ್ಮ ಹರಿತ ಮಾತುಗಳಿಗೆ ಹೆಸರುವಾಸಿಯಾದ್ದರಿಂದ, ಈ ಬಾರಿ ಇಬ್ಬರೂ ಏನಾದರೂ ವಿವಾದ ಸೃಷ್ಟಿಸುತ್ತಾರೆ ಎಂಬ ಊಹೆ ಇದ್ದೇ ಇತ್ತು. ಆದರೆ ದಿಗ್ವಿಜಯ್‌ ಸಿಂಗ್‌ ಈ ಬಾರಿ ಮೌನಕ್ಕೆ ಶರಣಾದರೆ, ಸಾಧ್ವಿ ಮಾತ್ರ ಸದ್ದು ಮಾಡಿದರು. “ಹೇಮಂತ್‌ ಕರ್ಕರೆೆ ನಾಶವಾಗಲಿ’ ಎಂದು ತಾವು ಶಾಪ ಹಾಕಿದ್ದಾಗಿ ಹೇಳಿದ್ದ ಸಾಧ್ವಿ, ವಿವಾದ ಭುಗಿಲೇಳು ತ್ತಿದ್ದಂತೆಯೇ ಕ್ಷಮೆ ಕೇಳಿದರು. ಆ ಸಮಯದಲ್ಲೇ ಮೋದಿ-ಶಾ ಜೋಡಿ ಪ್ರಜ್ಞಾರನ್ನು ಎಚ್ಚರಿಸಿತ್ತು. ಆದರೆ ಭಾಷಣದ ಭರದಲ್ಲಿ ಪ್ರಜ್ಞಾ ಠಾಕೂರ್‌ ನಾಥೂರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಹೊಗಳಿಬಿಟ್ಟರು. ಈ ವಿಚಾರ ಬಿಜೆಪಿಗೂ ಅತೀವ ಕಿರಿಕಿರಿ ಉಂಟುಮಾಡಿದ್ದು ಸುಳ್ಳಲ್ಲ. ಇದರಿಂದ ಕೆರಳಿದ ಮೋದಿ, “ಪ್ರಜ್ಞಾರನ್ನು ನಾನು ಎಂದಿಗೂ ಕ್ಷಮಿಸಲಾರೆ’ ಎಂದು ಹೇಳಿ, ವಿವಾದವನ್ನು ಕೊನೆಗೊಳಿಸಲು ಪ್ರಯತ್ನಿಸಿದರು. ಈಗ ಪ್ರಜ್ಞಾ ಸಿಂಗ್‌ ಫ‌ಲಿಂತಾಂಶ ಬರುವವರೆಗೂ ತಾವು ಮಾತನಾಡುವುದಿಲ್ಲ ಎಂದು ಮೌನ ವ್ರತಕ್ಕೆ ಜಾರಿದ್ದಾರೆ.

ವಿರಾಟ್‌ವಿಹಾರ
ರಾಜೀವ್‌ ಗಾಂಧಿ ನೌಕಾಪಡೆಯ ಐಎನ್‌ಎಸ್‌ ವಿರಾಟ್‌ ಅನ್ನು ತಮ್ಮ ಕುಟುಂಬದ ಪ್ರವಾಸಗಳಿಗೆ ಟ್ಯಾಕ್ಸಿಯಂತೆ ಬಳಸಿಕೊಂಡರು ಎಂಬ ಮೋದಿ ಆರೋಪ ಬಹಳ ಚರ್ಚೆಯಾಯಿತು. ನಿವೃತ್ತ ವೈಸ್‌ ಅಡ್ಮಿರಲ್‌ ವಿನೋದ್‌ ಪಶ್ಚಿ†ಚಾ ಈ ಆರೋಪವನ್ನು ಅಲ್ಲಗಳೆದರು. ಆದರೆ ಮತ್ತೂಬ್ಬ ನಿವೃತ್ತ ನೌಕಾಪಡೆ ಕಮಾಂಡರ್‌ ವಿ.ಕೆ. ಜೈಟಿÉ “”ರಾಜೀವ್‌ ಪ್ರವಾಸಕ್ಕೆ ವಿರಾಟ್‌ ಅನ್ನು, ಭಾರತೀಯ ನೌಕಾಪಡೆಯ ಸಂಪನ್ಮೂಲಗಳನ್ನು ಬಳಸಿಕೊಂಡರು. ಇದಕ್ಕೆ ನಾನೇ ಸಾಕ್ಷಿ” ಎಂದರು. ಅಲ್ಲದೆ, 1987ರಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ರಾಜೀವ್‌ರ ಪ್ರವಾಸ ಕಥನದ ವಿವರಗಳೆಲ್ಲ ಮುನ್ನೆಲೆಗೆ ಬಂದವು.

ಅಯ್ಯಯ್ಯೋ ಅಯ್ಯರ್‌
2014ರಲ್ಲಿ ಮೋದಿಯನ್ನು ಚಾಯ್‌ವಾಲಾ ಎಂದು ಹಂಗಿಸಿ ಕಾಂಗ್ರೆಸ್‌ ಕಾಲ ಮೇಲೆ ಕಲ್ಲು ಹಾಕಿದ್ದ ಮಣಿಶಂಕರ್‌ ಅಯ್ಯರ್‌, ಗುಜರಾತ್‌ ಚುನಾವಣೆಯಲ್ಲಿ “ನೀಚ್‌’ ಎಂದು ಕರೆದು ಕಾಂಗ್ರೆಸ್‌ ನಾಯಕರು ಹಣೆ ಚಚ್ಚಿ ಕೊಳ್ಳುವಂತೆ ಮಾಡಿದ್ದರು. ಇತ್ತೀಚೆಗೆ ಲೇಖನವೊಂದರಲ್ಲಿ ತಮ್ಮ ನೀಚ್‌ ಹೇಳಿಕೆಯನ್ನು ಸಮರ್ಥಿಸಿಕೊಂಡು ಟೀಕೆಗೊಳಗಾದರು.

ಅಭ್ಯರ್ಥಿಗಳ ಆಸ್ತಿ-27,000 ಕೋಟಿ!
2019ರ ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಒಟ್ಟು ಆಸ್ತಿ ಮೌಲ್ಯವು 27,000 ಕೋಟಿ ರೂಪಾಯಿಗೂ ಹೆಚ್ಚು. ಶ್ರೀಮಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಪಟ್ಟಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮುಂಚೂಣಿಯಲ್ಲಿವೆ. ಬಿಹಾರದ ಪಾಟಲಿಪುತ್ರದಲ್ಲಿ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ರಮೇಶ್‌ ಕುಮಾರ್‌ ಶರ್ಮಾ ತಮ್ಮ ಒಟ್ಟು ಆಸ್ತಿ ಪ್ರಮಾಣವನ್ನು 1,110 ಕೋಟಿ ರೂಪಾಯಿಯೆಂದು ಘೋಷಿಸಿ ಮೊದಲನೇ ಸ್ಥಾನದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ಕಾಂಗ್ರೆಸ್‌ನ ಕೊಂಡ ವಿಶ್ವೇಶ್ವರ ರೆಡ್ಡಿ ಅತಿ ಶ್ರೀಮಂತ ಅಭ್ಯರ್ಥಿ(895 ಕೋಟಿ ರೂಪಾಯಿ) ಎನಿಸಿಕೊಂಡಿದ್ದಾರೆ.

2,293 ಪಕ್ಷಗಳು!
ಮಾರ್ಚ್‌ 9ರ ಒಳಗೆ ದೇಶದಲ್ಲಿ ನೋಂದಣಿಯಾದ ಪಕ್ಷಗಳ ಸಂಖ್ಯೆ 2,293! ಇವುಗಳಲ್ಲಿ 7 “ರಾಷ್ಟ್ರೀಯ ಪಕ್ಷಗಳು’ ಮತ್ತು 59 “ಪ್ರಾದೇಶಿಕ ಪಕ್ಷಗಳು’ ಎಂಬ ಮಾನ್ಯತೆ ಪಡೆದಿವೆ. ಪ್ರಾದೇಶಿಕ ಪಕ್ಷ ಅಥವಾ ರಾಷ್ಟ್ರೀಯಪಕ್ಷ ಎಂದು ಗುರುತಿಸಿಕೊಳ್ಳಲು ಕೆಲವು ಮಾನದಂಡಗಳು ಇವೆ. ಹೀಗಾಗಿ, ಬಹುತೇಕ ಪಕ್ಷಗಳಿಗೆ ಆ ಮಾನ್ಯತೆ ಸಿಗುವುದಿಲ್ಲ. ಅಸಂಖ್ಯ ಪಕ್ಷಗಳು ‘unrಛಿcಟಜ್ಞಜಿsಛಿಛ’/ಫ್ರಿಂಜ್‌ ಎಂದು ಕರೆಸಿಕೊಳ್ಳುತ್ತವೆ. ಇಂಥ ಪಕ್ಷಗಳ ಸಂಖ್ಯೆ ಏನಿಲ್ಲವೆಂದರೂ 5 ಸಾವಿರದಷ್ಟಿದೆ ಎನ್ನುತ್ತದೆ ಇಸಿಐನ ವರದಿ. ಉತ್ತರಪ್ರದೇಶವೊಂದರಲ್ಲೇ 474 ಫ್ರಿಂಜ್‌ ಪಕ್ಷಗಳಿವೆ! ಇವುಗಳಲ್ಲಿ ಅನೇಕ ಪಕ್ಷಗಳು ಚುನಾವಣೆಯ ವೇಳೆ ಸಕ್ರಿಯಗೊಂಡು ಚುನಾವಣೆಯ ನಂತರ ಕಾರ್ಯ ನಿಲ್ಲಿಸಿಬಿಡುತ್ತವೆ. ಕಪ್ಪುಹಣವನ್ನು ಬಿಳಿ ಮಾಡಲು, ಹಣ ವಸೂಲಿ ಮಾಡಲು ಇವುಗಳನ್ನು ಹುಟ್ಟುಹಾಕಲಾಗುತ್ತದೆ ಎನ್ನುತ್ತಾರೆ ಪರಿಣತರು.

ಆಜಂಖಾನ್‌ ಅಧಿಕಪ್ರಸಂಗ
ಉ. ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ತಮ್ಮ ಕೊಳಕು ಮಾತುಗಳನ್ನು ಚಿತ್ರನಟಿ, ಬಿಜೆಪಿ ನಾಯಕಿ ಜಯಪ್ರದಾರತ್ತ ಹರಿಬಿಟ್ಟರು. “ನಾನು ಯಾರ ಕೈ ಹಿಡಿದು ರಾಮಪುರಕ್ಕೆ ಕರೆತಂದಿದ್ದೆನೋ ಅವರೀಗ ಬದಲಾಗಿಬಿಟ್ಟಿದ್ದಾರೆ. ಈಗವರು ಖಾಕಿ ಅಂಡರ್‌ವೆàರ್‌ ಧರಿಸುತ್ತಾರೆ’ ಎಂದರು. ವಿವಾದ ಭುಗಿಲೇಳುತ್ತಿದ್ದಂತೆ ಆಜಂ “ನಾನು ಜಯಪ್ರದಾ ಹೆಸರೇ ಬಳಸಿಲ್ಲ’ ಎಂದು ನುಣುಚಿ ಕೊಳ್ಳಲು ಪ್ರಯತ್ನಿಸಿದರು.

ಹಣ ಹೆಂಡದ ಹೊಳೆ ಚಿನ್ನದ ಮಳೆ
ಮಾರ್ಚ್‌ 10ರಿಂದ ಮೇ 17ರವರೆಗೆ ದೇಶದಾದ್ಯಂತ ವಶವಾದ ಡ್ರಗ್ಸ್‌, ಚಿನ್ನ, ಹಣ, ಮದ್ಯದ ಮೌಲ್ಯದ ವಿವರವಿದು:
ಚಿನ್ನ ಮತ್ತು ಬೆಲೆ ಬಾಳುವ ವಸ್ತುಗಳು: 986.76 ಕೋಟಿ ರೂ.
ಹಣ: 839.3 ಕೋಟಿ ರೂ.
ಮಾದಕ ದ್ರವ್ಯ: 1,270.37 ಕೋಟಿ ರೂ.
ಸೀರೆ, ವಾಚು, ಮೊಬೈಲ್‌, ಇತ್ಯಾದಿ: 58. 56 ರೂಪಾಯಿ
ಒಟ್ಟು ಮೌಲ್ಯ: 3,449.12 ಕೋಟಿ ರೂಪಾಯಿ
ಮಧ್ಯ: 291.41 ಕೋ.ರೂ

ಟಾಪ್‌ 3 ಸಿಕ್ಕಿಬಿದ್ದ ರಾಜ್ಯಗಳು
ತಮಿಳುನಾಡು: 950.03 ಕೋಟಿ ರೂ. ಮೌಲ್ಯದ ಹಣ, ಚಿನ್ನ ಮತ್ತು ಮದ್ಯ
ಗುಜರಾತ್‌: 552. 72 ಕೋಟಿ ರೂ. ಮೌಲ್ಯದ ಮಾದಕದ್ರವ್ಯ ಮತ್ತು ಹಣ
ದೆಹಲಿ: 426.10 ಕೋಟಿ ರೂ.ಮೌಲ್ಯದ ವಸ್ತುಗಳು

(ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌(ಸಿಎಂಎಸ್‌) ಪ್ರಕಾರ 2019ರಲ್ಲಿ ದೇಶಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳು ಸೇರಿ 60, 000 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿರುವ ಸಾಧ್ಯತೆ ಇದೆ. )

(ಮಿಜೋರಾಂ ಮತ್ತು ಮಣಿಪುರದಲ್ಲಿ ಮಾತ್ರ ಹಣ ವಶಕ್ಕೆ ಸಿಕ್ಕಿಲ್ಲ)

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ