ಟಿಆರ್‌ಎಸ್‌ ಜತೆಗೂ ಕೈಜೋಡಿಸಲು ಸಿದ್ಧ

Team Udayavani, May 18, 2019, 6:00 AM IST

ಬಿಜೆಪಿಯೇತರ ರಂಗ ರಚಿಸಲು ಹರಸಾಹಸ ಪಡುತ್ತಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇದೀಗ ತಮ್ಮ ಬದ್ಧ ವೈರಿಯಾದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌)ಯೊಂದಿಗೂ ಕೈಜೋಡಿಸಲು ಸಿದ್ಧ ಎಂಬ ಸಂದೇಶ ರವಾನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶುಕ್ರವಾರ ಈ ಕುರಿತು ಘೋಷಿಸಿದ ಅವರು, ‘ಕೇವಲ ಟಿಆರ್‌ಎಸ್‌ ಮಾತ್ರವಲ್ಲ, ಬಿಜೆಪಿಯನ್ನು ವಿರೋಧಿಸುವ ಯಾವುದೇ ಪಕ್ಷವನ್ನು ಕೂಡ ಮಹಾಮೈತ್ರಿಗೆ ಸೇರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಎಲ್ಲ ಪ್ರಾದೇಶಿಕ ಪಕ್ಷಗಳ ಮನವೊಲಿಸಿ ಮಹಾಮೈತ್ರಿ ರಚಿಸಿದರೆ, ಆ ಮೈತ್ರಿಯಲ್ಲಿ ಟಿಆರ್‌ಎಸ್‌ ಒಳಗೊಳ್ಳುವುದನ್ನು ನಾಯ್ಡು ಒಪ್ಪಿಕೊಳ್ಳಲಿಕ್ಕಿಲ್ಲ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ನಾಯ್ಡು ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಶುಕ್ರವಾರ ದೆಹಲಿಯಲ್ಲಿ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಹಾಗೂ ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ರನ್ನು ಭೇಟಿಯಾಗಿ ಚುನಾವಣೋತ್ತರ ಸಂಭಾವ್ಯ ಮೈತ್ರಿ ಬಗ್ಗೆ ನಾಯ್ಡು ಚರ್ಚಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ